ಲೋಕಸಭೆ ಚುನಾವಣಾ ಅಕ್ರಮ ತಡೆಗೆ “ಸಿ ವಿಜಿಲ್‌’ ಅಸ್ತ್ರ


Team Udayavani, Mar 16, 2019, 1:24 AM IST

3000.jpg

ಬೆಂಗಳೂರು: ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಲು ಸಾಮಾನ್ಯ ನಾಗರಿಕರಿಗೆ ಅಸ್ತ್ರ ನೀಡಿರುವ ಚುನಾವಣಾ ಆಯೋಗ ಅದಕ್ಕಾಗಿ “ಸಿ ವಿಜಿಲ್‌’ ಎಂಬ ಮೊ ಬೈಲ್‌ ಆ್ಯಪ್‌ ತಯಾರಿಸಿದೆ. ಈ ಆ್ಯಪ್‌ ಮೂಲಕ ಸಾಮಾನ್ಯ ನಾಗರಿಕರು ಫೋಟೋ, ಆಡಿಯೋ, ವಿಡಿಯೋಗಳನ್ನು ಬಳಸಿ ಕೊಂಡು ಚುನಾವಣಾಅಕ್ರಮಗಳ ಬಗ್ಗೆ ದೂರು ಕೊಡಬಹುದು. ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌ ಶುಕ್ರವಾರ “ಸಿವಿಜಿಲ್‌’ ಮೊಬೈಲ್‌ ಆ್ಯಪ್‌ ಬಿಡುಗಡೆಗೊಳಿಸಿದರು.

ನೀತಿ ಸಂಹಿತೆ ಜಾರಿಯಲ್ಲಿರುವಾಗ ಹಾಗೂ ಚುನಾವಣಾ ಪ್ರಚಾರದ ವೇಳೆ ರಾಜಕೀಯಪಕ್ಷಗಳು, ಅದರ ಪ್ರತಿನಿಧಿಗಳು, ಅಭ್ಯರ್ಥಿಗಳು ಅಥವಾ ಅವರಿಗೆ ಸಂಬಂಧಪಟ್ಟವರು, ಇಲ್ಲವೇ ಯಾರೇ ಸಾರ್ವಜನಿಕರು ಚುನಾವಣಾ ಅಕ್ರಮಗಳಲ್ಲಿ ತೊಡಗಿದ್ದರೆ, ಮತದಾರರಿಗೆ ಆಮಿಷ ಒಡ್ಡುತ್ತಿದ್ದರೆ, ಬೆದರಿಕೆ ಹಾಕುತ್ತಿದ್ದರೆ ಸಾಮಾನ್ಯ ನಾಗರಿಕರು ಈ ಆ್ಯಪ್‌ನ ನೆರವಿನಿಂದ ಅದನ್ನು ತಡೆಯಬಹುದು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಬಳಸಲಾಗಿತ್ತು. ಅದನ್ನು ಈಗ ರಾಜ್ಯವ್ಯಾಪಿ ಮಾಡಲಾಗಿದೆ.

