ಹಿಮಾಚಲದಲ್ಲಿ ಕೈ-ಕಮಲ ಕುಸ್ತಿ
Team Udayavani, Mar 20, 2019, 12:30 AM IST
ಹಿಮಾಚಲ ಪ್ರದೇಶದಲ್ಲಿ-ಆಡಳಿತ ಪಕ್ಷವಾದ ಭಾರತೀಯ ಜನತಾ ಪಾರ್ಟಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಯಾರು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ವಿಚಾರದಲ್ಲಿ ಎರಡೂ ಪಕ್ಷಗಳಲ್ಲೂ ಈಗಲೂ ಗೊಂದಲ ಮುಂದುವರಿದೆಯಾದರೂ ಚುನಾವಣಾ ಪ್ರಚಾರದ ಭರಾಟೆ ಮಾತ್ರ ಕಡಿಮೆಯೇನೂ ಆಗಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್‌ನ ರಾಜ್ಯ ಮತ್ತು ರಾಷ್ಟ್ರ ನಾಯಕರು ಕಳೆದೊಂದು ತಿಂಗಳಿಂದ ಅನೇಕ ಬಾರಿ ಹಿಮಾಚಲ ಪ್ರದೇಶದಲ್ಲಿ ಬೃಹತ್ ಪ್ರಚಾರ ರ್ಯಾಲಿಗಳನ್ನು ಕೈಗೊಂಡಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಒಟ್ಟು ನಾಲ್ಕು ಲೋಕಸಭಾ ಕ್ಷೇತ್ರಗಳಿವೆ(ಮಂಡಿ, ಶಿಮ್ಲಾ, ಹಮೀರ್‌ಪುರ ಮತ್ತು ಕಂಗ್ರಾ).2014ರ ಲೋಕಸಭಾ ಚುನಾ ವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಎಲ್ಲಾ ನಾಲ್ಕೂ ಸ್ಥಾನಗಳಲ್ಲೂ ಗೆಲುವು ಸಾಧಿಸಿತ್ತು. 2014ರಲ್ಲಿ ಹಿಮಾಚಲದಲ್ಲಿ ವೀರಭದ್ರ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು, ಆ ಸಮಯದಲ್ಲೇ ಬಿಜೆಪಿ 4 ಸ್ಥಾನಗಳಲ್ಲಿ ಗೆದ್ದಿತ್ತು, ಈ ಬಾರಿ ಸಿಎಂ ಜೈ ರಾಮ್ ಠಾಕೂರ್ ನೇತೃತ್ವದಲ್ಲಿ ಬಿಜೆಪಿಯೇ ಅಧಿಕಾರದಲ್ಲಿರುವುದರಿಂದ ಫಲಿತಾಂಶ ಇನ್ನಷ್ಟು ಉತ್ತಮಗೊಳ್ಳಲಿದೆ(ಮತ ಪ್ರಮಾಣ ಹೆಚ್ಚು ಪಡೆಯುವ ವಿಚಾರದಲ್ಲಿ) ಎಂಬ ಭರವಸೆಯಲ್ಲಿದೆ ಕಮಲ ದಳ. ಇತ್ತ ಕಾಂಗ್ರೆಸ್ ನಾಲ್ಕೂ ಕ್ಷೇತ್ರಗಳಲ್ಲೂ ಎದ್ದು ನಿಲ್ಲಬೇಕು ಎಂಬ ಪ್ರಯತ್ನದಲ್ಲಿದೆ.
