ಹಿಂಸೆ, ದಾಂಧಲೆ, ಆರೋಪ, ಪ್ರತ್ಯಾರೋಪ

4ನೇ ಹಂತದಲ್ಲಿ 72 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪೂರ್ಣ ; ಅಲ್ಲಲ್ಲಿ ಹಿಂಸೆ,ಗಲಭೆ

Team Udayavani, Apr 30, 2019, 6:00 AM IST

PTI4_29_2019_000040B

ಹೊಸದಿಲ್ಲಿ: ಒಂಬತ್ತು ರಾಜ್ಯಗಳ 72 ಲೋಕಸಭಾ ಕ್ಷೇತ್ರಗಳಿಗೆ ನಾಲ್ಕನೇ ಹಂತದ ಮತದಾನ ಸೋಮವಾರ ಪೂರ್ಣಗೊಂಡಿದೆ.

ಪಶ್ಚಿಮ ಬಂಗಾಲದಲ್ಲಿ 4ನೇ ಹಂತದ ಮತದಾನದಲ್ಲೂ ಹಿಂಸಾಚಾರ, ವಿವಿಧ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆಗಳು ನಡೆದಿವೆ. ಒಡಿಶಾ, ಉತ್ತರಪ್ರದೇಶ, ಬಿಹಾರ ಮತ್ತು ಮಹಾ ರಾಷ್ಟ್ರಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳಲ್ಲಿನ ದೋಷವು ಮತದಾನವನ್ನು ವಿಳಂಬವಾಗುವಂತೆ ಮಾಡಿದೆ. ಎಲ್ಲ ರಾಜ್ಯಗಳಲ್ಲೂ ಮಧ್ಯಾಹ್ನದ ವರೆಗೂ ಉತ್ತಮ ಸಂಖ್ಯೆಯಲ್ಲಿ ಬಂದು ಜನ ಹಕ್ಕು ಚಲಾಯಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಉಗ್ರ ಪೀಡಿತ ಪ್ರದೇಶಗಳಲ್ಲಿ ಮತದಾನ ಶಾಂತಿಯುತವಾಗಿತ್ತು. ಆದರೆ, ಪ.ಬಂಗಾಲದಲ್ಲಿ ಎಂದಿನಂತೆ ಈ ಬಾರಿಯೂ ಹಿಂಸಾಚಾರ, ಘರ್ಷಣೆಗಳು ವರದಿಯಾಗಿವೆ. ನಾನೂರ್‌, ರಾಂಪುರ್‌ಹಟ್‌, ನಲ್ಹಾಟಿ, ಸಿಯೂರಿ ಸಹಿತ ಹಲವು ಪ್ರದೇಶಗಳಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವಿನ ಘರ್ಷಣೆಯಿಂದಾಗಿ ಹಲವರು ಗಾಯ ಗೊಂಡಿದ್ದಾರೆ. ದುಬ್ರಾಜ್‌ಪುರದಲ್ಲಿ ಮತದಾರರೇ ಕೇಂದ್ರೀಯ ಪಡೆಗಳೊಂದಿಗೆ ಜಗಳಕ್ಕಿಳಿದಿದ್ದು, ಕೊನೆಗೆ ಗಾಳಿಯಲ್ಲಿ ಗುಂಡು ಹಾರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ಮಧ್ಯಪ್ರದೇಶದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ತಮ್ಮ ಕಾರಿನ ಮೇಲೆ ನಕ್ಸಲರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಬಾಬುಲ್‌ ವಿರುದ್ಧ ಎಫ್ಐಆರ್‌: ಪ.ಬಂಗಾಲದ ಬಾರಾಬನಿಯಲ್ಲಿ ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಬಾಬುಲ್‌ ಸುಪ್ರಿಯೋ ಅವರ ಕಾರನ್ನು ಟಿಎಂಸಿ ಸದಸ್ಯರು ಪುಡಿಗೈದ ಘಟನೆ ನಡೆದಿದೆ. ಇದೇ ವೇಳೆ, ಮತಗಟ್ಟೆಯೊಂದಕ್ಕೆ ಅಕ್ರಮವಾಗಿ ಪ್ರವೇಶಿಸಿ, ಚುನಾವಣಾ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕೆ ಬಾಬುಲ್‌ ಸುಪ್ರಿಯೋ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ.

