ಉತ್ತರಪ್ರದೇಶದಲ್ಲಿ ಚಿಕ್ಕ ಪಕ್ಷಗಳ ಸದ್ದು!
Team Udayavani, Feb 25, 2019, 12:30 AM IST
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಉತ್ತರಪ್ರದೇಶದಲ್ಲಿ ಪುಟ್ಟ ಪ್ರಾದೇಶಿಕ ಪಕ್ಷಗಳಿಗೀಗ ಎಲ್ಲಿಲ್ಲದ ಶಕ್ತಿ ಬಂದುಬಿಟ್ಟಿದೆ. ಅನೇಕ ಪಕ್ಷಗಳು ಒಂದೆರಡು ತಿಂಗಳಲ್ಲಿ ಅತ್ಯಂತ ಸಕ್ರಿಯವಾಗಿಬಿಟ್ಟಿವೆ. “ನಮ್ಮ ಕೈಹಿಡಿದರೆ ನಿಮಗೆ ಲಾಭವಿದೆ’ ಎಂದು ಎಸ್‌ಪಿ-ಬಿಎಸ್‌ಪಿ, ಕಾಂಗ್ರೆಸ್ ಮತ್ತು ಬಿಜೆಪಿಗೆ ಈ ಪಕ್ಷಗಳು ಸಿಗ್ನಲ್ ಕಳುಹಿಸಲಾರಂಭಿಸಿವೆ.
2014 ರಲ್ಲಿ ಮೋದಿ ಅಲೆಗೆ ತತ್ತರಿಸಿ ಒಂದಂಕಿಯನ್ನೂ ಪಡೆಯಲು ವಿಫಲವಾಗಿದ್ದ ರಾಷ್ಟ್ರೀಯ ಲೋಕದಳವೀಗ ಎಸ್‌ಪಿ-ಬಿಎಸ್‌ಪಿಯೊಂದಿಗೆ ಜೊತೆಯಾಗಿದೆ. ಆರಂಭದಲ್ಲಿ 5 ಸೀಟುಗಳಿಗೆ ಬೇಡಿಕೆಯಿಟ್ಟಿದ್ದ ಈ ಪಕ್ಷವೀಗ 3 ಸ್ಥಾನಗಳಿಂದ ಸ್ಪರ್ಧಿಸ ಲಿದೆ. ಕಾಂಗ್ರೆಸ್‌ನೊಂದಿಗೆ ಹೋಗಿದ್ದರೆ 10 ಸೀಟುಗಳಾದರೂ ಸಿಗುತ್ತಿದ್ದವು ಎಂಬ ಅಪಸ್ವರ ಆರ್‌ಎಲ್‌ಡಿಯಲ್ಲೀಗ ಎದ್ದಿದೆ.
ಬಿಜೆಪಿ ಕೂಡ ಚಿಕ್ಕ ಪಾರ್ಟಿಗಳನ್ನು ಬತ್ತಳಿಕೆಗೆ ಸೇರಿಸಿ ಕೊಳ್ಳಲು ಪ್ರಯತ್ನಿಸುತ್ತಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಅಮಿತ್ ಶಾ ಕುರ್ಮಿ ಸಮುದಾಯವನ್ನು ಪ್ರತಿನಿಧಿಸುವ ಅಪ್ನಾದಳದ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಈ ಬಾರಿ ಅಪ್ನಾ ದಳ್ ಎನ್‌ಡಿಎ ಜೊತೆ ಮುಂದುವರಿಯಬೇಕೇ ಅಥವಾ ಕಾಂಗ್ರೆಸ್‌ನತ್ತ ಹೋಗಬೇಕೇ ಎಂದು ಚಿಂತಿಸಲಾರಂಭಿಸಿದೆ. ಅಪ್ನಾ ದಳದ ನಾಯಕಿ ಅನುಪ್ರಿಯಾ ಸಿಂಗ್, ಮೋದಿ ಸರ್ಕಾರದಲ್ಲಿ ಕಿರಿಯ ಆರೋಗ್ಯ ಸಚಿವರಾಗಿದ್ದಾರೆ. ಗುರುವಾರ ಅನುಪ್ರಿಯಾ ಪ್ರಿಯಾಂಕಾ ಗಾಂಧಿಯವರೊಂದಿಗೆ ಮಾತುಕತೆ ನಡೆಸಿರುವ ಸುದ್ದಿ ಹೊರಬಿದ್ದಿದೆ. ಅಲ್ಲದೇ ಇದೇ ತಿಂಗಳ 28ರಂದು ಪಕ್ಷವು ಸಭೆ ನಡೆಸಲಿದ್ದು, ಎನ್‌ಡಿಎದ ಜೊತೆ ಮುಂದುವರಿಯಬೇಕೋ, ಕಾಂಗ್ರೆಸ್ ಅಥವಾ ಇನ್ನಿತರೆ ಪಕ್ಷಗಳ ಜೊತೆ ಕೈ ಜೋಡಿಸಬೇಕೋ ಎನ್ನುವುದನ್ನು ನಿರ್ಧರಿಸಲಿದೆ. ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ಕುರ್ಮಿ ಸಮುದಾಯದ ಸಂಖ್ಯೆ ಅಧಿಕವಿದ್ದು ಉತ್ತರ ಪ್ರದೇಶದ ಪಶ್ಚಿಮ ಭಾಗಗಳಲ್ಲಿ ನೆಲೆ ಭದ್ರಪಡಿಸಿಕೊಳ್ಳಬೇಕೆಂದರೆ ಬಿಜೆಪಿಗೆ ಅಪ್ನಾ ದಳ್ ಮುಖ್ಯ ವಾಗುತ್ತದೆ. ಹೀಗಾಗಿ, ಈ ಪಕ್ಷವನ್ನು ಕೈ ಬಿಡಲು ಬಿಜೆಪಿ ಸಿದ್ಧವಿಲ್ಲ.
ಸುಹೇಲ್‌ದೇವ್ ಭಾರತೀಯ ಸಮಾಜಪಾರ್ಟಿ(ಎಸ್‌ಬಿಎಸ್‌ಪಿ)ಯ ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ಈಗ ಲೋಕಸಭಾ ಚುನಾವಣೆಯಲ್ಲಿ ಅನ್ಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ಮುಕ್ತವಾಗಿಟ್ಟು ಕೊಂಡಿರುವುದಾಗಿ ಹೇಳುತ್ತಿದ್ದಾರೆ. ಸದ್ಯಕ್ಕವರು ಉತ್ತರ ಪ್ರದೇಶದ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಯ ಸಚಿವರಾ ಗಿದ್ದಾರೆ. ಇತ್ತೀಚೆಗಷ್ಟೇ ರಾಜ್‌ಭರ್, ತಮ್ಮ ಇಲಾಖೆಯಲ್ಲಿ ಸರ್ಕಾರಿ ನಿಯೋಜಿತ ಸಮಿತಿಯ ಸದಸ್ಯರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಯೋಗಿ ಸರ್ಕಾರದ ಸಂಗ ತೊರೆಯುವ ಮಾತ ನಾಡಿ ದ್ದರು. ಹೀಗೆ ಹೇಳಿದ ಎರಡೇ ದಿನದಲ್ಲಿ ರಾಜೀನಾಮೆ ಯನ್ನೂ ಕಳುಹಿಸಿ ದ್ದರು. ಆದರೆ ಯೋಗಿ ಆದಿತ್ಯನಾಥ್ ರಾಜೀನಾಮೆಯನ್ನು ಸ್ವೀಕರಿಸಿಲ್ಲ. ಇಷ್ಟೆಲ್ಲ ಗದ್ದಲ ಮಾಡುತ್ತಲೇ, ಏತನ್ಮಧ್ಯೆ ಅಮಿತ್ ಶಾ ಅವರೊಂದಿಗೆ ಮಾತಕತೆಯಾಡಿರುವ ರಾಜ್‌ಭರ್ ಫೆಬ್ರವರಿ 26ರಂದು ಬಿಜೆಪಿ ಮುಖ್ಯಸ್ಥರೊಂದಿಗೆ ಮತ್ತು ಯೋಗಿ ಆದಿತ್ಯನಾಥ್‌ರೊಂದಿಗೆ ಮತ್ತೂಂದು ಸುತ್ತಿನ ಮಾತುಕತೆ ಯಾಡಲಿದ್ದಾರೆ. ಆ ಸಮಯದಲ್ಲಿ ಸೀಟು ಹಂಚಿ ಕೆಯ ವಿಷಯದಲ್ಲಿ ಚರ್ಚೆ ನಡೆಯಲಿದ್ದು, ತದನಂತರ ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ಯೋಚಿಸುವುದಾಗಿ ಹೇಳುತ್ತಿದ್ದಾರೆ. ಚಿಕ್ಕ ಪಕ್ಷಗಳನ್ನು ಕಡೆಗಣಿಸುವುದು ದೊಡ್ಡ ತಪ್ಪು ಎಂದು ಅರ್ಥಮಾಡಿಕೊಂಡಿರುವ ಸಮಾಜವಾದಿ ಪಕ್ಷ “ನಿಷಾದ್’ ಮತ್ತು “ಪೀಸ್ ಪಾರ್ಟಿ’ಗಳೊಂದಿಗೂ ಮಾತುಕತೆ ನಡೆಸಿದೆ.
