ನಕ್ಸಲ್‌ಪೀಡಿತ ಪಳ್ಳಿಗದ್ದೆಗೆ ಡಿವೈಎಸ್ಪಿ ಭೇಟಿ
Team Udayavani, Mar 19, 2019, 1:00 AM IST
ಸುಬ್ರಹ್ಮಣ್ಯ: ಮುಂದಿನ ತಿಂಗಳ 18ರಂದು ನಡೆಯಲಿರುವ ಲೋಕಸಭಾ ಚುನಾವಣೆ ಪ್ರಕ್ರಿಯೆಯಲ್ಲಿ ನಾಗರಿಕರಾದ ನೀವೆಲ್ಲರೂ ಪಾಲ್ಗೊಂಡು ನಿಶ್ಚಿಂತೆಯಿಂದ ಮತ ಚಲಾಯಿಸಿ, ಯಾವುದೆ ಕಾರಣಕ್ಕೂ ಹಿಂದೇಟು ಹಾಕಬೇಡಿ ಎಂದು ಪುತ್ತೂರು ಡಿವೈಎಸ್ಪಿ ಮುರಳೀಧರ ಪಿ.ಕೆ. ಹೇಳಿದರು.
ಅವರು ಸೋಮವಾರ ಸಂಜೆ ನಕ್ಸಲ್ ಬಾಧಿತ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಪಳ್ಳಿಗ¨ªೆ ಪ್ರದೇಶಕ್ಕೆ ಭೇಟಿ ನೀಡಿ ಕಾಡಂಚಿನ ಮನೆಗಳ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು. ಕೆಲ ವರ್ಷಗಳ ಹಿಂದೆ ನಕ್ಸಲರು ಭೇಟಿ ಇತ್ತ ಮನೆ ಮಂದಿಯ ಜತೆ ಮಾತುಕತೆ ನಡೆಸಿ ಪೊಲೀಸ್ ಇಲಾಖೆ ನಿಮ್ಮ ಜತೆ ಇದೆ. ನೀವು ಯಾವುದೇ ಭೀತಿಯಿಲ್ಲದೇ ಧೈರ್ಯದಿಂದ ಇರುವಂತೆ ತಿಳಿಸಿದರು.
ಮತದಾನ ಮಾಡಬನ್ನಿ
ಬಳಿಕ ಅವರು ಕುಲ್ಕುಂದದಲ್ಲಿ ಜಿÇÉಾ ಸ್ವೀಪ್ ಘಟಕದ ಮತದಾನ ಮಾಡಬನ್ನಿ ಅಭಿಯಾನದಲ್ಲಿ ಪಾಲ್ಗೊಂಡು ಎಲ್ಲರೂ ಅತ್ಯಮೂಲ್ಯ ಮತದಾನದ ಹಕ್ಕನ್ನು ಚಲಾಯಿಸಿ; ಯಾರು ಕೂಡ ಮತದಾನ ಪ್ರಕ್ರಿಯೆಯಿಂದ ಹೊರಗುಳಿಯದಿರಿ ಎಂದು ಮನವಿ ಮಾಡಿದರು. ಸಮಸ್ಯೆಗಳಿದ್ದಲ್ಲಿ ಅಥವಾ ಅಪರಿಚಿತ ವ್ಯಕ್ತಿಗಳ ಚಲನವಲನ ಕಂಡು ಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಅವರು ಹೇಳಿದರು.
ಈ ಸಂದರ್ಭ ಸುಬ್ರಹ್ಮಣ್ಯ ಪಿಎಸ್‌ಐ ಮಲ್ಲಿಕಾರ್ಜುನ, ಪೊಲೀಸ್ ಸಿಬಂದಿ ಹಾಗೂ ನಾಗರಿಕರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.