ಧರಂ ಸಿಂಗ್‌, ಖಮರುಲ್‌ ಇಸ್ಲಾಂ ಇಲ್ಲದೆ ಸೊರಗಿದ ಖರ್ಗೆ 


Team Udayavani, Mar 3, 2019, 1:55 AM IST

kharge.jpg

ಕಲಬುರಗಿ: ಜಿಲ್ಲೆಯ ಎರಡು ಬೇರೆ-ಬೇರೆ ಕ್ಷೇತ್ರಗಳಿಂದ 1972ರಿಂದ ಸತತ 9 ಸಲ ಪ್ರತಿ ವಿಧಾನಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದಲ್ಲದೆ, ಎರಡು ಸಲ ಲೋಕಸಭೆ ಚುನಾವಣೆಗೆ ಜತೆ, ಜತೆಯಾಗಿ ಸ್ಪರ್ಧಿಸಿದ್ದ ಜೋಡಿ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಹಾಗೂ ದಿವಂಗತ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಮಾತ್ರ. 9 ಸಲ ವಿಧಾನಸಭೆ ಹಾಗೂ ಎರಡು ಸಲ ಲೋಕಸಭೆ ಚುನಾವಣೆಗೆ ಒಂದೇ ಪಕ್ಷದಿಂದ, ಒಂದೇ ಜಿಲ್ಲೆಯ ಬೇರೆ, ಬೇರೆ ವಿಧಾನಸಭಾ ಕ್ಷೇತ್ರದಿಂದ ಅಕ್ಕಪಕ್ಕದ ಸಂಸದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಈ ಜೋಡಿಯ ದಾಖಲೆಗಳು ಹಲವಾರಿವೆ. ರಾಜ್ಯವಲ್ಲದೆ, ದೇಶದ ಗಮನ ಸೆಳೆದಿದ್ದ ಈ ಭಾಗದ ಹಿರಿಯ ಜೋಡಿಯಲ್ಲಿ ಒಂದು ಕೊಂಡಿ ಈ ಸಲದ ಲೋಕಸಭೆ ಚುನಾವಣೆಯಲ್ಲಿ ಇಲ್ಲ.

ಧರ್ಮಸಿಂಗ್‌ ಅವರು ಜೇವರ್ಗಿ ಕ್ಷೇತ್ರದಿಂದ ಸತತ 9 ಸಲ ಸ್ಪರ್ಧಿಸಿದ್ದರೆ, ಮಲ್ಲಿಕಾರ್ಜುನ ಖರ್ಗೆ 8 ಸಲ ಗುರುಮಿಠಕಲ್‌ ಹಾಗೂ ಒಂದು ಸಲ ಚಿತ್ತಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಚುನಾಯಿತರಾಗಿದ್ದಾರೆ. ಅಲ್ಲದೆ, ಖರ್ಗೆ 2009 ಹಾಗೂ 2014ರ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಚುನಾಯಿತರಾಗಿದ್ದಾರೆ. ಆದರೆ, ಧರ್ಮಸಿಂಗ್‌ ಅವರು 2009ರ ಲೋಕಸಭಾ ಚುನಾವಣೆಯಲ್ಲಿ ಬೀದರ್‌ ಕ್ಷೇತ್ರದಿಂದ ಚುನಾಯಿತರಾಗಿ ಖರ್ಗೆ ಅವರ ಜತೆಗೆ ಸಂಸತ್‌ಗೆ ಹೆಜ್ಜೆ ಹಾಕಿದರೆ, ಕಳೆದ 2014ರ ಚುನಾವಣೆಯಲ್ಲಿ ಬಿಜೆಪಿಯ ಭಗವಂತ ಖೂಬಾ ಎದುರು ಸೋಲು ಅನುಭವಿಸಿದರು. ಸೋತ ಬಳಿಕ ಮೆತ್ತಗಾದ ಧರ್ಮಸಿಂಗ್‌, 2017ರ ಜು.27ರಂದು ಕೊನೆಯುಸಿರೆಳೆದರು. ಹೀಗಾಗಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಾಲ್ಕು ದಶಕಗಳ ಕಾಲ ರಾಜಕೀಯ ಕ್ಷೇತ್ರದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಆತ್ಮೀಯ ಮಿತ್ರನಾಗಿದ್ದ ಧರ್ಮಸಿಂಗ್‌ ಅವರಿಲ್ಲದೆ ಪ್ರಸ್ತುತ ಲೋಕಸಭಾ ಚುನಾವಣೆ ಎದುರಿಸಬೇಕಾಗಿದೆ.

ಅದೇ ರೀತಿ, 2009 ಹಾಗೂ 2014ರ ಲೋಕಸಭಾಚುನಾವಣೆಯಲ್ಲಿ ಖರ್ಗೆ ಅವರಿಗೆ ಹೆಚ್ಚಿನ ಮತ ದೊರಕಿಸಿಕೊಟ್ಟ ಮಾಜಿ ಸಚಿವ ದಿ.ಖಮರುಲ್‌ ಇಸ್ಲಾಂ ಸಹ ಈಗಿಲ್ಲ. ಒಟ್ಟಾರೆ, ಒಬ್ಬ ರಾಜಕೀಯ ಗೆಳೆಯ ಹಾಗೂ ತಮ್ಮ ಗೆಲುವಿಗೆ ಬಲ ತಂದು ಕೊಟ್ಟಿದ್ದ ಹಿರಿಯ ನಾಯಕನಾಗಿದ್ದ ಖಮರುಲ್‌ ಇಸ್ಲಾಂ ಜತೆಗಿರದಿರುವುದು ಸಂಸದ ಖರ್ಗೆ ಅವರಿಗೆ ದೊಡ್ಡ ಚಿಂತೆಯಾಗಿದೆ. 2014ರ ಚುನಾವಣೆಯಲ್ಲಿ ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಖರ್ಗೆಗೆ ಬಿಜೆಪಿಗಿಂತ 27,503 ಮತಗಳಷ್ಟೆ ಹೆಚ್ಚಿಗೆ ಬಂದಿದ್ದವು.

