ದಶಕಗಳ ವೈರಿಗಳು ಈಗ ಭಾಯಿ ಭಾಯಿ
Team Udayavani, Mar 20, 2019, 1:24 AM IST
ಹಾಸನ: ರಾಜಕಾರಣದಲ್ಲಿ ಶಾಶ್ವತ ಶತ್ರುಗಳೂ ಇಲ್ಲ, ಮಿತ್ರರೂ ಇಲ್ಲ ಎಂಬುದಕ್ಕೆ ಪ್ರಸ್ತುತ ಹಾಸನದ ರಾಜಕಾರಣವೇ ಸಾಕ್ಷಿ. ಜಿಲ್ಲೆಯಲ್ಲಿ ಕಾಂಗ್ರೆಸ್ – ಜೆಡಿಎಸ್ ಸೆಣ ಸಾಟಕ್ಕೆ ದಶಕಗಳ ಇತಿಹಾಸ ಇದೆ. ಸಮ್ಮಿಶ್ರ ಸರಕಾರ ರಚನೆಯಾದರೂ ಹಾಸನದಲ್ಲಿ ಮಾತ್ರ ಪರಿಸ್ಥಿತಿ ಬದಲಾಗಿರಲಿಲ್ಲ. ಆದರೆ ಲೋಕಸಭಾ ಚುನಾವಣೆ ಮೈತ್ರಿ ಎರಡೂ ಪಕ್ಷಗಳ ಮುಖಂಡರನ್ನು ಒಟ್ಟುಗೂಡಿಸುತ್ತಿದೆ. ದಶಕಗಳಿಂದ ಪರಸ್ಪರ ಮುಖ ನೋಡದ ಜೆಡಿಎಸ್ – ಕಾಂಗ್ರೆಸ್ ಮುಖಂಡರು ಭೇಟಿ ಯಾಗುತ್ತಿದ್ದಾರೆ, ಸ್ನೇಹ ಹಸ್ತ ಚಾಚುತ್ತಿದ್ದಾರೆ.
ಶಿವರಾಮು, ಪುಟ್ಟೇಗೌಡ ಭೇಟಿ
ಚನ್ನರಾಯಪಟ್ಟಣದ ಕಾಂಗ್ರೆಸ್ ಮುಖಂಡ ಸಿ.ಎಸ್. ಪುಟ್ಟೇಗೌಡರ ನಿವಾಸಕ್ಕೆ ಸೋಮ ವಾರ ಪ್ರಜ್ವಲ್ ಅವರೊಂದಿಗೆ ಭೇಟಿ ನೀಡಿ ಸಹಕಾರ ಕೋರಿದ್ದ ರೇವಣ್ಣ ದಂಪತಿ, ಮಂಗಳ ವಾರ ಕೆಪಿಸಿಸಿ ಉಪಾಧ್ಯಕ್ಷ ಬಿ. ಶಿವರಾಮು ನಿವಾಸಕ್ಕೆ ಭೇಟಿ ನೀಡಿದರು. ಜೆಡಿಎಸ್‌ನಲ್ಲೇ 3 ಬಾರಿ ಶಾಸಕರಾಗಿದ್ದ ಪುಟ್ಟೇಗೌಡ, 2013ರಲ್ಲಿ ಕಾಂಗ್ರೆಸ್ ಸೇರಿದ್ದರು. ಬಿ. ಶಿವರಾಮು – ದೇವೇಗೌಡರ ರಾಜಕೀಯ ವೈರತ್ವ ದಶಕಗಳದ್ದು.
ಹಣದ ಹೊಳೆ ಆರೋಪ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲಿ ಹಣದ ಹೊಳೆಯೇ ಹರಿಯಿತೆಂಬ ಆರೋಪವಿದೆ. ಇದಕ್ಕೆ ಕಾರಣ ರೇವಣ್ಣ ಅವರೆದುರು ಎ. ಮಂಜು ಸ್ಪರ್ಧೆಯಲ್ಲಿದ್ದುದು. ಈಗಲೂ ಇದು ಪುನರಾವರ್ತನೆಯಾಗಿದೆ. ಹಾಗಾಗಿ ಬಲಾಡ್ಯ ರನ್ನು ಆರಂಭದಲ್ಲಿಯೇ ಹೊಸಕಿ ಹಾಕುವ ತಂತ್ರಗಾರಿಕೆಯನ್ನು ರೇವಣ್ಣ ನಡೆಸುತ್ತಿದ್ದಾರೆ. ತಮ್ಮ ಬಲಾಡ್ಯ ರಾಜಕೀಯ ವೈರಿಗಳನ್ನು ಹಣಿಯಲು ರೇವಣ್ಣ ದುರ್ಬಲ ರಾಜಕೀಯ ವೈರಿಗಳನ್ನೇ ಬಳಸುವ ಹಾದಿ ಹಿಡಿದಿದ್ದು, ಮಂಜು ಅವರ ವಿರುದ್ಧ ಶಿವರಾಮು, ಪುಟ್ಟೇಗೌಡರನ್ನು ತಮ್ಮತ್ತ ಸೆಳೆಯುವ ಯತ್ನವನ್ನು ಮಾಡುತ್ತಿದ್ದಾರೆ.
