ಲೋಕಸಭೆಯಲ್ಲಿ ಬಿಜೆಪಿ ಜಪ
Team Udayavani, Mar 20, 2019, 6:35 AM IST
ಕ್ಷೇತ್ರದ ವಸ್ತುಸ್ಥಿತಿ: ಸತತ ಎರಡನೇ ಅವಧಿಗೆ ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೂ, ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನ ಬಿಜೆಪಿ ಪರವಾಗಿದ್ದಾರೆ. 18 ವರ್ಷಗಳ ಕಾಲ ಆನೇಕಲ್ ಬಿಜೆಪಿಯ ಭದ್ರಕೋಟೆಯಾಗಿತ್ತಾದರೂ, 2013ರ ನಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿಡಿತವಿದೆ. ಆದರೆ, ಪುರಸಭೆ, ನಗರಸಭೆ ಹಾಗೂ ತಾಲೂಕು ಪಂಚಾಯಿತಿಯಲ್ಲಿ ಬಿಜೆಪಿ ಆಡಳಿತದಲ್ಲಿದ್ದು, ಲೋಕಸಭೆ ಚುನಾವಣೆ ಬಂದಾಗ ಮತದಾರ ಬಿಜೆಪಿಯತ್ತ ವಾಲುವುದು ಕಂಡುಬಂದಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ 1,90,478 ಮತಗಳು ಚಲಾವಣೆಯಾಗಿದ್ದು, ಬಿಜೆಪಿ ಅಭ್ಯರ್ಥಿ ಪಿ.ಮುನಿರಾಜು ಗೌಡ 86,230, ಹಾಲಿ ಸಂಸದ ಸುರೇಶ್ 79,611 ಮತ ಪಡೆದಿದ್ದರು. ಜೆಡಿಎಸ್‌ನ ಪ್ರಭಾಕರ್ ರೆಡ್ಡಿ 16,889 ಮತ ಗಳಿಸಿದ್ದರು. ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಪೈಪೋಟಿಯಿದೆ. ಆದರೆ, ಜೆಡಿಎಸ್ ಬೆಂಬಲ ಕಾಂಗ್ರೆಸ್‌ಗೆ ದೊರೆಯುವುದರಿಂದ ಕಾಂಗ್ರೆಸ್ ಹಿಡಿತ ಸ್ವಲ್ಪಮಟ್ಟಿಗೆ ಹೆಚ್ಚಾದರೂ,
-ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವುದು ಬಿಜೆಪಿಗೆ ವರವಾಗಬಹುದು. ಕ್ಷೇತ್ರದ ಹಲವು ಬಡಾವಣೆಗಳಿಗೆ ಕಾವೇರಿ ನೀರು ಹಾಗೂ ಏತನೀರಾವರಿ ಮೂಲಕ ಕೆರೆಗಳ ತುಂಬಿಸುವ ಕೆಲಸ ಹಾಗೂ ಬಹುತೇಕ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಸಂಸದರ ಸಾಧನೆ. ಹೀಗಾಗಿ ಈ ಬಾರಿ ಹೆಚ್ಚು ಮತ ಬರಲಿವೆ ಎಂಬುದು ಕಾಂಗ್ರೆಸ್ ನಿರೀಕ್ಷೆ.
ಸಂಸದರಿಂದ ಬಂದ ಪ್ರಮುಖ ಕೊಡುಗೆಗಳು
-ಕ್ಷೇತ್ರಕ್ಕೆ ಕಾವೇರಿ ನೀರು ತರುವಲ್ಲಿ ಪ್ರಮುಖ ಪಾತ್ರ
-ಏತ ನೀರಾವರಿ ಯೋಜನೆ ಮೂಲಕ ಕೆರೆ ತುಂಬುವ ಕೆಲಸ
-30ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ
-ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅನುದಾನ
ನಿರೀಕ್ಷೆಗಳು
-ಮುತ್ಯಾಲ ಮಡು ಪ್ರವಾಸಿ ತಾಣದ ಅಭಿವೃದ್ಧಿ
-ಆನೇಕಲ್ ಕ್ಷೇತ್ರದ ಸಮಗ್ರ ಅಭಿವೃದ್ಧಿ
-ಕೈಗಾರಿಕಾ ಪ್ರದೇಶಗಳಿಗೆ ಮೂಲ ಸೌಕರ್ಯ
-ಪುರಸಭೆ: 4
-ಬಿಜೆಪಿ- 3
-ಕಾಂಗ್ರೆಸ್- 1
-ಜೆಡಿಎಸ್- 0
-ಹೆಬ್ಬಗೋಡಿ ನಗರಸಭೆ, ಆನೇಕಲ್ ತಾ.ಪಂ (ಬಿಜೆಪಿ)
-ಜನಸಂಖ್ಯೆ- 5,38,571
-ಮತದಾರರ ಸಂಖ್ಯೆ- 3,56,632
-ಪುರುಷರು- 1,88,716
-ಮಹಿಳೆಯರು- 1,67,916
2014ರ ಚುನಾವಣೆಯಲ್ಲಿ
-ಚಲಾವಣೆಯಾದ ಮತಗಳು- 1,90,478 (ಶೇ.62.30)
-ಬಿಜೆಪಿ ಪಡೆದ ಮತಗಳು- 86,230 (ಶೇ.45.6)
-ಕಾಂಗ್ರೆಸ್ ಪಡೆದ ಮತಗಳು- 79,611 (ಶೇ.42.1)
-ಜೆಡಿಎಸ್ ಪಡೆದ ಮತಗಳು- 16,889 (ಶೇ.8.9)
2014ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದ ಚಿತ್ರಣ
-ಬಿ.ಶಿವಣ್ಣ ಕಾಂಗ್ರೆಸ್ ಶಾಸಕ
-ಆನೇಕಲ್ ಪುರಸಭೆಯಲ್ಲಿ ಬಿಜೆಪಿ ಆಡಳಿತದಲ್ಲಿತ್ತು
ಮಾಹಿತಿ: ವೆಂ.ಸುನೀಲ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Bengaluru: ಏರ್ಪೋರ್ಟ್ ಟಿ-2ಗೆ ವರ್ಟಿಕಲ್ ಗಾರ್ಡನ್ ರಂಗು
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.