ಲವ-ಕುಶ ಜೋಡಿ
“ಲವ-ಕುಶ’ ಎಂದೇ “ಧರ್ಮಸಿಂಗ್‌ -ಮಲ್ಲಿಕಾರ್ಜುನ ಖರ್ಗೆ’ ಜೋಡಿ ಖ್ಯಾತಿ ಪಡೆದಿರುವುದಕ್ಕೆ ಹಲವು ಕಾರಣಗಳಿವೆ. ಇಬ್ಬರೂ ಏಕಕಾಲಕ್ಕೆ ವಿಧಾನಸಭೆಗೆ ಪ್ರವೇಶ ಮಾಡಿರುವುದು, ಇಬ್ಬರೂ ದೇವರಾಜ ಅರಸು ಸಂಪುಟದಲ್ಲಿಯೇ ಪ್ರಥಮ ಬಾರಿಗೆ ಸಚಿವರಾಗಿ, ನಂತರ ಸಮಬಲವಾಗಿಯೇ ರಾಜ್ಯ ಸಂಪುಟದ ಖಾತೆಗಳನ್ನು ನಿಭಾಯಿಸಿರುವುದು, ಇಬ್ಬರೂ ಕೆಪಿಸಿಸಿ ಅಧ್ಯಕ್ಷರಾಗಿರುವುದು ಹಾಗೂ ವಿರೋಧ ಪಕ್ಷದ ನಾಯಕರಾಗಿರುವುದು. ಧರ್ಮಸಿಂಗ್‌ ಸಿಎಂ ಆಗಿದ್ದರೆ, ಖರ್ಗೆಗೆ ಮಾತ್ರ ಮುಖ್ಯಮಂತ್ರಿಯಾಗುವ ಭಾಗ್ಯ ಇನ್ನೂ ದೊರಕಿಲ್ಲ. ಅದೇ ರೀತಿ, ಧರ್ಮಸಿಂಗ್‌ ಕೇಂದ್ರದ ಮಂತ್ರಿಯಾಗಿಲ್ಲ. ಈ ಎರಡೇ ಅವಕಾಶದಲ್ಲಿ ಮಾತ್ರ ವ್ಯತ್ಯಾಸವಿದೆ.

ಈಗ ಮಕ್ಕಳ ಜೋಡಿ!
ಧರ್ಮಸಿಂಗ್‌-ಮಲ್ಲಿಕಾರ್ಜುನ ಖರ್ಗೆ ಅವರಂತೆ ಇವರಿಬ್ಬರ ಮಕ್ಕಳ ಜೋಡಿ ಸಹ ಮುಂದುವರಿದಿದೆ. 2013 ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಡಾ| ಅಜಯಸಿಂಗ್‌ ಹಾಗೂ ಪ್ರಿಯಾಂಕ್‌ ಖರ್ಗೆ ಗೆಲುವು ಸಾಧಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲೂ ಅಪ್ಪಂದಿರಂತೆ ಪುತ್ರರು, ಒಂದೇ ತೆರನಾದ ಹಲವಾರು ರಾಜಕೀಯ ಅನುಭವ ಹೊಂದಿದ್ದಾರೆ.

ಕೆಪಿಸಿಸಿಯಲ್ಲಿ ಇಬ್ಬರೂ ಕೆಲಸ ಮಾಡಿದ್ದಾರೆ. ಸೋಲಿನಲ್ಲೂ ಸಮಾನತೆ ಹೊಂದಿದ್ದಾರೆ. 2009ರಲ್ಲಿ ಚಿತ್ತಾಪುರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಪ್ರಿಯಾಂಕ್‌ ಖರ್ಗೆ ಸ್ಪರ್ಧಿಸಿ ಪರಾಭವಗೊಂಡಿದ್ದರೆ, 2010ರಲ್ಲಿ ನಡೆದ ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಡಾ|ಅಜಯಸಿಂಗ್‌ ಪರಾಭವಗೊಂಡಿದ್ದರು. ಇಬ್ಬರೂ ಉಪಚುನಾವಣೆಯಲ್ಲಿ ಸೋತು ಸಮಾನತೆ ಪಡೆದುಕೊಂಡಿ ದ್ದಾರೆ. ಆದರೆ, ಪ್ರಿಯಾಂಕ್‌ ಖರ್ಗೆಯವರು ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಲ್ಲದೆ, ಪ್ರಸ್ತುತ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲೂ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಡಾ| ಅಜಯಸಿಂಗ್‌ ಅವರಿಗೆ ಸಚಿವರಾಗುವ ಭಾಗ್ಯ ಇನ್ನೂ ದೊರಕಿಲ್ಲ.

ಹಣಮಂತ ರಾವ ಭೈರಾಮಡಗಿ 

ಟಾಪ್ ನ್ಯೂಸ್

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.