ಎಸ್‌ಪಿ-ಬಿಎಸ್‌ಪಿಗೆ ಕಾಂಗ್ರೆಸ್ ಸೆಡ್ಡು?
Team Udayavani, Mar 16, 2019, 12:30 AM IST
ಹೊಸದಿಲ್ಲಿ: ಉತ್ತರಪ್ರದೇಶದಲ್ಲಿ ಮಹಾಮೈತ್ರಿಯ ಕನಸು ಕಾಣುತ್ತಿದ್ದ ಕಾಂಗ್ರೆಸ್‌ಗೆ ಕೈ ಕೊಟ್ಟ ಸಮಾಜವಾದಿ ಪಕ್ಷ(ಎಸ್‌ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ಕ್ಕೆ ಈಗ ಕಾಂಗ್ರೆಸ್ ಬಿಸಿತುಪ್ಪವಾಗಿ ಪರಿಣಮಿಸಿದೆ. ಎಸ್‌ಪಿ-ಬಿಎಸ್‌ಪಿಗೆ ಕಾಂಗ್ರೆಸ್ ಸೆಡ್ಡು ಹೊಡೆದಿದ್ದು, ಇತ್ತೀಚೆಗಿನ ಕೆಲವು ಬೆಳವಣಿಗೆಗಳಂತೂ ಮಿತ್ರಪಕ್ಷಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದಕ್ಕೆ ಹೊಸ ಸೇರ್ಪಡೆಯೆಂಬಂತೆ, ಎಸ್‌ಪಿ ನಾಯಕ ಅಖೀಲೇಶ್ ಯಾದವ್ ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.
ಶಿವಪಾಲ್ ಅವರ ಪ್ರಗತಿಶೀಲ ಸಮಾಜವಾದಿ ಪಕ್ಷ(ಲೋಹಿಯಾ)ದ ಜತೆ ಕೈಜೋಡಿಸುವ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಚಿಂತನೆ ನಡೆಸಿದ್ದು, ಈ ಕುರಿತು ರಹಸ್ಯ ಮಾತುಕತೆಯೂ ನಡೆದಿದೆ ಎನ್ನಲಾಗಿದೆ. ಶಿವಪಾಲ್‌ರ ಪಕ್ಷಕ್ಕೆ 10ರಿಂದ 12 ಸೀಟುಗಳನ್ನು ಬಿಟ್ಟುಕೊಡಲೂ ಕಾಂಗ್ರೆಸ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರೊಂ ದಿಗೂ ಪ್ರಿಯಾಂಕಾ ವಾದ್ರಾ ಮಾತುಕತೆ ನಡೆಸಿದ್ದರು. ಈ ಎಲ್ಲ ಬೆಳವಣಿಗೆಗಳೂ ಎಸ್‌ಪಿ-ಬಿಎಸ್‌ಪಿ ಮತಬ್ಯಾಂಕ್ ಮೇಲೆ ಗಾಢ ಪರಿಣಾಮ ಬೀರುವ ಸಾಧ್ಯತೆಯಿದ್ದು, ಅಖೀಲೇಶ್ ಹಾಗೂ ಮಾಯಾ ಕೆಂಡವಾಗಿದ್ದಾರೆ.
ಅಖೀಲೇಶ್ ಜತೆಗಿನ ಕೋಪದಿಂದ ಎಸ್‌ಪಿಗೆ ಗುಡ್‌ಬೈ ಹೇಳಿ ಹೊಸ ಪಕ್ಷ ಸ್ಥಾಪಿಸಿರುವ ಶಿವಪಾಲ್ ಯಾದವ್, ಲೋಕಸಭೆ ಚುನಾವಣೆಯಲ್ಲಿ ಫಿರೋಜಾ ಬಾದ್ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆಯಿದೆ. ಸದ್ಯ ಈ ಕ್ಷೇತ್ರವನ್ನು ಎಸ್‌ಪಿ ನಾಯಕ ರಾಮ್‌ಗೊàಪಾಲ್ ಯಾದವ್ ಅವರ ಪುತ್ರ ಅಕ್ಷಯ್ ಯಾದವ್ ಪ್ರತಿನಿಧಿ ಸುತ್ತಿದ್ದಾರೆ. ಇದಲ್ಲದೆ, ತಮಿಳುನಾಡು ಮತ್ತು ಕರ್ನಾಟಕ ದಲ್ಲಿ ತಲಾ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿ ಕಣಕ್ಕಿಳಿಸು ವುದಾಗಿಯೂ ಶಿವಪಾಲ್ ಪಕ್ಷದ ಮೂಲಗಳು ತಿಳಿಸಿವೆ.
