ಯಾರಿಗೇ ಟಿಕೆಟ್ ನೀಡಿದರೂ ಗೆಲ್ಲಿಸುವುದು ಕರ್ತವ್ಯ: ನಳಿನ್
Team Udayavani, Mar 19, 2019, 1:00 AM IST
ಕಡಬ: ನಾನು ಪಕ್ಷದ ಶಿಸ್ತಿನ ಸೈನಿಕ. ಪಕ್ಷದ ಸಿದ್ಧಾಂತ ನಂಬಿ ಬಂದವ, ಅಧಿಕಾರ ನಂಬಿ ಬಂದವನಲ್ಲ. ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಆತ ಪಕ್ಷದ ಕಾರ್ಯ ಕರ್ತನಾಗಿದ್ದಲ್ಲಿ ರಾತ್ರಿ ಹಗಲು ಕೆಲಸ ಮಾಡಿ ಆತನನ್ನು ಗೆಲ್ಲಿಸುವುದು ನನ್ನ ಕರ್ತವ್ಯ ಎಂದು ದಕ್ಷಿಣ ಕನ್ನಡ ಸಂಸದ ನಳಿನ್‌ಕುಮಾರ್ ಕಟೀಲು ಹೇಳಿದರು.
ಅವರು ಸೋಮವಾರ ಕಡಬ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಕ್ಷದ ಶಕ್ತಿ ಪ್ರದರ್ಶನ
ನಾನು ಯಾವತ್ತೂ ಅಧಿಕಾರದ ಹಿಂದೆ ಬಿದ್ದಿಲ್ಲ. ಪಕ್ಷ ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ, ಸಮರ್ಥವಾಗಿ ನಿಭಾಯಿಸಿದ್ದೇನೆ. ಬಿಜೆಪಿ ಇಂದು ಅತ್ಯಂತ ಜನಪ್ರಿಯ ಪಕ್ಷವಾಗಿದೆ. ಪಕ್ಷ ಸಶಕ್ತವಾದಾಗ ಹತ್ತಾರು ಆಕಾಂಕ್ಷಿಗಳು ಹುಟ್ಟಿಕೊಳ್ಳುವುದು ಸಹಜ. ಪಕ್ಷದಿಂದ ಸ್ಪರ್ಧೆಗೆ ಎಷ್ಟು ಅಭ್ಯರ್ಥಿಗಳು ಮುಂದೆ ಬರುತ್ತಾರೆಯೋ ಪಕ್ಷ ಅಷ್ಟೇ ಭದ್ರವಾಗಿದೆ ಎಂಬ ನಂಬಿಕೆ ಇದೆ. ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳಿರುವುದು ಖುಷಿ ತಂದಿದೆ.
ಆ ಮೂಲಕ ಪಕ್ಷದ ಶಕ್ತಿ ಪ್ರದರ್ಶನವಾಗಿದೆ ಎಂದು ನಳಿನ್ ಹೇಳಿದರು.
ಅಧಿಕಾರಕ್ಕಾಗಿ ರಾಷ್ಟ್ರ ಮಟ್ಟದಲ್ಲಿ ರಚನೆಯಾಗಿರುವ ಮಹಾಘಟಬಂಧನ್ ಪೂರ್ಣವಾಗಿ ವಿಘಟನೆಯಾಗಿದೆ. ರಾಹುಲ್ ಗಾಂಧಿ ಈಗ ಒಬ್ಬಂಟಿ. ಕರ್ನಾಟಕದಲ್ಲಿ ಜನತಾದಳ ಹೇಗೆ ಹಲವು ಹೋಳುಗಳಾಗಿವೆಯೋ ಅದೇ ಸ್ಥಿತಿ ಮಹಾಘಟಬಂಧನ್‌ಗೂ ಬರಲಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮಾಡಿಕೊಂಡಿರುವ ಚುಣಾವಣಾ ಮೈತ್ರಿಯೂ ಅನೈತಿಕವಾಗಿದೆ. ಎರಡೂ ಪಕ್ಷಗಳ ವಿಚಾರ ಧಾರೆಗಳು ಬೇರೆ ಬೇರೆಯಾಗಿವೆ. ರಾಷ್ಟ್ರೀಯ ವಿಚಾರಧಾರೆ ಇಲ್ಲವೇ ಇಲ್ಲ. ಅಧಿಕಾರದ ಹಿಂದೆ ಹೋಗುವ ಮೈತ್ರಿ ಯಾವತ್ತೂ ಶಾಶ್ವತವಲ್ಲ, ಅದು ಬಿದ್ದು ಹೋಗಲಿದೆ ಎಂದು ನಳಿನ್ ತಿಳಿಸಿದರು.
ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ, ಶಾಸಕ ಸಂಜೀವ ಮಠಂದೂರು, ಮುಖಂಡರಾದ ಗೋಪಾಲಕೃಷ್ಣ ಹೇರಳೆ, ಆರ್.ಸಿ. ನಾರಾಯಣ ರೆಂಜ, ಕೃಷ್ಣ ಶೆಟ್ಟಿ ಕಡಬ, ಪುಲಸ್ತಾ ರೈ, ವಾಡ್ಯಪ್ಪ ಗೌಡ ಎರ್ಮಾಯಿಲ್, ಪ್ರಕಾಶ್ ಎನ್.ಕೆ., ಎ.ಬಿ. ಮನೋಹರ ರೈ, ಫಯಾಝ್ ಕೆನರಾ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.