ಸಜ್ಜನಿಕೆಯ ರಾಜಕಾರಣ: ನಳಿನ್
Team Udayavani, Mar 26, 2019, 6:30 AM IST
ಮಂಗಳೂರು: ಜನತೆ ಹಾಗೂ ಕಾರ್ಯಕರ್ತರು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಬದ್ಧತೆಯಿಂದ ಕೂಡಿದ ಸಜ್ಜನಿಕೆಯ ರಾಜಕಾರಣ ಮಾಡುತ್ತಾ ಬಂದಿದ್ದೇನೆ. ಸಂಸದನಾಗಿ 10 ವರ್ಷಗಳಲ್ಲಿ ಯಾವುದೇ ಭ್ರಷ್ಟಾಚಾರದ ಕಳಂಕ ಅಂಟಿಸಿಕೊಳ್ಳದೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ್ದೇನೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಸೋಮವಾರ ನಾಮಪತ್ರ ಸಲ್ಲಿಸುವ ಮೊದಲು ಬಿಜೆಪಿ ಜಿಲ್ಲಾ ಚುನಾವಣಾ ಪ್ರಚಾರ ಕಚೇರಿಯಲ್ಲಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಅಲೆಯಲ್ಲ; ಸುನಾಮಿ
ಕಳೆದ ಬಾರಿ ಮೋದಿ ಅಲೆ ಇತ್ತು. ಈ ಬಾರಿ ಮೋದಿ ಅಲೆ ಅಲ್ಲ; ಬದಲಿಗೆ ಸುನಾಮಿ ಕಂಡುಬರುತ್ತಿದೆ. ನರೇಂದ್ರ ಮೋದಿ ಮತ್ತೂಮ್ಮೆ ದೇಶದ ಪ್ರಧಾನಿಯಾಗ ಬೇಕು ಎಂಬುದು ದೇಶದ ಜನರ ಬಯಕೆಯಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದರು.
ಸುನಿಲ್ ಕುಮಾರ್ ಮಾತನಾಡಿ, ಮೋದಿ ಅವರನ್ನು ಎದುರಿಸಲಾಗದೆ ಕೆಲವು ವಿಪಕ್ಷಗಳು ಮಹಾ ಘಟಬಂಧನ್ ರಚಿಸಿವೆ. ದೇಶದ ಒಳಿತಿಗಾಗಿ ಇದು ರಚನೆಯಾಗಿಲ್ಲ; ಮೋದಿಯವರನ್ನು ಅಧಿಕಾರದಿಂದ ದೂರವಿರಿಸಬೇಕು ಎಂಬ ಏಕೈಕ ಗುರಿ ಯನ್ನಷ್ಟೇ ಹೊಂದಿದೆ ಎಂದರು.
ಈ ಬಾರಿಯೂ ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬರಲಿದೆ. ಹಿಂದುತ್ವ ಮತ್ತು ದೇಶದ ಅಭಿವೃದ್ಧಿ ಬಿಜೆಪಿಯ ಮುಖ್ಯ ಗುರಿ ಎಂದರು.
ಶಾಸಕ ಸಂಜೀವ ಮಠಂದೂರು ಸ್ವಾಗತಿಸಿ ಪ್ರಸ್ತಾವನೆಗೈದರು. ಸುದರ್ಶನ್ ಎಂ. ನಿರ್ವಹಿಸಿದರು.
ಹಿರಿಯ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ರಾಜೇಶ್ ನಾೖಕ್, ಹರೀಶ್ ಪೂಂಜ, ಡಾ| ಭರತ್ ಶೆಟ್ಟಿ, ಕೃಷ್ಣ ಪಾಲೆಮಾರ್, ಎನ್. ಯೋಗೀಶ್ ಭಟ್, ರುಕ್ಮಯ ಪೂಜಾರಿ, ಮೋನಪ್ಪ ಭಂಡಾರಿ, ಪ್ರಭಾಕರ ಬಂಗೇರ, ಪದ್ಮನಾಭ ಕೊಟ್ಟಾರಿ, ಜಯರಾಮ ಶೆಟ್ಟಿ, ಕ್ಯಾ| ಗಣೇಶ್ ಕಾರ್ಣಿಕ್, ಬಾಲಕೃಷ್ಣ ಭಟ್, ಮೀನಾಕ್ಷಿ ಶಾಂತಿಗೋಡು, ಕಸ್ತೂರಿ ಪಂಜ, ಭಾರತಿ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಗೋಪಾಲಕೃಷ್ಣ ಹೇರಳೆ, ಪ್ರತಾಪಸಿಂಹ ನಾಯಕ್, ಕಿಶೋರ್ ರೈ, ರವಿಶಂಕರ ಮಿಜಾರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru-ಕಾಸರಗೋಡಿಗೆ ‘ಅಶ್ವಮೇಧ’ ಬಸ್
MUDA; ಕಾಂಗ್ರೆಸ್ ಗೊಂದು, ಬಿಜೆಪಿಗೊಂದು ಕಾನೂನು ಇದೆಯೇ?: ಎಚ್.ಕೆ.ಪಾಟೀಲ್
BTS Kannada Movie: ತೆರೆ ಹಿಂದಿನ ಕಥೆಗಳ ಬಿಟಿಎಸ್
Maharashtra Polls; ಹರಿಯಾಣದಂತೆ ಬಂಡಾಯ ಸ್ಪರ್ಧಿಗಳು ಲೆಕ್ಕಾಚಾರ ತಲೆಕೆಳಗಾಗಿಸುತ್ತಾರೆಯೇ?
US Election Result:ಡೊನಾಲ್ಡ್ ಟ್ರಂಪ್ ಕೈಹಿಡಿದ Swing States,2ನೇ ಬಾರಿ ಅಧ್ಯಕ್ಷ ಗಾದಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.