ಹೊಸಬರ ನಡುವೆ ಗೆಲುವಿಗೆ ಹೋರಾಟ
Team Udayavani, Apr 25, 2019, 6:00 AM IST
ಬಿಹಾರದ ದರ್ಭಾಂಗಾ ಲೋಕಸಭಾ ಕ್ಷೇತ್ರ ಈ ಬಾರಿ ಹಲವು ಕಾರಣಗಳಿಗೆ ಸುದ್ದಿ ಮತ್ತು ಹೆಚ್ಚು ಚರ್ಚೆಯಲ್ಲಿದೆ. 2009 ಮತ್ತು 2014ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಕ್ರಿಕೆಟಿಗ ಕೀರ್ತಿ ಆಝಾದ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಆರ್‌ಜೆಡಿಯಿಂದ ಸ್ಪರ್ಧಿಸಿದ್ದ ಮೊಹಮ್ಮದ್ ಅಲಿ ಅಶ್ರಫ್ ಫಾತ್ಮಿ ಬಿಎಸ್‌ಪಿಯಿಂದ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ. ಅಭ್ಯರ್ಥಿಗಳೆಲ್ಲರೂ ಹೊಸಬರಾಗಿದ್ದಾರೆ. ಹೀಗಾಗಿ ಇಲ್ಲಿ ಸ್ಪರ್ಧೆಯ ವಿಚಾರ ಗಮನ ಸೆಳೆದಿದೆ. ಬಿಜೆಪಿ-ಜೆಡಿಯು ಮೈತ್ರಿಕೂಟದಿಂದ ಗೋಪಾಲ್‌ಜಿ ಠಾಕೂರ್ ಬಿಜೆಪಿ ಅಭ್ಯರ್ಥಿ, ಅಬ್ದುಲ್ ಬರಿ ಸಿದ್ಧಿಕಿ ಆರ್‌ಜೆಡಿಯಿಂದ ಕಣಕ್ಕೆ ಇಳಿದಿದ್ದಾರೆ. ಆರ್‌ಜೆಡಿ ಅಭ್ಯರ್ಥಿ ಕಾಂಗ್ರೆಸ್-ಆರ್‌ಜೆಡಿ-ಜೆಡಿಯು ಮೈತ್ರಿಕೂಟ ಸರ್ಕಾರದಲ್ಲಿ ಸಚಿವರಾಗಿದ್ದರು. ಇಲ್ಲಿ ಎನ್‌ಡಿಎ ಮತ್ತು ಬಿಹಾರದಲ್ಲಿನ ಮಹಾಮೈತ್ರಿಕೂಟದ ನಡುವೆ ನೇರ ಹೋರಾಟವಿದೆ. ಕೀರ್ತಿ ಆಝಾದ್ ಕಾಂಗ್ರೆಸ್ ಸೇರಿ ಧನ್‌ಬಾದ್ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದಾರೆ.
ವಿಧಾನಸಭೆ ಬಲಾಬಲ: ಗೌರಾ ಬೌರಾಮ್ (ಜೆಡಿಯು), ಬೇನಿಪುರ್ (ಜೆಡಿಯು), ಅಲಿನಗರ್ (ಆರ್‌ಜೆಡಿ), ದರ್ಭಾಂಗಾ ರೂರಲ್ (ಆರ್‌ಜೆಡಿ), ದರ್ಭಾಂಗ (ಬಿಜೆಪಿ), ಬಹಾದುರ್‌ಪುರ್ (ಆರ್‌ಜೆಡಿ) ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ 2 ಕ್ಷೇತ್ರಗಳಲ್ಲಿ ಮಾತ್ರ ಎನ್‌ಡಿಎ ಪ್ರಾಬಲ್ಯವಿದೆ. ಅಲಿನಗರ್ ಕ್ಷೇತ್ರದ ಶಾಸಕರಾಗಿರುವ ಅಬ್ದುಲ್ ಬರಿ ಸಿದ್ಧಿಕಿ ಬಗ್ಗೆ ಕ್ಷೇತ್ರದಲ್ಲಿ ಉತ್ತಮ ಅಭಿಪ್ರಾಯವಿದೆ. ಏಳು ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವುದು ಮತ್ತು ಅಭಿವೃದ್ಧಿ ಕೆಲಸಗಳು ಆರ್‌ಜೆಡಿಗೆ ನೆರವಾಗಲಿದೆ ಎಂದು ಸ್ಥಳೀಯರ ವಿಶ್ವಾಸ.
