ಕಡಲ ತಡಿಯಲ್ಲಿ ಕಮಲ ಕೀಳಲು ಜೆಡಿಎಸ್ ತಂತ್ರ
Team Udayavani, Mar 16, 2019, 1:27 AM IST
ಕಾರವಾರ: ಉತ್ತರ ಕನ್ನಡ ಲೋಕಸಭಾ ಚುನಾವಣೆಗೆ ಅಖಾಡ ಸಜ್ಜಾಗಿದೆ. ಕೆನರಾ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದು, ಕಾಂಗ್ರೆಸ್ ಕುದುರೆ ಏರಲಾರದೆ, ಜೆಡಿಎಸ್‌ಗೆ ಸವಾರಿ ಮಾಡಲು ನೀಡಿದಂತಾಗಿದೆ.
ಲೋಕಸಭಾ ಕ್ಷೇತ್ರದಲ್ಲಿ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 4 , ಬಿಜೆಪಿ 4 ಸ್ಥಾನ ಪಡೆದಿವೆ. ಸಮಬಲದ ಹೋರಾಟದ ಭೂಮಿಕೆ ಇದ್ದರೂ ಸಚಿವ ದೇಶಪಾಂಡೆ ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ. ಅವರ ಮಗ ಪ್ರಶಾಂತ ದೇಶಪಾಂಡೆಗೂ ಟಿಕೆಟ್ ಬಯಸಿಲ್ಲ. ಅತ್ತ ಮಾಜಿ ಸಚಿವೆ ಮಾರ್ಗರೇಟ್ ಆಳ್ವಾ ಆಗಲಿ, ಅವರ ಮಗ ನಿವೇದಿತ ಆಳ್ವಾ ಆಗಲಿ ಟಿಕೆಟ್ ಕೇಳದಿರುವುದು ಅಚ್ಚರಿಯ ಬೆಳವಣಿಗೆ. ಕಾಂಗ್ರೆಸ್ ಚುನಾವಣೆಗೆ ಮುನ್ನವೇ ಸ್ಪರ್ಧೆಯಿಂದ ಹಿಂದೆ ಸರಿದಿರುವುದು ಸ್ಪಷ್ಟವಾಗಿದೆ. ಜಿಪಂ ಸೇರಿ ಹಲವು ಪಂಚಾಯತ್‌ಗಳು, ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ಗೆ ಬಲವಿದೆ. ಆದರೂ ಚುನಾವಣೆಗೆ ಹಿಂದೇಟು ಹಾಕಿದ್ದು ಒಗಟಾಗಿದೆ. ಪ್ರಚಾರ ಆರಂಭಿಸಿದ ಬಿಜೆಪಿ, ಪಕ್ಕಾ ಲೆಕ್ಕಾಚಾರದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಬಿಜೆಪಿ ಶಾಸಕರ ಪೈಕಿ ಕಾರವಾರ ಶಾಸಕಿ ರೂಪಾಲಿ ನಾಯ್ಕ, ಕುಮಟಾ ಶಾಸಕ ದಿನಕರ ಶೆಟ್ಟಿ, ಭಟ್ಕಳ ಶಾಸಕ ಸುನೀಲ್ ನಾಯ್ಕ, ಶಿರಸಿಯಲ್ಲಿ ಬಿಜೆಪಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸಿ ಮತ ಕೇಳುತ್ತಿದ್ದಾರೆ. ಸಚಿವ ಅನಂತಕುಮಾರ್ ಹೆಗಡೆ ಆರನೇ ಬಾರಿ ಸ್ಪರ್ಧೆಗೆ ಸಿದ್ಧರಾಗುತ್ತಿದ್ದಾರೆ. ಕಿತ್ತೂರು, ಖಾನಾಪುರಗಳಲ್ಲಿ ಪಕ್ಷದ ಕಾರ್ಯಕರ್ತರ ಮೂಲಕ ಪ್ರಚಾರ ನಡೆಯುತ್ತಿದೆ. ಕುಮಟಾದ ವೈದ್ಯ ಜಿ.ಜಿ.ಹೆಗಡೆ ಸಹ ಲೋಕಸಭೆಗೆ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದು, ಪಕ್ಷ ಟಿಕೆಟ್ ನೀಡಿದರೆ ಮಾತ್ರ ಸ್ಪ ರ್ಧಿಸುವೆ ಎನ್ನುತ್ತಿದ್ದಾರೆ.
