ಕಿಚ್ಚು’ ಹಚ್ಚಿದ ರೇವಣ್ಣ “ಸ್ಪೀಚ್’
Team Udayavani, Mar 10, 2019, 1:26 AM IST
ಗಂಡ ಸತ್ತು ಒಂದೆರಡು ತಿಂಗಳಾಗಿಲ್ಲ. ಸುಮಲತಾಗೆ ರಾಜಕೀಯ ಬೇಕಿತ್ತಾ’ ಎಂಬ ಲೋಕೋಪಯೋಗಿ ಸಚಿವ
ಎಚ್.ಡಿ.ರೇವಣ್ಣ ಹೇಳಿಕೆಗೆ ರಾಜಕೀಯ, ಸಾಮಾಜಿಕ ವಲಯದಿಂದ ತೀವ್ರ ಟೀಕೆ ವ್ಯಕ್ತವಾಗಿದ್ದು, ವಿವಿಧ ರಾಜಕೀಯ ಪಕ್ಷಗಳ ನಾಯಕರು ಅವರ ಹೇಳಿಕೆಯನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದಾರೆ. ರಾಜಕೀಯ ನಾಯಕರ “ಟೀಕಾ ಪ್ರಹಾರ’ದ ಝಲಕ್ ಇಲ್ಲಿದೆ.
ಜೆಡಿಎಸ್ ಚಿಹ್ನೆಯನ್ನೇ ಬದಲಿಸಿಕೊಳ್ಳಲಿ
ಸುಮಲತಾ ಅವರು ಸಹೋದರಿ ಸಮಾನ. ಅವರ ಕುರಿತು ಸಚಿವ ರೇವಣ್ಣ ಕೀಳುಮಟ್ಟದಲ್ಲಿ ಮಾತನಾಡಬಾರದಿತ್ತು. ಜೆಡಿಎಸ್ ಪಕ್ಷದ ಚಿಹ್ನೆ ತೆನೆಹೊತ್ತ ಮಹಿಳೆಯಾಗಿದೆ. ಮಹಿಳೆಯರಿಗೆ ಗೌರವ ಕೊಡಲಾಗದಿದ್ದರೆ ಜೆಡಿಎಸ್ ಪಕ್ಷದ ಚಿಹ್ನೆಯನ್ನು ಬದಲಿಸಿಕೊಳ್ಳಲಿ. ಈ ಕೆಲಸವನ್ನು ದೇವೇಗೌಡ ಮತ್ತು ರೇವಣ್ಣ ಮೊದಲು ಮಾಡಲಿ. ರೇವಣ್ಣ ಕೂಡಲೇ ಸುಮಲತಾ ಅವರಲ್ಲಿ ಕ್ಷಮೆ ಕೋರಲಿ. ಸುಮಲತಾ ಬಿಜೆಪಿಗೆ ಬಂದರೆ ಸ್ವಾಗತ. ಆದರೆ, ಅವರಿಗೆ ಲೋಕಸಭೆಗೆ ಟಿಕೆಟ್ ಖಚಿತಪಡಿಸುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ.
● ಬಾಗಲಕೋಟೆಯಲ್ಲಿ ಕೆ.ಎಸ್.ಈಶ್ವರಪ್ಪ ನೀಡಿದ ಹೇಳಿಕೆ
ರೇವಣ್ಣ ಪರ ನಾನು ಕ್ಷಮೆಯಾಚಿಸುವೆ
ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ ಎಚ್.ಡಿ.ರೇವಣ್ಣ ಅವರ ಬಾಯಿಂದ ಮಹಿಳೆ ಯರ ಬಗ್ಗೆ ಆ ರೀತಿ ಹೇಳಿಕೆ ನಿರೀಕ್ಷಿಸಿರಲಿಲ್ಲ. ಅವರ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ. ನಮ್ಮ ಪಕ್ಷದ ಚಿಹ್ನೆಯೇ ಮಹಿಳೆ ಚಿತ್ರವಾಗಿದೆ. ಅಲ್ಲದೆ,
ಪಕ್ಷ ಮಹಿಳೆಯರಿಗೆ ಅಪಾರ ಗೌರವ ನೀಡುತ್ತದೆ. ಆದರೆ, ಸುಮಲತಾ ಅವರ ಬಗ್ಗೆ ಆ ರೀತಿ ಹಗುರವಾಗಿ ಮಾತನಾಡಿರುವುದು ಬೇಸರ ಮೂಡಿಸಿದೆ.
● ರಾಯಚೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ನೀಡಿದ ಹೇಳಿಕೆ.
ಸುಮಲತಾ ಅವರು ಕನ್ನಡದ ಮಗಳು, ಕನ್ನಡದ ಸೊಸೆ. ಅವರ ರಾಜಕೀಯ ಪ್ರವೇಶದ ಬಗ್ಗೆ ರೇವಣ್ಣ ಅವರು ನಿಕೃಷ್ಟವಾಗಿ ಮಾತನಾಡುವುದು ಸರಿಯಲ್ಲ. ರೇವಣ್ಣ ಅವರ ಹೇಳಿಕೆಯನ್ನು ನೋಡಿದರೆ ಅಂಬರೀಶ್ ನಿಧನರಾದಾಗ ರೇವಣ್ಣ ಸುರಿಸಿದ್ದು ಮೊಸಳೆ ಕಣ್ಣೀರೇ ಎಂಬ ಅನುಮಾನ ಬರುತ್ತದೆ. ರೇವಣ್ಣ ಅವರು ತಕ್ಷಣ ಕ್ಷಮೆಯಾಚಿಸಿ, ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು.
● ಶೋಭಾ ಕರಂದ್ಲಾಜೆ, ಸಂಸದೆ
ರೇವಣ್ಣ ವೈಯಕ್ತಿಕವಾಗಿ ಸುಮಲತಾ ಕುರಿತು ಆ ರೀತಿ ಟೀಕೆ ಮಾಡಬಾರದಿತ್ತು. ಕಾಂಗ್ರೆಸ್ ಮೇಲಿನ ಅಭಿಮಾನದಿಂದ
ಸುಮಲತಾ ಕೊನೆಯವರೆಗೆ ಟಿಕೆಟ್‌ಗಾಗಿ ಕಾಯುತ್ತಿದ್ದಾ ರೆ. ಆದರೆ, ಮಂಡ್ಯ, ಹಾಸನ ಜೆಡಿಎಸ್ ಪಾಲಾಗಿವೆ. ಹೀಗಾಗಿ,
ಕಾಂಗ್ರೆಸ್‌ನಿಂದ ಅಲ್ಲಿ ಅಭ್ಯರ್ಥಿಗಳಿಗೆ ಟಿಕೆಟ್ ಕೊಡುವುದು ಕಷ್ಟ.
● ಆರ್.ವಿ.ದೇಶಪಾಂಡೆ, ಕಂದಾಯ ಸಚಿವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.