ನನ್ನ ಮಾತಿಗೆ ಬೆಲೆಯಿಲ್ಲ: ಮುಂದುವರಿದ ಪರಮೇಶ್ವರ್ ಮುನಿಸು
Team Udayavani, Mar 20, 2019, 1:52 AM IST
ಬೆಂಗಳೂರು : ತುಮಕೂರನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದರಿಂದ ಮುನಿಸಿಕೊಂಡಿರುವ ಡಿಸಿಎಂ ಡಾ| ಜಿ. ಪರಮೇಶ್ವರ್ ಪಕ್ಷದ ಸಭೆಗಳಿಂದ ಅಂತರ ಕಾಯ್ದುಕೊಂಡಿದ್ದಾರೆ.
ಅವರ ಅಸಮಾಧಾನಕ್ಕೆ ಕ್ಷೇತ್ರ ಕೈ ತಪ್ಪಿರುವುದಷ್ಟೇ ಅಲ್ಲ; ತಮ್ಮ ಬಳಿ ಇರುವ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಬರುವ ಬಿಡಿಎ ಹಾಗೂ ಜಲಮಂಡಳಿಯಲ್ಲಿಯೂ ತಮ್ಮ ಅಧಿಕಾರ ನಡೆಯದಂತೆ ನೋಡಿಕೊಳ್ಳಲಾಗುತ್ತಿದೆ ಎಂಬುದೂ ಕಾರಣ ಎಂದು ತಿಳಿದು ಬಂದಿದೆ.
ಮಂಗಳವಾರ ನಡೆದ ಮೈತ್ರಿ ಪಕ್ಷಗಳ ನಾಯಕರ ಸಭೆಗೆ ಪರಮೇಶ್ವರ್ ಹಾಜರಾಗಲಿಲ್ಲ. ಸೀಟು ಹಂಚಿಕೆಯಾದ ಅನಂತರ ವಿವಿಧ ಜಿಲ್ಲಾ ಘಟಕಗಳ ಅಭ್ಯರ್ಥಿಗಳ ಆಯ್ಕೆ ಗೊಂದಲ ನಿವಾರಣೆಗೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಗೂ ಹಾಜರಾಗಿರಲಿಲ್ಲ.
ಸೋಮವಾರ ರಾಹುಲ್ ಗಾಂಧಿ ಕಲಬುರಗಿ ಸಮಾವೇಶ ಮತ್ತು ಬೆಂಗಳೂರಿನಲ್ಲಿ ನವೋದ್ಯಮಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪರಂ ಭಾಗವಹಿಸಿದ್ದರು. ಆದರೆ ಅಂದು ರಾತ್ರಿ ಕೆ.ಸಿ. ವೇಣುಗೋಪಾಲ್ ಮತ್ತು ದಿನೇಶ್ ಗುಂಡೂರಾವ್ ಅವರು ತುಮಕೂರು ಕ್ಷೇತ್ರವನ್ನು ವಾಪಸ್ ನೀಡುವಂತೆ ಮನವಿ ಮಾಡಲು ದೇವೇಗೌಡರ ನಿವಾಸಕ್ಕೆ ತೆರಳಿದಾಗ ಪರಮೇಶ್ವರ್ ಹೋಗಿರಲಿಲ್ಲ.
ಆದರೆ ಈ ಬಗ್ಗೆ ಪರಮೇಶ್ವರ್, ಕುಟುಂಬ ಕಾರ್ಯಕ್ರಮ ವಿದ್ದ ಕಾರಣ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ಟ್ವೀಟ್ ಸ್ಪಷ್ಟೀಕರಣ ನೀಡಿದ್ದಾರೆ.
ನನ್ನ ಮಾತಿಗೆ ಬೆಲೆಯಿಲ್ಲ’
ತಾವು ಹೊಂದಿರುವ ಬೆಂಗಳೂರು ನಗರಾಭಿವೃದ್ಧಿ ಉಸ್ತುವಾರಿ ವ್ಯಾಪ್ತಿಗೆ ಬರುವ ಬಿಡಿಎ ಹಾಗೂ ಜಲ ಮಂಡಳಿಯಲ್ಲಿ ತಮ್ಮದೇ ಅಧಿಕಾರಿಗಳನ್ನು ಇಟ್ಟುಕೊಂಡು ಸಿಎಂ ಕುಮಾರಸ್ವಾಮಿ ಕೆಲಸ ಮಾಡಿಸುತ್ತಿದ್ದು, ಬಿಡಿಎ ಆಯುಕ್ತರು ನನ್ನ ಮಾತು ಕೇಳುತ್ತಿಲ್ಲ. ಅವರನ್ನು ವರ್ಗಾವಣೆ ಮಾಡಿಸಲು ಮುಖ್ಯಮಂತ್ರಿ ಭೇಟಿಗೆ ಸಮಯ ಕೇಳಿದರೂ ಸಿಗುತ್ತಿಲ್ಲ. ಸರ್ಕಾರದಲ್ಲಿಯೂ ನನಗೆ ಮರ್ಯಾದೆ ಇಲ್ಲ. ಪಕ್ಷದಲ್ಲಿಯೂ ನನ್ನ ಮಾತಿಗೆ ಬೆಲೆಯಿಲ್ಲ ಎಂದು ಪರಮೇಶ್ವರ್ ತಮ್ಮ ಆಪ್ತರ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.