ಕಾಂಗ್ರೆಸ್ ಗಾಳ ಇನ್ನು ಪ್ರಿಯಾಂಕಾ ಗಾಂಧಿಯವರ ನೇತೃತ್ವದಲ್ಲಿ ಉತ್ತರ ಪ್ರದೇಶದ ಕಾಂಗ್ರೆಸ್ ಘಟಕ ಒಬಿಸಿ ವರ್ಗವನ್ನು ಪ್ರತಿನಿಧಿಸುವ “ಮಹಾನ್ ದಳದ’ ಜೊತೆ ಕೈ ಜೋಡಿಸುವ ಘೋಷಣೆ ಮಾಡಿದೆೆ. ಇದಷ್ಟೇ ಅಲ್ಲದೆ ಶಿವಪಾಲ್ ಯಾದವ್ ನೇತೃತ್ವದ ಪ್ರಗತಿಶೀಲ್ ಸಮಾಜವಾದಿ ಪಾರ್ಟಿ- ಲೋಹಿಯಾ (ಪಿಎಸ್‌ಪಿಎಲ್) ಪಕ್ಷವನ್ನೂ ಜೊತೆಯಾಗಿಸಿಕೊಳ್ಳುವ ಬಗ್ಗೆಯೂ ಕಾಂಗ್ರೆಸ್ ಚಿಂತನೆ ನಡೆಸಿದೆ, ಆದರೆ ಶಿವಪಾಲ್ ಯಾದವ್ ಅವರು ಎನ್‌ಡಿಎದತ್ತ ಹೆಚ್ಚು ಒಲವು ಹೊಂದಿದ್ದಾರೆ ಎನ್ನಲಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ ಉತ್ತರಪ್ರದೇಶ. ಹೀಗಾಗಿ, ಈ ರಾಜ್ಯದಲ್ಲಿ ರಿಸ್ಕ್ ತೆಗೆದುಕೊಳ್ಳಲು ಯಾವುದೇ ಪಕ್ಷವೂ ಸಿದ್ಧವಿಲ್ಲ. ಚಿಕ್ಕ ಪಕ್ಷಗಳನ್ನು ಕಡೆಗಣಿಸುವುದೂ ದೊಡ್ಡ ತಪ್ಪಾಗಬಲ್ಲದು ಎನ್ನುವುದನ್ನು ಅವು ಚೆನ್ನಾಗಿ ಅರಿತಿರುವುದೇ ಈಗಿನ ಬದಲಾವಣೆ ಗಳಿಗೆ ಕಾರಣ.
ಒಂದಲ್ಲ ಎರಡಲ್ಲ, 474 ಪಕ್ಷಗಳು!
ದೇಶದಲ್ಲಿ ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ರಾಜಕೀಯ ಪಕ್ಷಗಳ ಸಂಖ್ಯೆಯೂ ಅತಿಯೆನಿಸುವಷ್ಟಿದೆ. ಒಂದು ಪಕ್ಷವು ನೋಂದಣಿ ಮಾಡಿಕೊಂಡಿದ್ದರೂ ಅದು ರಾಜ್ಯ ಮಟ್ಟದ ಅಥವಾ ಕೇಂದ್ರ ಮಟ್ಟದ ರಾಜಕೀಯ ಪಕ್ಷವೆಂದು ಕರೆಸಿ ಕೊಳ್ಳಲು ಕೆಲವು ಮಾನದಂಡಗಳನ್ನು ಮುಟ್ಟ ಬೇಕಾ ಗುತ್ತದೆ. ಈ ಮಾನದಂಡಗಳನ್ನು ಮುಟ್ಟದ ಪಕ್ಷಗಳನ್ನು
“unrecognised” ಪಕ್ಷಗಳೆಂದು ಕರೆಯಲಾಗುತ್ತದೆ. 2002ರಲ್ಲಿ 75ರಷ್ಟಿದ್ದ ಈ ರೀತಿಯ ಪಕ್ಷಗಳ ಸಂಖ್ಯೆ ಈಗ 474ಕ್ಕೆ ತಲುಪಿದೆ. ಈ ಪಕ್ಷಗಳು ರಾಜಕೀಯವಾಗಿ ಹೆಚ್ಚು ಪಾತ್ರವನ್ನೇನೂ ವಹಿಸುವುದಿಲ್ಲವಾದರೂ, ರಾಜಕೀಯ ದೇಣಿ ಗೆ ಹೆಸರಲ್ಲಿ ಕಪ್ಪು ಹಣವನ್ನು ಬಿಳಿ ಮಾಡುವುದಕ್ಕಾಗಿ ಇವುಗಳನ್ನು ಹುಟ್ಟುಹಾಕಲಾಗುತ್ತದೆ. ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಅಬ್ ಕಿ ಬಾರ್, ಕಿಸೆ ಕಿಸೆಗೆ ಪ್ರಚಾರ್!