ಗ್ರಾಮೀಣರೇ ನಿರ್ಣಾಯಕ
ಹಿಮಾಚಲ ಪ್ರದೇಶದ 90 ಪ್ರತಿಶತ ಜನಸಂಖ್ಯೆ ಗ್ರಾಮೀಣ ಭಾಗಗಳಲ್ಲಿ ವಾಸಿಸುತ್ತದೆ. ಅಲ್ಲಿನ ಒಟ್ಟು 12 ಜಿಲ್ಲೆಗಳಲ್ಲಿ 20 ಸಾವಿರಕ್ಕಿಂತಲೂ ಹೆಚ್ಚು ಹಳ್ಳಿಗಳು ಮತ್ತು 3226 ಗ್ರಾಮ ಪಂಚಾಯಿತಿಗಳು ಇವೆ. ಹೀಗಾಗಿ, ಹಳ್ಳಿಗರೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಈ ಕಾರಣಕ್ಕಾಗಿಯೇ ಬಿಜೆಪಿ ಮತ್ತು ಕಾಂಗ್ರೆಸ್ ಗ್ರಾಮೀಣ ಹಿಮಾಚಲದ ಮನಸೂರೆಗೊಳ್ಳಲು ಕಸರತ್ತು ನಡೆಸಿವೆ.
ಕಳೆದ ತಿಂಗಳಷ್ಟೇ ಜೈರಾಂ ಠಾಕೂರ್ ಮಂಡಿಸಿದ “44,388′ ಕೋಟಿ ರೂಪಾಯಿ ಮೊತ್ತದ ಜನಪ್ರಿಯ ಬಜೆಟ್ ಕೂಡ, ಗ್ರಾಮಕೇಂದ್ರಿತವಾಗಿಯೇ ಇರುವುದು ಇದೇ ಕಾರಣಕ್ಕಾಗಿಯೇ. ಕಾಂಗ್ರೆಸ್ ಕೂಡ ಗ್ರಾಮೀಣ ಸಮಸ್ಯೆಗಳನ್ನೇ ಎದುರಿಟ್ಟುಕೊಂಡು ಬಿಜೆಪಿಯ ಮೇಲೆ ಸಮರ ಸಾರುತ್ತಿದೆ.”ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಯ ಕೊರತೆ ಕಾಡುತ್ತಿದೆ, ಬಿಜೆಪಿಯು ಹಣ್ಣುಗಳ ಮೇಲಿನ ಆಮದು ಸುಂಕ ತಗ್ಗಿಸಿಲ್ಲ , ರಸ್ತೆಗಳು ಹಾಳಾಗಿವೆ, ಪ್ರವಾಸೋದ್ಯಮ ಕುಸಿಯುತ್ತಿದೆ’ ಎಂಬುದು ಕಾಂಗ್ರೆಸ್ ಬಿಜೆಪಿಯ ಮೇಲೆ ಬಳಸುತ್ತಿರುವ ಅಸ್ತ್ರ.
ಕಾಂಗ್ರೆಸ್‌ಗೆ ಹಿಂದಿರುಗಿದ ಬಂಡಾಯ ನಾಯಕರು
2014ರಲ್ಲಿ ಕಾಂಗ್ರೆಸ್, ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೇಲೆ ತನ್ನ 60 ನಾಯಕರನ್ನು ಪಕ್ಷದಿಂದ ಹೊರಹಾಕಿತ್ತು. ಆದರೆ ಲೋಕಸಭಾ ಚುನಾವಣೆಯ ಹೊತ್ತಲ್ಲಿ ಈ ನಾಯಕರ ಅಗತ್ಯವನ್ನು ಅರಿತ ಕಾಂಗ್ರೆಸ್ ಕಳೆದ ತಿಂಗಳಷ್ಟೇ ಮೂವರು ಎಂಎಲ್‌ಎ ಸೇರಿ ಒಟ್ಟು 46 ಬಂಡಾಯ ನಾಯಕರನ್ನು ವಾಪಸ್ ಕರೆಸಿಕೊಂಡಿದೆ. ಇವರನ್ನೆಲ್ಲ ವಾಪಸ್ ಪಕ್ಷಕ್ಕೆ ಕರೆಸಿಕೊಳ್ಳುವಲ್ಲಿ ಮಾಜಿ ಮುಖ್ಯಮಂತ್ರಿ ವೀರಭದ್ರಸಿಂಗ್ ಅವರ ಒತ್ತಡ ಕೆಲಸ ಮಾಡಿದೆ. ಕಳೆದ ಐದು ವರ್ಷಗಳಲ್ಲಿ ಬೇರುಮಟ್ಟದಲ್ಲಿ ಪಕ್ಷ ಬಲಿಷ್ಠವಾಗಿದೆ ಎಂದು ಕಾಂಗ್ರೆಸ್ ಹೇಳುತ್ತದಾದರೂ, ಈಗಲೂ ಅದರಲ್ಲಿ ಆಂತರಿಕ ಕಲಹ ಮುಂದುವರಿದೇ ಇದೆ. ಈಗಲೂ ಲೋಕಸಭಾ ಚುನಾವಣೆಯಲ್ಲಿ ಯಾರು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎನ್ನುವ ಬಗ್ಗೆ ಕಾಂಗ್ರೆಸ್ ನಿರ್ಧಾರಕ್ಕೆ ಬಂದಿಲ್ಲ.
