ಖೂಬಾ, ಕರಡಿ ಕೋಟಿ ರೂ. ಸಾಲಗಾರರು
Team Udayavani, Apr 4, 2019, 6:00 AM IST
ಎರಡನೇ ಹಂತದ ಲೋಕಸಭಾ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ, ಬಿಜೆಪಿ ಸೇರಿ ವಿವಿಧ ಪಕ್ಷಗಳಿಂದ ಪ್ರಮುಖರು ಬುಧವಾರ ನಾಮಪತ್ರ ಸಲ್ಲಿಸಿದ್ದು, ಪ್ರಮುಖರ ಆಸ್ತಿ ವಿವರ ಹೀಗಿದೆ.
ಖೂಬಾ ಬಳಿ 2.94 ಕೋಟಿ ಮೌಲ್ಯದ ಸ್ಥಿರಾಸ್ತಿ
ಬೀದರ ಲೋಕಸಭಾ ಕ್ಷೇತ್ರದಿಂದ ಪುನರಾಯ್ಕೆ ಬಯಸಿ ನಾಮಪತ್ರ ಸಲ್ಲಿಸಿರುವ ಸಂಸದ ಭಗವಂತ ಖೂಬಾ ಅವರಿಗೆ ಕಳೆದ 5 ವರ್ಷಗಳಿಂದ ವಾರ್ಷಿಕ ಆದಾಯದಲ್ಲಿ ಭಾರೀ ಇಳಿಕೆಯಾಗಿದೆ. ಖೂಬಾ ಬಳಿ 1.10 ಲಕ್ಷ ರೂ. ಮೌಲ್ಯದ ಕೈಗಡಿಯಾರ ಇದೆ. ಪತ್ನಿ ಹೆಸರಲ್ಲಿ ಬೀದರಿನ ಶಿವನಗರದಲ್ಲಿರುವ 1.10 ಕೋಟಿ ರೂ. ಮೌಲ್ಯದ ಮನೆ ಹೊಂದಿದ್ದಾರೆ. 47.87 ಲಕ್ಷ ರೂ. ಗೃಹ ಸಾಲ, ಪಂಜಾಬ್ ಆ್ಯಂಡ್ ಸಿಂಡ್ ಬ್ಯಾಂಕ್‌ನಿಂದ 24.52 ಲಕ್ಷ ಹಾಗೂ 30 ಲಕ್ಷ ರೂ. ವೈಯಕ್ತಿಕ ಸಾಲ ಪಡೆದಿದ್ದಾರೆ. ಒಟ್ಟು 2.94 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ. ಒಟ್ಟಾರೆ, 1,02,39,000 ಸಾಲ ಹೊಂದಿದ್ದಾರೆ.
ಡಿ.ಆರ್. ಪಾಟೀಲ 4.68 ಕೋಟಿ ರೂ. ಒಡೆಯ
ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದ್ಯಾಮನಗೌಡ ರಾಮನಗೌಡ ಪಾಟೀಲ (ಡಿ.ಆರ್.ಪಾಟೀಲ) 4.68 ಕೋಟಿ ರೂ.ಗಳ ಒಡೆಯರಾಗಿದ್ದಾರೆ. 68,24,424 ರೂ. ಮೌಲ್ಯದ ಚರಾಸ್ತಿ, 4 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಷೇರು, ಇತರ ಬಾಂಡ್‌ಗಳಲ್ಲಿ 1,25,100 ರೂ., 1,500 ಗ್ರಾಂ. ಚಿನ್ನಾಭರಣ, 9 ಕೆಜಿ ಬೆಳ್ಳಿ ಹಾಗೂ 25,74,740 ರೂ. ಸಾಲ ಇದೆ.
ಸಂಗಣ್ಣ ಕರಡಿ ಸಾಲಗಾರ
ಕೊಪ್ಪಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ, ಚರ ಹಾಗೂ ಸ್ಥಿರಾಸ್ತಿ ಸೇರಿ ಒಟ್ಟು 2,87,25,791 ಮೌಲ್ಯದ ಆಸ್ತಿ ಹೊಂದಿದ್ದಾರೆ. ಬೆಂಗಳೂರು ಸೇರಿ ವಿವಿಧ ಬ್ಯಾಂಕ್‌ಗಳಲ್ಲಿ 2,24,75,333 ರೂ. ಸಾಲ ಮಾಡಿದ್ದಾರೆ. ಅವರ ಪತ್ನಿ ನಿಂಗಮ್ಮ ಹೆಸರಿನಲ್ಲಿ 21 ಲಕ್ಷ ರೂ. ಸಾಲವಿದೆ. ಸಂಗಣ್ಣ ಅವರಿಗೆ ಯಾವುದೇ ಆದಾಯ ಮೂಲಗಳು ಇಲ್ಲ. ಕೃಷಿ ಹಾಗೂ ಸಂಸದರ ವೇತನ ಮಾತ್ರ ಆದಾಯ ಮೂಲ ಇರುವ ಕುರಿತು ದಾಖಲೆಗಳಲ್ಲಿ ಉಲ್ಲೇಖ ಮಾಡಿದ್ದಾರೆ.