ಭಾರತದಲ್ಲೀಗ ಅಸಮಾಜು 90 ಕೋಟಿ ಅರ್ಹ ಮತ ದಾರರಿದ್ದಾರೆ. 50 ಕೋಟಿ ಜನರಿಗೆ ಅಂತರ್ಜಾಲ ಸಂಪರ್ಕ ವಿದೆ. ದೇಶದಲ್ಲಿ 30 ಕೋಟಿ ಫೇಸ್‌ಬುಕ್ ಬಳಕೆದಾರರಿದ್ದರೆ, 20 ಕೋಟಿ ಜನರು ವಾಟ್ಸ್‌ಆ್ಯಪ್ ಬಳಸುತ್ತಾರೆ. ಇನ್ನು ಟ್ವಿಟರ್ ಬಳಕೆದಾರರ ಸಂಖ್ಯೆಯೂ ಕೋಟಿಗಳ ಲೆಕ್ಕದಲ್ಲೇ ಇದೆ.
ಹೀಗಾಗಿ ಮನೆ ಮನೆಗೆ ಪ್ರಚಾರ ಎಂಬ ರಾಜಕೀಯ ಘೋಷಣೆಯೀಗ ಕಿಸೆಕಿಸೆಗೆ ಪ್ರಚಾರ ಎಂದು ಬದಲಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮಗಳ ಶಕ್ತಿಯನ್ನು ಅತ್ಯಂತ ಯಶಸ್ವಿಯಾಗಿ ಬಳಸಿಕೊಂಡಿತು ಮೋದಿ ನೇತೃತ್ವದ ಬಿಜೆಪಿ. ಈ ಕಾರಣ ಕ್ಕಾಗಿಯೇ ಆ ಚುನಾವಣೆಯನ್ನು “ಸೋಷಿಯಲ್ ಮೀಡಿಯಾ ಎಲೆಕ್ಷನ್’ ಎಂದೂ ಕರೆಯಲಾಗುತ್ತದೆ. ಈ ಹೊಸ ಶಕ್ತಿಯನ್ನು ಅರ್ಥಮಾಡಿಕೊಳ್ಳಲು ಕಾಂಗ್ರೆಸ್‌ಗೆ ತುಸು ಸಮಯ ಹಿಡಿದಿತ್ತಾದರೂ, 2017ರ ಗುಜರಾತ್ ಚುನಾವ ಣೆಯ ನಂತರದಿಂದ ಅದೂ ಕೂಡ ಸೋಷಿಯಲ್ ಮೀಡಿಯಾ ಸೆಲ್‌ಗಳನ್ನು ಬಲಿಷ್ಠಗೊಳಿಸಿಕೊಂಡಿದೆ. ಅದೀಗ ಟ್ವಿಟರ್, ಫೇಸ್‌ಬುಕ್ ಮತ್ತು ವಾಟ್ಸ್ ಆ್ಯಪ್‌ಗ್ಳಲ್ಲಿ ಬಿಜೆಪಿ ಯಷ್ಟೇ ಸಕ್ರಿಯ ವಾಗಿದೆ. ಆಸ್ಟೇಲಿಯಾದ ಡಿಯಾಕಿನ್ ವಿಶ್ವವಿದ್ಯಾಲ ಯದ ಡಾಟಾ ಅನಲೆಕ್ಸ್ ಪ್ರೊಫೆಸರ್, ಪ್ರಖ್ಯಾತ ರಾಜಕೀಯ ವಿಶ್ಲೇಷಕಿ ಉಷಾ ರೋಡ್ರಿಗ್ವೆಸ್ “2019ರ ಲೋಕಸಭಾ ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮಗಳು ಮತ್ತು ಡಾಟಾ ಅನಲೈಟಿಕ್ಸ್ ನಿರ್ಣಾಯಕ ಪಾತ್ರ ವಹಿಸಲಿ ರುವುದರಲ್ಲಿ ಸಂಶಯವೇ ಇಲ್ಲ.’ ಎನುವುದು ಇದೇ ಕಾರಣಕ್ಕಾಗಿಯೇ.
