Live Updates-ಲೋಕ ಸಮರ-19: ಪ.ಬಂಗಾಲದಲ್ಲಿ ಟೆನ್ಷನ್; ಕಾಶ್ಮೀರದಲ್ಲಿ ಗ್ರೆನೇಡ್ ಅಟ್ಯಾಕ್
Team Udayavani, May 6, 2019, 9:13 AM IST
ನವದೆಹಲಿ: ದೇಶದಲ್ಲಿ ಒಟ್ಟು ಏಳು ರಾಜ್ಯಗಳ 51 ಲೋಕಸಭಾ ಕ್ಷೇತ್ರಗಳಿಗೆ ಐದನೇ ಹಂತದ ಮತದಾನ ಇಂದು ಮುಂಜಾನೆ ಏಳು ಗಂಟೆಯಿಂದ ಪ್ರಾರಂಭಗೊಂಡಿದೆ. ಈ ಹಂತದ ಮತದಾನದ ವಿಶೇಷವೆಂದರೆ ಎಲ್ಲಾ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರು ಸ್ಪರ್ಧಿಸುತ್ತಿರುವ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ಪಕ್ಷಾಧ್ಯಕ್ಷ ರಾಹುಲ್ ಗಾಂಧಿ, ಸ್ಮತಿ ಇರಾನಿ, ರಾಜ್ಯವರ್ಧನ್ ರಾಥೋಡ್, ಯು.ಪಿ.ಎ. ಅಧ್ಯಕ್ಷೆ ಸೋನಿಯಾ ಗಾಂಧಿ, ಜಯಂತ್ ಸಿನ್ಹಾ ಮೊದಲಾದವರ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಒಟ್ಟು 7 ರಾಜ್ಯಗಳ 51 ಲೋಕ ಸಭಾ ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು. ಉತ್ತರ ಪ್ರದೇಶದ 14, ರಾಜಸ್ಥಾನದ 12, ಪಶ್ಚಿಮಬಂಗಾಲ ಮತ್ತು ಮಧ್ಯಪ್ರದೇಶದ ತಲಾ 7 ಸ್ಥಾನಗಳು, ಬಿಹಾರದ 5, ಜಾರ್ಖಂಡ್ ನ 4 ಹಾಗೂ ಜಮ್ಮು ಮತ್ತು ಕಾಶ್ಮೀರದ 2 ಸ್ಥಾನಗಳು ಇದರಲ್ಲಿ ಸೇರಿವೆ.
ಒಟ್ಟು ಏಳು ರಾಜ್ಯಗಳ 51 ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಮತದಾನದಲ್ಲಿ ಮಧ್ಯಾಹ್ನ 3 ಗಂಟೆವರೆಗಿನ ವರದಿಗಳ ಪ್ರಕಾರ ಒಟ್ಟಾರೆ 50.72% ಮತದಾನ ದಾಖಲಾಗಿದೆ.
ಬಿಹಾರದಲ್ಲಿ 44.08%, ಜಮ್ಮು – ಕಾಶ್ಮೀರದಲ್ಲಿ 15.34%, ಮಧ್ಯಪ್ರದೇಶದಲ್ಲಿ 54.22%, ರಾಜಸ್ಥಾನದಲ್ಲಿ 50.40%, ಉತ್ತರಪ್ರದೇಶದಲ್ಲಿ 44.89%, ಪಶ್ಚಿಮ ಬಂಗಾಳದಲ್ಲಿ 62.88% ಮತ್ತು ಜಾರ್ಖಂಡ್ ನಲ್ಲಿ 58.63%ನಷ್ಟು ಮತದಾನವಾಗಿರುವ ಕುರಿತಾಗಿ ಮಾಹಿತಿ ಲಭ್ಯವಾಗಿದೆ.
ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಎರಡನೇ ಬಾರಿ ಮತಗಟ್ಟೆ ಮೇಲೆ ಗ್ರೆನೇಡ್ ದಾಳಿಯಾಗಿದೆ. ದಾಳಿಯಿಂದಾಗಿ ಮತದಾನ ಕೇಂದ್ರದ ಹೊರಭಾಗಕ್ಕೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಇನ್ನು ಪಶ್ಚಿಮ ಬಂಗಾಳದ ವಿವಿಧ ಕಡೆಗಳಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರ ನಡುವೆ ಘರ್ಷಣೆಗಳು ಸಂಭವಿಸಿರುವ ಕುರಿತಾಗಿ ವರದಿಗಳು ಲಭ್ಯವಾಗುತ್ತಿವೆ. ಇಲ್ಲಿನ ಬಾರಕ್ ಪುರ, ಹೌರಾ ಮತ್ತು ಹೂಗ್ಲಿ ಲೋಕಸಭಾ ಕ್ಷೇತ್ರಗಳ ಮತದಾನ ಕೆಂದ್ರಗಳಲ್ಲಿ ಹಿಂಸಾಚಾರ ನಡೆದಿರುವ ಕುರಿತಾಗಿ ಮಾಹಿತಿ ಲಭ್ಯವಾಗಿದೆ.
ಬಾರಕ್ ಪುರದಲ್ಲಿ ಬಿಜೆಪಿ ಅಭ್ಯರ್ಥಿಯ ಮೇಲೆ ಹಲ್ಲೆ ನಡೆದಿರುವ ಘಟನೆಯನ್ನು ಖಂಡಿಸಿರುವ ಪಕ್ಷವು ಇಲ್ಲಿ ಮರುಮತದಾನ ನಡೆಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ. ಇತ್ತ ಟಿಎಂಸಿಯ ಕಲ್ಯಾಣ್ ಬ್ಯಾನರ್ಜಿ ಅವರು ವಿಶೇಷ ಪರಿವೀಕ್ಷಕರು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
– ಮಧ್ಯಪ್ರದೇಶದ ಛತ್ತರ್ ಪುರ್ ಎಂಬಲ್ಲಿ ವ್ಯಕ್ತಿಯೊಬ್ಬರು ತಮ್ಮ ತಂದೆಯ ಶ್ರಾದ್ಧ ಕರ್ಮಗಳನ್ನು ಮುಗಿಸಿಕೊಂಡು ನೇರವಾಗಿ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡುತ್ತಿರುವುದು.
Madhya Pradesh: A man in Chhatarpur arrives to vote, after his father’s last rites earlier today. #LokSabhaElections2019 #Phase5 pic.twitter.com/99YoCEJ7Ch
— ANI (@ANI) May 6, 2019
– ಜಾರ್ಖಂಡ್ ರಾಜ್ಯದ ಹಝಾರಿಭಾಗ್ ನಲ್ಲಿರುವ ಮತದಾನ ಕೇಂದ್ರವೊಂದಕ್ಕೆ ತನ್ನ 105 ವರ್ಷ ಪ್ರಾಯದ ತಾಯಿಯನ್ನು ಮಗನೊಬ್ಬ ಮತದಾನ ಮಾಡಲು ಕರೆದುಕೊಂಡು ಬಂದಿದ್ದು ಹೀಗೆ.
Jharkhand: A man arrived with his 105-year-old mother to cast votes at polling booth number 450 in Hazaribagh. #LokSabhaElections2019 pic.twitter.com/PGTF49ztlw
— ANI (@ANI) May 6, 2019
– ಬಿಹಾರದ ಛಾಪ್ರಾದಲ್ಲಿರುವ ಮತದಾನ ಕೇಂದ್ರವೊಂದರಲ್ಲಿ ಇವಿಎಂ ಯಂತ್ರಕ್ಕೆ ಹಾನಿ ಯಂತ್ರಕ್ಕೆ ಹಾನಿ ಮಾಡಿದ ಆರೋಪದಲ್ಲಿ ರಂಜಿತ್ ಪಾಸ್ವಾನ್ ಎಂಬಾತನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
Bihar: One Ranjit Paswan arrested on charges of vandalizing an EVM machine at polling booth number 131 in Chhapra. #LokSabhaElections2019 pic.twitter.com/0mqrXc4mjT
— ANI (@ANI) May 6, 2019
– ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಮತದಾನ ಕೇಂದ್ರವೊಂದರ ಮೇಲೆ ಗ್ರೆನೇಡ್ ದಾಳಿಯಾಗಿದೆ. ಇಲ್ಲಿನ ರೊಹ್ಮೂ ಮತದಾನ ಕೇಂದ್ರದಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಗಳಾಗಿರುವ ಕುರಿತಾಗಿ ವರದಿಯಾಗಿಲ್ಲ. ದಾಳಿಯ ಬಳಿಕ ಈ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದಿವೆ.