ಇತ್ತ ಬಿಜೆಪಿಯಲ್ಲೂ ಎಲ್ಲವೂ ಸರಿಯಿಲ್ಲ. ಪಕ್ಷದಲ್ಲಿ ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದುವರೆಗೂ ಬಿಜೆಪಿಯ ಅನುರಾಗ್ ಠಾಕೂರ್ ಅವರು ಹಮೀರ್‌ಪುರದಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿತ್ತು. ಆದರೀಗ ಮಾಜಿ ಸಂಸದ, ಹಿರಿಯ ನಾಯಕ ಸುರೇಶ್ ಚಂದೇಲ್ ಅವರು ಆ ಕ್ಷೇತ್ರವನ್ನು ತಮಗೇ ಬಿಟ್ಟುಕೊಡಬೇಕು ಎಂದು ಕೇಂದ್ರದ ಮೇಲೆ ಒತ್ತಡ ತರುತ್ತಿದ್ದಾರೆೆ. ಇದಕ್ಕಾಗಿ ಅವರು ನವದೆಹಲಿಯಲ್ಲಿ ಕಳೆದೊಂದು ವಾರದಿಂದ ವಸತಿ ಹೂಡಿದ್ದಾರೆ. ದೆಹಲಿಯಲ್ಲಿ ಅವರು ಕಾಂಗ್ರೆಸ್ ನಾಯಕರನ್ನೂ ಭೇಟಿಯಾಗಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ಇದರಿಂದ ಬಿಜೆಪಿಯಲ್ಲಿ ಚಿಂತೆ ಆರಂಭವಾಗಿದೆ.
ಪ್ರಮುಖ ನಾಯಕರು
ಬಿಜೆಪಿ: ಸಿಎಂ ಜೈರಾಂ ಠಾಕೂರ್, ಕೇಂದ್ರ ಆರೋಗ್ಯ ಸಚಿವ ಜಗತ್ ಪ್ರಕಾಶ್ ನಡ್ಡಾ, ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್.
ಕಾಂಗ್ರೆಸ್: ಮಾಜಿ ಸಿಎಂ ವೀರಭದ್ರ ಸಿಂಗ್, ಮುಖೇಶ್ ಅಗ್ನಿಹೋತ್ರಿ.
ಸಿಪಿಐಎಂ: ರಾಕೇಶ್ ಸಿಂಘಾ
ಈಗ ನರೇಂದ್ರ ಮೋದಿ ಚೌಕೀದಾರರಂತೆ. ಅವರೀಗ ಚಾಯ್‌ವಾಲಾ ಅಲ್ಲವಂತೆ. ಬಿಜೆಪಿ ಆಡಳಿತದಲ್ಲಿ ಭಾರತ ಎಂಥ ಬದಲಾವಣೆ ಕಾಣುತ್ತಿದೆ! ಶಬ್ಭಾಷ್!
