ತೋರಿಕೆಗಾಗಿ ಮಾತ್ರ ಸಿಎಸ್ ಹುದ್ದೆ ಕೊಟ್ರಾ
ಪ್ರಾಮಾಣಿಕತೆ ನೋಡಿ ಮೋದಿ ಅವಧಿ ವಿಸ್ತರಿಸಿದರು
Team Udayavani, Apr 12, 2019, 6:15 AM IST
ಕಲಬುರಗಿ: “ಮಹಿಳೆಯರಿಗೆ ಅವಕಾಶ ಕೊಟ್ಟಿದ್ದೇವೆಂಬ ತೋರಿಕೆಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೇವಲ ನಾಲ್ಕು ತಿಂಗಳು ಬಾಕಿಯಿರುವಾಗ ನನ್ನನ್ನು ಮುಖ್ಯ ಕಾರ್ಯದರ್ಶಿ ಹುದ್ದೆಗೆ
ನೇಮಿಸಲಾಯಿತು’ ಎಂದು ಇತ್ತೀಚೆಗೆ ಬಿಜೆಪಿ ಸೇರ್ಪಡೆ ಯಾಗಿರುವ ಮಾಜಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಆರೋಪಿಸಿದರು.
ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಿಳಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, 2014ರಲ್ಲೇ ನಾನು ಮುಖ್ಯ ಕಾರ್ಯದರ್ಶಿ ಹುದ್ದೆಗೆ ನೇಮಕವಾಗಬೇಕಿತ್ತು. ಆದರೆ, ದೆಹಲಿಯಲ್ಲಿದ್ದರವನ್ನು ಕರೆತಂದು ಅವರಿಗೆ ಹುದ್ದೆ ಕೊಟ್ಟರು. ಕೊನೆಗೆ ಸರ್ಕಾರದ ಅವಧಿ ಅಂತ್ಯದಲ್ಲಿ ಮಹಿಳೆಗೆ ಉನ್ನತ ಹುದ್ದೆ ಕೊಟ್ಟಿದ್ದೇವೆ ಎಂದು ತೋರಿಸಿಕೊಳ್ಳಲು ಸಿಎಸ್ ಹುದ್ದೆಗೆ ನೇಮಿಸಲಾಯಿತು ಎಂದರು.
ಅಲ್ಲದೇ, ಮೂರು ತಿಂಗಳ ಅವಧಿಗೆ ವಿಸ್ತರಣೆಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಪತ್ರ ಬರೆದರೂ, ಅದನ್ನು ತಡೆಯುವ ಹುನ್ನಾರವನ್ನು ಕಾಂಗ್ರೆಸ್‌ನವರೇ ಮಾಡಿದರು. ರತ್ನಪ್ರಭಾ ಅವರು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪರವಾಗಿದ್ದಾರೆ. ಅವರನ್ನು ಮುಂದುವರಿಸಿದ್ದೇ ಆದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ತೊಂದರೆ
ಆಗಲಿದೆ. ಅವರನ್ನು ಮುಂದುವರಿಸಬೇಡಿ ಎಂದು ಕೇಂದ್ರ ಸರ್ಕಾರದ ಮಟ್ಟದಲ್ಲಿ ಅಡ್ಡಗಾಲು ಹಾಕಲು ಯತ್ನಿಸಿದರು. ನನ್ನ ಪ್ರಾಮಾಣಿಕತೆ ಮತ್ತು ನಿಷ್ಪಕ್ಷಪಾತ ಸೇವೆ ಬಗ್ಗೆ ತಿಳಿದಿದ್ದ ಪ್ರಧಾನಿ ಮೋದಿ ಸೇವಾವಧಿ ವಿಸ್ತರಿಸಿದರು ಎಂದರು.
ಸುಮಲತಾಗೆ ಬೆಂಬಲ
ಮಂಡ್ಯದಿಂದ ಪ್ರಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅವರಿಗೆ ರತ್ನಪ್ರಭಾ ಬೆಂಬಲ ವ್ಯಕ್ತಪಡಿಸಿದರು. ವಿಡಿಯೋ ಕಾಲ್ ಮೂಲಕ ರತ್ನಪ್ರಭಾ ಮತ್ತು ಸಂವಾದ
ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಬೆಂಬಲ ಸೂಚಿಸಿ,ರಾಜ್ಯದ ಮಹಿಳೆಯರು ನಿಮ್ಮೊಂದಿಗೆ ಇದ್ದೇವೆ ನೀವು ಎದೆಗುಂದದಿರಿ ಎಂದು ಆತ್ಮಸ್ಥೈರ್ಯ ತುಂಬಿದರು. ಸುಮಲತಾರ ಸಿದ್ಧಾಂತಗಳ ಬಗ್ಗೆ ಬೇಕಾದರೆ ಎದುರಾಳಿಗಳು ಟೀಕೆ ಮಾಡಲಿ. ಆದರೆ, ವೈಯಕ್ತಿಕ ನಿಂದನೆ, ಮಹಿಳೆಯನ್ನು ಗೇಲಿ ಮಾಡುವುದನ್ನು ಸಹಿಸಲು
ಸಾಧ್ಯವಿಲ್ಲ ಎಂದು ರತ್ನಪ್ರಭಾ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.