ಶಿವಮೊಗ್ಗ, ಕರಾವಳಿಯಲ್ಲಿ ಬಿಜೆಪಿ ಮತ ಮೈತ್ರಿಗೆ ಶಿಫ್ಟ್


Team Udayavani, Mar 28, 2019, 6:30 AM IST

madhu-Bangarappa

ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಅವರ ಪುತ್ರ. ಶಿವಮೊಗ್ಗ ಸೇರಿ ಮಲೆನಾಡು -ಕರಾವಳಿ ಭಾಗದಲ್ಲಿ ಬಿಜೆಪಿಗೆ ಶಿಫ್ಟ್ ಆಗಿರುವ ಎಲ್ಲ ಮತಗಳನ್ನೂ ಮತ್ತೆ ವಾಪಸ್‌ ತರ್ತೇವೆ’. ಇದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್‌ -ಕಾಂಗ್ರೆಸ್‌ ಮೈತ್ರಿಕೂಟದಅಭ್ಯರ್ಥಿ, ಮಧು ಬಂಗಾರಪ್ಪ ಅವರ ದೃಢ ವಿಶ್ವಾಸದ ನುಡಿ. ಚುನಾವಣಾ ಹೋರಾಟದ ಕುರಿತು “ಉದಯವಾಣಿ’ ಜೊತೆ ಮಾತನಾಡಿದ ಅವರು, “ಈ ಬಾರಿ ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಸತ್ಯ ವರ್ಸಸ್‌ ಸುಳ್ಳು ನಡುವೆ ಹೋರಾಟ ನಡೆಯಲಿದೆ’ ಎಂದರು.

ಹೇಗಿದೆ ಪ್ರಚಾರ ?
ತುಂಬಾ ಚೆನ್ನಾಗಿದೆ. ಈಗಾಗಲೇ ಎರಡು ಸುತ್ತು ಪೂರ್ಣಗೊಳಿಸಿದ್ದೇನೆ.ಎಲ್ಲ  ಕಡೆ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದೆ.

ಮಂಡ್ಯ, ಹಾಸನ, ತುಮಕೂರಿನಂತೆ ನಿಮ್ಮಲ್ಲೂ ಬಂಡಾಯ ಇದೆಯಾ?
ಆ ವಿಚಾರದಲ್ಲಿ ನಾನು ಲಕ್ಕಿ. ಇಲ್ಲಿ ನಾನು ಜೀರೋ. ಕಾಗೋಡು ತಿಮ್ಮಪ್ಪ ಸಹಿತ ಕಾಂಗ್ರೆಸ್‌ ನಾಯಕರೇ ಮುಂದೆ ನಿಂತು ಚುನಾವಣೆ ಮಾಡುತ್ತಿದ್ದಾರೆ.

2014ರಲ್ಲಿ ಗೀತಾ ಶಿವರಾಜ್‌ಕುಮಾರ್‌, ಉಪ ಚುನಾವಣೆಯಲ್ಲಿ ನೀವೇ ನಿಂತು
ಕ್ಷೇತ್ರದಿಂದ ಗೆಲುವು ಸಾಧಿಸಲು ಆಗಲಿಲ್ಲ. ಈ ಬಾರಿ ಸಾಧ್ಯವಾ?
ಖಂಡಿತವಾಗಿಯೂ ಸಾಧ್ಯ. ಎರಡು ಚುನಾವಣೆಯಷ್ಟೇ ಅಲ್ಲ, ಅಪ್ಪಾಜಿಯವರ ಚುನಾವಣೆಯನ್ನೂ ನೋಡಿದ್ದೇನೆ. ನಾನೇ ಜವಾಬ್ದಾರಿಯನ್ನು ತೆಗೆದುಕೊಂಡಿದ್ದೆ. ಈ
ಚುನಾವಣೆಯಲ್ಲಿ ಗೆಲುವಿನ ದಡ ಸೇರಲಿದ್ದೇನೆ.

