ಬಣ್ಣದ ಮಾತುಗಳಿಗೆ ಮರುಳಾಗದಿರಿ: ನಿಖೀಲ್
Team Udayavani, Apr 2, 2019, 6:46 AM IST
ಭಾರತೀನಗರ: ಬಣ್ಣದ ಮಾತಿಗೆ ಮರುಳಾಗದೆ ಶ್ರಮಜೀವಿಯ ಪರಿಶ್ರಮಕ್ಕೆ ಮಂಡ್ಯ ಜನತೆ ನ್ಯಾಯ ದೊರಕಿಸಬೇಕೆಂದು ಮೈತ್ರಿ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ ತಿಳಿಸಿದರು.
ಇಲ್ಲಿನ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ಪೂಜಾ ಕುಣಿತ, ಡೊಳ್ಳು ಕುಣಿತ ಸೇರಿ ಜನಪದ ಕಲಾಮೇಳ ಹಾಗೂ ತೆನೆಹೊತ್ತ ನೂರಾರು ಮಹಿಳೆಯರೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದ ಬಳಿಕ ಅವರು ಮಾತನಾಡಿದರು. ನಮ್ಮ ತಂದೆ ಕುಮಾರಸ್ವಾಮಿ ಹಾಗೂ ತಾತ ದೇವೇಗೌಡರು ರೈತರ ಅಭಿವೃದ್ಧಿಗಾಗಿಯೇ ಶ್ರಮಿಸುತ್ತಿರುವವರು. ರೈತರ ಹಾಗೂ ಬಡ ಕುಟುಂಬಗಳನ್ನು ಉಳಿಸಲು ಸಾಲಮನ್ನಾ, ಲಾಟರಿ, ಸಾರಾಯಿ ನಿಷೇಧದಂತಹ ಜನಪರಯೋಜನೆಗಳನ್ನು ಜಾರಿಗೊಳಿಸಿರುವುದನ್ನು ಎಂದಿಗೂ ಮರೆಯಬೇಡಿ ಎಂದು ಹೇಳಿದರು.
ನಮ್ಮ ಕುಟುಂಬದವರು ಐಷಾರಾಮಿ ಜೀವನ ಮಾಡಿಕೊಂಡು ಎಂದೂ ಬಂದಿಲ್ಲ. ರೈತರ ಮಧ್ಯೆ ಇದ್ದು ರೈತರ ಕಷ್ಟಗಳನ್ನು ಅರ್ಥ ಮಾಡಿಕೊಂಡಿದ್ದೇವೆ.ಜಿಲ್ಲೆಯಲ್ಲಿ ನಮಗಿರುವ ಬೆಂಬಲ ನೋಡಿ ಪಕ್ಷೇತರ ಅಭ್ಯರ್ಥಿ ಸುಮಲತಾ ಸೋಲಿನ ಭೀತಿಯಿಂದ ನಮ್ಮ ಪಕ್ಷದ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆಂದು ಕಿಡಿ ಕಾರಿದರು.
ತರಾಟೆಗೆ ತೆಗೆದುಕೊಂಡ ಮಹಿಳೆ:
ನಮ್ಮ ಗ್ರಾಮದಲ್ಲಿ ಜೆಡಿಎಸ್ ಮುಖಂಡರ ಜೊತೆಯಲ್ಲಿ ಖುದ್ದು ಪ್ರಚಾರಮಾಡಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸುತ್ತಿದ್ದೇನೆ. ಪಂಚಾಯಿತಿಗಳು ಸೇರಿದಂತೆ ಶಾಸಕರು ಮತ್ತು ಸಂದರಿಗೆ ಹೆಚ್ಚಿನ ಮತಗಳನ್ನು ನೀಡಿದ್ದೇವೆ. ಆದರೆ ನಮ್ಮ ಗ್ರಾಮದ ಮುಖ್ಯ ರಸ್ತೆಗಳು ಇಂದಿಗೂ ಅಭಿವೃದ್ಧಿ ಕಂಡಿಲ್ಲ. ತಾವು ಚುನಾವಣೆಯ ಸಮಯದಲ್ಲಿ ಬಂದು ಪ್ರಚಾರಮಾಡಿ ಮನೆ ಸೇರಿಕೊಳ್ಳುತ್ತೀರಿ.
ಗ್ರಾಮ ಅಭಿವೃದ್ಧಿಯಾಗದಿರುವುದಕ್ಕೆ ನಾವೇನು ಉತ್ತರ ನೀಡಬೇಕು ಎಂದು ನಿಖೀಲ್ ಕುಮಾರಸ್ವಾಮಿಯನ್ನು ಗುಂಡಿ ಬಿದ್ದಿರುವ ರಸ್ತೆ ಮತ್ತು ಕೊಳಕು ಚರಂಡಿಸ್ಥಳದಲ್ಲಿಯೆ ಮಹಿಳೆ ತರಾಟೆಗೆ ತೆಗೆದುಕೊಂಡರು. ಆ ಕ್ಷಣದಲ್ಲಿ ಉತ್ತರಿಸಲಾಗದೆ ಅಲ್ಲಿಂದ ಜಾಗ ಖಾಲಿ ಮಾಡಿದ ನಿಖೀಲ್, ನಂತರ ಸಭೆಯಲ್ಲಿ ನಾನು ಗ್ರಾಮವನ್ನು ಅಭಿವೃದ್ಧಿ ಪಡಿಸುತ್ತೇನೆ ಎಂದು ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Police FIR: ಎಫ್ಐಆರ್ ದಾಖಲಿಸಿ ನನ್ನ ವಿರುದ್ಧ ಸರ್ಕಾರದಿಂದ ದ್ವೇಷ ಸಾಧನೆ: ಎಚ್‌ಡಿಕೆ
Waqf: ಕಾಂಗ್ರೆಸ್ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್ ಆಸ್ತಿ ಕಬಳಿಕೆ: ಯತ್ನಾಳ್
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.