![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Apr 24, 2019, 6:01 AM IST
ಜಿಲ್ಲಾಧಿಕಾರಿಗಳೆಂದರೆ ಚುನಾವಣೆ ವೇಳೆ ಬಹುತೇಕ ಬ್ಯುಸಿ ಇರುತ್ತಾರೆ. ಅವರ ಚಾಲಕರಿಗೂ ಪುರುಸೊತ್ತು ಎನ್ನುವುದು ಇಲ್ಲ. ಆದರೂ ಮತದಾನದ ಮಹತ್ವ ಅರಿತು ಚಾಲಕನಿಗೆ ಮತದಾನಕ್ಕೆ ಜಿಲ್ಲಾಧಿಕಾರಿಗಳು ಅವಕಾಶ ಕೊಟ್ಟಿದ್ದೂ ಅಲ್ಲದೇ ಅವರ ತಾಯಿಯವರನ್ನು ಮತ್ತು ಹಿರಿಯ ನಾಗರಿಕರೊಬ್ಬರನ್ನು ತಮ್ಮದೇ ವಾಹನದಲ್ಲಿ ಕರೆತಂದು ಜಿಲ್ಲಾಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿ ಅವರು ಪ್ರಶಂಸೆಗೆ ಪಾತ್ರವಾಗಿದ್ದಾರೆ.
ಜಿಲ್ಲಾಧಿಕಾರಿ ಅವರ ಚಾಲಕ ಬೈಂದೂರು ಸಮೀಪದ ಬಾಡದವರು. ಮಧ್ಯಾಹ್ನ ಜಿಲ್ಲಾಧಿಕಾರಿಗಳು ಕಾಲೇಜಿಗೆ ಭೇಟಿ ನೀಡುವಾಗ ಅವರ ಚಾಲಕ ಇನ್ನೊಂದು ಕಾರಿನಲ್ಲಿ ಬೂತ್ ಒಂದಕ್ಕೆ ತೆರಳಿ ಮತಚಲಾಯಿಸಲು ಯೋಜಿಸಿದ್ದರು. ಇದನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ತಮ್ಮದೇ ಕಾರಿನಲ್ಲಿ ಚಾಲಕನೊಂದಿಗೆ ತೆರಳಿದ್ದೂ ಅಲ್ಲದೆ, ಚಾಲಕನ ತಾಯಿ ಹಾಗೂ ಮತ್ತೂಬ್ಬ ಹಿರಿಯ ನಾಗರೀಕರನ್ನು ಜತೆಗೆ ಕರೆತರಲು ಅನುವು ಮಾಡಿದ್ದಾರೆ. ಮತದಾನ ಮುಗಿಯವವರೆಗೂ ಅವರು ಅಲ್ಲೇ ಇದ್ದರು.
You seem to have an Ad Blocker on.
To continue reading, please turn it off or whitelist Udayavani.