ಸಿವಿಜಿಲ್‌ ಹೇಗೆ ಕೆಲಸ ಮಾಡುತ್ತದೆ?
ಸಿವಿಜಿಲ್‌ ಆ್ಯಪ್‌ ಜಿಪಿಎಸ್‌ ಆಧಾರಿತವಾಗಿದ್ದು, ಚುನಾವಣಾ ಅಕ್ರಮಗಳು ಯಾವ ಭೌಗೋಳಿಕ ಪ್ರದೇಶದಿಂದ ಮಾಹಿತಿ ಬಂದಿರುತ್ತದೆಯೋ ಅದಕ್ಕೆ ಹತ್ತಿರವಾದ ಫ್ಲೈಯಿಂಗ್‌ ಸ್ಕ್ವಾಡ್‌ಗೆ ಮಾಹಿತಿ ಬರುತ್ತದೆ. ಜಿಐಎಸ್‌ ಮ್ಯಾಪ್‌ ಆಧಾರದಲ್ಲಿ ದೂರುಗಳನ್ನು ಟ್ರ್ಯಾಕ್‌ ಮಾಡಲಾಗುತ್ತದೆ. ಮಾಹಿತಿ ಸಿಕ್ಕ ತಕ್ಷಣ 15 ನಿಮಿಷದೊಳಗೆ ಚುನಾವಣಾ ನೀತಿ ಸಂಹಿತೆ ಜಾರಿ ತಂಡ ಸ್ಥಳಕ್ಕೆ ಆಗಮಿಸುತ್ತದೆ. ದೂರು ಪರಿಶೀಲಿಸಿ ಅದರ ಬಗ್ಗೆ 100 ನಿಮಿಷದಲ್ಲಿ ಕ್ರಮಕೈಗೊಂಡು ಆಯೋಗಕ್ಕೆ ವರದಿ ಸಲ್ಲಿಸಲಾಗುತ್ತದೆ. ಗೂಗಲ್‌ ಪ್ಲೇಸ್ಟೋರ್‌ ಅಥವಾ ಆ್ಯಪ್‌ ಸ್ಟೋರ್‌ ನಿಂದ ಸಿವಿಜಿಲ್‌ ಆ್ಯಪ್‌ನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ನಿರ್ವಹಣೆಗೆ 11 ಸಾವಿರ ಸಿಬ್ಬಂದಿ

 ಈ ವಿನೂತನ ಸಿವಿಜಿಲ್‌ ಮೊಬೈಲ್‌ ಆ್ಯಪ್‌ ನಿರ್ವಹಣೆಗೆ ರಾಜ್ಯದ 33 ಚುನಾವಣಾ ಜಿಲ್ಲೆಗಳಲ್ಲಿ 330 ಅಧಿಕಾರಿಗಳು, 7,475 ಫೀಲ್ಡ್‌ ಯೂನಿಟ್‌ಗಳು (ಕ್ಷೇತ್ರ ಘಟಕ), 10,489 ಫೀಲ್ಡ್‌ ಸ್ಟಾಫ್ (ಕ್ಷೇತ್ರ ಸಿಬ್ಬಂದಿ) ನೇರವಾಗಿ ತೊಡಗಿಸಿಕೊಂಡಿದ್ದಾರೆ. ಫೀಲ್ಡ್‌ ಯೂನಿಟ್‌ ಗಳಲ್ಲಿ ಒಬ್ಬರು ಸೆಕ್ಟರ್‌ ಮ್ಯಾಜಿಸ್ಟ್ರೇಟ್‌ ಮತ್ತು ಒಬ್ಬರು ಪೊಲೀಸ್‌ ಅವರನ್ನೊಳಗೊಂಡ ತಂಡ ಇರುತ್ತದೆ. ಫೀಲ್ಡ್‌ ಯೂನಿಟ್‌ಗಳಲ್ಲಿ ಫ್ಲೈಯಿಂಗ್‌ ಸ್ಕ್ವಾಡ್‌, ಸೆಕ್ಟರ್‌ ಆಫೀಸರ್‌, ಸ್ಟಾಟಿಕ್‌ ಸರ್ವೆಲೆನ್ಸ್‌ಹಾಗೂ ಇತರೆ ತಂಡಗಳು ಇರುತ್ತವೆ. ಪರಿಶೀಲಿಸಿ ಮಾಹಿತಿ: “ಸಚಿವರೊಬ್ಬರಿಗೆ  ತಲುಪಿಸಲು ಸಾಗಿಸಲಾಗುತ್ತಿತ್ತು ಎನ್ನಲಾದ ಹಣಪತ್ತೆಯಾಗಿರುವ ಪ್ರಕರಣ ಹಾಗೂ ಆ ಹಣ ಸಾಗಿಸುತ್ತಿದ್ದ ಗ್ರಾಮೀಣಾಭಿವೃದಿಟಛಿ ಇಲಾಖೆ ಅಧಿಕಾರಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟವರು ಎಂಬ ವಿಚಾರಗಳ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡಲಾಗುವುದು ಎಂದು ಸಂಜೀವ ಕುಮಾರ್‌ ತಿಳಿಸಿದರು.