ಮೋದಿ ವಿರುದ್ಧ ಆಜಾದ್ ಕಣಕ್ಕೆ: ಇನ್ನೊಂದೆಡೆ, ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರು ಈ ಬಾರಿ ವಾರಾಣಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಶುಕ್ರವಾರ ಬಿಎಸ್‌ಪಿ ಸ್ಥಾಪಕ ಕಾನ್ಶಿರಾಮ್ ಅವರ ಸಹೋದರಿ ಜೊತೆ ರ್ಯಾಲಿಯಲ್ಲಿ ಪಾಲ್ಗೊಂಡ ಆಜಾದ್ ಈ ಘೋಷಣೆ ಮಾಡಿದ್ದಾರೆ. ಈ ನಿರ್ಧಾರವು ಎಸ್‌ಪಿ-ಬಿಎಸ್‌ಪಿ ಲೆಕ್ಕಾಚಾರವನ್ನು ತಲೆಕೆಳಗಾಗಿಸುವ ಸಾಧ್ಯತೆ ದಟ್ಟವಾಗಿದೆ. ಇದೇ ವೇಳೆ, ಅಮೇಠಿಯಲ್ಲಿ ಕೇಂದ್ರ ಸಚಿವೆ ಸ್ಮತಿ ಇರಾನಿ ವಿರುದ್ಧವೂ ಅಭ್ಯರ್ಥಿ ಕಣಕ್ಕಿಳಿಸುವುದಾಗಿ ಭೀಮ್ ಆರ್ಮಿ ಹೇಳಿದೆ.
ಈ ಎಲ್ಲ ಬೆಳವಣಿಗೆಗಳು ಅಖೀಲೇಶ್ ಹಾಗೂ ಮಾಯಾವತಿಯವರ ನಿದ್ದೆಗೆಡಿಸಿದೆ. ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳದಿದ್ದರೂ ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿ ಪ್ರತಿನಿಧಿಸುತ್ತಿರುವ ರಾಯ್‌ಬರೇಲಿ ಮತ್ತು ಅಮೇಠಿ ಕ್ಷೇತ್ರಗಳಲ್ಲಿ ಅಭ್ಯರ್ಥಿ ಕಣಕ್ಕಿಳಿಸುವುದಿಲ್ಲ ಎಂದು ಎಸ್‌ಪಿ-ಬಿಎಸ್‌ಪಿ ಘೋಷಿಸಿತ್ತು. ಆದರೆ, ಈಗ ಕಾಂಗ್ರೆಸ್ ನೀಡುತ್ತಿರುವ ಆಘಾತದಿಂದ ಕಿಡಿ ಕಿಡಿಯಾಗಿರುವ ಮಾಯಾ, ಈ ಎರಡೂ ಕ್ಷೇತ್ರಗಳಲ್ಲೂ ಅಭ್ಯರ್ಥಿ ಕಣಕ್ಕಿಳಿಸಲು ಯೋಜಿಸಿದ್ದಾರೆ ಎಂದೂ ಹೇಳಲಾಗಿದೆ.
ಆನ್‌ಲೈನ್ ಜಾಹೀರಾತು ನಿಷೇಧಿಸಲು ಸಿದ:œ ಸಾಮಾ ಜಿಕ ಮಾಧ್ಯಮದಲ್ಲಿ ಮತದಾನಕ್ಕೂ 48 ಗಂಟೆಗಳಿಗೂ ಮುನ್ನ ಜಾಹೀರಾತುಗಳನ್ನು ನಿಷೇಧಿಸಲು ಬಾಂಬೆ ಹೈಕೋರ್ಟ್ ಆದೇಶಿದರೆ ಅದನ್ನು ಜಾರಿಗಳಿಸಲು ಸಿದ್ಧ ಎಂದು ಚುನಾವಣಾ ಆಯೋಗ ಹೇಳಿದೆ. ಅಲ್ಲದೆ ಈ ಹಿಂದೆ ಕೋರ್ಟ್ ನೀಡಿದ ಎಲ್ಲ ನಿರ್ದೇಶನಗಳನ್ನೂ ಚುನಾವಣಾ ಆಯೋಗ ಅನುಷ್ಠಾನಗೊಳಿಸುತ್ತಿದೆ ಎಂದಿದೆ.