ಮಾಯಾವತಿ
ಮಾಯಾವತಿಯವರೀಗ ತಮ್ಮ ಎದುರಾಳಿ ಮುಲಾಯಂ ಪರ ಪ್ರಚಾರ ಮಾಡುತ್ತಿದ್ದಾರೆ. ಪ್ರಿಯಾಂಕಾ ವಾದ್ರಾ ಗಂಗಾ ನದಿಗೆ ಪೂಜೆ ಮಾಡುತ್ತಿದ್ದಾರೆ. ಬಿಜೆಪಿ ಆಡಳಿತದಲ್ಲಿ ಭಾರತ ಎಂಥ ಬದಲಾವಣೆಗೆ ಸಾಕ್ಷಿಯಾಗುತ್ತಿದೆ!
ಲಲಿತ್ ಗುಗ್ಲಾನಿ
56 ವರ್ಷ
16ನೇ ಲೋಕಸಭೆಯಲ್ಲಿ ನಮ್ಮ ಸಂಸದರ ಸರಾಸರಿ ವಯಸ್ಸಿದು. ಮೊದಲ ಲೋಕಸಭೆಯಲ್ಲಿನ ಸರಾಸರಿ ವಯೋಮಾನ 46.5.
ಈ ಬಾರಿ
ಪ್ರಮೋದ್ ಸಾವಂತ್
ಮನೋಹರ್ ಪರಿಕ್ಕರ್ ಅವರ ನಿಧನಾ ನಂತರ ಗೋವಾದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಡಾ. ಪ್ರಮೋದ್ ಸಾವಂತ್‌ರತ್ತ ಪ್ರತಿಪಕ್ಷಗಳು ದೃಷ್ಟಿ ನೆಟ್ಟಿವೆ. ಆರ್‌ಎಸ್‌ಎಸ್‌ಗೆ ಹತ್ತಿರವಿರುವ ಪ್ರಮೋದ್ ಅವರಿಗೆ ಬೃಹತ್ ಬೆಂಬಲಿಗ ಪಡೆಯೂ ಇದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಆಗಿಯೂ ಮಿಂಚಲಿದ್ದಾರೆ ಪ್ರಮೋದ್.
ಇಂದಿನ ಕೋಟ್
ರಾಹುಲ್ ಗಾಂಧಿಗೆ ಸಲಹೆ: ದಯವಿಟ್ಟೂ ಬಿಹಾರ, ಜಾರ್ಖಂಡ್, ದೆಹಲಿ ಮತ್ತು ಇತರೆಡೆ ಮೈತ್ರಿ ರಚನೆಯ ಬಗ್ಗೆ ಒಂದು ತೀರ್ಮಾನಕ್ಕೆ ಬನ್ನಿ. ಆಗಲೇ ತಡವಾಗಿದೆ.
ಯಶವಂತ್ ಸಿನ್ಹಾ
ಈಶಾನ್ಯ ಭಾಗ ಸಂಪರ್ಕ-ಸಾರಿಗೆ ವಲಯದಲ್ಲಿ ವಿಶಿಷ್ಟ ಸಮಸ್ಯೆಗಳನ್ನು ಎದುರಿಸುತ್ತಿದೆೆ. ನಮಗದು ತಿಳಿಯುತ್ತದೆ, ಬಿಜೆಪಿಗಲ್ಲ.
ರಾಹುಲ್ ಗಾಂಧಿ
ಕೊರೆಯುವ ಚಳಿಯಲ್ಲೂ ಹಿಮ್ಮೆಟ್ಟದ ಶತಾಯುಷಿಗಳು!
ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಆಯೋಗ ಯುವಜನರು ಮತ್ತು ಹಿರಿಯ ನಾಗರಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಶತಾಯುಷಿಗಳ ಆಸರೆ ಪಡೆಯುತ್ತಿದೆ. ಹಿಮಾಚಲ ಪ್ರದೇಶದಲ್ಲಿ 1,011ಕ್ಕಿಂತ ಹೆಚ್ಚು ಶತಾಯುಷಿಗಳಿದ್ದಾರೆ. ಅವರಲ್ಲಿ 68 ಜನರನ್ನು ಈ ಬಾರಿ ಚುನಾವಣಾ ಆಯೋಗ ಬ್ರಾಂಡ್ ಅಂಬಾಸಡರ್‌ಗಳಾಗಿ ಆಯ್ಕೆ ಮಾಡಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗ ಶತಾಯುಷಿ ಶ್ಯಾಮ ಶರಣ್ ನೇಗಿ ಅವರನ್ನು ಚುನಾವಣಾ ರಾಯಭಾರಿಯನ್ನಾಗಿಸಿತ್ತು. ಸ್ವತಂತ್ರಭಾರತದ ಮೊದಲ ಮತದಾರ ಎಂಬ ಗರಿಮೆಯೂ ನೇಗಿಯವರಿಗಿದೆ. ನೇಗಿಯವರು 1951ರಲ್ಲಿ ಮೊದಲ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದಾಗ ಅವರಿಗೆ 33 ವರ್ಷ ವಯಸ್ಸು. ಈಗ ಅವರ ಆರೋಗ್ಯ ಸರಿ ಇಲ್ಲದ ಕಾರಣ, ಇತರೆ ಶತಾಯುಷಿಗಳನ್ನು ಆಯೋಗ ಆಯ್ಕೆ ಮಾಡಿದೆ. ಆದರೂ ನೇಗಿ ಮತದಾನವನ್ನಂತೂ ಮಾಡಲಿದ್ದಾರೆ.
“ನಾವು ನೇಗಿಯವರನ್ನು ಮತಗಟ್ಟೆಗೆ ತರಲು ವಿಶೇಷ ವಾಹನ ಕಳುಹಿಸಲಿದ್ದೇವೆ, ಅಲ್ಲದೇ ಕೆಂಪು ಹಾಸಿನ ಮೂಲಕ ಅವರನ್ನು ಸ್ವಾಗತಿಸುತ್ತೇವೆ’ ಎನ್ನುತ್ತಾರೆ ಚುನಾವಣಾಧಿಕಾರಿಯೊಬ್ಬರು. 2016ರ ಪಂಚಾಯಿತಿ ಚುನಾವಣೆಯಲ್ಲೂ ಶತಾಯುಷಿಗಳ ಭರಾಟೆ ಇತ್ತು. ಗಾಢ ಹಿಮವರ್ಷದ ನಡುವೆಯೂ ಅನೇಕ ಶತಾಯುಷಿಗಳು ಮನೆಯವರ ಸಹಾಯದಿಂದ ಮತದಾನ ಮಾಡಿದ್ದರು. 108 ವರ್ಷದ ಸಂತ ರಾಂ, 102 ವರ್ಷದ ಅಯೋಧ್ಯಾ ದೇವಿ, 101ರ ತಖೊjà ದೇವಿ, 105 ವರ್ಷದ ರತನ್ ದೇವಿ, 103 ವರ್ಷದ ರಾಮ್ ರಖೀ, 105 ವರ್ಷದ ಬಸಂತ್ ದೇವಿ, 108 ವರ್ಷದ ಮುನ್ಶಿ ರಾಂ, 110 ವರ್ಷದ ಝುಂಗ್ರಿ ದೇವಿ ಮತದಾನ ಮಾಡಿದ್ದರು. ಇವರೆಲ್ಲರಿಗಿಂತ ಗಮನ ಸೆಳೆದಿದ್ದವರೆಂದರೆ, ಮಂಡಿ ಪಂಚಾಯಿತಿಯಲ್ಲಿ ಮತದಾನ ಮಾಡಿದ 111 ವರ್ಷದ ಕೌಲಿ ದೇವಿಯವರು! ಕೌಲಿ ದೇವಿಯವರು ಮತದಾನ ಮಾಡಿದ ಮರು ತಿಂಗಳೇ ಅಸುನೀಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.