“ಹಿಂದಿ ಬೆಲ್ಟ್’ನಲ್ಲಿ ಪ್ರಮುಖರ ಪೈಪೋಟಿ
Team Udayavani, May 6, 2019, 6:00 AM IST
ಇಂದು ದೇಶದ 7 ರಾಜ್ಯಗಳ 51 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಬಿಜೆಪಿಯು 2014ರ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಮೆಜಾರಿಟಿ ಪಡೆಯಲು ಸಫಲವಾಗಿತ್ತು. ಬಿಹಾರ, ಜಮ್ಮು-ಕಾಶ್ಮೀರ, ಜಾರ್ಖಂಡ್, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಐದನೇ ಹಂತದ ಮತದಾನ ನಡೆಯಲಿದ್ದು, ಯಾವ ಕ್ಷೇತ್ರಗಳಲ್ಲಿ ಯಾರಿದ್ದಾರೆ, ಅವರೆದುರು ಯಾರು ಸ್ಪರ್ಧಿಸುತ್ತಿದ್ದಾರೆ ಎನ್ನುವ ಕಿರು ಮಾಹಿತಿ ಇಲ್ಲಿದೆ…
ರಾಯ್‌ಬರೇಲಿ (ಉತ್ತರಪ್ರದೇಶ)
– ಈ ಬಾರಿಯ ಅಭ್ಯರ್ಥಿ: ಸೋನಿಯಾ ಗಾಂಧಿ(ಕಾಂಗ್ರೆಸ್)
– ಎದುರಾಳಿ ಅಭ್ಯರ್ಥಿ: ದಿನೇಶ್ ಪ್ರತಾಪ್ ಸಿಂಗ್(ಬಿಜೆಪಿ)
– ಹಾಲಿ ಸಂಸದೆ: ಸೋನಿಯಾ ಗಾಂಧಿ(ಕಾಂಗ್ರೆಸ್)
184 ಕೋಟ್ಯಧಿಪತಿಗಳು ಕಣದಲ್ಲಿ
ಐದನೇ ಹಂತದ ಮತದಾನದಲ್ಲಿ 674 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ಈ 674 ಅಭ್ಯರ್ಥಿಗಳಲ್ಲಿ 184 ಅಭ್ಯರ್ಥಿಗಳು ಕೋಟ್ಯಧಿಪತಿಗಳು(28 ಪ್ರತಿಶತ ಎನ್ನುವುದು ವಿಶೇಷ. ಇವರಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ, ಶತ್ರುಘ್ನ ಸಿನ್ಹಾ ಪತ್ನಿ ಪೂನಂ ಸಿನ್ಹಾ ಅತಿ ಶ್ರೀಮಂತ ಅಭ್ಯರ್ಥಿಯಾಗಿದ್ದು, 193 ಕೋಟಿ ರೂಪಾಯಿ ಆಸ್ತಿ ಘೋಷಿಸಿದ್ದಾರೆ. ಅವರ ನಂತರದ ಸ್ಥಾನದಲ್ಲಿ ಸೀತಾಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಪ್ರಗತಿಶೀಲ್ ಸಮಾಜವಾದಿ ಪಾರ್ಟಿ(ಲೋಹಿ ಯಾ)ಯ ಅಭ್ಯರ್ಥಿಯಿದ್ದು ಅವರು ಘೋಷಿತ ಆಸ್ತಿ 177 ಕೋಟಿ.