ಮತದಾನಕ್ಕೂ 48 ಗಂಟೆಗಳ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಜಾಹೀರಾತು ಪ್ರಸಾರ ಮಾಡುವುದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಸೂಚನೆಗಳನ್ನು ನೀಡುವುದು ಸಾಧ್ಯವೇ ಎಂದು ಈ ಹಿಂದೆ ವಿಚಾರಣೆಯ ವೇಳೆ ಕೋರ್ಟ್ ಪ್ರಶ್ನಿಸಿತ್ತು. ಇದಕ್ಕೆ ಶುಕ್ರವಾರ ವಿಚಾರಣೆಯ ವೇಳೆ ಉತ್ತರಿಸಿದ ಆಯೋಗ, ಕೋರ್ಟ್ ಆದೇಶಿಸಿದರೆ ಜಾಹೀರಾತು ನಿಷೇಧಿಸಲು ಸಿದ್ಧ ಎಂದಿದೆ.
25ರೊಳಗೆ ಉತ್ತರಿಸಿ: ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ
ಪ್ರತಿ ಕ್ಷೇತ್ರಗಳಲ್ಲೂ ವಿದ್ಯುನ್ಮಾನ ಮತಯಂತ್ರಗಳಲ್ಲಿನ ಶೇ.50ರಷ್ಟು ಮತಗಳನ್ನು ವಿವಿಪ್ಯಾಟ್ ಯಂತ್ರಗಳಲ್ಲಿನ ಮತಗಳಿಗೆ ಹೋಲಿಕೆ ಮಾಡಬೇಕು ಎಂಬ ಪ್ರತಿಪಕ್ಷಗಳ ಕೋರಿಕೆಗೆ ಸಂಬಂಧಿಸಿ 25ರೊಳಗೆ ಪ್ರತಿಕ್ರಿಯಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಿಸುವ ಮುನ್ನ ಶೇ.50ರಷ್ಟು ಮತಗಳ ಹೋಲಿಕೆ ನಡೆಯಬೇಕು ಎಂದು ಆಗ್ರಹಿಸಿ 21 ಪ್ರತಿಪಕ್ಷಗಳು ಗುರುವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್, ಈ ನೋಟಿಸ್ ನೀಡಿದೆ. ಜತೆಗೆ, ಈ ವಿಚಾರದಲ್ಲಿ ಕೋರ್ಟ್‌ಗೆ ಸಲಹೆ ನೀಡಲು ಅಧಿಕಾರಿಯೊಬ್ಬರನ್ನು ನಿಯೋಜಿಸುವಂತೆಯೂ ಸೂಚಿಸಿದೆ.
ಬೃಹತ್ ಫಲಕ ತೆರವಿಗೆ ಕಾಂಗ್ರೆಸ್ ಮನವಿ: ಸಾರ್ವಜನಿಕ ಸ್ಥಳಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರದ ಸಾಧನೆಗಳನ್ನು ಬಿಂಬಿಸುವ ಬೃಹತ್ ಫಲಕಗಳನ್ನು ತೆರವುಗೊಳಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಈ ನಿಟ್ಟಿನಲ್ಲಿ ಅದು ಕೇಂದ್ರ ಚುನಾವಣಾ ಆಯೋಗಕ್ಕೆ ಶುಕ್ರವಾರ ಮನವಿ ಮಾಡಿದೆ. ಇದೊಂದು ಮಾದರಿ ನೀತಿ ಸಂಹಿತೆ ಉಲ್ಲಂಘನೆ, ಸಾರ್ವಜನಿಕರ ದುಡ್ಡಿನ ದುರುಪಯೋಗ ಎಂದು ಕಾಂಗ್ರೆಸ್ ದೂರಿದೆ.
