ಈ ಬಾರಿಯೂ “ಕುಟುಂಬ’ಗಳದ್ದೇ ಪಾರುಪತ್ಯ
Team Udayavani, Mar 31, 2019, 6:00 AM IST
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿಯೂ ಕುಟುಂಬ ರಾಜಕಾರಣ
ಜೋರು ಸದ್ದು ಮಾಡುತ್ತಿದೆ. ಇದಕ್ಕೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರೂ ಪಕ್ಷಗಳು ಹೊರತಲ್ಲ. ರಾಜ್ಯದ 28 ಕ್ಷೇತ್ರಗಳ ಪೈಕಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ರಾಜಕೀಯ ಹಿನ್ನೆಲೆಯುಳ್ಳವರ ಸಂಬಂಧಿಕರೇ ಸ್ಪರ್ಧೆಗೆ ಇಳಿದಿದ್ದಾರೆ.
ಈಶ್ವರ್‌ಖಂಡ್ರೆ- ಬೀದರ್
ಕೆಪಿಸಿಸಿ
ಕಾರ್ಯಾಧ್ಯಕ್ಷರು ಹಾಗೂ ಬೀದರ್ ಜಿಲ್ಲೆಯ ಭಾಲ್ಕಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಈಶ್ವರ್ ಖಂಡ್ರೆ ಅವರುಮಾಜಿ ಸಚಿವ ಹಾ ಗೂ ಅಖೀಲ ಭಾರತ ವೀರಶೈವ ಮಹಾಸಭೆಯ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ ಅವರ
ಪುತ್ರ. ಈಶ್ವರ್ ಖಂಡ್ರೆ ಅವರ ಸಹೋದರ ವಿಜಯ್ ಕುಮಾರ ಖಂಡ್ರೆ ಕೂಡ ಶಾಸಕರಾಗಿದ್ದರು. ಸಹೋದರ ಸಂಬಂಧಿ ಪ್ರಕಾಶ್‌ಖಂಡ್ರೆ ಕೂಡ ಶಾಸಕರಾಗಿ ಆಯ್ಕೆಯಾಗಿದ್ದರು.
ಬಿ.ವಿ. ನಾಯಕ್- ರಾಯಚೂರು
ದೇವದುರ್ಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದಿವಂಗತ ಎ. ವೆಂಕಟೇಶ್ ನಾಯಕರ ಅವರ ಪುತ್ರ ಬಿ.ವಿ. ನಾಯಕ್. 2014ರಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಇವರ ಸಹೋದರ ರಾಜಶೇಖರ್ ನಾಯಕ್ ಕೂಡ 2016ರಲ್ಲಿ ತಮ್ಮ ತಂದೆ ನಿಧ ನದ ನಂತರ ದೇವದುರ್ಗ ವಿಧಾನಸಭಾ ಕ್ಷೇತ್ರದಿಂದ
ಸ್ಪರ್ಧಿಸಿಸೋಲು ಕಂಡಿದ್ದರು.
ವೀಣಾ ಕಾಶಪ್ಪನವರ್-ಬಾಗಲಕೋಟೆ
ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಪತ್ನಿ ವೀಣಾ ಕಾಶಪ್ಪನವರ್. ಜಿಪಂ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯರಾಗಿದ್ದಾರೆ. ಮಾಜಿ ಸಚಿವ ದಿವಂಗತ ಎಸ್. ಆರ್. ಕಾಶಪ್ಪನವರ್ ಅವರ ಪುತ್ರ ವಿಜಯಾನಂದ ಕಾಶಪ್ಪನವರ್. ಎಸ್.ಆರ್.ಕಾಶಪ್ಪನವರ್ ಅವರ ಅಕಾಲಿಕ ನಿಧನದ ನಂತರ ಅವರ ಪತ್ನಿ ಗೌರಮ್ಮ ಕೂಡ ಶಾಸಕಿಯಾಗಿದ್ದರು. ವೀಣಾ ಕಾಶಪ್ಪನವರ್ ಈಗ ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದಾರೆ.
