ವಿದರ್ಭ: ವಿರಾಜಮಾನರು ಯಾರು?
ಪಕ್ಷಗಳಿಗೆ ರೈತರ ಆತ್ಮಹತ್ಯೆ, ಮೂಲಸೌಕರ್ಯ ವೃದ್ಧಿಯ ಸವಾಲು
Team Udayavani, Mar 30, 2019, 6:00 AM IST
ಮಣಿಪಾಲ: ವಿದರ್ಭ! ದೇಶದಲ್ಲೇ ಅತಿ ಹೆಚ್ಚು ತೀವ್ರತೆಯ ಬರಗಾಲದ ಪ್ರದೇಶ. ಮಹಾರಾಷ್ಟ್ರದ ಈ ಪ್ರಾಂತ್ಯ ದೇಶದಲ್ಲೇ ಅತಿ ಹೆಚ್ಚು ರೈತರ ಆತ್ಮಹತ್ಯೆಯನ್ನು ಕಂಡಿದೆ. ಇದರೊಂದಿಗೆ ನಕ್ಸಲ್ ಸಮಸ್ಯೆಯೂ ಇದೆ. ಇಂತಹ ಪ್ರದೇಶದಲ್ಲಿ ಈ ಬಾರಿ ಗೆಲುವು ಯಾರಿಗೆ ಎಂಬುದು ತೀವ್ರ ಕುತೂಹಲದ ಪ್ರಶ್ನೆ.
2014ರಲ್ಲಿ ಇಲ್ಲಿ ಶಿವಸೇನೆ ಮತ್ತು ಬಿಜೆಪಿ ಮೈತ್ರಿಕೂಟ ಕ್ಲೀನ್ ಸ್ವೀಪ್ ಮಾಡಿತ್ತು. 2009ರಲ್ಲಿ ಈ ಮೈತ್ರಿಕೂಟಕ್ಕೆ ಮಿಶ್ರ ಫಲ ಸಿಕ್ಕಿದ್ದು ಬಿಜೆಪಿ-ಶಿವಸೇನೆಗೆ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ)-ಕಾಂಗ್ರೆಸ್ ಮೈತ್ರಿಕೂಟ ತಲಾ ಐದು ಸ್ಥಾನಗಳನ್ನು ಪಡೆದಿದ್ದವು.
10 ಸ್ಥಾನಗಳು
ವಿದರ್ಭ ಭಾಗದಲ್ಲಿ 10 ಲೋಕಸಭಾ ಸ್ಥಾನಗಳಿದ್ದು, ಪೂರ್ವ ಮತ್ತು ಪಶ್ಚಿಮ ವಿದರ್ಭ ಎಂದು ಗುರುತಿಸಲಾಗುತ್ತದೆ. ಪೂರ್ವ ಭಾಗದಲ್ಲಿ ನಾಗ್ಪುರ, ಭಂಡಾರ, ಚಂದ್ರಾಪುರ್, ಗಢ್‌ಚಿರೋಲಿ, ಗೊಂಡಿಯಾ ಮತ್ತು ವಾರ್ಧಾ ಜಿಲ್ಲೆಗಳಿದ್ದರೆ, ಪಶ್ಚಿಮದಲ್ಲಿ ಅಕೋಲಾ, ಅಮರಾವತಿ, ಬುಲಾœನಾ, ಯಾವತ್ಮಾಲ್, ವಾಶಿಮ್ ಲೋಕಸಭಾ ಕ್ಷೇತ್ರಗಳಿವೆ.
ಕ್ಲೀನ್‌ಸ್ವೀಪ್
2014ರಲ್ಲಿ ಬಿಜೆಪಿ ಮೈತ್ರಿಕೂಟ 10 ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡಿತ್ತು. 2004ರಲ್ಲಿ ಇದು 9 ಸ್ಥಾನಗಳಲ್ಲಿ ಗೆದ್ದಿತ್ತು. ಮೋದಿ ಅಲೆ ಹೊರತಾಗಿ ಈ ಭಾಗವನ್ನು ಎನ್‌ಸಿಪಿ-ಕಾಂಗ್ರೆಸ್ ರಾಜ್ಯ ಸರಕಾರ ಇದ್ದಾಗ ತಿರಸ್ಕಾರದಿಂದ ನೋಡಿದ್ದ ಕಾರಣ ಮತದಾರರು ಬಿಜೆಪಿ ಮೈತ್ರಿಕೂಟಕ್ಕೆ ಜೈ ಎಂದಿದ್ದರು.
ಈ ಬಾರಿ ಬಿಗ್ ಫೈಟ್
ಈ ಬಾರಿಯ ಚುನಾವಣೆಯಲ್ಲಿ ಹಲವು ಖ್ಯಾತನಾಮರು ಈ ಭಾಗದಿಂದ ಸ್ಪರ್ಧಿಸುತ್ತಿದ್ದಾರೆ. ಸಚಿವರಾದ ನಿತಿನ್ ಗಡ್ಕರಿ ನಾಗ್ಪುರದಿಂದ ಹನ್ಸರಾಜ್ ಅಹಿರ್ ಅವರು ಚಂದ್ರಾಪುರ್‌ನಿಂದ ಸ್ಪರ್ಧಿಸಲಿದ್ದಾರೆ. ವರೊಂದಿಗೆ ಕಾಂಗ್ರೆಸ್‌ನ ಮಾಜಿ ರಾಜ್ಯಾಧ್ಯಕ್ಷ ಮಾಣಿಕ್‌ರಾವ್ ಠಾಕ್ರೆ ಯಾವತ್ಮಾಲ್-ವಾಶಿಮ್‌ನಿಂದ ಸ್ಪರ್ಧಿಸಲಿದ್ದಾರೆ.
ಸಮಸ್ಯೆಗಳೇನು?
ಕಳೆದ 5 ವರ್ಷಗಳಲ್ಲಿ ಇಲ್ಲಿನ ಗ್ರಾಮೀಣ ಆರ್ಥಿಕತೆ ಬದಲಾವಣೆ ಕಂಡಿಲ್ಲ. ರೈತರ ಬೆಳೆಗಳಿಗೆ ಕನಿಷ್ಠ ದರ ನೀಡುವ ಪ್ರಸ್ತಾಪ ಕಾಗದದಲ್ಲೇ ಉಳಿದಿದೆ. ಕೇಂದ್ರ ತೊಗರಿಗೆ 5650 ರೂ. ಬೆಂಬಲ ಬೆಲೆ ಘೋಷಿಸಿದ್ದರೂ, ಇಲ್ಲಿ 5 ಸಾವಿರ ರೂ. ಮಾತ್ರ ಬೆಲೆ ನೀಡಲಾಗುತ್ತಿದೆ. 2018ರಲ್ಲಿ 1297 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ವಿದರ್ಭ ಮತ್ತು ಮರಾಠವಾಡದಲ್ಲಿ 2244 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.