ಪ್ರಣಾಳಿಕೆಗೆ ಆರೋಗ್ಯಸೇವಾ ಕಾಯ್ದೆ ಸೇರ್ಪಡೆಗೆ ಚಿಂತನೆ
ನಾವು ನುಡಿದಂತೆ ನಡೆಯುತ್ತೇವೆ. ಕಾಂಗ್ರೆಸ್ ಯಾವತ್ತೂ ಸುಳ್ಳು ಆಶ್ವಾಸನೆ ನೀಡಿದ್ದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪುನರುಚ್ಚರಿಸಿದ್ದಾರೆ. ಛತ್ತೀಸ್‌ಗಡದ ರಾಯು³ರ ಹಾಗೂ ಒಡಿಶಾದ ಬಾರ್ಗರ್‌ನಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ರ್ಯಾಲಿ ಕೈಗೊಂಡು ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ರೈತರು ಸೇರಿದಂತೆ ಸಮಾಜದ ಬಹುತೇಕ ವರ್ಗಗಳಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಆರೋಗ್ಯಸೇವಾ ಕಾಯ್ದೆಯನ್ನು ಸೇರಿಸುವ ಬಗ್ಗೆ ಚಿಂತನೆ ನಡೆಸಿದ್ದು, ದೇಶದ ಜಿಡಿಪಿಯ ಶೇ.3ರಷ್ಟು ಭಾಗವನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡುವುದಾಗಿಯೂ ರಾಹುಲ್ ವಾಗ್ಧಾನ ಮಾಡಿದ್ದಾರೆ. ಉದ್ಯೋಗ ಸೃಷ್ಟಿಯಲ್ಲಿ ಮೋದಿ ಸರಕಾರ ಸಂಪೂರ್ಣ ವಿಫಲಗೊಂಡಿದ್ದು, ಆ ಸತ್ಯವನ್ನು ಮುಚ್ಚಿಡಲು ಮೋದಿ ಪ್ರಯತ್ನಿಸುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ. ಈ ನಡುವೆ, ಸೋನಿಯಾ ಗಾಂಧಿ ಅವರ ಆಪ್ತ ಟಾಮ್ ವಡಕ್ಕನ್ ಬಿಜೆಪಿಗೆ ಸೇರಿದ ಬಗ್ಗೆ ಪ್ರಶ್ನಿಸಿದ್ದಕ್ಕೆ, “ಅವರೇನೂ ಹೇಳಿಕೊಳ್ಳುವಷ್ಟು ದೊಡ್ಡ ನಾಯಕರೇನೂ ಅಲ್ಲ’ ಎಂದಿದ್ದಾರೆ ರಾಹುಲ್.
ಡಿಎಂಕೆ, ಮೈತ್ರಿಪಕ್ಷಗಳ ಅಭ್ಯರ್ಥಿ ಪಟ್ಟಿ ಪ್ರಕಟ
ತಮಿಳುನಾಡಿಗೆ ಸಂಬಂಧಿಸಿ ಡಿಎಂಕೆ ಮತ್ತು ಮೈತ್ರಿ ಪಕ್ಷಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಲಾಗಿದೆ. ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಡಿಎಂಕೆ 20, ಕಾಂಗ್ರೆಸ್‌ಗೆ ಶಿವಗಂಗಾ, ತಿರುಚಿರಾಪಳ್ಳಿ ಮತ್ತು ಅರಾನಿ ಸೇರಿದಂತೆ 9, ಸಿಪಿಎಂಗೆ 2, ಸಿಪಿಐಗೆ 2, ದಲಿತ ವಿಚಾರಧಾರೆ ಹೊಂದಿರುವ ವಿ.ಸಿ.ಕೆ.ಪಕ್ಷ 2, ಎಂಡಿಎಂಕೆ ಈರೋಡ್, ಐಯುಎಂಎಲ್ ಮತ್ತು ಕೆಎಂಡಿಕೆ ತಲಾ 1 ಸ್ಥಾನಗಳಿಂದ ಸ್ಪರ್ಧೆ ಮಾಡಲಿವೆ.
ಪ್ರಕಾಶ್ ಅಂಬೇಡ್ಕರ್ ಪಟ್ಟಿ ಬಿಡುಗಡೆ: ಮಹಾರಾಷ್ಟ್ರದಲ್ಲಿ ದಲಿತ ನಾಯಕ ಪ್ರಕಾಶ್ ಅಂಬೇಡ್ಕರ್ 37 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದಾರೆ. ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟಕ್ಕೆ ಈ ಘೋಷಣೆ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 37 ಅಭ್ಯರ್ಥಿಗಳು ವಂಚಿತ್ ಬಹುಜನ್‌ಅಘಾಡಿ (ವಿಬಿಎ) ಅಡಿ ಸ್ಪರ್ಧಿಸಲಿದ್ದಾರೆ.
