ದೇವೇಗೌಡರು ಚನ್ನಮ್ಮರನ್ನು ರಾಜ್ಯಸಭಾ ಸದಸ್ಯೆ ಮಾಡಲಿ
Team Udayavani, Apr 6, 2019, 6:05 AM IST
ಬೀದರ: ಈ ಬಾರಿ ಲೋಕಸಭೆಗೆ ದೇವೇಗೌಡರು ಹಾಗೂ ಅವರಿಬ್ಬರ ಮೊಮ್ಮಕ್ಕಳು ಸ್ಪರ್ಧಿಸಿದರೆ, ಒಬ್ಬ ಮಗ ಸಿಎಂ,ಇನ್ನೊಬ್ಬ ಮಗ ಸಚಿವ,ಸೊಸೆ ಶಾಸಕರು. ಜೆಡಿಎಸ್ ಪಕ್ಷದ ಉಳಿವಿಗಾಗಿ ನಮ್ಮ ಕುಟುಂಬ ಚುನಾವಣೆಗೆ ಸ್ಪರ್ಧಿಸುತ್ತಿದೆ ಎಂದು ದೇವೇಗೌಡರು ಹೇಳುತ್ತಿದ್ದಾರೆ. ಹಾಗಾದರೆ, ಚನ್ನಮ್ಮ ಅವರೊಬ್ಬರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದರೆ ಗೌಡರ ಕುಟುಂಬದ ಚಿತ್ರ ಪೂರ್ಣಗೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಟೀಕಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರು ಎಂದು ಬಿಜೆಪಿಗೆ ಕೇಳಿದರೆ ಮೋದಿ ಎಂಬ ಸ್ಪಷ್ಟ ಉತ್ತರ ನಮ್ಮಲ್ಲಿದೆ. ಆದರೆ, ಮಹಾಘಟಬಂಧನ್‌ನಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಇಂದಿಗೂ ಯಾವ ಪಕ್ಷದವರೂ ಉತ್ತರಿಸುತ್ತಿಲ್ಲ. ಮಹಾಘಟಬಂಧನ್ ಮೂರಾಬಟ್ಟೆಯಾಗಿದೆ ಎಂದರು.
ಮಹಾಘಟಬಂಧನ್‌ದಲ್ಲಿ ಒಗ್ಗಟ್ಟು ಇಲ್ಲ. ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್‌ನ ಮೈತ್ರಿಯಿಂದ ಪಕ್ಷಗಳು ದೂರ ಉಳಿದುಕೊಂಡಿವೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್
ಮೈತ್ರಿ ಮಾಡಿಕೊಂಡಿದ್ದು, ಜೆಡಿಎಸ್‌ಗೆ ಸಿಕ್ಕಿರುವ 8 ಸ್ಥಾನಗಳ ಪೈಕಿ ಕೆಲವು ಕಡೆ ಅಭ್ಯರ್ಥಿಗಳು ಸಿಕ್ಕಿಲ್ಲ. ತಮ್ಮಲ್ಲಿ ಅಭ್ಯರ್ಥಿ ಇಲ್ಲದ ಕಾರಣ ಕಾಂಗ್ರೆಸ್‌ನವರನ್ನು ಕರೆದು ತಂದು ಟಿಕೆಟ್ ನೀಡಿದ್ದಾರೆ. ಮಂಡ್ಯ, ಹಾಸನ ಸೇರಿ ಹಲವು ಕ್ಷೇತ್ರಗಳಲ್ಲಿ ಅವರವರ ಪಕ್ಷಗಳಲ್ಲಿ ಮೈತ್ರಿ ಮುರಿದು ಗೊಂದಲ ಸೃಷ್ಟಿಯಾಗಿದೆ ಎಂದರು.
ರಾಹುಲ್ ಗಾಂಧಿ ಮೂರ್ಖ: ಉಗ್ರಗಾಮಿಗಳಿಗೆ ಸೌಮ್ಯ ರೀತಿಯಲ್ಲಿ ನಡೆದುಕೊಳ್ಳುವ ಕಾಂಗ್ರೆಸ್,ಉಗ್ರಗಾಮಿಗಳಿಗೆ ಬೈದರೆ, ಪಾಕಿಸ್ತಾನಕ್ಕೆ ಬೈದರೆ ಮತ ಬರುವುದಿಲ್ಲ ಎಂದು ತಿಳಿದುಕೊಂಡಿದ್ದಾರೆ. ಈ ವಿಷಯದಲ್ಲಿ ರಾಹುಲ್ ಗಾಂಧಿ ಮೂರ್ಖರಿದ್ದಾರೆ ಎಂದರು.
“ಚೌಕಿದಾರ್ ಚೋರ್’ ಎಂದು ರಾಹುಲ್ ಗಾಂಧಿಯವರು ಪ್ರಧಾನಿಗೆ ಅವಮಾನ ಮಾಡುತ್ತಿದ್ದಾರೆ. ಆದರೆ, 60 ವರ್ಷಗಳಿಂದ ಭಾರತವನ್ನು ಲೂಟಿ ಮಾಡಿರುವುದು ಕಾಂಗ್ರೆಸ್ ಪಕ್ಷ. ನಿಜವಾದ ಕಳ್ಳರು ಯಾರುಎಂದರೆ ದೇಶವನ್ನು ಲೂಟಿ ಮಾಡಿದ ರಾಹುಲ್ ಗಾಂಧಿ ಮತ್ತು ಅವರ ಟೀಮ್ ಎಂದರು.
ಕಾಂಗ್ರೆಸ್ ಪಕ್ಷ ದೇಶದ್ರೋಹದ ವಿರುದ್ಧ ಇರುವ ಕಾನೂನು ತಿದ್ದುಪಡಿ ಮಾಡುವುದಾಗಿ ತಮ್ಮ ಘೋಷಣಾ ಪತ್ರದಲ್ಲಿ ಸೇರಿಸಿದೆ. ಇದೀಗ ಚುನಾವಣೆ ಸಂದರ್ಭದಲ್ಲಿ ರಾಹುಲ್ ಅವರು ಬಡ ಕುಟುಂಬಕ್ಕೆ ತಿಂಗಳಿಗೆ 6 ಸಾವಿರ ಸೇರಿದಂತೆ ವರ್ಷಕ್ಕೆ 72,000 ಸಾವಿರ ಹಣ ನೀಡುವುದಾಗಿ ಹೇಳುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಮಾತ್ರ ಕಾಂಗ್ರೆಸ್‌ಗೆ ಬಡವರ ನೆನಪಾಗುತ್ತದೆ. ಸುಳ್ಳು ಭರವಸೆ ನೀಡಿ ಮತ ಪಡೆಯಬೇಕೆಂಬ ಹುನ್ನಾರವನ್ನು ಕಾಂಗ್ರೆಸ್ ಮಾಡುತ್ತಿದ್ದು, ಈ ಯೋಜನೆ ಅನುಷ್ಠಾನಗೊಳ್ಳುವುದು ಅಸಾಧ್ಯ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಕೇವಲ ಓಟ್ ಬ್ಯಾಂಕ್ ರಾಜಕೀಯ ಮಾಡುತ್ತಿದೆ. ಉಗ್ರವಾದಿಗಳನ್ನು ಗೌರವದಿಂದ ಕರೆಯುವ ಮೂಲಕ ರಾಹುಲ್ ಗಾಂಧಿ ಪಾಕಿಸ್ತಾನದಲ್ಲಿ ಫುಲ್ ಫೇಮಸ್ ಆಗಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.