ಪಕ್ಷಗಳ ನಿಧಿ ಸಂಗ್ರಹಣೆಗೆ ಎಲೆಕ್ಟೋರಲ್‌ ಬಾಂಡ್‌

Team Udayavani, Apr 6, 2019, 6:00 AM IST

Udayavani Kannada Newspaper

ಮಣಿಪಾಲ: ಪ್ರಸಕ್ತ ಚುನಾವಣೆಯಲ್ಲಿ ಎಲೆಕ್ಟೋರಲ್‌ ಬಾಂಡ್‌ ಹೆಚ್ಚು ಚರ್ಚೆ ಯಾಗುತ್ತಿರುವ ವಿಷಯವಾಗಿದೆ. ಹಾಗಾದರೇ ಏನಿದು ಎಲೆಕ್ಟೋರಲ್‌ ಬಾಂಡ್‌? ಏನಿದರ ವಿಶೇಷತೆ? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಜಕೀಯ ಪಕ್ಷಗಳು ದೇಣಿಗೆ ರೂಪದಲ್ಲಿ ಹಣವನ್ನು ಹಲವು ಮೂಲಗಳಿಂದ ಸಂಪಾ ದಿಸಿಕೊಳ್ಳುತ್ತವೆ. ಪ್ರತಿ ಪಕ್ಷಗಳಿಗೆ ಬಲಿಷ್ಠವಾದ ಆರ್ಥಿಕ ಶಕ್ತಿಯೊಂದು ಇದ್ದರೆ ಮಾತ್ರ ಚುನಾವಣೆಯಲ್ಲಿ ತಂತ್ರ ಗಾರಿಕೆಯನ್ನು ನಡೆಸಬಹುದೇ ವಿನಃ “ಜೀರೋ ಇನ್‌ವೆಸ್ಟ್‌ ಮೆಂಟ್‌’ನಲ್ಲಿ ಪ್ರಸ್ತುತ ರಾಜಕೀಯ ಕಷ್ಟ. ಇಂತಹ ಆದಾಯಗಳಿಗೆ ಪಕ್ಷಗಳು ಹಲವು ಮೂಲಗಳನ್ನು ಇಟ್ಟುಕೊಂಡಿರುತ್ತವೆ. ಅವುಗಳು ನಿಯಮಿತವಾಗಿ ಪಕ್ಷಗಳಿಗೆ ಹಣಕಾಸನ್ನು ನೀಡುತ್ತವೆ. ಇದೂ ಒಂದು ರೀತಿ ಬಂಡವಾಳ ಹೂಡಿಕೆ ಮಾಡಿದ ರೀತಿ. 2017ರ ಬಜೆಟ್‌ನಲ್ಲಿ ಈ ಯೋಜನೆಯನ್ನು ಕೇಂದ್ರ ಮಂಡಿಸಿತ್ತು.

ರಾಜಕೀಯ ಪಕ್ಷಗಳ ಖಾತೆಗಳಿಗೆ ಹೆಚ್ಚಾಗಿ ಉದ್ಯಮಿಗಳು, ವಿದೇಶದಲ್ಲಿರುವ ಕೆಲವು ಸೆಂಸ್ಥೆಗಳು, ದೇಶದೊಳಗಿನ ಕೆಲವು ಸಂಘಟನೆಗಳು ಹಣಕಾಸನ್ನು ಹೂಡುವುದು ವಾಡಿಕೆಯಾಗಿದೆ. ಇವೆಲ್ಲವೂ ಕಾನೂನು ಬದ್ಧವಾಗಿರಬೇಕು ಎಂಬುದು ಗಮನಾರ್ಹ. ಹೆಚ್ಚಾಗಿ ಇತರ ಮೂಲ ಗಳಿಂದ ಆದಾಯಗಳು ರಾಜಕೀಯ ಪಕ್ಷಗಳ ಬೊಕ್ಕಸ ಸೇರುವುದಿದೆ. ಇಂತಹ ಸಂದರ್ಭ ದಾಖಲೆಗಳು ಸಮರ್ಪಕ ವಾಗಿರಬೇಕಾಗಿದೆ. ಇಲ್ಲದಿದ್ದರೆ ಕಪ್ಪುಹಣಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ.

