ಡ್ಯಾನಿಶ್ ಅಲಿ ಬಿಎಸ್ಪಿಗೆ:ಜೆಡಿಎಸ್ ತೊರೆದ ಗೌಡರ ಪರಮಾಪ್ತ
Team Udayavani, Mar 17, 2019, 12:30 AM IST
ಲಕ್ನೋ/ಬೆಂಗಳೂರು: ಕರ್ನಾಟಕದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ದಿಲ್ಲಿಯ ಮುಖ, ವಿಶೇಷವಾಗಿ ಎಚ್.ಡಿ. ದೇವೇಗೌಡರ ಆಪ್ತ ಕುನ್ವರ್ ಡ್ಯಾನಿಶ್ ಅಲಿ ಶನಿವಾರ ಬಿಎಸ್‌ಪಿಗೆ ಸೇರ್ಪಡೆಯಾಗಿದ್ದಾರೆ. ಕೆಲವು ಮಾಧ್ಯಮ ವರದಿಗಳ ಪ್ರಕಾರ, ಉತ್ತರ ಪ್ರದೇಶದ ಅನ್ರೋಹಾ ಕ್ಷೇತ್ರದಿಂದ ಅವರು ಲೋಕಸಭೆಗೆ ಸ್ಪರ್ಧಿಸಲಿದ್ದಾರೆ.
ಲಕ್ನೋದಲ್ಲಿ ಬಿಎಸ್‌ಪಿ ನಾಯಕಿ ಮಾಯಾವತಿ ಅವರ ಆಪ್ತ ಸತೀಶ್ಚಂದ್ರ ಮಿಶ್ರಾ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ ಡ್ಯಾನಿಶ್ ಅಲಿ. ಜೆಡಿಎಸ್ ಪ್ರ. ಕಾರ್ಯದರ್ಶಿ ಯಾಗಿದ್ದ ಅವರು ಪಕ್ಷ ತೊರೆಯುವ ಮೊದಲು ದೇವೇಗೌಡರ ಆಶೀ ರ್ವಾದ ಪಡೆದಿದ್ದಾಗಿ ಹೇಳಿದ್ದಾರೆ. “ಜೆಡಿಎಸ್‌ನಲ್ಲಿದ್ದಾಗ ದೇವೇ ಗೌಡರು ವಹಿಸುತ್ತಿದ್ದ ಕೆಲಸಗಳನ್ನು ಮಾಡುತ್ತಿದ್ದೆ. ಅಲ್ಲಿ ಏನನ್ನೂ ಕೇಳಿರಲಿಲ್ಲ. ಈಗ ಬೆಹೆನ್‌ಜಿ ವಹಿಸಿದ ಕೆಲಸಗಳನ್ನು ಮಾಡುವೆ’ ಎಂದಿದ್ದಾರೆ.
ದೇಶದಲ್ಲಿ ಸಂವಿಧಾನದ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಿದೆ. ಅದನ್ನು ಉಳಿ ಸುವ ಕೆಲಸ ಜರೂರು ಆಗಿ ಆಗಬೇಕು’ ಎಂದು ಅಲಿ ಹೇಳಿದ್ದಾರೆ.
ಅಚ್ಚರಿಯ ಬೆಳವಣಿಗೆ
ಡ್ಯಾನಿಶ್ ಅಲಿ ದಿಢೀರ್ ಬಿಎಸ್‌ಪಿ ಸೇರಿರುವುದು ಅಚ್ಚರಿ ಮೂಡಿಸಿದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಕರ್ನಾಟಕದಲ್ಲಿ ಜೆಡಿಎಸ್-ಬಿಎಸ್‌ಪಿ ನಡುವೆ ಚುನಾವಣ ಪೂರ್ವ ಸೀಟು ಹೊಂದಾಣಿಕೆಯಲ್ಲಿ ಹಾಗೂ ಅನಂತರದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಸದಸ್ಯರೂ ಆಗಿದ್ದ ಅವರು ಸರಕಾರಕ್ಕೆ ಕಂಟಕ ಎದುರಾದಾಗಲೆಲ್ಲ ಸಮಸ್ಯೆ ಬಗೆಹರಿಸಲು ಮುಂಚೂಣಿ
ಯಲ್ಲಿರುತ್ತಿದ್ದರು. ಉತ್ತರ ಪ್ರದೇಶ ದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಡ್ಯಾನಿಶ್ ಅಲಿ ಈ ಬಾರಿ ಸ್ಪರ್ಧಿಸಲು ಬಯಸಿದ್ದರು. ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್ ಇವರಿಗೆ ಬೆಂಬಲ ವ್ಯಕ್ತ ಪಡಿಸುವ ನಿರೀಕ್ಷೆಯಿತ್ತು. ಆದರೆ ಬದಲಾದ ರಾಜಕೀಯ ಪರಿಸ್ಥಿತಿ ಯಲ್ಲಿ ಅವರು ಬಿಎಸ್‌ಪಿಗೆ ಸೇರಿದ್ದಾರೆ.
ಡ್ಯಾನಿಶ್ ಅಲಿ ನನ್ನ ಹಾಗೂ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರ ಅನುಮತಿ ಪಡೆದು ಬಿಎಸ್‌ಪಿ ಸೇರಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲಲು ಜೆಡಿಎಸ್ ಮತ್ತು ಬಿಎಸ್‌ಪಿ ನಡುವೆ ಆಗಿರುವ ರಾಜಕೀಯ ಒಪ್ಪಂದವಿದು
-ಎಚ್.ಡಿ. ಕುಮಾರಸ್ವಾಮಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.