ಡಿ.ಕೆ.ಸುರೇಶ್- ಬೆಂಗಳೂರು ಗ್ರಾಮಾಂತರ
ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿರುವ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್. ಹಾಲಿ ಸಂಸದರಾಗಿರುವ ಅವರು 2013ರಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆಗೆ ನಡೆದ ಉಪ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾಗಿ ಲೋಕಸಭೆ ಪ್ರವೇಶ ಮಾಡಿದ್ದರು. ಈ ಬಾರಿ ಬೆಂ. ಗ್ರಾಮಾಂತರ ಕ್ಷೇತ್ರದಿಂದಕಣಕ್ಕಿಳಿದಿದ್ದಾರೆ.
ಕೃಷ್ಣ ಬೈರೇಗೌಡ- ಬೆಂಗಳೂರು ಉತ್ತರ
ಮಾಜಿ ಸಚಿವ ದಿ.ಬೈರೇಗೌಡ ಅವರ ಪುತ್ರ ಕೃಷ್ಣ ಬೈರೇಗೌಡ, ತಂ¨ೆಯ ನಿಧನಾ ನಂತರ ಕೋಲಾರದಿಂದ ರಾಜಕೀಯ ಪ್ರವೇಶಿಸಿದ ಅವರು ಕ್ಷೇತ್ರ ವಿಂಗಡನೆಯ ನಂತರ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯ ಗಳಿಸಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ದಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಎಸ್.ಎಸ್. ಮಲ್ಲಿಕಾರ್ಜುನ -ದಾವಣಗೆರೆ
ಮಾಜಿ ಸಚಿವ ಹಾಗೂ ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್. ಎಸ್. ಮಲ್ಲಿಕಾರ್ಜುನ. ಕಾಂಗ್ರೆಸ್ ಸರ್ಕಾರದಲ್ಲಿ ತೋಟಗಾರಿಕೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಈ ಬಾರಿ ದಾವಣಗೆರೆ ಲೋಕಸಭಾ ಕ್ಷೇತ್ರ ದಿಂದ ಅವರ ತಂದೆ ಶಾಮನೂರು ಶಿವಶಂಕರಪ್ಪ ಅವರು ಟಿಕೆಟ್ ನಿರಾಕರಿಸಿದ್ದರಿಂದ ಎಸ್.ಎಸ್. ಮಲ್ಲಿಕಾರ್ಜುನ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.
ಬಿ.ವೈ.ರಾಘವೇಂದ್ರ-ಶಿವಮೊಗ್ಗ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ಶಿವಮೊಗ್ಗ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. 2009ರಲ್ಲಿ ಪ್ರಥಮ ಬಾರಿಗೆ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ಬಳಿಕ 2014ರಲ್ಲಿ ಶಿಕಾರಿಪುರ ಕ್ಷೇತ್ರದಿಂದ ಶಾಸಕರಾಗಿ ಯ್ಕೆಯಾಗಿದ್ದರು.
2018ರಲ್ಲಿ ನಡೆದ ಶಿವಮೊಗ್ಗ ಕ್ಷೇತ್ರ ಉಪಚುನಾವಣೆಯಲ್ಲಿ ಜಯ ಗಳಿಸಿದ್ದರು.
ಶಿವಕುಮಾರ ಉದಾಸಿ-ಹಾವೇರಿ
ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಶಾಸಕ ಸಿ.ಎಂ.ಉದಾಸಿ ಪುತ್ರ ಶಿವಕುಮಾರ ಉದಾಸಿ ಅವರು ಈ ಬಾರಿಯೂ ಹಾವೇರಿ ಲೋಕಸಭಾ
ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಹಾವೇರಿ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಶಿವಕುಮಾರ ಉದಾಸಿ ಅವರು ಮೂರನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಅಣ್ಣಾ ಸಾಹೇಬ ಜೊಲ್ಲೆ-ಚಿಕ್ಕೋಡಿ
ಚಿಕ್ಕೋಡಿಯಿಂದ ಈ ಬಾರಿ ಬಿಜೆಪಿ ಅ»Âರ್ಥಿಯಾಗಿರುವ ಅಣ್ಣಾ ಸಾಹೇಬ ಜೊಲ್ಲೆ ಅವರು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರ ಪತಿ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕೋಡಿ- ಸದಲಗಾ ಕ್ಷೇತ್ರದಿಂದ ಬಿಜೆಪಿ
ಅ ಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅಣ್ಣಾ ಸಾಹೇಬ ಜೊಲ್ಲೆ ಕಾಂಗ್ರೆಸ್‌ನ ಗಣೇಶ್ ಹುಕ್ಕೇರಿ ವಿರುದ್ಧ ಪರಾಭವಗೊಂಡಿದ್ದರು.