4ಜಿ-ಸ್ಮಾರ್ಟ್‌ಫೋನ್ ಕ್ರಾಂತಿ
ಕಳೆದ ಎರಡು ವರ್ಷಗಳಲ್ಲಿ 4 ಜಿ ನೆಟÌರ್ಕ್‌ನ ಕ್ರಾಂತಿಯೂ ಆಗಿರುವುದರಿಂದ ಮತದಾರರನ್ನು ವಿಡಿಯೋ, ಆಡಿಯೋ, ಸಂದೇಶಗಳ ರೂಪದಲ್ಲಿ ಸುಲಭವಾಗಿ ತಲುಪುವ ಮಾರ್ಗ ರಾಜಕೀಯ ಪಕ್ಷಗಳಿಗೆ ದಕ್ಕಿದೆ. ಭಾರತದಲ್ಲೀಗ 45 ಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರಿದ್ದು, 2014ರಲ್ಲಿ ಇವರ ಸಂಖ್ಯೆ 15.5 ಕೋಟಿಯಷ್ಟಿತ್ತು. ನರೇಂದ್ರ ಮೋದಿಯವರ ಟ್ವಿಟರ್ ಹಿಂಬಾಲಕರ ಸಂಖ್ಯೆ 4.58 ಕೋಟಿಯಷ್ಟಿದ್ದರೆ, ರಾಹುಲ್‌ರ ಫಾಲೋವರ್ಸ್‌ಗಳ ಸಂಖ್ಯೆ 86 ಲಕ್ಷದಷ್ಟಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಿರಂತರ ಟ್ವೀಟ್ ವಾರ್ ನಡೆಯುತ್ತಲೇ ಇದ್ದು. ಎರಡೂ ಒಂದಲ್ಲ ಒಂದು ವಿಷಯದಲ್ಲಿ ಟ್ರೆಂಡಿಂಗ್‌ನಲ್ಲಿ ಇರುತ್ತವೆ. ಇತ್ತೀಚೆಗೆ ಕಾಂಗ್ರೆಸ್ # #Mera PMChorHai ಎನ್ನುವ ಹ್ಯಾಶ್‌ಟ್ಯಾಗ್ ರಾಷ್ಟ್ರಮಟ್ಟದಲ್ಲಿ ಟ್ರೆಂಡ್ ಮಾಡಲು ಸಫಲವಾಗಿತ್ತು. ಬೃಹತ್ ಬೆಂಬಲಿಗ ಪಡೆಯನ್ನು ಹೊಂದಿರುವ ಬಿಜೆಪಿ ಕೂಡಲೇ #Rahul KaPura-KhandanChor ಎಂದು ಟ್ರೆಂಡಿಂಗ್ ಮಾಡಿ ತನ್ನ ಸಾಮರ್ಥ್ಯವನ್ನು ತೋರಿತ್ತು.
ಫೇಸ್‌ಬುಕ್‌ನದ್ದೇ ಮೇಲುಗೈ
ಫೇಸ್‌ಬುಕ್‌ನಲ್ಲಿ ಈಗಲೂ ಮೋದಿ ಮತ್ತು ಬಿಜೆಪಿಯದ್ದೇ ಪ್ರಾಬಲ್ಯವಿದೆ. ಭಾರತದಲ್ಲಿ ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಟ್ವಿಟರ್ ಬಳಕೆದಾರರಿಗಿಂತಲೂ 7 ಪಟ್ಟು ಹೆಚ್ಚಿದ್ದು, ಹೀಗಾಗಿ ಅದರ ನಿಲುಕು ಬಹಳ ದೊಡ್ಡದಿದೆ. ಈ ಕಾರಣದಿಂದಾಗಿಯೇ, ಕೆಲ ತಿಂಗಳಿಂದ ಬಿಜೆಪಿ-ಕಾಂಗ್ರೆಸ್ ಸೇರಿದಂತೆ ಬಹುತೇಕ ಪಕ್ಷಗಳು ಟ್ವಿಟರ್‌ನಷ್ಟೇ ಮಹತ್ವವನ್ನು ಫೇಸ್‌ಬುಕ್‌ಗೆ ಕೊಡಲಾರಂಭಿಸಿದ್ದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಅಮೃತಸರದಿಂದ ಸ್ಪರ್ಧೆ?
