ಬೀದರ್ ಟಿಕೆಟ್‌ಗಾಗಿ ಖರ್ಗೆ-ಖಂಡ್ರೆ ಕುಸ್ತಿ
Team Udayavani, Mar 15, 2019, 2:45 AM IST
ಬೀದರ: ಕಾಂಗ್ರೆಸ್ ಟಿಕೆಟ್‌ಗಾಗಿ ಮಾಜಿ ಸಿಎಂ ಧರಂಸಿಂಗ್ ಪುತ್ರ, ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಹಾಗೂ ಭಾಲ್ಕಿ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಧ್ಯೆ ಭಾರೀ ಲಾಬಿ ಶುರುವಾಗಿದೆ.
ಬಿಜೆಪಿಯಿಂದ ಹಾಲಿ ಸಂಸದ ಭಗವಂತ ಖೂಬಾ ಅಭ್ಯರ್ಥಿಯಾಗುವುದು ಖಚಿತವಾಗಿದೆ. ಆದರೆ, ಈ ಬಾರಿ ಕಾಂಗ್ರೆಸ್ ಟಿಕೆಟ್‌ಗೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಈಶ್ವರ ಖಂಡ್ರೆ ತಮ್ಮ ಪತ್ನಿ ಗೀತಾ ಖಂಡ್ರೆ ಅವರಿಗೆ ಟಕೆಟ್ ದೊರಕಿಸಿಕೊಡುವ ಯತ್ನದಲ್ಲಿದ್ದಾರೆ. ಆದರೆ, ಧರಂಸಿಂಗ್ ಪುತ್ರ ವಿಜಯಸಿಂಗ್ ಕೂಡ ಟಿಕೆಟ್‌ನ ಪ್ರಬಲ ಆಕಾಂಕ್ಷಿ. ಹಾಗಾಗಿ ಟಿಕೆಟ್ ಅಂತಿಮಗೊಳಿಸುವುದು ಹೈಕಮಾಂಡ್‌ಗೆ ಕಗ್ಗಂಟಾಗಿದೆ. ವಿಜಯಸಿಂಗ್ ಪರವಾಗಿ ಜೇವರ್ಗಿ ಶಾಸಕ ಅಜಯಸಿಂಗ್ ಹಾಗೂ ಮಲ್ಲಿಕಾ ರ್ಜುನ ಖರ್ಗೆ ಬ್ಯಾಟಿಂಗ್ ಮಾಡುತ್ತಿ ದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಯಲ್ಲಿ ಧರಂಸಿಂಗ್ ಅಳಿಯ ಚಂದ್ರಸಿಂಗ್ ಬೀದರ ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಯಾಗಿದ್ದರು. ಆದರೆ, ಕಡೆ ಘಳಿಗೆಯಲ್ಲಿ ಅಶೋಕ್ ಖೇಣಿ ಅವರಿಗೆ ಟಿಕೆಟ್ ನೀಡಲಾಗಿತ್ತು. ಅದರಂತೆ ಸಂಪುಟದಲ್ಲೂ ಅಜಯಸಿಂಗ್‌ಗೆ ಅವಕಾಶ ನೀಡದಿರುವುದು ಧರಂಸಿಂಗ್ ಪುತ್ರರಲ್ಲಿ ಅಸಮಾಧಾನ ಇದೆ. ಈಗ ಲೋಕಸಭೆ ಟಕೆಟ್ ಕೈ ತಪ್ಪಿದರೆ ಮುನಿಸು ಮತ್ತಷ್ಟುಹೆಚ್ಚಬಹುದು ಎಂಬ ಆತಂಕವೂ ಹೈಕಮಾಂಡ್‌ಗಿದೆ ಎನ್ನಲಾಗುತ್ತಿದೆ.
ಚಿಂಚೋಳಿ ಶಾಸಕ ಡಾ| ಉಮೇಶ ಜಾಧವ ಕಾಂಗ್ರೆಸ್ ತೊರೆದು ಖರ್ಗೆ ವಿರುದ್ಧ ತೊಡೆತಟ್ಟಿದ್ದಾರೆ. ವಿಜಯಸಿಂಗ್ ಅವರಿಗೆ ಟಿಕೆಟ್ ಕೈ ತಪ್ಪಿದರೆ ಕಲಬುರ್ಗಿ ರಾಜಕಾರಣದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಖರ್ಗೆ ಕೂಡ ವಿಜಯಸಿಂಗ್ ಪರ ಲಾಬಿ ನಡೆಸುತ್ತಿದ್ದಾರೆ. ಜಿಲ್ಲೆಯ ಸ್ಥಳೀಯ ಶಾಸಕರು ಈಶ್ವರ ಖಂಡ್ರೆ ಪರ ಬ್ಯಾಟ್ ಮಾಡುತ್ತಿದ್ದಾರೆ. ಇದರಿಂದ ಆಯ್ಕೆ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಬಹುದು ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ. ಧರಂಸಿಂಗ್ ಮಾಜಿ ಮುಖ್ಯಮಂತ್ರಿ ಆದ ನಂತರ ಬೀದರ ಕ್ಷೇತ್ರದಿಂದ 2 ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. 2009ರ ಚುನಾವಣೆಯಲ್ಲಿ ಜಯಗಳಿಸಿದ್ದರು. 2014ರಲ್ಲಿ ಸೋಲು ಅನುಭವಿಸಿದ್ದರು.
ದುರ್ಯೋಧನ ಹೂಗಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.