ಡಾ.ಉಮೇಶ್ ಜಾಧವ್-ಕಲಬುರಗಿ
ಕಲಬುರಗಿ ಬಿಜೆಪಿ ಅಭ್ಯರ್ಥಿಯಾಗಿರುವ ಡಾ.ಉಮೇಶ್ ಜಾಧವ್ ಅವರು ರಾಜಕೀಯ ಹಿನ್ನೆಲೆಯಿಂದ ಬಂದವರು. ಅವರ ತಂದೆ ಎರಡು ಬಾರಿ ಹಿಂದಿನ ಶಹಬಾದ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಉಮೇಶ್ ಜಾಧವ್ ಅವರು 2013 ಹಾಗೂ
2018ರಲ್ಲಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದರು.
ಜಿ.ಎಂ.ಸಿದ್ದೇಶ್ವರ್-ದಾವಣಗೆರೆ
ಸಂಸದ ಜಿ.ಎಂ. ಸಿದ್ದೇಶ್ವರ್ ತಂದೆ ಜಿ.ಮಲ್ಲಿಕಾರ್ಜುನಪ್ಪ ಅವರು ಎರಡು ಬಾರಿ ಸಂಸದರಾಗಿದ್ದರು. 2004ರಲ್ಲಿ ಮೊದಲ ಬಾರಿಗೆಸಂಸದರಾಗಿ ಆಯ್ಕೆಯಾದ ಸಿದ್ದೇಶ್ವರ್ ಸತತ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.ಇದೀಗ ನಾಲ್ಕನೇ ಬಾರಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಸಿದ್ದೇಶ್ವರ್ ಅವರು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ದೂರದ ಸಂಬಂಧಿಯೂ ಹೌದು.
ತೇಜಸ್ವಿ ಸೂರ್ಯ-ಬೆಂಗಳೂರು ದಕ್ಷಿಣ
ಅನಿ ರೀಕ್ಷಿತ ಬೆಳವಣಿಗೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ತೇಜಸ್ವಿನ ಸೂರ್ಯ ಬಸವನಗುಡಿ ಕ್ಷೇತ್ರದ
ಶಾಸಕ ಎಲ್.ಎ. ರವಿಸುಬ್ರಹ್ಮಣ್ಯ ಅವರ ಅಣ್ಣನ ಮಗ. ರವಿಸುಬ್ರಹ್ಮಣ್ಯ ಅವರು ಸತತ ಮೂರು ಬಾರಿ ಬಸವನಗುಡಿ ಶಾಸಕರಾಗಿ ಆಯ್ಕೆ
ಯಾಗಿದ್ದಾರೆ.
ದೇವೇಂದ್ರಪ್ಪ-ಬಳ್ಳಾರಿ
ಬಳ್ಳಾರಿ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಅವರ ಪುತ್ರ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಹೋದರಿಯನ್ನು ವಿವಾಹವಾಗಿದ್ದಾರೆ.
ದೇವೇಂದ್ರಪ್ಪ ಅವರು ಜಗಳೂರು ಕ್ಷೇತ್ರದಿಂದ ಈ ಹಿಂದೆ ಎರಡು ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ದೇವೇಂದ್ರಪ್ಪ ಅವರ ಪತ್ನಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದಾರೆ.