ಬರ ಮತ್ತು ನೆರೆ: ಮಿಥಿಲೆಯ ಸಂಸ್ಕೃತಿಯ ಕೇಂದ್ರ ದರ್ಭಾಂಗದಲ್ಲಿ ಬರ ಮತ್ತು ನೆರೆಯ ಎರಡೂ ಸಮಸ್ಯೆಗಳು ಹೆಚ್ಚಾಗಿಯೇ ಕಾಡುತ್ತದೆ. ಮಳೆಗಾಲದಲ್ಲಿ ಕೋಸಿ ನದಿಯಿಂದ ಪ್ರವಾಹದಿಂದ ಸಂತ್ರಸ್ತರಿಗೆ ಪರಿಹಾರ ಮತ್ತು ಬೇಸಗೆಯಲ್ಲಿ ನೀರಿನ ಕೊರತೆಯಿಂದ ಬಳಲುವ ರೈತರಿಗೆ ಸರಿಯಾದ ರೀತಿಯಲ್ಲಿ ನೆರವು ಸಿಗದೇ ಇರುವುದು ಪ್ರಮುಖ ಪಕ್ಷಗಳಿಗೆ ಪ್ರಚಾರದ ವಿಚಾರವಾಗಿದೆ. ಇದರ ಜತೆಗೆ ಬಿಜೆಪಿಯ ರಾಷ್ಟ್ರೀಯ ಭದ್ರತೆ, ಪುಲ್ವಾಮಾ ದಾಳಿಗಳು ಆ ಪಕ್ಷದ ಅಭ್ಯರ್ಥಿಗೆ ನೆರವಾಗಿ ಬರಲಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಲಾಗಿರುವ ನ್ಯಾಯ ಯೋಜನೆ ಇನ್ನೂ ಸ್ಥಳೀಯರ ಬಾಯಿಯಲ್ಲಿ ಚರ್ಚೆಗೆ ಆಹಾರವಾಗಿಲ್ಲ.
ಕ್ಷೇತ್ರದ ಕೆಲವು ಭಾಗಗಳಲ್ಲಿ ರಸ್ತೆ, ವಿದ್ಯುತ್, ನೀರು ಸೇರಿದಂತೆ ಮೂಲ ಸೌಕರ್ಯಗಳು ಅಭಿವೃದ್ಧಿಯಾಗಿವೆ. ಉದ್ಯೋಗ ಸೃಷ್ಟಿ ಎನ್ನುವುದು ಇಲ್ಲಿಗೆ ದೂರದ ಮಾತು. ಹೀಗಾಗಿ, ಈ ಕ್ಷೇತ್ರದ ಯುವ ಜನರು ದೂರದ ಸ್ಥಳಕ್ಕೆ ಹೋಗುತ್ತಿದ್ದಾರೆ.
ಜಾತಿವಾರು ಲೆಕ್ಕಾಚಾರ: ಈ ಕ್ಷೇತ್ರದಲ್ಲಿ 13,07, 067 ಒಟ್ಟು ಮತದಾರರು ಇದ್ದಾರೆ. ಈ ಪೈಕಿ ಬ್ರಾಹ್ಮಣ, ಯಾದವ, ಮುಸ್ಲಿಂ ಸಮುದಾಯದವರ ಸಂಖ್ಯೆ ಹೆಚ್ಚಾಗಿದೆ. ಹಿಂದಿನ ಬಾರಿ ಕೀರ್ತಿ ಆಝಾದ್ ಗೆಲ್ಲುವ ಮೂಲಕ ಬ್ರಾಹ್ಮಣ-ಯಾದವ ಮತ್ತು ಇತರ ವರ್ಗಗಳ ಬೆಂಬಲ ಅವರಿಗೆ ಸಿಕ್ಕಿತ್ತು.
2014ರ ಫಲಿತಾಂಶ
ಕೀರ್ತಿ ಆಝಾದ್ (ಬಿಜೆಪಿ) 3, 14, 949
ಮೊಹಮ್ಮದ್ ಅಲಿ ಅಶ್ರಫ್ ಫಾತ್ಮಿ (ಆರ್‌ಜೆಡಿ): 2,79, 906
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.