ಲಕ್ನೋ(ಉತ್ತರಪ್ರದೇಶ)
– ಈ ಬಾರಿಯ ಅಭ್ಯರ್ಥಿ: ರಾಜನಾಥ್ ಸಿಂಗ್(ಬಿಜೆಪಿ)
– ಎದುರಾಳಿ ಅಭ್ಯರ್ಥಿ: ಪೂನಂ ಸಿನ್ಹಾ(ಎಸ್ ಪಿ), ಆಚಾರ್ಯ ಪ್ರಮೋದ್ ಕೃಷ್ಣಂ(ಕಾಂಗ್ರೆಸ್)
– ಹಾಲಿ ಸಂಸದ: ರಾಜನಾಥ್ ಸಿಂಗ್(ಬಿಜೆಪಿ)
ಜೈಪುರ ಗ್ರಾಮಾಂತರ(ರಾಜಸ್ಥಾನ)
-ಈ ಬಾರಿ ಅಭ್ಯರ್ಥಿ: ರಾಜ್ಯವರ್ಧನ್ ರಾಥೋಡ್(ಬಿಜೆಪಿ)
– ಎದುರಾಳಿ ಅಭ್ಯರ್ಥಿ: ಕೃಷ್ಣ ಪುನಿಯಾ(ಕಾಂಗ್ರೆಸ್)
– ಹಾಲಿ ಸಂಸದ: ರಾಜ್ಯವರ್ಧನ್ ರಾಥೋಡ್ (ಬಿಜೆಪಿ)
ಫತೇಪುರ್(ಉತ್ತರಪ್ರದೇಶ)
– ಈ ಬಾರಿಯ ಅಭ್ಯರ್ಥಿ: ಸಾಧ್ವಿ ನಿರಂಜನಾ ಜ್ಯೋತಿ (ಬಿಜೆಪಿ)
– ಎದುರಾಳಿ ಅಭ್ಯರ್ಥಿ: ರಾಕೇಶ್ ಸಚನ್ (ಕಾಂಗ್ರೆಸ್)
-ಹಾಲಿ ಸಂಸದೆ: ಸಾಧ್ವಿ ನಿರಂಜನಾ ಜ್ಯೋತಿ (ಬಿಜೆಪಿ)
ಸರಣ್ (ಬಿಹಾರ)
– ಈ ಬಾರಿಯ ಅಭ್ಯರ್ಥಿ: ರಾಜೀವ್ ಪ್ರತಾಪ್ ರೂಡಿ(ಬಿಜೆಪಿ)
– ಎದುರಾಳಿ ಅಭ್ಯರ್ಥಿ: ಚಂದ್ರಿಕಾ ರಾಯ್(ಆರ್‌ಜೆಡಿ)
– ಹಾಲಿ ಸಂಸದ: ರಾಜೀವ್ ಪ್ರತಾಪ್ ರೂಡಿ(ಬಿಜೆಪಿ)
ಮುಝಫ#ರಪುರ (ಬಿಹಾರ)
– ಈ ಬಾರಿಯ ಅಭ್ಯರ್ಥಿ: ಅಜಯ್ ನಿಷಾದ್(ಬಿಜೆಪಿ)
– ಎದುರಾಳಿ ಅಭ್ಯರ್ಥಿ: ರಾಜ್‌ಭೂಷಣ್ ನಿಷಾದ್(ವಿಐಪಿ)
– ಹಾಲಿ ಸಂಸದ: ಅಜಯ್ ನಿಷಾದ್(ಬಿಜೆಪಿ)
ಮಧುಬನಿ(ಬಿಹಾರ)
– ಈ ಬಾರಿಯ ಅಭ್ಯರ್ಥಿ: ಅಶೋಕ್ ಯಾದವ್(ಬಿಜೆಪಿ)
– ಎದುರಾಳಿ ಅಭ್ಯರ್ಥಿ: ಶಕೀಲ್ ಅಹ್ಮದ್(ಪಕ್ಷೇತರ), ಬದ್ರಿ ಪುರ್ಬೆ(ವಿಐಪಿ)
– ಹಾಲಿ ಸಂಸದ:ಹುಕುಂದೇವ್ ಯಾದವ್
ಹಝಾರಿಬಾಗ್ (ಜಾರ್ಖಂಡ್)
– ಈ ಬಾರಿಯ ಅಭ್ಯರ್ಥಿ: ಜಯಂತ್ ಸಿನ್ಹಾ(ಬಿಜೆಪಿ)
-ಎದುರಾಳಿ ಅಭ್ಯರ್ಥಿ: ಗೋಪಾಲ್ ಸಾಹು(ಕಾಂಗ್ರೆಸ್)
