ಚುನಾವಣಾ ಆಯೋಗದ ಪರಿಚಯ
Team Udayavani, Mar 10, 2019, 7:21 PM IST
ಇದೊಂದು ಸ್ವಾಯತ್ತ ಸಂಸ್ಥೆ
ಚುನಾವಣಾ ಆಯೋಗವು ಒಂದು ಸಾಂವಿಧಾನಿಕ, ಸ್ವಾಯತ್ತ ಸಂಸ್ಥೆ. 1950ರಲ್ಲಿ ಇದು ಅಸ್ತಿತ್ವಕ್ಕೆ ಬಂತು. ಸಂವಿಧಾನದ 324ನೇ ಕಲಂ ಪ್ರಕಾರ ರೂಪುಗೊಂಡಿರುವ ಈ ಸಂಸ್ಥೆಯು ದೇಶದಲ್ಲಿ ಚುನಾವಣೆ ನಡೆಸುವ, ಚುನಾವಣೆಗಳಿಗೆ ಮಾರ್ಗ ಸೂಚಿಗಳನ್ನು ನೀಡುವ ಹಾಗೂ ಚುನಾವಣಾ ಪ್ರಕ್ರಿಯೆಗಳನ್ನು ನಿಯಂತ್ರಿಸುವ ಪರಮಾಧಿಕಾರವನ್ನು ಹೊಂದಿದೆ. ಲೋಕಸಭೆ ಮಾತ್ರವಲ್ಲದೆ, ರಾಜ್ಯಗಳ ವಿಧಾನಸಭೆಗಳು ಹಾಗೂ ಇನ್ನಿತರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿದೆ. ಅಷ್ಟೇ ಅಲ್ಲ, ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆಗಳನ್ನೂ ನಡೆಸುವ ಮಹತ್ವದ ಹೊರೆ ಈ ಸಂಸ್ಥೆಯ ಮೇಲಿದೆ.
ಮುಖ್ಯಸ್ಥರು ಯಾರು?
ಈ ಸಂಸ್ಥೆಯ ಮುಖ್ಯಸ್ಥರನ್ನು ಮುಖ್ಯ ಚುನಾವಣಾ ಆಯುಕ್ತರೆಂದು ಕರೆಯಲಾಗುತ್ತದೆ ಹಾಗೂ ಇವರು ರಾಷ್ಟ್ರಪತಿಯಿಂದ ನೇಮಕಗೊಳ್ಳುತ್ತಾರೆ. ಇವರ ಅಧಿಕಾರಾವಧಿ ಆರು ವರ್ಷಗಳದ್ದಾಗಿದ್ದಾಗಿರುತ್ತದೆ. ಇವರಿಗೆ ಸಹಾಯಕರಾಗಿ ಇಬ್ಬರು ಆಯುಕ್ತರನ್ನು ನೇಮಿಸಲಾಗುತ್ತದೆ. ಈ ಮೂವರೂ ಸರಿಸಮಾನ ಅಧಿಕಾರ ಹೊಂದಿರುತ್ತಾರೆ. ಸಂಸತ್ತಿನ ಮಹಾಭಿಯೋಗದ ಮೂಲಕ ಚುನಾವಣಾ ಆಯುಕ್ತರನ್ನು ಅಧಿಕಾರದಿಂದ ವಜಾಗೊಳಿಸಬಹುದಾಗಿದೆ. ಮತದಾರರ ಸೇರ್ಪಡೆ: ಪಾರದರ್ಶಕ ಚುನಾವಣೆಗಳನ್ನು ನಡೆಸುವುದರ ಜತೆಗೆ, ಗರಿಷ್ಠ ಮತದಾರರನ್ನು ಸೇರ್ಪಡೆಗೊಳಿಸುವ ಮತ್ತೂಂದು ಮಹತ್ವದ ಕಾರ್ಯ ಚುನಾವಣಾ ಆಯೋಗಕ್ಕಿದೆ.
ಆಯೋಗದ ಪ್ರಮುಖ ಕೆಲಸಗಳು
– ಚುನಾವಣೆಗಳ ದಿನಾಂಕ ಘೋಷಣೆ
– ಚುನಾವಣಾ ಫಲಿತಾಂಶಗಳ ಘೋಷಣೆ
– ಮತಗಟ್ಟೆ, ಮತಗಣನೆ ಕೇಂದ್ರಗಳ ನಿಗದಿ
– ಮತಗಟ್ಟೆಗಳು, ಮತಗಣನೆ ಕೇಂದ್ರಗಳ ಸುತ್ತ ಬಿಗಿ ಭದ್ರತೆ
– ಚುನಾವಣಾ ನೀತಿ ಸಂಹಿತೆ ಅನುಷ್ಠಾನ,ಅವಗಾಹನೆ
– ಮತಯಂತ್ರಗಳ ನಿರ್ವಹಣೆ ಮತ್ತು ಸಂರಕ್ಷಣೆ
– ರಾಷ್ಟ್ರಮಟ್ಟದ, ರಾಜ್ಯಮಟ್ಟದ ಹಾಗೂ ಪ್ರಾಂತೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು
01ಕೋಟಿ ಚುನಾವಣಾ ಸಿಬ್ಬಂದಿ
90 ಕೋಟಿ ಒಟ್ಟು
ಮತ ದಾ ರ ರು
10ಲಕ್ಷ ಮತ ಕೇಂದ್ರಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.