ಸುಲಭಕ್ಕೆ ಸಿಕ್ಕೀತು ಕುಪ್ಪಂ, ಆದರೆ ಆಂಧ್ರ?
Team Udayavani, Apr 3, 2019, 6:30 AM IST
ಆಂಧ್ರಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಭೆಗೆ ಒಂದೇ ಹಂತ, ಸಮಯದಲ್ಲೇ ಮತದಾನ ನಡೆಯಲಿದೆ. ವಿಧಾನಸಭೆ ಕ್ಷೇತ್ರಗಳ ಪೈಕಿ ದೇಶದ ಗಮನ ಸೆಳೆಯುವ ಕ್ಷೇತ್ರಗಳಲ್ಲೊಂದು ಕುಪ್ಪಂ. ತೆಲುಗು ದೇಶಂ ಪಾರ್ಟಿ ಮುಖ್ಯಸ್ಥ, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರ ಅಖಾಡ ಎಂದೇ ಕುಪ್ಪಂ ಖ್ಯಾತಿವೆತ್ತಿದೆ. 1989ರಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಡಾ.ಎಸ್.ಕೃಷ್ಣ ರನ್ನು ಸೋಲಿಸಿದ್ದ ಚಂದ್ರ ಬಾಬು ನಾಯ್ಡು ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಆರು ಬಾರಿ ಅದೇ ಕ್ಷೇತ್ರದಿಂದ ಆಯ್ಕೆಯಾಗುತ್ತಾ ಬಂದಿ ದ್ದಾರೆ. ಕುಪ್ಪಂನ ಜನರು ಮಾತ್ರ “ನಾಯ್ಡು ತಮ್ಮ ಕ್ಷೇತ್ರಕ್ಕೆ ಉತ್ತಮ ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ಆದರೂ ಈ ಬಾರಿ, ಆಂಧ್ರಪ್ರದೇಶದಲ್ಲಿ ಟಿಡಿಪಿಯನ್ನು ಅಧಿಕಾರದಲ್ಲಿ ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತದೆಯೋ ಇಲ್ಲವೋ ತಿಳಿಯದು’ ಎಂದು ಖಾಸಗಿಯಾಗಿ ಮಾತನಾಡುತ್ತಿದ್ದಾರೆ.
ಕುಪ್ಪಂ ಆಂಧ್ರಪ್ರದೇಶದಲ್ಲಿಯೇ ಇದ್ದರೂ, ಅಲ್ಲಿ ಕರ್ನಾಟಕದ ಕಂಪೂ ಇದೆ. ಬೆಂಗಳೂರಿನಿಂದ ನಾಯ್ಡು ಕ್ಷೇತ್ರಕ್ಕೆ 114 ಕಿಮೀ ಪ್ರಯಾಣ. ಇಲ್ಲಿ ಕನ್ನಡ, ತಮಿಳು ಭಾಷಿಕರೂ ಇದ್ದಾರೆ. ನಾಯ್ಡು ಅವರ ಮೂಲ ಚಿತ್ತೂರು ಸಮೀಪದ ನರವರಪಲ್ಲೆ. ಗಮನಿಸಬೇಕಾದ ಅಂಶವೆಂದರೆ ಚಂದ್ರಬಾಬು ನಾಯ್ಡು ಮೊದಲ ಬಾರಿಗೆ ಶಾಸಕರಾದದ್ದು ಕಾಂಗ್ರೆಸ್ ಟಿಕೆಟ್‌ನಿಂದ 1978ರಲ್ಲಿ. ಆ ವೇಳೆಗೆ ಅವರ ವಯಸ್ಸು ಕೇವಲ 28.
ಕ್ಷೇತ್ರದಲ್ಲಿನ ತರಕಾರಿ ಮಾರುವವರು, ವ್ಯಾಪಾರಿಗಳು ಹೇಳುವ ಪ್ರಕಾರ ನಾಯ್ಡು ಶ್ರಮದಿಂದಾಗಿ ಕುಪ್ಪಂ ಎಂಬ ಸ್ಥಳ ದೇಶ-ವಿದೇಶಗಳಲ್ಲಿ ಹೆಸರು ಪಡೆಯುವಂತಾಯಿತು. ಆಂಧ್ರ ಮತ್ತು ಹೈದರಾಬಾದ್ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ನಮ್ಮ ನಾಯಕನ ಶ್ರಮವೇ ಕಾರಣ ಎಂದು ಶ್ಲಾ ಸುತ್ತಾರೆ ಸ್ಥಳೀಯರು. ವಿಜಯವಾಡದಿಂದ ಕುಪ್ಪಂಗೆ ಕುಡಿಯಲು ಮತ್ತು ಇತರ ಉಪಯೋಗಕ್ಕಾಗಿ ಕೃಷ್ಣಾ ನದಿ ನೀರನ್ನು ಬೃಹತ್ ಗಾತ್ರದ ಪೈಪ್‌ಗ್ಳಲ್ಲಿ ಪೂರೈಸಲು ಕ್ರಮ ಕೈಗೊಂಡಿದ್ದಾರೆ. ಸರಿ ಸುಮಾರು ಮೂವತ್ತು ವರ್ಷಗಳಿಂದ ನಾಯ್ಡು ಪ್ರಶ್ನಾತೀತ ನಾಯಕನಾಗಿ ಬೆಳೆದಿದ್ದಾರೆ. ಇದರ ಹೊರತಾಗಿಯೂ ವೈ.ಎಸ್.ಆರ್.ಕಾಂಗ್ರೆಸ್ ಪಕ್ಷ ಅಲ್ಲಿ ದೊಡ್ಡ ಕಚೇರಿ ಆರಂಭಿಸಿದೆ. ಪಕ್ಷದ ಸ್ಥಳೀಯ ಘಟಕ ನಾಯಕರ ಪ್ರಕಾರ “ಕುಪ್ಪಂನಲ್ಲಿ ನಾಯ್ಡು ಅವರನ್ನು ಸೋಲಿಸಲು ಸಾಧ್ಯವಿಲ್ಲವೆಂದು ಗೊತ್ತಿದೆ. ಆದರೂ, ಸುಲಭವಾಗಿ ಜಯ ಸಾಧಿಸಲು ಬಿಡೆವು’ ಎನ್ನುತ್ತಾರೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಗೆ ಸೇರಿದ ಕುಪ್ಪಂ, ಗ್ರಾನೈಟ್ ಉದ್ದಿಮೆಗೆ ಹೆಸರುವಾಸಿ. ವಿಶೇಷವಾಗಿ ಕುಪ್ಪಂ ಗ್ರೀನ್ ಎಂಬ ವಿಧದ ಗ್ರಾನೈಟ್‌ಗೆ ಭಾರಿ ಬೇಡಿಕೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.