ಮಸೂದ್ ಬಿಡುಗಡೆಗೆ ನೀವೇ ಸಮ್ಮತಿಸಿದ್ದೀರಿ ಎಂದ ಅಮಿತ್ ಶಾ
ಉಗ್ರ ಮಸೂದ್ ಅಜರ್‌ನನ್ನು ಬಿಜೆಪಿ ಸರಕಾರವೇ ಬಿಡುಗಡೆ ಮಾಡಿತ್ತು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ, “ಅವರದ್ದೇ ಪಕ್ಷದ ನಾಯಕರಾದ ಸೋನಿಯಾ, ಮನಮೋಹನ ಸಿಂಗ್ ಅವರೇ ಆಗ ಸರ್ವಪಕ್ಷ ಸಭೆಯಲ್ಲಿ ಸಮ್ಮತಿ ನೀಡಿದ್ದನ್ನು ರಾಹುಲ್ ಮರೆತಿದ್ದಾರೆ. ಅಲ್ಲದೆ, 2010ರಲ್ಲಿ 25 ಉಗ್ರರನ್ನು ಯಾವ ಆಧಾರ ದಲ್ಲಿ ಕಾಂಗ್ರೆಸ್ ಬಿಡುಗಡೆ ಮಾಡಿದೆ ಎಂದೂ ಪ್ರಶ್ನಿಸಿದ್ದಾರೆ. ಮಸೂದ್‌ನನ್ನು ಬಿಡುಗಡೆ ಮಾಡುವುದಕ್ಕೂ ಮುನ್ನ ಆಗ ಪ್ರಧಾನಿಯಾಗಿದ್ದ ವಾಜಪೇಯಿ, ಸರ್ವ ಪಕ್ಷಗಳ ಸಭೆ ಕರೆದಿದ್ದು, ಎಲ್ಲ ಪಕ್ಷಗಳ ಸಮ್ಮತಿಯನ್ನು ಪರಿಗಣಿಸಿಯೇ ಈ ನಿರ್ಧಾರ ಕೈಗೊಳ್ಳಲಾಗಿತ್ತು ಎಂದೂ ಅಮಿತ್ ಶಾ ಹೇಳಿದ್ದಾರೆ.
ಯುಡಿಎಫ್ಗೆ ಮುಜುಗರ ತಂದ ವಿಡಿಯೋ
ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ನ ಮಿತ್ರಪಕ್ಷವಾಗಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮತ್ತು ಎಸ್‌ಡಿಪಿಐ ಸಭೆ ನಡೆಸಿರುವ ವಿಡಿಯೋ ವೈರಲ್ ಆಗಿದೆ. ಅದು ಯುಡಿಎಫ್ಗೆ ಮುಜುಗರ ತಂದಿದೆ. ಐಯುಎಂಎಲ್ ಶಾಸಕ ಪಿ.ಕೆ.ಕುಞಾಲಿಕುಟ್ಟಿ ಮತ್ತು ಸಂಸದ ಇ.ಟಿ.ಮೊಹಮ್ಮದ್ ಬಶೀರ್ ಎಸ್‌ಡಿಪಿಐ ಕೇರಳ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್ ಫೈಸಿ ಜತೆಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿರುವ ವಿಡಿಯೋ ಬಹಿರಂಗವಾಗಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೋಮು ಶಕ್ತಿಗಳ ಜತೆಗೆ ಕಾಂಗ್ರೆಸ್‌ನ ಸಂಭಾವ್ಯ ಮೈತ್ರಿ ಅಪಾಯಕಾರಿ ಎಂದಿದ್ದಾರೆ.
ಅರುಣಾಚಲದ ಶ್ರಮಜೀವಿ ಪಡೆ
ಬ್ರಿಟಿಷರ ಕಾಲದ ಆಕ್ಸಿಲರಿ ಲೇಬರ್ ಕಾರ್ಪ್ (ಎಎಲ್‌ಸಿ) ಅಥವಾ ಸಾಮಾನ್ಯ ಭಾಷೆಯಲ್ಲಿ ಪೋರ್ಟರ್‌ಗಳೆಂದು ಕರೆಯಲ್ಪಡುವ ಈ ಚಿಕ್ಕ ತುಕಡಿ ಅರುಣಾಚಲ ಪ್ರದೇಶದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಭಾರತೀಯ ಸೇನೆಗೆ ಸಹಾಯಕ ಸಿಬ್ಬಂ ದಿ ಯಂತೆ ಸೇವೆ ಸಲ್ಲಿಸುವ ಎಎಲ್‌ಸಿ ತುಕಡಿ, ಚುನಾವಣಾ ಸಮಯದಲ್ಲಿ ವಿಶೇಷವಾಗಿ ಬಳಕೆಗೆ ಬರುತ್ತದೆ. ಅಂಥ ಸಹಾಯಕ ಸಿಬಂದಿ ತುಕಡಿಯ ಸಂಕ್ಷಿಪ್ತ ಪರಿಚಯ ಇಲ್ಲಿದೆ.