ಜಾದವ್ ಸ್ಥಿರಾಸ್ತಿ ಮೌಲ್ಯ 1.33 ಕೋಟಿ
ಕಲಬುರಗಿ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ ಚರಾಸ್ಥಿ 53 ಲಕ್ಷ ರೂ. ಮೌಲ್ಯ, ಪತ್ನಿ ಗಾಯತ್ರಿ ಚರಾಸ್ಥಿ 22 ಲಕ್ಷ ರೂ. ಮೌಲ್ಯದ್ದಾಗಿದೆ. ಮಗಳು ವೈಷ್ಣವಿ ಹೆಸರಿನಲ್ಲಿ 60 ಸಾವಿರ ರೂ. ಇದ್ದರೆ, ಶಾರದಾ ಹೆಸರಿನಲ್ಲಿ 8 ಲಕ್ಷ 74 ಸಾವಿರ ರೂ. ಚರಾಸ್ಥಿಯಿದೆ. ಉಮೇಶ ಜಾಧವ ಹೆಸರಿನಲ್ಲಿ ಚಿಂಚೋಳಿಯಲ್ಲಿ 19 ಎಕರೆ ಭೂಮಿಯಿದೆ. ಒಟ್ಟು 1.33 ಕೋಟಿ ರೂ. ಮೌಲ್ಯದ ಸ್ಥಿರಾಸ್ಥಿ ಹೊಂದಿದ್ದು, ಪತ್ನಿ ಗಾಯತ್ರಿ ಹೆಸರಿನಲ್ಲಿ 1.57 ಕೋಟಿ ರೂ. ಆಸ್ತಿಯಿದೆ.
ಜೋಶಿ 11 ಕೋಟಿ ರೂ. ಆಸ್ತಿ ಒಡೆಯ
ಹುಬ್ಬಳ್ಳಿ-ಧಾರವಾಡ ಹಾಲಿ ಸಂಸದ ಪ್ರಹ್ಲಾದ ಜೋಶಿ ಅವರ ಆಸ್ತಿ ಕಳೆದ ಐದು ವರ್ಷಗಳಲ್ಲಿ ಒಟ್ಟು ಮೂರು ಪಟ್ಟು ಹೆಚ್ಚಳವಾಗಿದ್ದು, ಅವರು 11.13 ಕೋಟಿ ರೂ. ಆಸ್ತಿಯ ಒಡೆಯರಾಗಿದ್ದಾರೆ. ಈ ಪೈಕಿ ಜೋಶಿ ಅವರ ಹೆಸರಿನ ಸ್ಥಿರ ಮತ್ತು ಚರಾಸ್ಥಿ ಮೌಲ್ಯ ಒಟ್ಟು 10.34 ಲಕ್ಷ ರೂ., ಅವರ ಪತ್ನಿ ಮತ್ತು ಮಕ್ಕಳ ಹೆಸರಿನಲ್ಲಿ 75 ಲಕ್ಷ ರೂ.ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ. 2009ರಲ್ಲಿ 1.13 ಕೋಟಿ ಆಸ್ತಿಯ ಒಡೆಯರಾಗಿದ್ದ ಅವರು 2014 ಕ್ಕೆ 2.79 ಕೋಟಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದರು.
ಮಧು ಆಸ್ತಿ 61.58 ಕೋಟಿ
ಶಿವಮೊಗ್ಗ ಮೈತ್ರಿಕೂಟದ ಅಭ್ಯರ್ಥಿ, ಮಾಜಿ ಶಾಸಕ ಮಧು ಬಂಗಾರಪ್ಪ ಕುಟುಂಬವು 61.58 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿ ಘೋಷಿಸಿಕೊಂಡಿದೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಇದ್ದ 67 ಕೋಟಿ ರೂ. ಮೌಲ್ಯದ
ಆಸ್ತಿಯಲ್ಲಿ 6 ಕೋಟಿ ರೂ. ಮೌಲ್ಯದ ಆಸ್ತಿ ಕರಗಿದೆ. ಇದರ ಜತೆಗೆ ಬ್ಯಾಂಕ್ ಮತ್ತು ಇತರೆ ಸಂಸ್ಥೆಗಳಲ್ಲಿನ ಸಾಲದ ಮೊತ್ತ 15ರಿಂದ 17 ಕೋಟಿ ರೂ.ಗಳಿಗೆ
ಏರಿಕೆಯಾಗಿದ್ದು ಕೆಎಸ್‌ಐಐಡಿಸಿಯಲ್ಲಿ 43.61 ಲಕ್ಷ ರೂ. ಸಾಲದ ವ್ಯಾಜ್ಯ ಬಾಕಿ ಇದೆ. ಕುಟುಂಬದ ವಾರ್ಷಿಕ ಆದಾಯ 92.17 ಲಕ್ಷ ರೂ. ಇದೆ. ಮಧು, ಪತ್ನಿ ಅನಿತಾ ಅವರು 19.88 ಕೋಟಿ ರೂ. ಮೌಲ್ಯದ ಚರಾಸ್ತಿ, ಮಧು ಮತ್ತು ಪುತ್ರ ಸೂರ್ಯ ಅವರು
41.58 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಅನಿತಾ ಮಧು ಬಂಗಾರಪ್ಪ ಅವರ ಹೆಸರಲ್ಲಿ ಸ್ಥಿರಾಸ್ತಿ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ
Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.