– ಹಾಲಿ ಸಂಸದ: ಜಯಂತ್ ಸಿನ್ಹಾ(ಬಿಜೆಪಿ)
ಅಮೇಠಿ(ಉತ್ತರಪ್ರದೇಶ)
– ಈ ಬಾರಿಯ ಅಭ್ಯರ್ಥಿ: ರಾಹುಲ್ ಗಾಂಧಿ(ಕಾಂಗ್ರೆಸ್)
-ಎದುರಾಳಿ ಅಭ್ಯರ್ಥಿ: ಸ್ಮತಿ ಇರಾನಿ(ಬಿಜೆಪಿ)
– ಹಾಲಿ ಸಂಸದ: ರಾಹುಲ್ ಗಾಂಧಿ(ಕಾಂಗ್ರೆಸ್)
ಕ್ಷೇತ್ರ ನೋಟ
ಬಿಹಾರ: ಮಧುಬನಿ, ಮುಝಫ#ರಪುರ, ಸೀತಾಮಾಹಿì, ಸರನ್ ಮತ್ತು ಹಾಜಿಪುರ
ಜಮ್ಮು-ಕಾಶ್ಮೀರ: ಲದಾಖ್ ಮತ್ತು ಅನಂತನಾಗ್
ಜಾರ್ಖಂಡ್: ರಾಂಚಿ, ಖುಂಟಿ, ಹಝಾರಿಬಾಗ್, ಕೋಡರ್ಮಾ
ಉತ್ತರಪ್ರದೇಶ: ರಾಯ್‌ಬರೇಲಿ, ಅಮೇಠಿ, ಲಕ್ನೋ, ದೌರಾಹ್ರಾ, ಸೀತಾಪುರ್, ಮೋಹನ್‌ಲಾಲ್‌ಗಂಜ್, ಬಂದಾ, ಫತೇಪುರ್, ಕೌಶಂಬಿ, ಬರಾಬಂಕಿ, ಫೈಜಾಬಾದ್, ಬಹೆÅàಚ್, ಕೇಸರ್‌ಗಂಜ್ ಮತ್ತು ಗೊಂಡಾ
ಪಶ್ಚಿಮ ಬಂಗಾಳ: ಬನ್‌ಗಾಂವ್, ಬರಾಕ್‌ಪೋರ್, ಹೌರಾ, ಉವೇಬೇರಿಯಾ, ಶ್ರೀರಾಂಪುರ್, ಹೂಗ್ಲಿ ಮತ್ತು ಅರಂಬಾಗ್
ಮಧ್ಯಪ್ರದೇಶ: ಟಿಕಂಗಢ್, ದಾಮೋಹ್, ಖಜುರಾಹೋ, ಸಾತ್ನಾ, ರೇವಾ, ಹೋಶಂಗಾಬಾದ್ ಮತ್ತು ಬೇತುಲ್
ರಾಜಸ್ಥಾನ: ಗಂಗಾನಗರ್, ಬಿಕಾನೇರ್, ಚುರು, ಝನ್‌ರುನು, ಸಿಕಾರ್, ಜೈಪುರ ಗ್ರಾಮಾಂತರ, ಜೈಪುರ, ಅಲ್ವಾರ್, ಭರತ್‌ಪುರ, ಕರೌಲಿ-ಢೋಲ್‌ಪುರ, ದೌಸಾ ಮತ್ತು ನಾಗೌರ್
ಕ್ರಿಮಿನಲ್ ಕೇಸ್
674 ಅಭ್ಯರ್ಥಿಗಳಲ್ಲಿ 126 ಮಂದಿಯ ಮೇಲೆ ಕ್ರಿಮಿನಲ್ ಕೇಸ್‌ಗಳಿದ್ದು, ಸಮಾಜವಾದಿ ಪಕ್ಷದ ಅಭ್ಯರ್ಥಿಗಳೇ ಈ ಪಟ್ಟಿಯಲ್ಲಿ ಹೆಚ್ಚಿದ್ದಾರೆ. ಇವರಲ್ಲಿ 95 ಅಭ್ಯರ್ಥಿಗಳ ವಿರುದ್ಧ ಗಂಭೀರ ಅಪರಾಧಿಕ ಪ್ರಕರಣಗಳು ದಾಖಲಾಗಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.