ಬಿಜೆಪಿ ಬಾಂಬ್ ಹಿಡಿದು ಮತ ಕೇಳ್ತಿದೆ: ಮಧು
BJP, seeking, vote , holding, bomb, Madhu Bangarappa
Team Udayavani, Mar 30, 2019, 8:23 AM IST
ಶಿವಮೊಗ್ಗ: ಬಿಜೆಪಿಯವರು ಇಷ್ಟು ವರ್ಷ ಚುನಾವಣೆ ಬಂದಾಗ ರಾಮನ ಜಪ ಮಾಡುತ್ತಿದ್ದರು. ಆದರೆ, ಈ ಬಾರಿಯ ಚುನಾವಣೆಯಲ್ಲಿ ರಾಮನ ಹೆಸರು ಬಿಟ್ಟು ಬಾಂಬ್ ಹಿಡಿದು ಮತ ಕೇಳುವ ಮಟ್ಟಕ್ಕಿಳಿದಿದ್ದಾರೆ ಎಂದು ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಟೀಕಿಸಿದರು.
ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ಧರ್ಮದ ಹೆಸರಿನಲ್ಲಿ, ಯುದ್ಧದ ಹೆಸರಿನಲ್ಲಿ ಮತ ಕೇಳುವುದು ಯಾವ ನ್ಯಾಯ?. ಬಿಜೆಪಿಯವರು ದೇಶಕ್ಕಾಗಿ ಪ್ರಾಣ ತೆತ್ತ ಯೋಧರ ಹೆಸರನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಚುನಾವಣೆಯ
ಸಮಯದಲ್ಲಿ ಐಟಿ ದಾಳಿಗಳ ಮೂಲಕ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಎಂದು ದೂರಿದರು.