ವಿರೋಧಿಗಳ ಹಣಿಯುವ ತಂತ್ರ
ಬದಲಾದ ರಾಜಕೀಯ ಪರಿಸ್ಥಿತಿ ಯಲ್ಲಿ ಎ. ಮಂಜು, ದೇವೇಗೌಡರ ಕುಟುಂಬದ ರಾಜಕೀಯ ವೈರಿಯಾಗಿದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ರೇವಣ್ಣ ತಮ್ಮ ರಾಜಕೀಯ ಎದುರಾಳಿ ಮಂಜು ಅವರನ್ನು ಆರಂಭದಲ್ಲೇ ಹಣಿಯಲು ಮುಂದಾಗಿದ್ದಾರೆ.
ಪ್ರಜ್ವಲ್ ರೇವಣ್ಣಗೆ ಬೆಂಬಲ ನೀಡಿ
ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಬೆಂಬಲಿಸಬೇಕು ಎಂದು ಕೆಪಿಸಿಸಿ ಸದಸ್ಯ ವಿನಯ್ ಗಾಂಧಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಸಚಿವ ಎ.ಮಂಜು ಅವರು ಅವಕಾಶವಾದಿಯಾಗಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾಗ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿತ್ತು. ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರು ಮಂಜು ಅವರ ಜೊತೆಗೆ ನಿಲ್ಲಬಾರದು. ಪ್ರಜ್ವಲ್ ರೇವಣ್ಣರನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮತದಾರರು ಬೆಂಬಲಿಸಬೇಕು ಎಂದು ಹೇಳಿದರು.
ಕುಟುಂಬ ರಾಜಕಾರಣ ಯಾವ ಪಕ್ಷದಲ್ಲಿಲ್ಲ ಹೇಳ್ರೀ?
ಹಾಸನ: ರಾಜ್ಯದಲ್ಲಿ ದೇವೇಗೌಡರು ಮಾತ್ರ ಕುಟುಂಬ ರಾಜಕಾರಣ ಮಾಡುತ್ತಿದ್ದಾರಾ?. ಬೇರೆ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲವೇ?. ಮಾಧ್ಯಮಗಳು ಬೇರೆಯವರ ಕುಟುಂಬ ರಾಜಕಾರಣವನ್ನು ಏಕೆ ಪ್ರಸ್ತಾಪಿಸುವುದಿಲ್ಲ ಎಂದು ಸಚಿವ ಎಚ್.ಡಿ.ರೇವಣ್ಣ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾತನಾಡಿ, ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಮುರುಗೇಶ್ ನಿರಾಣಿ, ಉದಾಸಿ ಸೇರಿದಂತೆ ಬಿಜೆಪಿಯವರು ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ?. ಇನ್ನೆಷ್ಟು ಉದಾಹರಣೆ ಕೊಡಬೇಕು?. ದೇವೇಗೌಡರ ಕುಟುಂಬದವರು ಮಾತ್ರ ನಿಮಗೆ ಕಾಣುತ್ತಾರೆಯೇ?. ದೇವೇಗೌಡರು ತಮ್ಮ ಸಮಕಾಲೀನರನ್ನು ನೆನೆದು, ಹಿಂದಿನ ರಾಜಕಾರಣದ ಹಾದಿ ನೆನೆದು ಕಣ್ಣೀರು ಹಾಕಿದರೆ ಅದನ್ನೇ ದೊಡ್ಡ ಸುದ್ದಿ ಮಾಡುತ್ತೀರಿ. ಬೇರೆ ರಾಜಕಾರಣಿಗಳು ಕಣ್ಣೀರು ಹಾಕಿಲ್ಲವೇ ಎಂದು ಹರಿಹಾಯ್ದರು.
ಮಾ.22ರಂದು ಪ್ರಜ್ವಲ್ ನಾಮಪತ್ರ
ಹಾಸನ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್ ಸ್ಪರ್ಧೆ ಖಚಿತ. ದೇವೇಗೌಡರೇ ಅಭ್ಯರ್ಥಿಯನ್ನು ಘೋಷಿಸಿದ್ದಾರೆ. ಹಾಗಾಗಿ, ಬದಲಾವಣೆ ಇಲ್ಲವೇ ಇಲ್ಲ. ಮಾ.22ರಂದು ಪ್ರಜ್ವಲ್ ರೇವಣ್ಣ ಅವರು ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ರೇವಣ್ಣ ತಿಳಿಸಿದರು.
ಎನ್. ನಂಜುಂಡೇಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.