ಅಷ್ಟೊಂದು ಆತ್ಮವಿಶ್ವಾಸವಾ?
ಅತಿಯಾದ ಆತ್ಮವಿಶ್ವಾಸವಲ್ಲ. ಅಚಲ ನಂಬಿಕೆ. ಹಿಂದಿನ ಚುನಾವಣೆಗಳಲ್ಲಿ ಎಲ್ಲೆಲ್ಲಿ ವ್ಯತ್ಯಾಸವಾಗಿತ್ತು ಎಂಬುದು ಗೊತ್ತಿದೆ. ಅದನ್ನು ಸರಿಪಡಿಸಿಕೊಂಡು ಹೋಗುತ್ತಿದ್ದೇನೆ.

ಕಾಂಗ್ರೆಸ್‌-ಜೆಡಿಎಸ್‌ ಹಿರಿಯ ನಾಯಕರ ಸಹಕಾರ ಹೇಗಿದೆ?
ದೇವೇಗೌಡರು ಪ್ರಚಾರಕ್ಕೆ ಚಾಲನೆ ನೀಡಿ ಹೋಗಿದ್ದಾರೆ. ಮಾ.30 ರಂದು ಡಿ.ಕೆ.ಶಿವಕುಮಾರ್‌, ಏ.3ರಂದು ಕುಮಾರಸ್ವಾಮಿ ಬರಲಿದ್ದಾರೆ. ನಂತರ, ಮತ್ತೂಮ್ಮೆ ದೇವೇಗೌಡರು ಬರ್ತಾರೆ. ಸಿದ್ದರಾಮಯ್ಯಗೂ ಮನವಿ ಮಾಡಿದ್ದು, ಅವರೂ ಒಪ್ಪಿಕೊಂಡಿದ್ದಾರೆ. ಡಿಕೆಶಿ ವಿಶೇಷ ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದ್ದು, ನನಗೆ ಬಲ ಹೆಚ್ಚಿಸಿದೆ.

ಶಿವಮೊಗ್ಗ ಹಾಗೂ ಕರಾವಳಿ ಭಾಗದ ಕ್ಷೇತ್ರಗಳು ಬಿಜೆಪಿಯ ಭದ್ರಕೋಟೆ ಅಂತಾರಲ್ಲಾ?
ಆಗಿತ್ತು. ಆದರೆ, ಇದೀಗ ಅದು ಸಡಿಲ ಆಗುತ್ತಿದೆ. ಬೈಂದೂರು ಕ್ಷೇತ್ರದಲ್ಲಿ ಜೆಡಿಎಸ್‌ ಎಂದೂ 2 ಸಾವಿರ ಮತಕ್ಕಿಂತ ಹೆಚ್ಚು ಪಡೆದಿರಲಿಲ್ಲ. ಉಪಚುನಾವಣೆಯಲ್ಲಿ ನನಗೆ ಆ ಕ್ಷೇತ್ರದಲ್ಲಿ 54 ಸಾವಿರ ಮತಗಳು ಬಂದಿದ್ದವು. ಅದು ಪಕ್ಕಾ ಬಿಜೆಪಿ ಬೆಲ್ಟ್ ಅಲ್ಲವೇ. ಅದೇ ರೀತಿ ಎಲ್ಲ ಕ್ಷೇತ್ರಗಳಲ್ಲೂ ಬದಲಾವಣೆಯಾಗಲಿದೆ.

ಮೋದಿ ಅಲೆಯಲ್ಲಿ ಬಿಜೆಪಿಯತ್ತ ಹೋಗಿರುವವರನ್ನು ಅಷ್ಟು ಸುಲಭವಾಗಿ ಕರೆತರಲು ಸಾಧ್ಯವಾ?

ದೇಶದಲ್ಲಿ ಎಲ್ಲಿದೆ ಮೋದಿ ಅಲೆ?. ಎಲ್ಲವೂ ಕಿತ್ತುಕೊಂಡು ಹೋಗಿದೆ. ಶಿವಮೊಗ್ಗ-ಕರಾವಳಿ ಭಾಗದಲ್ಲಿ ಬಿಜೆಪಿಗೆ ಹೋಗಿರುವ ಮತಬ್ಯಾಂಕ್‌ ಖಂಡಿತವಾಗಿಯೂ
ವಾಪಸ್‌ ಬರಲಿದೆ.