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಈ ಬಾರಿ ಪಂಜಾಬ್‌ನ ಅಮೃತಸರ ದಿಂದ ಲೋಕಸಭಾ ಚುನಾವಣೆಯನ್ನು ಎದುರಿಸಲಿ ದ್ದಾ ರೆಯೇ? ಇಂಥ ಪ್ರಶ್ನೆ- ಒತ್ತಾಯ ಈಗ ಕಾಂಗ್ರೆಸ್ ವಲಯ ದಲ್ಲಿ ಹರಿ ದಾಡಲಾ ರಂಭಿಸಿದೆ. ಇದೇ ಜೂನ್ ಅಂತ್ಯಕ್ಕೆ ಮನ ಮೋಹನ್ ಸಿಂಗ್ ರಾಜ್ಯ ಸಭಾ ಸದಸ್ಯತ್ವದ ಅವಧಿಯೂ ಕೊನೆಗೊಳ್ಳಲಿದೆ. ಮನಮೋಹನ್ ಸಿಂಗ್ ಮಾತ್ರ ಈ ವಿಚಾರದಲ್ಲಿ ಇನ್ನೂ ಮಾತನಾಡಿಲ್ಲ.
ದೆಹಲಿಗೆ ಪೂರ್ಣ ರಾಜ್ಯದ ಮಾನ್ಯತೆ ನೀಡಬೇಕೆಂದು ಆಗ್ರಹಿಸಿ ಮಾರ್ಚ್ 1ರಿಂದ ನಾನು ಉಪವಾಸ ಕೂಡಲಿದ್ದೇನೆ. ನಮ್ಮ ಬೇಡಿಕೆ ಈಡೇರುವವರೆಗೂ ಆಹಾರ ಸೇವಿಸುವುದಿಲ್ಲ. ಇದಕ್ಕಾಗಿ ನಾನು ಸಾಯಲೂ ಸಿದ್ಧನಿದ್ದೇನೆ.
– ಅರವಿಂದ್ ಕೇಜ್ರಿವಾಲ್, ದೆಹಲಿ ಸಿಎಂ
2 ಕೋಟಿಗೂ ಹೆಚ್ಚು ಜನರಿರುವ ದೆಹಲಿಯಲ್ಲಿ ಸಾವಿರಾರು ಸಮಸ್ಯೆಗಳಿವೆ. ಆದರೆ ಇದಕ್ಕೆ ಪರಿಹಾರ ಹುಡಕುವ ಬದಲು ಅರವಿಂದ್ ಕೇಜ್ರಿವಾಲ್‌ರಿಂದ ಮತ್ತೂಂದು ವಿಶೇಷ ಧರಣಿ! ಶೇಮ್!
– ಗೌತಮ್ ಗಂಭೀರ್, ಮಾಜಿ ಕ್ರಿಕೆಟಿಗ
55 ವರ್ಷದವರೆಗೆ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷ ಉತ್ತರ ಪ್ರದೇಶದ ಅಮೇಥಿ ಹಾಗೂ ರೈತರ ಕಲ್ಯಾಣವನ್ನೇ ಮರೆತಿದ್ದಾರೆ.
– ಸ್ಮತಿ ಇರಾನಿ, ಕೇಂದ್ರ ಸಚಿವೆ
ದಿನಕ್ಕೆ 17 ರೂ. ನೀಡುವ ಕಿಸಾನ್ ಸಮ್ಮಾನ್ ಯೋಜನೆ ರೈತರಿಗೆ ಅವಮಾನಕರ. ಚುನಾವಣೆಗೂ ಮುನ್ನ ಮೋದಿ ಸರ್ಕಾರದ ತಂತ್ರ ಇದು.
– ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ
ಲೋಕಸಭೆ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಮುಖ ಪಾತ್ರ ವಹಿಸುತ್ತವೆ. ಬಿಜೆಪಿ, ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೇರುವುದಿಲ್ಲ.
– ಕೆ. ಕವಿತಾ, ಟಿಆರ್‌ಎಸ್ ಸಂಸದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.