ಜಮ್ಮು-ಕಾಶ್ಮೀರದಲ್ಲಿ ಲೋಕಸಭೆ ಕಹಳೆ
Team Udayavani, Mar 19, 2019, 12:30 AM IST
ಲೋಕಸಭಾ ಚುನಾವಣೆಗಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಬಾರಿ ಪ್ರಚಾರಾಂದೋಲನಗಳು ಜೋರಾಗಿಯೇ ಆರಂಭವಾಗಿವೆ. ಸಾಮಾನ್ಯವಾಗಿ ಲೋಕಸಭೆ ಚುನಾವಣೆಗಳಿಗೆ ಈ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ಇರುತ್ತಿತ್ತಾದರೂ ಈ ಬಾರಿ ಬದಲಾದ ರಾಜಕೀಯ ಸನ್ನಿವೇಶ, ಲೋಕಸಭಾ ಚುನಾವಣೆಗೂ ಮೆರುಗು ನೀಡುತ್ತಿದೆ. ಒಮರ್ ಅಬ್ದುಲ್ಲಾ ನೇತೃತ್ವದಲ್ಲಿ ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ), ಮೆಹಬೂಬಾ ಮುಫ್ತಿಯವರ ನೇತೃತ್ವದಲ್ಲಿ ಪಿಡಿಪಿ ಕಾಶ್ಮೀರ ಕಣಿವೆಯಲ್ಲಿ ಪ್ರಚಾರ ಆರಂಭಿಸಿವೆ. ಇನ್ನು ಮಾಜಿ ಐಎಎಸ್ ಅಧಿಕಾರಿ ಶಾ ಫೈಸಲ್ ಅವರ ಜಮ್ಮು-ಕಾಶ್ಮೀರ ಪೀಪಲ್ಸ್ ಮೂವೆ¾ಂಟ್ (ಜೆಕೆಪಿಎಂ) ಸಕ್ರಿಯ ರಾಜಕೀಯ ಪ್ರವೇಶಿಸಿದ್ದು, ಲೋಕಸಭಾ ಚುನಾವಣೆಯಲ್ಲಿ ಅವರ ಪಕ್ಷ ಸ್ಪರ್ಧಿಸಲಿದೆಯೇ, ಸ್ಪರ್ಧಿಸಿದರೆ ಜನರ ಸ್ಪಂದನೆ ಹೇಗಿರಲಿದೆ ಎನ್ನುವ ಕುತೂಹಲವೂ ಸೃಷ್ಟಿ ಆಗಿದೆ. ಇನ್ನೊಂದೆಡೆ ಬಿಜೆಪಿ ಮತ್ತು ಕಾಂಗ್ರೆಸ್ ಕೂಡ ಕಣಿವೆ ರಾಜ್ಯದಲ್ಲಿ ಯುದ್ಧಕ್ಕೆ ಸಜ್ಜಾಗುತ್ತಿವೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಆರು ಲೋಕಸಭಾ ಕ್ಷೇತ್ರಗಳಿವೆ. ಕಳೆದ ಬಾರಿ ಪಿಡಿಪಿ ಮತ್ತು ಬಿಜೆಪಿ ತಲಾ ಮೂರು ಸ್ಥಾನಗಳನ್ನು ಗೆದ್ದು ಸದ್ದು ಮಾಡಿದ್ದವು. ಬಿಜೆಪಿ ಲದಾಖ್, ಜಮ್ಮು ಮತ್ತು ಉದ್ಧಂಪುರದಲ್ಲಿ ಗೆಲುವು ಪಡೆದಿತ್ತು. ಪಿಡಿಪಿಯು ಕಾಶ್ಮೀರ, ಅನಂತನಾಗ್ ಮತ್ತು ಬಾರಾಮುಲ್ಲಾದಲ್ಲಿ ಗೆದ್ದಿತ್ತು. ಈ ಬಾರಿಯೂ ತನ್ನ ಸಾಧನೆಯನ್ನು ಮುಂದುವರಿಸುವ ಭರವಸೆಯಲ್ಲಿದೆ ಕಮಲ ದಳ. ಕಾಶ್ಮೀರಕ್ಕಿಂತಲೂ ಹಿಂದೂಗಳು ಬಹುಸಂಖ್ಯೆಯಲ್ಲಿರುವ ಜಮ್ಮು, ಉದ್ಧಂಪುರ ಮತ್ತು ಲಡಾಖ್‌ನಲ್ಲಿ ಮತ್ತೂಮ್ಮೆ ತನ್ನ ಅದೃಷ್ಟ ಪರೀಕ್ಷಿಸಲು ಅದು ಪ್ರಯತ್ನಿ ಸಲಿದೆ.