 ಅಷ್ಟು ಸುಲಭವಾಗಿ ವಾಪಸ್‌ ಬರುತ್ತಾ?
ನಿಜ, ಅಷ್ಟು ಸುಲಭವಲ್ಲ, ಕಷ್ಟದ ಕೆಲಸವೇ. ಆದರೆ, ನಮ್ಮ ಪ್ರಯತ್ನದಲ್ಲಿ ನಾವು ಯಶಸ್ವಿಯಾಗಲಿದ್ದೇವೆ. ಕರಾವಳಿ-ಮಲೆನಾಡು ಭಾಗದ ಜನರಿಗೆ ಮೋದಿ, ಬಿಜೆಪಿ, ಯಡಿಯೂರಪ್ಪ ವಿರುದಟಛಿ ಆಕ್ರೋಶವಿದೆ.

ಜೆಡಿಎಸ್‌ ವಿರುದ್ಧದ ಕುಟುಂಬ ರಾಜಕಾರಣ ನಿಮ್ಮ ಗೆಲುವಿಗೆ
ಅಡ್ಡಿಯಾಗುವುದಿಲ್ಲವಾ?
ಕುಟುಂಬ ರಾಜಕಾರಣ ಎಂಬುದು ಸವಕಲು. ಅದು ಈಗ ಪ್ರಸ್ತುತವಲ್ಲ.

ನಿಮ್ಮ ಎದುರಾಳಿ ಯಡಿಯೂರಪ್ಪ ಅವರ ಪುತ್ರನಲ್ಲವೇ?
ನಾನೂ ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಅವರ ಪುತ್ರನೇ ಸಾರ್‌. ನಮ್ಮ ಅಪ್ಪಾಜಿಯವರು ರಾಜ್ಯದಲ್ಲಿ ಸಾಕಷ್ಟು ನಾಯಕರನ್ನು ಬೆಳೆಸಿದ್ದಾರೆ. ಅವರ ಶಕ್ತಿ ಎಂತದ್ದು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ.

ನೀವು ಶಿವಮೊಗ್ಗ ಕ್ಷೇತ್ರಕ್ಕೆ ಸೀಮಿತವಾ?
ಹಾಗೇನೂ ಇಲ್ಲ. ಉಡುಪಿ-ಚಿಕ್ಕಮಗಳೂರಿನಲ್ಲಿ ಪ್ರಮೋದ್‌ ಮಧ್ವರಾಜ್‌ ನಾಮಪತ್ರ ಸಲ್ಲಿಕೆಗೆ ಹೋಗಿದ್ದೆ, ಅಲ್ಲಿ ಪ್ರಚಾರಕ್ಕೆ ಹೋಗುತ್ತೇನೆ. ಕಾರವಾರದಲ್ಲಿ ಆನಂದ್‌ ಆಸ್ನೋಟಿಕರ್‌, ದಕ್ಷಿಣ ಕನ್ನಡದಲ್ಲಿ ಮಿಥುನ್‌ ರೈ ಪರವೂ ಪ್ರಚಾರ ಮಾಡುತ್ತೇನೆ. ನಾಲ್ಕೂ ಕ್ಷೇತ್ರಗಳಲ್ಲಿ ಈ ಬಾರಿ ಬದಲಾವಣೆಯಾಗಲಿದೆ.

ಶಿವಮೊಗ್ಗದಲ್ಲಿ ಈ ಬಾರಿ ಜಾತಿ ಸಮೀಕರಣವೋ, ಬೇರೆ ಲೆಕ್ಕಾಚಾರವೋ?
-ಜಾತಿ ಸಮೀಕರಣ ದೊಡ್ಡಮಟ್ಟದಲ್ಲಿ ಆಗುವುದಿಲ್ಲ. ಬಂಗಾರಪ್ಪ ಅವರು ಮಾಡಿರುವ
ಕೆಲಸಗಳು ಹಾಗೂ ಸಮ್ಮಿಶ್ರ ಸರ್ಕಾರದ ಸಾಧನೆ, ಕಾಂಗ್ರೆಸ್‌-ಜೆಡಿಎಸ್‌ನ
ಒಗ್ಗಟ್ಟು ನನಗೆ ಶ್ರೀರಕ್ಷೆ.

ಸಂದರ್ಶನ: ಎಸ್‌. ಲಕ್ಷ್ಮಿನಾರಾಯಣ

ಟಾಪ್ ನ್ಯೂಸ್

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು

Brahmavar

Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.