ಚುನಾವಣ ಬಾಂಡ್‌ ಎಂದರೇನು?
ಇದು ಒಂದು ಮೌಲ್ಯವುಳ್ಳ ಸ್ವೀಕೃತಿ ಪತ್ರ ಎನ್ನಬಹುದು. ಇದು ಹಣದ ರೀತಿ ಮುಖ ಬೆಲೆಯಳ್ಳ ದಾಖಲೆಯಾಗಿದೆ. ರಾಜಕೀಯ ಪಕ್ಷಗಳಿಗೆ ದೇಣಿಗೆ ರೂಪದಲ್ಲಿ ಸ್ವೀಕರಿಸುವ ಹಣವನ್ನು ಬ್ಯಾಂಕ್‌ಗಳಿಂದ ಬಾಂಡ್‌ ರೂಪದಲ್ಲಿ ಪಡೆಯುವ ವಿಧಾನವಾಗಿದೆ. ಇದು ಬರೀ ರಾಜಕೀಯ ಪಕ್ಷದ ಹೆಸರಿನಲ್ಲಿ ಮಾತ್ರವಲ್ಲದೇ ವ್ಯಕ್ತಿಯ ಹೆಸರಿನಲ್ಲೂ ಇದನ್ನು ಪಡೆಯಬಹುದಾಗಿದೆ.

ಪಡೆಯುವುದು ಹೇಗೆ?
ಪಕ್ಷಗಳಿಗೆ ಹಣ ಹೂಡುವ ವ್ಯಕ್ತಿ ಸಂಬಂಧಿಸಿದ ಬ್ಯಾಂಕುಗಳಿಂದ ಅಥವಾ ಆನ್‌ಲೈನ್‌ನಿಂದ ಬಾಂಡ್‌ ಪಡೆಯುತ್ತಾರೆ. ಈ ಸಂದರ್ಭ ಬ್ಯಾಂಕ್‌ ದಾನಿಯ ಎಲ್ಲ ಆರ್ಥಿಕ ವ್ಯವಹಾರ ಮಾಹಿತಿಯನ್ನು ಕಲೆ ಹಾಕುತ್ತದೆ. ಆದರೆ ನೀವು ನಗದು ಬಾಂಡ್‌ ಪಡೆಯುವಂತಿಲ್ಲ. ಬಾಂಡ್‌ ಪಡೆಯುವ ಸಂದರ್ಭ ನಿಮ್ಮ ಖಾತೆಗೆ ಹಣ ಬಂದ ಮೂಲವನ್ನು ಬ್ಯಾಂಕ್‌ ಪರಿಶೀಲಿಸುತ್ತದೆ. ಬಳಿಕ ಬ್ಯಾಂಕ್‌ ಬಾಂಡ್‌ ನೀಡುತ್ತದೆ.

ಬಳಕೆ ಹೇಗೆ?
ಇಂತಹ ಬಾಂಡ್‌ಗಳನ್ನು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಿಂದ ಪಡೆದುಕೊಳ್ಳಬೇಕಾಗುತ್ತದೆ. ಇದು 1000 ರೂ., 10,000 ರೂ., 1 ಲಕ್ಷ ರೂ., 10 ಲಕ್ಷ ರೂ. ಮತ್ತು 1 ಕೋಟಿ ರೂ. ನ ಬೆಲೆಯಲ್ಲಿ ಲಭ್ಯವಾಗಲಿದೆ. ಪಕ್ಷಗಳಿಗೆ ಹಣ ನೀಡಿದರವರ ವಿವರಗಳನ್ನು ಬ್ಯಾಂಕ್‌ ದಾಖಲಿಸಿಕೊಳ್ಳುತ್ತದೆ. ದಾನಿ ಕೆ.ವೆ.çಸಿ. ಖಾತೆಯನ್ನು ಹೊಂದಿರಬೇಕು. ಬ್ಯಾಂಕ್‌ ಬಾಂಡ್‌ ನೀಡಿದ ಬಳಿಕ ದಾನಿ ಅದನ್ನು ಪಕ್ಷಗಳಿಗೆ ನೀಡುತ್ತಾರೆ. ಬಳಿಕ ಪಕ್ಷ ಅದನ್ನು ಬ್ಯಾಂಕ್‌ಗೆ ಸಲ್ಲಿಸಿ ತನ್ನ ಖಾತೆಗೆ ಜಮೆ ಮಾಡಿಕೊಳ್ಳುತ್ತದೆ.