ವಿಧಾನಸಭಾ ಬಿಕ್ಕಟ್ಟು ಲೋಕಸಭೆಗೆ ಮುನ್ನುಡಿ?
ಕಳೆದ ಡಿಸೆಂಬರ್ ತಿಂಗಳಿಂದಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿಗಳ ಆಡಳಿತವಿದೆ, ಅದಕ್ಕೂ ಮುನ್ನ ಆರು ತಿಂಗಳು ರಾಜ್ಯಪಾಲರ ಆಡಳಿತವಿತ್ತು. 2018ರ ಜೂನ್ ತಿಂಗಳಲ್ಲಿ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾದಿಂದ ಕಮಲ ದಳ ಹಿಂದೆ ಸರಿದದ್ದೇ ಸರ್ಕಾರ ಕುಸಿದು ಬಿದ್ದಿತ್ತು. ನಂತರ ಅಲ್ಲಿ ರಾಜ್ಯಪಾಲರ ಆಳ್ವಿಕೆಯನ್ನು ಹೇರಲಾಗಿತ್ತು. ರಾಜ್ಯದಲ್ಲಿ ಸೃಷ್ಟಿಯಾದ ಅಧಿಕಾರದ ನಿರ್ವಾತ ವನ್ನು ತುಂಬಲು ನವೆಂಬರ್ ತಿಂಗಳಲ್ಲಿ ಪಿಡಿಪಿ, ಕಾಂಗ್ರೆಸ್ ಮತ್ತು ಅದರ ಬದ್ಧ ವೈರಿ ನ್ಯಾಷನಲ್ ಕಾನ್ಫರೆನ್ಸ್ ಸೇರಿ ಸರ್ಕಾರ ರಚಿಸಲು ಪ್ರಯತ್ನಿಸಿದವು. ಆದರೆ 87 ಸ್ಥಾನಗಳ ವಿಧಾನಭೆಯನ್ನು ರಾಜ್ಯಪಾಲರು ವಿಸರ್ಜಿಸಿಬಿಟ್ಟರು. ಈ ವಿದ್ಯಮಾನಗಳ ನಂತರದಿಂದ ಮೆಹಬೂಬಾ ಮುಫ್ತಿ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ಬಿಜೆಪಿಯ ವಿರುದ್ಧ ಸಮರ ಸಾರಿದ್ದಾರೆ ಎನ್ನುವುದಕ್ಕಿಂತಲೂ ಕಣಿವೆ ರಾಜ್ಯದಲ್ಲಿ ಕುಸಿದ ತಮ್ಮ ಇಮೇಜ್ ಅನ್ನು ಸರಿಪಡಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ ಎನ್ನುವುದೇ ಸೂಕ್ತವಾದೀತು.
ಏಕೆಂದರೆ ಯಾವಾಗ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದರೋ, ಆಗಿನಿಂದಲೂ ಅವರ ವಿರುದ್ಧ ಕಾಶ್ಮೀರದ ಕಟ್ಟರ್‌ಪಂಥಿ ಮುಸಲ್ಮಾನರು ಮುನಿಸಿಕೊಂಡಿದ್ದರು. ಈ ಕಾರಣಕ್ಕಾಗಿಯೇ ಅವರು “ನನ್ನದೇ ಜನರು ಕೈಕೊಡದೇ ಹೋಗಿದ್ದರೆ, ನಾನು ಬಿಜೆಪಿಯೊಂದಿಗೆ ಕೈ ಜೋಡಿಸುತ್ತಿರಲಿಲ್ಲ’ ಎಂದು ಪದೇ ಪದೆ ಹೇಳುತ್ತಿರುವುದು. ಸೋಮವಾರವಷ್ಟೇ ಅವರು “ಪಿಡಿಪಿ ಕಾರ್ಯಕರ್ತರೇ ನಿಜವಾದ ಮುಜಾಹಿದ್‌ಗಳು’ ಎಂದಿರುವುದೂ ಕೂಡ ತಮ್ಮ ವಿರುದ್ಧ ಮುನಿಸಿಕೊಂಡ ಕಾಶ್ಮೀರಿಗರನ್ನು ಓಲೈಸುವ ಯತ್ನವಷ್ಟೆ.