ಎ. ಮಂಜು-ಹಾಸನ
ಹಾಸನ ಕ್ಷೇತ್ರದ ಬಿಜೆಪಿ ಅಭ್ಯರ್ಥಿಎ.ಮಂಜು ಅವರು ರಾಜಕೀಯ
ಹಿನ್ನೆಲೆಯಿಂದ ಬಂದವರು.ಅವರ ಭಾವ ಎಚ್.ಎನ್. ನಂಜೇಗೌಡರು
ಎರಡು ಬಾರಿ ಶಾಸಕರಾಗಿ ಒಮ್ಮೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಎ.ಮಂಜು ಅವರ ಪುತ್ರ ಡಾ.ಮಂತರ್‌ಗೌಡ ಅವರು ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದಾರೆ.
ಬಿ.ಎ ನ್.ಬಚ್ಚೇಗೌಡ-ಚಿಕ್ಕಬಳ್ಳಾಪುರ
ಮಾಜಿ ಸಚಿವ ಬಿ.ಎನ್.ಬಚ್ಚೇಗೌಡರ ಚಿಕ್ಕಪ್ಪ ಚನ್ನಬೈರೇಗೌಡ ಅವರು
ಶಾಸಕರಾಗಿ ಆಯ್ಕೆಯಾಗಿದ್ದರು. ಆನಂತರ ಬಚ್ಚೇಗೌಡರು ರಾಜಕೀಯ ಪ್ರವೇಶಿಸಿದ್ದರು. ಅವರ ಪುತ್ರ ಶರತ್ ಬಚ್ಚೇಗೌಡ ಕಳೆದ ವಿಧಾ
ನಸಭೆ ಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದಿದ ಸ್ಪರ್ಧಿಸಿ ಸಚಿವ ಎಂ.ಟಿ.ಬಿ.ನಾಗರಾಜ್ ವಿರುದಟಛಿ ಪರಾಭವಗೊಂಡಿದ್ದರು.
ರಾಜಾ ಅಮರೇಶ್ವರನಾಯಕ್-ರಾಯಚೂರು
ಸುರಪುರ, ಗುಂತಗೋಳ, ಗುರುಗುಂಟ ಸಂಸ್ಥಾನ ರಾಜಾ ವಂಶಸ್ಥರು ಪರಸ್ಪರ ಸಂಬಂಧಿಗಳು. ರಾಯಚೂರು ಕ್ಷೇತ್ರ ದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ಗುಂತಗೋಳ ಸಂಸ್ಥಾನದರವಾಗಿದ್ದು, ಅವರ ಸಹೋದರ ರಾಜಾ ಶ್ರೀನಿವಾಸ ನಾಯಕ್ ಮಾಜಿ ಶಾಸಕರಾಗಿದ್ದಾರೆ. ಮಾಜಿ ಶಾಸಕ ರಾಜಾ ಅಮರಪ್ಪ ನಾಯಕ್ ಕೂಡ ಸಂಬಂಧಿ.
ಪ್ರಜ್ವಲ್ ರೇವಣ್ಣ-ಹಾಸನ
ಹಾಸನ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ. ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ. ಹಾಸನ ಕ್ಷೇತ್ರ ಪ್ರತಿನಿಧಿಸುತ್ತಿದ್ದ ದೇವೇಗೌಡರು ಮೊಮ್ಮಗನಿಗಾಗಿ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಪ್ರಜ್ವಲ್ ಅವರ ತಾಯಿ ಭವಾ ನಿ ರೇವಣ್ಣ ಜಿಪಂ ಸದಸ್ಯರಾಗಿದ್ದಾರೆ.
ನಿಖೀಲ್ ಕುಮಾರಸ್ವಾಮಿ-ಮಂಡ್ಯ
ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿರುವ ನಿಖೀಲ್ ಕುಮಾರಸ್ವಾಮಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ, ಮುಖ್ಯಮಂತ್ರಿ ಎಚ್.ಡಿ.ಕುಮಾರರಸ್ವಾಮಿ ಪುತ್ರ. ಮಂಡ್ಯ ಕ್ಷೇತ್ರ
ಜೆಡಿಎಸ್ ಭದ್ರಕೋಟೆ ಎಂದು ಆ ಕ್ಷೇತ್ರ ನಿಖೀಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲಾಗಿದೆ. ನಿಖೀಲ್ ಅವರ ತಾಯಿ ಅನಿತಾ ಕುಮಾರಸ್ವಾಮಿ ಶಾಸಕಿಯಾಗಿದ್ದಾರೆ.
