ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿಯೇ ಬೇಡ ಅಂತಾರೆ ಕಾಂಗ್ರೆಸ್ಸಿಗರು
Team Udayavani, Mar 8, 2019, 12:30 AM IST
ಕಾಂಗ್ರೆಸ್‌ನ ಕೇಂದ್ರ ನಾಯಕತ್ವವೀಗ ಈಗ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿಯಬೇಕೋ ಅಥವಾ ಪ್ರತ್ಯೇಕವಾಗಿ ಸ್ಪರ್ಧಿಸಬೇಕೋ ಎನ್ನುವ ವಿಷಯದಲ್ಲಿ ಗೊಂದಲ ಎದುರಿಸುತ್ತಿದೆ. ರಾಜ್ಯ ಕಾಂಗ್ರೆಸ್ ಘಟಕಗಳು ಮಾತ್ರ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿಯನ್ನು ವಿರೋಧಿಸುತ್ತಿರುವುದು ಸ್ಪಷ್ಟ. ಕೇಂದ್ರ ಕಾಂಗ್ರೆಸ್‌ನ ಇಚ್ಛೆಗೆ ತದ್ವಿರುದ್ಧವಾಗಿ ದೆಹಲಿ, ಪಂಜಾಬ್, ಹರ್ಯಾಣ ಮತ್ತು ಗೋವಾದಲ್ಲಿನ ಕಾಂಗ್ರೆಸ್ ನಾಯಕರು ಪ್ರಾದೇಶಿಕ ಪಕ್ಷಗಳೊಂದಿಗಿನ ಮೈತ್ರಿಯನ್ನು ನಿರಾಕರಿಸಿವೆ ಕಾಂಗ್ರೆಸ್‌ನ ರಾಜ್ಯ ಘಟಕಗಳು.
ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡರೆ ವಿಧಾನಸಭಾ ಚುನಾವಣೆಗಳಲ್ಲಿ ಸಾಂಪ್ರದಾಯಿಕ ಮತಗಳ ಮುನಿಸು ಎದುರಿಸಬೇಕಾಗುತ್ತದೆ ಎಂಬುದು ರಾಜ್ಯ ಕಾಂಗ್ರೆಸ್ ಘಟಕಗಳ ವಾದ. ಅಲ್ಲದೇ ಪಕ್ಷದ ಕಾರ್ಯಕರ್ತರ ಉತ್ಸಾಹವೂ ಕುಂದುತ್ತದೆ ಎನ್ನುವ ಅವುಗಳ ಮಾತೂ ಸುಳ್ಳೇನೂ ಅಲ್ಲ. ಈ ವರ್ಷ ಹರ್ಯಾಣಾ ರಾಜ್ಯ ಚುನಾವಣೆ ಎದುರಿಸಲಿದ್ದು, ಕಾಂಗ್ರೆಸ್ ಅಲ್ಲಿ ದುರ್ಬಲವಾಗಿದೆ. ರಾಜ್ಯ ಘಟಕಗಳಲ್ಲಿನ ಬಿರುಕುಗಳ ಬಗ್ಗೆ ಅರಿವಿರುವುದರಿಂದ ಕೇಂದ್ರ ನಾಯಕತ್ವ ಹರ್ಯಾಣಾದಲ್ಲಿ ಆಪ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಲಹೆ ನೀಡಿತ್ತು. ಆದರೆ ಹರ್ಯಾಣಾ ಕಾಂಗ್ರೆಸ್ ಮಾತ್ರ ಈ ಸಲಹೆಯನ್ನು ಒಪ್ಪುತ್ತಿಲ್ಲ. ಹರ್ಯಾಣದಲ್ಲಿ ಆಪ್ ನಮಗಿಂತಲೂ ದುರ್ಬಲವಾಗಿದೆ, ಅದರೊಂದಿಗೆ ಮೈತ್ರಿ ಮಾಡಿಕೊಳ್ಳುವುದರಿಂದ ಏನೂ ಲಾಭವಿಲ್ಲ ಎನ್ನುವುದು ಹರ್ಯಾಣಾ ಕಾಂಗ್ರೆಸ್ಸಿಗರ ವಾದ.
ಇನ್ನು ಗೋವಾದ ವಿಚಾರದಲ್ಲೂ ರಾಜ್ಯ ಕಾಂಗ್ರೆಸ್ ಹೀಗೆಯೇ ಯೋಚಿಸುತ್ತದೆ. ಆಪ್‌ನೊಂದಿಗಿನ ಮೈತ್ರಿಯಿಂದ ಆ ಪಕ್ಷಕ್ಕೆ ಲಾಭವಾಗುತ್ತದೆಯೇ ಹೊರತು ಕಾಂಗ್ರೆಸ್‌ಗಲ್ಲ ಎನ್ನುವುದು ಗೋವಾ ಕಾಂಗ್ರೆಸ್‌ನ ಅಂಬೋಣ. “2017ರ ವಿಧಾನಸಭಾ ಚುನಾವಣೆಯಲ್ಲಿ ಆಪ್ 40ರಲ್ಲಿ 38 ಸ್ಥಾನಗಳಲ್ಲಿ ಸೋತಿತು. 2022ರಲ್ಲಿ ಮತ್ತೆ ಚುನಾವಣೆ ಎದುರಾಗುತ್ತದೆ, ಅಷ್ಟರಲ್ಲೇ ಕಾಂಗ್ರೆಸ್ ಗೋವಾದಲ್ಲಿ ತನ್ನ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳಬೇಕಿದೆ. ಈಗ ಲೋಕಸಭಾ ಚುನಾವಣೆಯಲ್ಲಿ ಆಪ್‌ನೊಂದಿಗೆ ಮೈತ್ರಿ ಮಾಡಿಕೊಂಡರೆ, ಮತದಾರರು ಗೊಂದಲಗೊಳ್ಳುತ್ತಾರೆ’ ಎನ್ನುತ್ತಾರೆ ಕಾಂಗ್ರೆಸ್ ನಾಯಕರೊಬ್ಬರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.