ನ್ಯಾಷನಲ್ ಕಾನ್ಫರೆನ್ಸ್ ಸ್ಥಿತಿ
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಣಿವೆ ಪ್ರದೇಶದ ಮೂರು ಕ್ಷೇತ್ರಗಳಲ್ಲೂ ಸೋತಿದ್ದ ಒಮರ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ ಭಾನುವಾರದಿಂದಲೇ ಈ ಕ್ಷೇತ್ರಗಳಲ್ಲಿ ಚುನಾವಣಾ ಅಭಿಯಾನವನ್ನು ಆರಂಭಿಸಿದೆ. ಆಂತಕವಾದ ಪೀಡಿತ ಅನಂತನಾಗ್ ಜಿಲ್ಲೆಯಿಂದ ಒಮರ್ ಅಬ್ದುಲ್ಲಾ ತಮ್ಮ ಚುನಾವಣಾ ಅಭಿಯಾನ ಆರಂಭಿಸಿದ್ದು, ಅವರು ಮುಖ್ಯವಾಗಿ ಟಾರ್ಗೆಟ್ ಮಾಡುತ್ತಿರುವುದು ಮೆಹಬೂಬಾ ಮುಫ್ತಿಯವರನ್ನು.
ಕಣಿವೆಯ ಮೂರು ಸ್ಥಾನಗಳಿಗೆ ನ್ಯಾಷನಲ್ ಕಾನ್ಫರೆನ್ಸ್ ಅಭ್ಯರ್ಥಿಗಳನ್ನು ಘೋಷಿಸಿಲ್ಲವಾದರೂ, ದಕ್ಷಿಣ ಕಾಶ್ಮೀರ ದಿಂದಲೇ ಒಮರ್ ಅಬ್ದುಲ್ಲಾ ಚುನಾವಣಾ ಪ್ರಚಾರ ಆರಂಭಿಸಿ ರುವುದನ್ನು ನೋಡಿದಾಗ ಒಮರ್ ಅಬ್ದುಲ್ಲಾ ತಮ್ಮ ಹಳೆಯ ಶಕ್ತಿಯನ್ನು ಮರಳಿಪಡೆಯಲು ಈ ಬಾರಿ ಏನಕೇನ ಪ್ರಯತ್ನಿಸ ಲಿದ್ದಾರೆ ಎನ್ನುವುದು ಖಚಿತ. ಒಂದು ಸಮಯದಲ್ಲಿ ದಕ್ಷಿಣ ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ನ ಪ್ರಭಾವ ಅಧಿಕ ವಿತ್ತು. ಆದರೆ ಎರಡು ದಶಕದಿಂದೀಚೆಗೆ ಅದು ಪಿಡಿಪಿಯ ಹಿಡಿತಕ್ಕೆ ಸಿಲುಕಿಬಿಟ್ಟಿತು. ನ್ಯಾಷನಲ್ ಕಾನ್ಫರೆನ್ಸ್ ಕೇವಲ ಮೂರು ಸ್ಥಾನಗಳ ಮೇಲಷ್ಟೇ ಹೆಚ್ಚಾಗಿ ಧ್ಯಾನ ಕೇಂದ್ರೀಕೃತಗೊಳಿಸಿದೆ ಎನ್ನುವುದು ಸ್ಪಷ್ಟ.
