ಸುಮಲತಾ ಪರ ದರ್ಶನ್ ಪ್ರಚಾರ ಪಕ್ಕಾ
Team Udayavani, Mar 9, 2019, 1:57 AM IST
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಸ್ಪರ್ಧಿಸಿದರೆ ಅವರ ಪರ ಚುನಾವಣಾ ಪ್ರಚಾರಕ್ಕೆ ಯಾರೆಲ್ಲ ಕಲಾವಿದರು ಬರುತ್ತಾರೆ ಎಂಬ ಕುತೂಹಲ ಆರಂಭವಾಗಿದೆ. ಇದರ ನಡುವೆಯೇ ನಟ ದರ್ಶನ್, ತಾವು ಸುಮಲತಾ ಪರ ಪ್ರಚಾರ ಮಾಡುವುದಾಗಿ ನೇರವಾಗಿ ಹೇಳಿದ್ದಾರೆ. “ನಾವೆಲ್ಲಾ ಒಂದೇ ಮನೆಯವರ ತರಹ. ಅಮ್ಮನ ಪರ ನಾನು ಪ್ರಚಾರ ಮಾಡುತ್ತೇನೆ. ನನ್ನಿಂದ ಅವರಿಗೆ ಏನೆಲ್ಲಾ ಸಹಾಯ ಮಾಡಬಹುದೋ ಅದನ್ನು ಮಾಡುತ್ತೇನೆ. ನನಗೆ ರಾಜಕೀಯದ ಬಗ್ಗೆ ಹೆಚ್ಚು ಗೊತ್ತಿಲ್ಲ. ಅದರಿಂದ ತುಂಬಾ ದೂರ ಇದ್ದೇನೆ. ಆದರೆ, ಅಮ್ಮನಿಗಾಗಿ ಪ್ರಚಾರ ಮಾಡುತ್ತೇನೆ. ಅವರು ಹೇಗೆ ಹೇಳುತ್ತಾರೋ ಹಾಗೆ’ ಎನ್ನುವ ಮೂಲಕ ಸುಮಲತಾರ ರಾಜಕೀಯ ಎಂಟ್ರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಅದಕ್ಕೆ
ಪೂರಕವಾಗಿ ಸುಮಲತಾ ಕೂಡಾ ಪ್ರತಿಕ್ರಿಯಿಸಿ,”ದರ್ಶನ್ ನನ್ನ ದೊಡ್ಡ ಮಗ ಇದ್ದ ಹಾಗೆ’. “ನಾನು ಅಭಿಷೇಕ್‌ನಿಂದ ಏನನ್ನು ನಿರೀಕ್ಷಿಸುತ್ತೇನೋ ಅದನ್ನೇ ನಿನ್ನಿಂದ ನಿರೀಕ್ಷಿಸುತ್ತೇನೆ ಎಂದಾಗ, ಅಮ್ಮ ನೀವು ಅಭಿಷೇಕ್‌ನಿಂದ ನಿರೀಕ್ಷಿಸುವುದಕ್ಕಿಂತ ಎರಡು ಪಟ್ಟು ಹೆಚ್ಚನ್ನು ನನ್ನಿಂದ ನಿರೀಕ್ಷೆ ಮಾಡಿ ಎನ್ನುತ್ತಾನೆ’ ಎಂದು ತಿಳಿಸಿದ್ದಾರೆ.
ದರ್ಶನ್ ಇದ್ದರೆ ಸಾಕಲ್ವ?: ಇನ್ನು, ನಟ ಸುದೀಪ್ ಅವರು ಸುಮಲತಾ ಪರ ಪ್ರಚಾರ ಕೈಗೊಳ್ಳುತ್ತಾರಾ ಎಂಬ ಪ್ರಶ್ನೆಯೂ ಎದ್ದಿದೆ. ಆದರೆ, ಈ ಪ್ರಶ್ನೆಗೆ ಸುದೀಪ್ ನೇರವಾಗಿ ಉತ್ತರ ನೀಡಲಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸುದೀಪ್, “ದರ್ಶನ್ ಒಬ್ಬರಿದ್ದರೆ ಸಾಕು. ಬೇರೆ ಯಾರೂ ಹೋಗುವ ಅಗತ್ಯವಿಲ್ಲ ಎಂದು ನನಗನಿಸುತ್ತದೆ. ಅದಕ್ಕಿಂತ ಹೆಚ್ಚಾಗಿ ಮಂಡ್ಯದಲ್ಲಿ ಅಂಬರೀಶ್ ಅವರ ಹೆಸರು ತುಂಬಾ ದೊಡ್ಡದು. ಆ ಹೆಸರೇ ಸಾಕು. ಜೊತೆಗೆ, ದರ್ಶನ್ ಬೇರೆ ಇರುತ್ತಾರೆ. ನನಗೆ ರಾಜಕೀಯದಲ್ಲಿ ಅಷ್ಟಾಗಿ ಆಸಕ್ತಿ ಇಲ್ಲ. ಜೊತೆಗೆ, ಇಲ್ಲಿಯವರೆಗೆ ಯಾರೂ ಕರೆದಿಲ್ಲ ಕೂಡಾ. ನನ್ನನ್ನು ನಂಬಿ ಒಂದಷ್ಟು ಮಂದಿ ನಿರ್ಮಾಪಕರಿದ್ದಾರೆ. ಚಿತ್ರೀಕರಣ ಕೂಡಾ ನಡೆಯುತ್ತಿದೆ. ಆ ಕಡೆ ಕೂಡಾ ನಾನು ನೋಡಬೇಕು’ ಎನ್ನುವ ಮೂಲಕ ಪ್ರಚಾರದಲ್ಲಿ ಭಾಗಿಯಾಗುವ ಬಗ್ಗೆ ನಿಖರ ಉತ್ತರ ಕೊಡದೆ ಜಾರಿಕೊಂಡರು. ಜೊತೆಗೆ, ನಟ ಯಶ್ ಕೂಡಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಯಶ್ ಅವರನ್ನು ಸಂಪರ್ಕಿ ಸಿದಾಗ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.