ಇವಿಎಂ ಲೋಪ: ನೆರೆಯ ಬಿಹಾರದಲ್ಲಿ ಮೂರು ಮತಗಟ್ಟೆಗಳಲ್ಲಿ ಮತಯಂತ್ರಗಳಲ್ಲಿ ಲೋಪ ಕಾಣಿಸಿ ಕೊಂಡ ಕಾರಣ, ಮತದಾನ ಪ್ರಕ್ರಿಯೆ ವಿಳಂಬ ವಾಯಿತು. ಒಡಿಶಾದಲ್ಲೂ 60 ಮತಗಟ್ಟೆಗಳಲ್ಲಿ ಇದೇ ರೀತಿಯ ಸಮಸ್ಯೆ ತಲೆದೋರಿತು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಇವಿಎಂ ದೋಷ ಕುರಿತು ಒಟ್ಟು 30 ದೂರುಗಳನ್ನು ಆಯೋಗಕ್ಕೆ ಸಲ್ಲಿಸಿವೆ. ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಬಿಸಿಲಿನ ಝಳದ ನಡುವೆಯೂ ಜನರು ಸರತಿಯಲ್ಲಿ ನಿಂತು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು. ಮುಂಬಯಿನಲ್ಲಿ ಸೆಲೆಬ್ರಿಟಿಗಳ ದಂಡೇ ಮತಗಟ್ಟೆಗಳಲ್ಲಿ ಕಾಣಿಸಿಕೊಂಡು, ಜನಸಾಮಾನ್ಯರ ಕಣ್ಮನ ತಣಿಸಿತು.

ಕಾಸರಗೋಡಲ್ಲಿ ಬೋಗಸ್‌ ಮತದಾನ ನಡೆದಿದ್ದು ನಿಜ
ಸಿಪಿಎಂ ಪಂಚಾಯತ್‌ ಸದಸ್ಯರೊಬ್ಬರು ಎ. 23ರಂದು ಕಾಸರಗೋಡು ಕ್ಷೇತ್ರದಲ್ಲಿ ಬೋಗಸ್‌ ವೋಟಿಂಗ್‌ ಮಾಡಿದ್ದು ನಿಜ ಎಂದು ಕೇರಳ ಮುಖ್ಯ ಚುನಾವಣಾ ಅಧಿಕಾರಿ ಟೀಕಾರಾಮ್‌ ಮೀನಾ ಸೋಮವಾರ ಘೋಷಿಸಿದ್ದಾರೆ. 3ನೇ ಹಂತದ ಮತದಾನದ ವೇಳೆ ಪಯ್ಯನ್ನೂರಿನ ಪಿಲಾಥರಾ ಬೂತ್‌ನಲ್ಲಿ ಕೆಲವರು ಹಲವು ಬಾರಿ ಹಕ್ಕು ಚಲಾಯಿಸಿದ್ದ ಸಿಸಿಟಿವಿ ವಿಡಿಯೋವನ್ನು ಇತ್ತೀಚೆಗೆ ಸ್ಥಳೀಯ ಚಾನೆಲ್‌ಗ‌ಳು ಪ್ರಸಾರ ಮಾಡಿದ್ದವು. ಮಹಿಳೆಯೊಬ್ಬರು ಮತಗಟ್ಟೆಯಿಂದ ಹೊರಕ್ಕೆ ಕಾಲಿಡುತ್ತಿದ್ದಂತೆ ತಮ್ಮ ಕೈಬೆರಳಿನ ಶಾಯಿಯನ್ನು ಒರೆಸಿಕೊಂಡಿದ್ದು ಹಾಗೂ ಅದೇ ಮಹಿಳೆ ಎರಡನೇ ಬಾರಿ ಮತ ಚಲಾಯಿಸಿದ್ದು ವಿಡಿಯೋದಲ್ಲಿ ಸೆರೆ ಯಾ ಗಿತು. ಇದೀಗ ಇಲ್ಲಿ ನಕಲಿ ಮತದಾನ ನಡೆದಿ ರುವುದು ಹೌದು ಎಂದು ಆಯೋಗವೇ ಒಪ್ಪಿಕೊಂ ಡಿದೆ. ಇದೇ ವೇಳೆ, ನಕಲಿ ಮತದಾನ ಹಿನ್ನೆಲೆಯಲ್ಲಿ ಕಾಸರಗೋಡು ಕ್ಷೇತ್ರದ 110 ಮತಗಟ್ಟೆಗಳಲ್ಲಿ ಮರು ಚುನಾವಣೆ ನಡೆಯಬೇಕು ಎಂದು ಜಿಲ್ಲಾಧಿಕಾರಿಗೆ ಯುಡಿಎಫ್ ಮನವಿ ಸಲ್ಲಿಸಿದೆ.