ಬ್ರಿಟಿಷರ ಕಾಲದ ಪಡೆ: ಬೆಟ್ಟಗುಡ್ಡಗಳ ಈ ನಾಡಿನಲ್ಲಿ ಸೇವೆ ಸಲ್ಲಿಸುವ ಸರಕಾರಿ ಸಿಬಂದಿಗೆ ಇಂಥದ್ದೊಂದು ಸಹಾಯಕರ ಪಡೆಯಿರಬೇಕೆಂದು ಅಂದಾಜಿಸಿದ್ದ ಬ್ರಿಟಿಷ್ ಸರಕಾರ, ಎಎಲ್‌ಸಿ ತುಕಡಿಯನ್ನು ಸ್ಥಾಪಿಸಿತ್ತು. ಅಂದಿನಿಂದ ಈ ತುಕಡಿಗೆ ನಿಯಮಿತವಾಗಿ ಸಿಬಂದಿ ನೇಮಿಸಲಾಗು ತ್ತಿತ್ತು. 1987ರಿಂದೀಚೆಗೆ ಪೂರ್ಣ ಪ್ರಮಾಣದ ನೇಮಕಾತಿ ನಿಲ್ಲಿಸಲಾಗಿದ್ದು, ತಾತ್ಕಾಲಿಕ ಆಧಾರದಲ್ಲಿ ನೇಮಕಾತಿ ನಡೆಯುತ್ತಿದೆ.
ಎಎಲ್‌ಸಿಗಳ ಸೇವೆ: ಅರುಣಾಚಲ ಪ್ರದೇಶ ಹೇಳಿ ಕೇಳಿ ಬೆಟ್ಟಗುಡ್ಡಗಳ ತಾಣ. ಇಲ್ಲಿ, ಚುನಾವಣೆಗೆ ಸಂಬಂಧಿಸಿದ ಸಾಮಾನು, ಸರಂಜಾಮು ಗಳನ್ನು ಒಂದು ಕಡೆಯಿಂದ ಮತ್ತೂಂದು ಕಡೆಗೆ ಹೊತ್ತೂಯ್ಯು ವುದೆಂದರೆ ಅದು ಅತಿಯಾದ ಮಾನವ ಶಕ್ತಿಯನ್ನು ಬೇಡುವ ಕಾರ್ಯ. ಕಡಿದಾದ ಬೆಟ್ಟಗಳ ತಪ್ಪಲಿನಲ್ಲಿ ಅಥವಾ ತುಟ್ಟ ತುದಿಯಲ್ಲಿರುವ, ರಸ್ತೆ ಸಂಪರ್ಕವೇ ಇಲ್ಲದ ಹಳ್ಳಿಗಳು, ಊರು ಅಥವಾ ಯಾವುದೇ ಪ್ರದೇಶ ಗಳಿಗೆ ಮತಯಂತ್ರಗಳು, ವಿವಿಪ್ಯಾಟ್‌ಗಳು ಹಾಗೂ ಇತರ ಪರಿಕರ ಗಳನ್ನು ಹೊತ್ತೂಯ್ಯ ಇವರು ತಮ್ಮದೇ ಆದ ದೇಣಿಗೆ ನೀಡುತ್ತಾರೆ.
