ದಿಢೀರ್ ಬಂದ ಮಂಡ್ಯ ಗೌಡ್ತಿ, ಕಳವಳ ಆಗೈತಿ
Team Udayavani, Mar 20, 2019, 1:19 AM IST
ಮಂಡ್ಯ: ಜೆಡಿಎಸ್ ಭದ್ರ ಕೋಟೆ ಎನಿಸಿರುವ ಮಂಡ್ಯ ಜಿಲ್ಲೆಗೆ ಸುಮಲತಾ ಅವರ ಅನಿರೀಕ್ಷಿತ ಪ್ರವೇಶ ಕ್ಷೇತ್ರದ ಚುನಾವಣೆಗೆ, ಜಿಲ್ಲಾ ರಾಜಕಾರಣಕ್ಕೆ ಹೊಸ ತಿರುವನ್ನು ತಂದುಕೊಟ್ಟಿದೆ. ಅಲ್ಲದೆ ದೇವೇಗೌಡರ ಮೊಮ್ಮಗ ನಿಖೀಲ್ ಸ್ಪರ್ಧೆಯಿಂದ ಕುಟುಂಬ ರಾಜಕಾರಣದ ಜತೆಗೆ ಸ್ಥಳೀಯ ನಾಯಕತ್ವ ಹೆಚ್ಚು ಮಹತ್ವ ಪಡೆದು ಕೊಂಡಿದೆ. ಹೀಗಾಗಿ ಈ ಚುನಾವಣೆಯಲ್ಲಿ ಕ್ಷೇತ್ರದ ಸಮಸ್ಯೆ, ಅಭಿ ವೃದ್ಧಿ ವಿಚಾರ ಗೌಣವಾಗಿದ್ದು, ಸುಮಲತಾ ಸ್ಪರ್ಧೆ ಪ್ರಮುಖ ವಿಷಯ. ಜತೆಗೆ ಮೈತ್ರಿ ಸರಕಾರದ ನಾಯಕರಿಗೆ ಇರಿಸು ಮುರುಸನ್ನೂ ಉಂಟು ಮಾಡಿದೆ.
ಸಮಸ್ಯೆಗಳು ಗೌಣ
ಜಿಲ್ಲೆಯ ರೈತರನ್ನು ಹಲವು ಸಮಸ್ಯೆಗಳು ಕಾಡುತ್ತಿವೆ. ಕುಡಿಯಲು, ನೀರಾವರಿಗೆ ನೀರಿನ ಸಮಸ್ಯೆ ಇದ್ದದ್ದೇ. ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಗಂಭೀರ ಪ್ರಯತ್ನ ನಡೆದಿಲ್ಲ. ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿದಿಲ್ಲ. ಕೆಆರ್‌ಎಸ್ ಪಕ್ಕದಲ್ಲೇ ಗಣಿಗಾರಿಕೆ ನಡೆದಿದ್ದರೂ ತಡೆಯುವ ಕೆಲಸವಾಗುತ್ತಿಲ್ಲ. ಈ ಮಧ್ಯೆ, ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆಆರ್‌ಎಸ್‌ನಲ್ಲಿ ಮನೋರಂಜನ ಪಾರ್ಕ್ ನಿರ್ಮಿಸಲು ರಾಜ್ಯ ಸರಕಾರ ಮುಂದಾ ಗಿದ್ದು, ಇದು ಸ್ಥಳೀಯರ ಪ್ರತಿಭಟನೆಗೂ ಕಾರಣವಾಗಿದೆ.