ಎಚ್.ಡಿ.ದೇವೇಗೌಡ-ತುಮಕೂರು
ತುಮಕೂರು ಲೋಕಸಭೆ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ಸ್ಪರ್ಧೆ ಮಾಡಿದ್ದು, ಹಾಸನ ಕ್ಷೇತ್ರ ಬಿಟ್ಟು ತುಮಕೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಇ ದೇ ಮೊದಲ ಬಾರಿಗೆ ದೇವೇಗೌಡರು ತುಮಕೂರು ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದು, ಜನತಾದಳ ಭದ್ರಕೋಟೆ ಎಂಬ ಕಾರಣಕ್ಕೆ ಇದೇ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ.
ಮಧು ಬಂಗಾರಪ್ಪ-ಶಿವಮೊಗ್ಗ
ಶಿವಮೊಗ್ಗ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿರುವಮಧು ಬಂಗಾರಪ್ಪ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪುತ್ರ. ಬಂಗಾರಪ್ಪ ಅವರು ರಾಜ್ಯದ ಪ್ರಬಲ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು. ಮಧು
ಬಂಗಾರಪ್ಪ ಅವರು ಕಳೆದ ಲೋಕಸಭೆ ಉಪ ಚುನಾವಣೆಯಲ್ಲೂ ಸ್ಪರ್ಧೆ ಮಾಡಿದ್ದರು. ಒಮ್ಮೆ ಶಾಸಕರಾಗಿದ್ದ ಅವರು ಕಳೆದ 2018 ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು.ಅವರ ಸಹೋದರ ಕುಮಾರ್‌ಬಂಗಾರಪ್ಪ ಬಿಜೆಪಿಯಿಂದ ಶಾಸಕರಾಗಿದ್ದಾರೆ.
ಸುನೀತಾ ಚೌಹಾಣ್-ವಿಜಯಪುರ
ವಿಜಯಪುರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಶಾಸಕ ದೇವೇಂದ್ರ ಚೌಹಾಣ್ ಪತ್ನಿ ಸುನೀತಾ ಚೌಹಾಣ್ ಸ್ಪರ್ಧೆ ಮಾಡುತ್ತಿದ್ದಾರೆ. ಇಲ್ಲಿ ಜೆಡಿಎಸ್ ನಿಂ ದ ಸ್ಪರ್ಧೆಗೆ ಬೇರೆ ಆಕಾಂಕ್ಷಿಗಳು ಇದ್ದರೂ ಶಾಸಕರ
ಪತ್ನಿಗೆ ಮಣೆ ಹಾಕಲಾಗಿದೆ.
ಪ್ರಮೋದ್ ಮಧ್ವರಾಜ್-ಉಡುಪಿ-ಚಿಕ್ಕಮಗಳೂರು
ಉಡುಪಿ-ಚಿಕ್ಕಮಗಳೂರಿನಲ್ಲಿ ಜೆಡಿಎಸ್‌ನಿಂದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಣಕ್ಕಿಳಿದಿದ್ದು, ಆವರ ತಾಯಿ ಮನೋರಮ ಮಧ್ವರಾಜ್ ಹಿಂದೆ ಸಂಸದರಾಗಿದ್ದವರು. ರಾಜ್ಯ ಹಾಗೂ ರಾಷ್ಟ್ರರಾಜಕಾರಣದಲ್ಲಿ ಖ್ಯಾತಿ ಪಡೆದಿದ್ದರು.
ಆನಂದ್ ಅಸ್ನೋಟಿಕರ್-ಉತ್ತರ ಕನ್ನಡ
ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಮಾಜಿ ಶಾಸಕ ವಸಂತ್ ಅಸ್ನೋಟಿಕರ್ ಅವರ ಪುತ್ರ. ಆನಂದ್ ಅಸ್ನೋಟಿಕರ್ ಸಹ ಹಿಂದೆ ಶಾಸಕರಾಗಿ ಕೆಲಸ ಮಾಡಿದ್ದರು. ಕಳೆದ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿ ಸೋತಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.