ಅಸ್ನೋಟಿಕರ್ ಹೆಸರು ಚಾಲ್ತಿಗೆ: ಆನಂದ ಅಸ್ನೋಟಿಕರ್ 2009ರಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಶಾಸಕರಾಗಿ ಮೂರೇ ತಿಂಗಳಲ್ಲಿ ಕಾಂಗ್ರೆಸ್ ಬಿಟ್ಟು, ಬಿಜೆಪಿ ಸೇರಿ ಗೆಲುವು ಸಾಧಿಸಿದ್ದರು. ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದವರು. 2013ರಲ್ಲಿ ಬಿಜೆಪಿ ಮತ್ತು 2018ರಲ್ಲಿ ಜೆಡಿಎಸ್‌ನಿಂದ ವಿಧಾನಸಭಾ ಚುನಾವಣೆಗಳಲ್ಲಿ ಸೋತರು. ಆದರೆ ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿ ಕಾರಕ್ಕೆ ಬರುತ್ತಿದ್ದಂತೆ ಕೆನರಾ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ವಾಗ್ಧಾಳಿ ಆರಂಭಿಸಿದರು. ಅಲ್ಲದೇ ಲೋಕಸಭೆಗೆ ಮೈತ್ರಿ ಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲುವ ಮನಸ್ಸಿದೆ ಎಂದು ಪ್ರಕಟಿಸಿದ್ದರು. ಅದೀಗ ನಿಜವಾಗುವಂತೆ ಕಾಣುತ್ತಿದೆ. ಆನಂದ ಅಸ್ನೋಟಿಕರ್‌ಗೆ 38ರ ಹರೆಯ. ಕೇಂದ್ರ ಸರ್ಕಾರವನ್ನು, ಅನಂತಕುಮಾರ್ ಹೆಗಡೆಯನ್ನು ನೇರವಾಗಿ ಸೈದ್ಧಾಂತಿಕವಾಗಿ ಎದುರಿಸುವ ರಾಜಕೀಯ ಜಾಣ್ಮೆಯಿದ್ದು, ಹಿಂದುಳಿದ ವರ್ಗಗಳ ಒಗ್ಗಟ್ಟು ಮತ್ತು ರಾಜಕೀಯ ಪ್ರಾತಿನಿಧ್ಯ ಕುರಿತು ವರ್ಷದ ಹಿಂದೆ ಪ್ರಸ್ತಾಪಿಸಿದ್ದರು. ಜೋಯಿಡಾದ ಪರಿಚಯ ಚೆನ್ನಾಗಿರುವ ಅವರು, ಕೊಂಕಣಿ, ಮರಾಠಿಗರನ್ನು ಸೆಳೆಯುವ ಛಾತಿ ಇದೆ. ಹೀಗಾಗಿ, ಕೆನರಾ ಲೋಕಸಭೆ ಚುನಾವಣೆ ರಂಗೇರುವ ಲಕ್ಷಣಗಳು ಕಾಣತೊಡಗಿವೆ.
ಜೆಡಿಎಸ್‌ನಲ್ಲಿ ಮೂರು ಆಕಾಂಕ್ಷಿಗಳು
ಜೆಡಿಎಸ್ ಜಿಲ್ಲೆಯಲ್ಲಿ ಪ್ರಬಲವಾಗಿಲ್ಲ ಕಾರಣ ಕಾರ್ಯಕರ್ತರು, ಪದಾಧಿಕಾರಿಗಳಲ್ಲಿ ಹೊಂದಾಣಿಕೆಯಿಲ್ಲ. ಆದರೆ ಸಿಎಂ ಕುಮಾರಸ್ವಾಮಿ ರೈತರಿಗೆ ಮಾಡಿರುವ ನೆರವು ಮತ್ತು ಜಿಲ್ಲೆಗೆ ನೀಡಿದ ಕೊಡುಗೆ ಮುಂದಿಟ್ಟುಕೊಂಡು ಮತಯಾಚಿಸಬಹುದು. ಅರಣ್ಯ ಅತಿಕ್ರಮಣ ಹೋರಾಟಗಾರರ ಸಕ್ರಮಾತಿ ಬೇಡಿಕೆ ಇಟ್ಟು ವಕೀಲ ರವೀಂದ್ರ
ನಾಯ್ಕ ಕಾರವಾರ, ಕುಮಟಾದಲ್ಲಿ ಬೃಹತ್ ಪ್ರತಿಭಟನೆಗಳನ್ನು ಮಾಡಿ ಸರ್ಕಾರದ ಗಮನ ಸೆಳೆದಿದ್ದಾರೆ. ಹಾಗಾಗಿ ಅವರು ಲೋಕಸಭೆಗೆ ಟಿಕೆಟ್ ಕೊಟ್ಟರೆ ನೋಡಿ ಬಿಡೋಣ ಎಂಬ ಮನಸ್ಸಲ್ಲಿದ್ದಾರೆ. ಬಿಜೆಪಿಯನ್ನು ಕಳೆದ ವಿಧಾನಸಭಾ
ಚುನಾವಣೆಯಲ್ಲಿ ತೊರೆದು ಪಕ್ಷೇತರರಾಗಿ ಸ್ಪ ರ್ಧಿಸಿದ್ದ ಕುಮಟಾದ ಸೂರಜ್ ನಾಯ್ಕ ಸೋನಿ ಜೆಡಿಎಸ್ ಲೋಕಸಭೆಗೆ ಟಿಕೆಟ್ ನೀಡಿದರೆ ನಿಲ್ಲುವ ಮನಸ್ಥಿತಿಯಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.