ಇಂದು ಬಿಜೆಪಿ ಪಟ್ಟಿ ಬಿಡುಗಡೆ
ಶನಿವಾರ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಲೋಕ ಸಭೆ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಏ.11ರಂದು ಅಂದರೆ ಮೊದಲ ಹಂತದ ಮತದಾನ ನಡೆಯಲಿರುವ 91 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಬಹುದು ಎಂದು ಮೂಲಗಳು ತಿಳಿಸಿವೆ. ಆಡಳಿತವಿರೋಧಿ ಅಲೆ ತಗ್ಗಿಸುವ ಸಲುವಾಗಿ ಕೆಲವು ಹಾಲಿ ಸಂಸದರ ಹೆಸರುಗಳನ್ನು ಕೈಬಿಡುವ ಸಾಧ್ಯತೆಯೂ ದಟ್ಟವಾಗಿದೆ. ಮಧ್ಯಪ್ರದೇಶದಲ್ಲಿ ಹಾಲಿ 12 ಸಂಸದರು ಟಿಕೆಟ್ ವಂಚಿತರಾಗುವ ಲಕ್ಷಣಗಳು ಗೋಚರಿಸಿವೆ ಎಂದು ಮೂಲಗಳು ಹೇಳಿವೆ.
ಒಬ್ಬರು ಫೇಲ್ ಆದ್ರು, ಮತ್ತೂಬ್ರು ಟೇಕ್ ಆಫೇ ಆಗ್ತಿಲ್ಲ
ಪ್ರಿಯಾಂಕಾ ವಾದ್ರಾ ಅವರ ರಾಜಕೀಯ ಪ್ರವೇಶದ ಬಗ್ಗೆ ವ್ಯಂಗ್ಯವಾಡಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟಿÉ, “ಒಬ್ಬರು ಫೇಲ್ ಆದರು, ಮತ್ತೂಬ್ಬರು ಟೇಕ್ ಆಫೇ ಆಗುತ್ತಿಲ್ಲ’ ಎಂದಿದ್ದಾರೆ. ತಲೆಮಾರುಗಳು ಕಳೆದಂತೆ ಕಾಂಗ್ರೆಸ್‌ನ ನಾಯಕತ್ವ ಹುದ್ದೆಯು ಒಂದೇ ಕುಟುಂಬದ ಸದಸ್ಯರಿಗೆ ನೀಡಲಾಗುತ್ತಿದೆ. 2014ರ ಚುನಾ ವಣೆ ನಂತರವೂ ಈ ವಂಶಾಡಳಿತಕ ಪಕ್ಷವು ಪಾಠ ಕಲಿಯುತ್ತಿ ಲ್ಲ ಎಂದೂ ಜೇಟಿÉ ಬ್ಲಾಗ್‌ನಲ್ಲಿ ಬರೆದಿದ್ದಾರೆ.
ಚುನಾವಣಾ ಝಲಕ್
ಕೇರಳದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಸಂಬಂಧಿಕರು ಬಿಜೆಪಿಗೆ ಸೇರ್ಪಡೆ. ನಾವು ಹಿಂದಿನಿಂದಲೂ ಬಿಜೆಪಿ ಬೆಂಬಲಿಗರು ಎಂದ ಶೋಭನಾ ಮತ್ತು ಶಶಿಕುಮಾರ್
ರಾಜಸ್ಥಾನದಲ್ಲಿ ಹಿರಿಯ ನಾಯಕ ದೇವಿ ಸಿಂಗ್ ಭಾಟಿ ಬಿಜೆಪಿಗೆ ರಾಜೀನಾಮೆ. ಬಿಕಾನೇರ್‌ನಲ್ಲಿ ಟಿಕೆಟ್ ಸಿಗದ್ದಕ್ಕೆ ನೊಂದು ಈ ನಿರ್ಧಾರ
ಗುಜರಾತ್ ಬಿಜೆಪಿ ನಾಯಕಿ ರೇಷ್ಮಾ ಪಟೇಲ್ ರಾಜೀನಾಮೆ. ಸ್ವತಂತ್ರ ಸ್ಪರ್ಧೆಗೆ ನಿರ್ಧಾರ. ಬಿಜೆಪಿ ಮಾರ್ಕೆಟಿಂಗ್ ಕಂಪನಿಯಾಗಿದ್ದು, ಸದಸ್ಯರೆಲ್ಲ ಸೇಲ್ಸ್‌ಮನ್‌ಗಳಾಗಿದ್ದಾರೆ ಎಂದು ಟೀಕೆ
ನೀತಿ ಸಂಹಿತೆ ಜಾರಿಯಲ್ಲಿರುವಾಗ ಚೆನ್ನೈನ ಕಾಲೇಜಲ್ಲಿ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದರ ಬಗ್ಗೆ ತನಿಖೆಗೆ ತಮಿಳುನಾಡು ಸರಕಾರ ಆದೇಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.