![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, May 18, 2019, 6:00 AM IST
ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರು ಶುಕ್ರವಾರ ಪಂಜಾಬ್‌ನ ಗುರುದಾಸ್ಪುರ ಕ್ಷೇತ್ರದಲ್ಲಿ ತಮ್ಮ ಪುತ್ರ, ಬಿಜೆಪಿ ಅಭ್ಯರ್ಥಿ ಸನ್ನಿ ದೇವಲ್ ಪರ ಚುನಾವಣಾ ಪ್ರಚಾರ ನಡೆಸಿದರು.
ಸುಮಾರು 38 ದಿನಗಳ ಕಾಲ ನಡೆದ ಮ್ಯಾರಥಾನ್ ಲೋಕಸಭಾ ಚುನಾವಣೆಯು ಅಂತಿಮ ಹಂತಕ್ಕೆ ಬಂದಿದ್ದು, ಕೊನೆಯದಾಗಿ ಮತದಾನ ನಡೆಯಲಿರುವ 59 ಕ್ಷೇತ್ರಗಳಲ್ಲಿ ಶುಕ್ರವಾರ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಶುಕ್ರವಾರ ಪ್ರಧಾನಿ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ ಸೇರಿದಂತೆ ವಿವಿಧ ಪಕ್ಷಗಳ ಪ್ರಮುಖ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಕೊನೆಯ ಪ್ರಯತ್ನವನ್ನು ಮುಗಿಸಿದ್ದಾರೆ. ಸತತ ಎರಡನೇ ಬಾರಿಗೆ ಪ್ರಧಾನಿ ಹುದ್ದೆಯನ್ನು ಅಲಂಕರಿಸುವುದು ಶತಃಸಿದ್ಧ ಎಂಬ ವಿಶ್ವಾಸದೊಂದಿಗೆ ಪ್ರಧಾನಿ ಮೋದಿ ತಮ್ಮ ಪ್ರಚಾರ ಕಾರ್ಯಕ್ಕೆ ಪೂರ್ಣವಿರಾಮ ಹಾಕಿದರೆ, ಮತ್ತೂಂದು ಕಡೆ, ಪ್ರತಿಪಕ್ಷಗಳ ನೆರವಿನೊಂದಿಗೆ ನಾವೇ ಮುಂದಿನ ಸರ್ಕಾರ ರಚಿಸುತ್ತೇವೆ ಎಂಬ ಭರವಸೆಯನ್ನು ರಾಹುಲ್ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಟೀಕೆ-ಟಿಪ್ಪಣಿ, ಆಕ್ಷೇಪಾರ್ಹ ಹೇಳಿಕೆಗಳು, ವಿವಾದಗಳು, ಹಿಂಸಾಚಾರಕ್ಕೆ ಸಾಕ್ಷಿಯಾದ ಪ್ರಸಕ್ತ ಲೋಕಸಭೆ ಚುನಾವಣೆಯ ಪ್ರಚಾರವು ಶುಕ್ರವಾರ ಅಂತ್ಯವಾಗಿದೆ. ಇದೇ ಭಾನುವಾರ 7ನೇ ಹಾಗೂ ಕೊನೆಯ ಹಂತದ ಮತದಾನ ನಡೆಯಲಿದ್ದು, ಪಂಜಾಬ್‌ನ ಎಲ್ಲ 13 ಕ್ಷೇತ್ರಗಳು, ಉತ್ತರಪ್ರದೇಶದ 13, ಪ.ಬಂಗಾಳದ 9, ಬಿಹಾರ, ಮಧ್ಯಪ್ರದೇಶದ ತಲಾ 8, ಹಿಮಾಚಲಪ್ರದೇಶದ 4, ಜಾರ್ಖಂಡ್‌ನ 3 ಮತ್ತು ಚಂಡೀಗಡದ ಒಂದು ಕ್ಷೇತ್ರಕ್ಕೆ ಹಕ್ಕು ಚಲಾವಣೆಯಾಗಲಿದೆ.ಭಾನುವಾರ ಮತದಾನ ಮುಗಿದ ಬೆನ್ನಲ್ಲೇ ಮತಗಟ್ಟೆ ಸಮೀಕ್ಷೆಗಳು ಹೊರಬೀಳಲಿವೆ.
•ನಾಳೆ ಕೊನೆ ಹಂತದ ಮತದಾನ
•8 ರಾಜ್ಯಗಳ 59 ಕ್ಷೇತ್ರಗಳಲ್ಲಿ ಭಾನುವಾರ ಹಕ್ಕು ಚಲಾವಣೆ
•ಮತದಾನ ಪೂರ್ಣಗೊಂಡ ಬೆನ್ನಲ್ಲೇ ಮತಗಟ್ಟೆ ಭವಿಷ್ಯ ಹೊರಕ್ಕೆ
•23ರಂದು ದೇಶದ ಭವಿಷ್ಯ ಬಹಿರಂಗ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.