ಆ್ಯಪ್‌  ದುರ್ಬಳಕೆ ಮಾಡಿಕೊಂಡರೆ ಹುಷಾರ್‌
ಚುನಾವಣಾ ನೀತಿ ಸಂಹಿತೆ ಜಾರಿಯ ಭಾಗವಾಗಿ ಈ ಸಿವಿಜಿಲ್‌ ಆ್ಯಪ್‌ ತರಲಾಗಿದೆ. ಚುನಾವಣಾ ಅಕ್ರಮಗಳನ್ನು ತಡೆಯಲು ಸಾಮಾನ್ಯ ನಾಗರಿಕರಿಗೆ ಇದೊಂದು ಸಮರ್ಥ ಅಸ್ತ್ರ. ಆದರೆ, ಇದನ್ನು ಅತ್ಯಂತ ಜವಾಬ್ದಾರಿಯಿಂದ ಬಳಕೆ ಮಾಡಿಕೊಳ್ಳಬೇಕು. ಬೇಕಾ ಬಿಟ್ಟಿ ದೂರು ಕೊಡುವುದಾಗಲಿ, ಅನಗತ್ಯ ಫೋಟೋ, ವಿಡಿಯೋ ಹಾಕುವುದನ್ನು ಆಯೋಗ ಸಹಿಸುವುದಿಲ್ಲ. ಯಾರಾದರೂ ಪದೇಪದೆ ಇದನ್ನು ಮುಂದುವರಿಸಿದರೆ, ಅವರ ಮೊಬೈಲ್‌ ನಂಬರ್‌ನನ್ನು ಆ್ಯಪ್‌ನಿಂದ ಬ್ಲಾಕ್‌ ಮಾಡಲಾಗುತ್ತದೆ. ಈ ಆ್ಯಪ್‌ನ ದುರ್ಬಳಕೆ ಮಾಡಿಕೊಂಡರೆ ಕ್ರಮ ಜರುಗಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಎಚ್ಚರಿಕೆ ನೀಡಿದರು.

ಸುಳ್ಳು ಕೇಸ್‌ಗಳೇ ಹೆಚ್ಚು
ಮಾ.10ರಿಂದ ಸಿ ವಿಜಿಲ್‌ ಆ್ಯಪ್‌ ಅನುಷ್ಠಾನಕ್ಕೆ ತರಲಾಗಿದೆ. ಇಲ್ಲಿವರೆಗೆ 186 ದೂರುಗಳು ಬಂದಿದ್ದು, ಅದರಲ್ಲಿ 111 ದೂರು ಸುಳ್ಳು ಎಂದು ಗೊತ್ತಾಗಿದೆ. ಬಹುತೇಕರು ಸೆಲ್ಫಿ ಹಾಕಿದ್ದಾರೆ. 45 ದೂರುಗಳನ್ನು ವಿಲೇವಾರಿ ಮಾಡಲಾಗಿದ್ದು,
30 ದೂರುಗಳು ತನಿಖಾ ಹಂತದಲ್ಲಿವೆ ಎಂದು ಮುಖ್ಯ ಚುನಾವಣಾಧಿಕಾರಿ ಮಾಹಿತಿ ನೀಡಿದರು.
 

ಟಾಪ್ ನ್ಯೂಸ್

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

1-ewewqe

Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

POlice

Kasaragod: ರೈಲುಗಾಡಿಗೆ ಕಲ್ಲು ತೂರಾಟ; ಪ್ರಯಾಣಿಕನಿಗೆ ಗಾಯ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

de

Malpe ಸೀವಾಕ್‌ ಸಮುದ್ರತೀರದಲ್ಲಿ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.