ಅನಿರೀಕ್ಷಿತ ಪ್ರವೇಶದ ಆತಂಕ
ಸುಮಲತಾ ರಾಜ ಕೀಯ ಪ್ರವೇಶವನ್ನು ಯಾರೂ ನಿರೀಕ್ಷಿಸಿರ ಲಿಲ್ಲ. ಅವರ ಆಗಮನ ದಿಂದ ಜೆಡಿಎಸ್‌ಗೆ
ಸುಲಭ ತುತ್ತಾಗುತ್ತಿದ್ದ ಕ್ಷೇತ್ರ ಈಗ ಬಿಸಿತುಪ್ಪವಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಸುಮಲತಾ ಈಗಾಗಲೇ ಜಿಲ್ಲಾದ್ಯಂತ ಸಂಚರಿಸುತ್ತಾ, ಅಖಾಡದಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಪುತ್ರ ನಿಖೀಲ್‌ರನ್ನು ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಿ ಪೂರ್ವತಯಾರಿ ಆರಂಭಿಸಿದ್ದ ಸಂದರ್ಭದಲ್ಲೇ ಸುಮಲತಾ ಸ್ಪರ್ಧೆಗೆ ಆಸಕ್ತಿ ವಹಿಸಿದ್ದು ಜೆಡಿಎಸ್ ನಾಯಕ ರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಬಿಜೆಪಿ ಅಸ್ತ್ರ
ಬಿಜೆಪಿ, ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆಯೋ ಇಲ್ಲ ಸುಮಲತಾರನ್ನು ಬೆಂಬಲಿಸುತ್ತದೆಯೋ ಎಂಬುದು ಸ್ಪಷ್ಟವಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯ ಒಗ್ಗೂಡಿ ಜೆಡಿಎಸ್ ಕೈ ಹಿಡಿದಿತ್ತು. ಕುಮಾರಸ್ವಾಮಿ ಜಿಲ್ಲೆಯ ಅಭಿವೃದ್ಧಿಗೆ ಕೋಟ್ಯಂತರ ರೂ. ಚೆಲ್ಲಿದರೂ ಪ್ರಗತಿಯ ಚಿತ್ರಣ ಕಾಣುತ್ತಿಲ್ಲ. ಬಹು ನಿರೀಕ್ಷಿತ ರೈತರ ಸಾಲಮನ್ನಾದಲ್ಲೂ ಸ್ಪಷ್ಟತೆ ದೊರಕಿಲ್ಲ. 9 ತಿಂಗಳಿನಿಂದ ಮಂಡ್ಯ ರಸ್ತೆಗಳ ಸ್ಥಿತಿಯೂ ಬದಲಾಗಿಲ್ಲ. ಇದೆಲ್ಲವೂ ಬಿಜೆಪಿಗೆ ಚುನಾವಣಾ ಅಸ್ತ್ರ.
ಸುಮಲತಾ ಅಸ್ತ್ರ
ಮಂಡ್ಯದ ಸೊಸೆ ಎಂಬ ಅಭಿಮಾನ, ಸ್ಥಳೀಯ ಕಾಂಗ್ರೆಸ್ ನಾಯಕರ ಪರೋಕ್ಷ ಬೆಂಬಲ, ಚಿತ್ರರಂಗದ ಒಕ್ಕೊರಲ ಬೆಂಬಲ, ಅಂಬರೀಶ್ ಅಭಿಮಾನಿ ಬಳಗ, ಪ್ರಬುದ್ಧ ಮಾತು, ನಡೆ ಸುಮಲತಾರ ಪ್ಲಸ್ ಪಾಯಿಂಟ್.
ಜೆಡಿಎಸ್ ಚುನಾವಣ ಅಸ್ತ್ರ
ಒಕ್ಕಲಿಗ ಸಮುದಾಯ ಪಕ್ಷದ ಹಿಂದಿರುವುದು, ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರಿರುವುದು, ರಾಜ್ಯದಲ್ಲಿ ಅಧಿಕಾರ, ಜಿಲ್ಲೆಯ ಅಭಿವೃದ್ಧಿಗೆ ಸಿಎಂ ಕೋಟ್ಯಂತರ ರೂ. ಚೆಲ್ಲಿರುವುದು, ಪ್ರಬಲ ಸಂಘಟನೆ, ದೇವೇಗೌಡರ ವರ್ಚಸ್ಸು ಜೆಡಿಎಸ್‌ಪ್ಲಸ್ ಪಾಯಿಂಟ್.
ಮಂಡ್ಯ ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.