ಯಾಕೆ ಈ ಕ್ರಮ?
ರಾಜಕೀಯ ಪಕ್ಷಗಳ ಚುನಾವಣೆ ವೆಚ್ಚಗಳಿಗೆ ಕಪ್ಪುಹಣ ಬಳಕೆಯಾಗುತ್ತಿರುವ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಕೆಲವು ಆದಾಯದ ಮೂಲಗಳು ವಿದೇಶದಲ್ಲಿದ್ದು ಚುನಾವಣೆಗೆ ಈ ರೀತಿಯಾಗಿ ಬಳಕೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಇವೆಲ್ಲದರ ನಡುವೆ ಪಾರದರ್ಶಕ ಚುನಾವಣೆಗೆ ಎಲ್ಲೂ ಕಪ್ಪುಹಣ ಬಳಕೆಯಾದಂತೆ ಈ ಕ್ರಮ ಪರಿಚಯಿಸಲಾಗುತ್ತಿದೆ. ಬಾಂಡ್‌ ಮೂಲಕ ರಾಜಕೀಯ ಪಕ್ಷಗಳ ಖಾತೆಗೆ ಸಂದಾಯವಾದ ಹಣ ತೆರಿಗೆ ಕಟ್ಟಿದ ಹಣವಾಗಿರುತ್ತದೆ. ಈ ವರ್ಷದ ಮೊದಲ ಮೂರು ತಿಂಗಳುಗಳಲ್ಲಿ ಎಸ್‌ಬಿಐ 1,716.05 ಕೋಟಿ ರೂ.ಗಳ ಬಾಂಡ್‌ ಅನ್ನು ಹಂಚಿಕೆ ಮಾಡಿದೆ. ಬಿಜೆಪಿ ಈಗಾಗಲೇ ತನ್ನ ಹೆಚ್ಚಿನ ಪಕ್ಷದ ನಿಧಿಯನ್ನು ಬಾಂಡ್‌ ಮುಖಾಂತರ ಪಡೆದಿದೆ.

ಕುತೂಹಲದ ಸಂಗತಿಗಳು
ಯಾರು ಬೇಕಾದರೂ ಈ ಬಾಂಡ್‌ ಪಡೆದುಕೊಳ್ಳಲು ಸ್ವತಂತ್ರರು.
1000 ರೂ.ನಿಂದ 1 ಕೋಟಿ ವರೆಗೆ ಮಾತ್ರ ಲಭ್ಯ.
KYC (know your customer) ಮೂಲಕ ದಾನಿಯ ಹಣಕಾಸಿನ ವ್ಯವಹಾರದ ಬಗ್ಗೆ ಬ್ಯಾಂಕ್‌ ಮಾಹಿತಿ ಕಲೆಹಾಕುತ್ತದೆ.
ಬಾಂಡ್‌ ಸ್ವೀಕರಿಸಿದ ವ್ಯಕ್ತಿಯ ಮಾಹಿತಿ ಬ್ಯಾಂಕ್‌ ಗೌಪ್ಯವಾಗಿಡುತ್ತದೆ.
1 ಬಾಂಡ್‌ 15 ದಿನಗಳ ಕಾಲ ಮಾತ್ರ ಮೌಲ್ಯ ಹೊಂದಿರುತ್ತದೆ.
ಬಾಂಡ್‌ಗಳಿಗೆ ಬಡ್ಡಿದರ ಅನ್ವಯಿಸುವುದಿಲ್ಲ.
 ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ ಮಾತ್ರ ಲಭ್ಯ.
 ಬಾಂಡ್‌ ಖರೀದಿ ಉದ್ದೇಶದ ಕುರಿತು ಬ್ಯಾಂಕ್‌ ಮಾಹಿತಿ ಪಡೆಯುತ್ತದೆ.
 ಬಾಂಡ್‌ ಅನ್ನು ವರ್ಷದಲ್ಲಿ ನಾಲ್ಕು ಅವಧಿಯಲ್ಲಿ, ಪ್ರತಿ ಅವಧಿಯಲ್ಲಿ 10ದಿನಗಳು ಮಾತ್ರ ಖರೀದಿಸಬಹುದು. ಚುನಾವಣೆಯ ಸಂದರ್ಭ ಅದನ್ನು 30 ದಿನಗಳಿಗೆ ವಿಸ್ತರಿಸಲಾಗಿದೆ.
 ಜನವರಿ-ಮಾರ್ಚ್‌, ಎಪ್ರಿಲ್‌-ಜೂನ್‌, ಜುಲೈ-ಸೆಪ್ಟೆಂಬರ್‌, ಅಕ್ಟೋಬರ್‌-ಡಿಸೆಂಬರ್‌ ಅವಧಿ ಎಂದು ವಿಂಗಡಿಸಲಾಗಿದೆ.
 ಸ್ವೀಕರಿಸಿದ ಬಾಂಡ್‌ ಕುರಿತ ಮಾಹಿತಿ ಯನ್ನು ಕೇಂದ್ರ ಚುನಾವಣ ಆಯೋಗಕ್ಕೆ ರಾಜಕೀಯ ಪಕ್ಷಗಳು ಸಲ್ಲಿಸುತ್ತಿರಬೇಕು.

ಟಾಪ್ ನ್ಯೂಸ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

1

Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.