ಇದೇನಾ ನ್ಯಾಯ? ಇದೇನಾ ನೀತಿ?
ಗಾಸಿಪ್
Team Udayavani, Apr 16, 2019, 3:00 AM IST
ಮಂಡ್ಯವನ್ನು “ನಾಯ್ಡುಮಯ’ ಮಾಡಬೇಡಿ ಎಂದಿದ್ದ ಜೆಡಿಎಸ್, ತನ್ನ ಅಭ್ಯರ್ಥಿ ಪರ ಪ್ರಚಾರಕ್ಕೆ ಚಂದ್ರಬಾಬು ನಾಯ್ಡು ಅವರನ್ನು ಕರೆ ತಂದಿರುವುದು ಚರ್ಚೆಗೆ ಗ್ರಾಸವಾಗಿದೆ. ಮಂಡ್ಯದಲ್ಲಿ ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಕೆರಳಿದ್ದ ಜೆಡಿಎಸ್ ಸಂಸದ ಎಲ್.ಆರ್.ಶಿವರಾಮೇಗೌಡ ಅವರು, ಸುಮಲತಾ ಮೂಲತ: ನಾಯ್ಡು.
ಸುಮಲತಾ ಪರ ಪ್ರಚಾರ ನಡೆಸುತ್ತಿರುವ ದರ್ಶನ್ ಹಾಗೂ ರಾಕ್‌ಲೈನ್ ವೆಂಕಟೇಶ್ ಸಹ ನಾಯ್ಡು. ಹೀಗಾಗಿ, ಸುಮಲತಾಗೆ ಮತ ಹಾಕುವ ಮೂಲಕ ಮಂಡ್ಯವನ್ನು ನಾಯ್ಡುಮಯ ಮಾಡಬೇಡಿ ಎಂದಿದ್ದರು. ಆದರೆ, ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಜೆಡಿಎಸ್ ಕೂಡ ಮತದಾರರ ಒಲವು ಗಳಿಸಲು ಬಗೆ, ಬಗೆ ತಂತ್ರ ಹೂಡುತ್ತಿದ್ದು, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಪ್ರಚಾರಕ್ಕೆ ಕರೆ ತಂದಿದೆ.
ಆದರೆ, ಅವರು ನಾಯ್ಡು ಜನಾಂಗಕ್ಕೆ ಸೇರಿದವರು. ಮೇಲುಕೋಟೆಯಲ್ಲಿರುವ ಬಲಿಜ ಜನಾಂಗವನ್ನು ಓಲೈಸಲು ಅವರನ್ನು ಪ್ರಚಾರಕ್ಕೆ ಕರೆತರಲಾಯಿತು ಅಷ್ಟೇ. ನಾಯ್ಡು ಪ್ರಚಾರಕ್ಕೆ ಬರುವುದಕ್ಕೂ, ನಾಯ್ಡು ಅಭ್ಯರ್ಥಿಯಾಗಿರುವುದಕ್ಕೂ ವ್ಯತ್ಯಾಸವಿದೆ ಎಂದು ತೇಪೆ ಸಾರಿಸುತ್ತಿದ್ದಾರೆ ಜೆಡಿಎಸ್ ನಾಯಕರು.
ಇದನ್ನು ನೋಡಿದ ಅಂಬರೀಶ್ ಅಭಿಮಾನಿಗಳು, ಇದೇನಾ ನ್ಯಾಯ?. ಇದೇನಾ ನೀತಿ?. ಮಂಡ್ಯದ ಗಂಡು, ಅಂಬರೀಶ್ ಪತ್ನಿಯನ್ನು ನಾಯ್ಡು ಮೂಲ ಎನ್ನುವ, ಸ್ಯಾಂಡಲ್‌ವುಡ್ ನಟರಾಗಿ, ಕನ್ನಡಿಗರೇ ಆಗಿರುವ ದರ್ಶನ್, ರಾಕ್‌ಲೈನ್‌ರನ್ನು ನಾಯ್ಡು ವಂಶಜರು ಎನ್ನುವ ಜೆಡಿಎಸ್, ತಮ್ಮ ಪುತ್ರನ ಗೆಲುವಿಗೆ ಚಂದ್ರಬಾಬು ನಾಯ್ಡು ಅವರನ್ನು ಕರೆಸಬಹುದೇ ಎಂದು ಕುಹಕ ಮಾಡುತ್ತಿದ್ದಾರಂತೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.