ಸಂಹಿತೆ ಉಲ್ಲಂಘಿಸಿದ ನಾಯಿ ಅರೆಸ್ಟ್‌!
ಬಿಜೆಪಿಯ ಪರೋಕ್ಷ ಪ್ರಚಾರಕ್ಕಾಗಿ ಬಳಸಿಕೊಳ್ಳ ಲಾಗಿದ್ದ ಸಾಕು ನಾಯಿ ಹಾಗೂ ಅದರ ಮಾಲೀಕ ರನ್ನು ಉತ್ತರ ಮಹಾರಾಷ್ಟ್ರದ ನದುರ್ಬರ್‌ ನಗರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸೋಮವಾರ, ಮಹಾರಾಷ್ಟ್ರದಲ್ಲಿ 4ನೇ ಹಂತದ ಮತದಾನ ನಡೆಯುತ್ತಿದ್ದಂತೆಯೇ ನವರತ್ನ ನಗರ ಎಂಬ ಪ್ರಾಂತ್ಯದ ನಿವಾಸಿ ಮೋತಿರಾಮ್‌ ಚೌಧರಿ (65) ತಮ್ಮ ನಾಯಿಯೊಂದಿಗೆ ಹೊರಗಡೆ ಕಾಣಿಸಿ ಕೊಂಡಿದ್ದು, ನಾಯಿಯ ಮೈಮೇಲೆ ಪೂರ್ತಿಯಾಗಿ ಬಿಜೆಪಿ ಪಕ್ಷವನ್ನು ಬೆಂಬಲಿಸುವ ಅರ್ಥ ಬರುವ “ಮೋದಿ ಲಾವೋ ದೇಶ್‌ ಬಚಾವೋ’ ಎಂಬ ವಾಕ್ಯವುಳ್ಳ ಸ್ಟಿಕರ್‌ಗಳನ್ನು ಅಂಟಿಸಲಾಗಿತ್ತು. ಹಾಗಾಗಿ, ನಾಯಿ,ಮಾಲೀಕನ ಬಂಧನವಾಗಿದೆ.

ಚುನಾವಣೆಗೆ ಸ್ಪರ್ಧಿಸಲಿರುವ ಕಾಶ್ಮೀರಿ ಪಂಡಿತರು
ಜಮ್ಮು ಕಾಶ್ಮೀರದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಶ್ಮೀರಿ ಪಂಡಿತರು ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಮಾಡಿದ್ದಾರೆ. ಇದಕ್ಕಾಗಿ ಅವರು ರಾಜಕೀಯ ಪಕ್ಷವನ್ನೂ ರಚಿಸಿಕೊಂಡಿದ್ದಾರೆ. ಸುಪ್ರೀಂಕೋರ್ಟ್‌ ಹಿರಿಯ ವಕೀಲ ಅಶೋಕ್‌ ಭಾನ್‌ ನೇತೃತ್ವದಲ್ಲಿ ಕಾಶ್ಮೀರಿ ಪಂಡಿತ್‌ ಪೊಲಿಟಿಕಲ್‌ ಆಕ್ಷನ್‌ ಕಮಿಟಿ (ಕೆಪಿಪಿಎಸಿ) ಸ್ಥಾಪಿಸಲಾಗಿದೆ. ಪಂಡಿತರು ಕಾಶ್ಮೀರಕ್ಕೆ ಮರಳಲು ಹೋರಾಟ ನಡೆಸುವ ಸಲುವಾಗಿ ಈ ಸಮಿತಿ ರಚಿಸಲಾಗಿದೆ. ಈ ಸಮಿತಿ ವಿಧಾನಸಬೆ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಈಗಾಗಲೇ ದೇಶಾದ್ಯಂತ ಪಕ್ಷಕ್ಕೆ ನೋಂದಣಿ ಮಾಡಿಸಿಕೊಳ್ಳುವಂತೆ ಆಗ್ರಹಿಸಲಾಗಿದೆ. ಕಾಶ್ಮೀರದಲ್ಲಿನ 41 ಸಾವಿರ ಹಾಗೂ ಜಮ್ಮುವಿನ 21 ಸಾವಿರ ವಲಸಿಗರು ದಿಲ್ಲಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಟಾಪ್ ನ್ಯೂಸ್

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

6-gangolli

Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

1-kadkona

Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು

1-H-R

Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

8

Kundapura: ರಸ್ತೆ, ಪೈಪ್‌ಲೈನ್‌ ಕಾಮಗಾರಿಯಿಂದ ಧೂಳು; ಹೈರಾಣಾದ ಜನ

7

Belman: ಅಗ್ನಿ ದುರಂತದ ಅಪಾಯ; ಟ್ರಾನ್ಸ್‌ಫಾರ್ಮರ್‌ ಸುತ್ತ ಸ್ವಚ್ಛತೆ

6

‌Network Problem: ಹಲೋ…ಹಲೋ…ಹಲೋ ಟೆಸ್ಟಿಂಗ್‌!

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

6-gangolli

Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.