– ಸೋಫಿಯಾನ್ ಎಂಬಲ್ಲಿ ಮತದಾನ ಕೇಂದ್ರವಾಗಿದ್ದ ಶಾಲೆಯ ಕಟ್ಟಡಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಜಮ್ಮು ಕಾಶ್ಮೀರದ ಲಢಾಕ್ ಮತ್ತು ಅನಂತನಾಗ್ ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ.
– ಬೆಳಿಗ್ಗೆ 10 ಗಂಟೆಗಳವರೆಗಿನ ವರದಿಗಳ ಪ್ರಕಾರ ಐದನೇ ಹಂತದಲ್ಲಿ ಒಟ್ಟಾರೆಯಾಗಿ 12.64%ನಷ್ಟು ಮತದಾನವಾಗಿದೆ.
– ಬಿಹಾರದಲ್ಲಿ 11.51%, ಜಮ್ಮು – ಕಾಶ್ಮೀರದಲ್ಲಿ 1.36%, ಮಧ್ಯಪ್ರದೇಶದಲ್ಲಿ 13.02%, ರಾಜಸ್ಥಾನದಲ್ಲಿ 14.01%, ಉತ್ತರಪ್ರದೇಶದಲ್ಲಿ 9.86%, ಪಶ್ಚಿಮ ಬಂಗಾಳದಲ್ಲಿ 16.56% ಮತ್ತು ಜಾರ್ಖಂಡ್ ನಲ್ಲಿ 13.46% ಮತದಾನವಾಗಿರುವ ಕುರಿತಾಗಿ ಮಾಹಿತಿ ಲಭ್ಯವಾಗಿದೆ.
– ಪಶ್ಚಿಮ ಬಂಗಾಲದ ಬರ್ರಾಕ್ ಪೋರ್ ನ ಅಮ್ರಾಲಾ ಎಂಬಲ್ಲಿ ಬಿಜೆಪಿ ಅಭ್ಯರ್ಥಿ ಅರ್ಜುನ್ ಸಿಂಗ್ ಅವರ ಮೇಲೆ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ. ಬಾಡಿಗೆ ಗೂಂಡಾಗಳನ್ನು ಬಳಸಿಕೊಂಡು ಟಿಎಂಸಿ ಈ ಕೃತ್ಯ ಎಸಗಿದೆ ಎಂದು ಅರ್ಜುನ್ ಸಿಂಗ್ ಅವರು ಆರೋಪಿಸಿದ್ದಾರೆ.
West Bengal: Arjun Singh, BJP candidate from Barrackpore alleges that he was attacked by TMC workers, says,”I was attacked by TMC goons who have been brought from outside. Those people were scaring away our voters. I am injured.” pic.twitter.com/lWXY3mbbZZ
— ANI (@ANI) May 6, 2019
– ಜಮ್ಮು ಕಾಶ್ಮೀರದ ಅನಂತನಾಗ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪುಲ್ವಾಮದ ಮತಗಟ್ಟೆಯೊಂದರ ಬಳಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಕಾದುನಿಂತಿರುವ ದೃಶ್ಯ.
Jammu and Kashmir: Visuals from a polling booth in Khrew area of Pulwama( Anantnag Lok Sabha seat) #LokSabhaElections2019 pic.twitter.com/R2j2vf1ID3
— ANI (@ANI) May 6, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.