ಇನ್ನು ಒಮರ್ ಅಬ್ದುಲ್ಲಾರೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಉತ್ಸುಕವಾಗಿದೆಯಾದರೂ, ಅಬ್ದುಲ್ಲಾ ಅದಕ್ಕೆ ಕೆಲವು ಷರತ್ತು ವಿಧಿಸಿದ್ದಾರೆ. ಮುಖ್ಯವಾಗಿ “ಕಾಶ್ಮೀರ ಕಣಿವೆಯಲ್ಲಿನ ಮೂರು ಸೀಟುಗಳನ್ನು ನ್ಯಾಷನಲ್ ಕಾನ್ಫರೆನ್ಸ್‌ಗೆ ಬಿಟ್ಟುಕೊಡಬೇಕು’ ಎಂಬ ಷರತ್ತು. “ಕಾಂಗ್ರೆಸ್ ಜಮ್ಮುವಿನ ಎರಡು ಕ್ಷೇತ್ರಗಳಲ್ಲಿ ಮತ್ತು ಲದಾಖ್‌ನ ಒಂದು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು. ಇದಕ್ಕೆ ಒಪ್ಪಿದರೆ ಮಾತ್ರ ಮುಂದಿನ ಹೆಜ್ಜೆಯ ಬಗ್ಗೆ ಯೋಚಿಸುತ್ತೇವೆ’ ಎಂದೂ ಹೇಳಿದ್ದಾರೆ ಅಬ್ದುಲ್ಲಾ. ಆದರೆ ಹಿಂದೂ ಬಾಹುಳ್ಯವಿರುವ ಜಮ್ಮುವಿನ ಎರಡು ಕ್ಷೇತ್ರಗಳಲ್ಲಿ, ಲದಾಖ್‌ನಲ್ಲಿ ಬಿಜೆಪಿ ಬಲಿಷ್ಠವಾಗಿದ್ದು, ಈ ಮೂರು ಸ್ಥಾನಗಳಲ್ಲಿ ಬಿಜೆಪಿಯನ್ನು ಎದುರಿಸಿ ಗೆಲ್ಲುವಷ್ಟಂತೂ ಕಾಂಗ್ರೆಸ್ ಬಲಿಷ್ಟವಾಗಿಲ್ಲ. ಹೀಗಾಗಿ ಅದು ನೆಪಮಾತ್ರಕ್ಕೆ ಚುನಾವಣೆಗೆ ಸ್ಪರ್ಧಿಸಿದಂತಾಗುತ್ತದೆ. ಒಟ್ಟಲ್ಲಿ ಆ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.ಬಿಜೆಪಿಯಂತೂ ಹಿಂದಿನ ಬಾರಿಯಂತೆ ಈ ಬಾರಿಯೂ 6 ಕ್ಷೇತ್ರಗಳಲ್ಲಿ 3 ಸ್ಥಾನಗಳಲ್ಲಿ ಗೆಲ್ಲುವ ಭರವಸೆಯಲ್ಲಿದೆ. ಅದರ ಭರವಸೆ ಸುಳ್ಳಾಗಲಿಕ್ಕಿಲ್ಲ ಎನ್ನುವ ಸಂಕೇತಗಳೂ ಸಿಗಲಾರಂಭಿಸಿವೆ.
ಪ್ರಮುಖ ನಾಯಕರು
(ನ್ಯಾಷನಲ್ ಕಾನ್ಫರೆನ್ಸ್: ಒಮರ್ ಅಬ್ದುಲ್ಲಾ, ಫಾರೂಕ್ ಅಬ್ದುಲ್ಲಾ, ಪಿಡಿಪಿ: ಮೆಹಬೂಬಾ ಮುಫ್ತಿ, ಬಿಜೆಪಿ: ಜಿತೇಂದ್ರ ಸಿಂಗ್, ಕಾಂಗ್ರೆಸ್: ಗುಲಾಂ ನಬಿ ಆಜಾದ್)
ಲೋಕಸಭಾ ಸ್ಥಾನಗಳು 06
2014ರ ಫಲಿತಾಂಶ
ಬಿಜೆಪಿ 03
ಪಿಡಿಪಿ 03
ಇಂದು ನಿಮ್ಮ ಚೌಕಿದಾರ ಗಟ್ಟಿಯಾಗಿ ನಿಂತು, ದೇಶ ಸೇವೆ ಮಾಡುತ್ತಿದ್ದಾನೆ. ಈ ಕೆಲಸದಲ್ಲಿ ನಾನು ಏಕಾಂಗಿಯಲ್ಲ. ಭ್ರಷ್ಟಾಚಾರ, ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಡುವವರೆಲ್ಲ ಚೌಕಿದಾರರೇ.
ನರೇಂದ್ರ ಮೋದಿ
ನಾನು ಉತ್ತರಪ್ರದೇಶದ ಕೃಷಿಕರನ್ನು ಭೇಟಿಯಾದಾಗ ಅವರಲ್ಲಿ ಒಬ್ಬರು ಹೇಳಿದರು, “ಚೌಕೀದಾರರಿರುವುದು ಶ್ರೀಮಂತರಿಗಷ್ಟೇ, ಕೃಷಿಕರಿಗೆ ಅಲ್ಲ’ ಅಂತ.
ಪ್ರಿಯಾಂಕಾ ಗಾಂಧಿ
3480ಕೋಟಿ 2014ರ ಲೋಕಸಭಾ ಚುನಾವಣೆಗಾಗಿ ಆದ ಒಟ್ಟು ಖರ್ಚು.
ಈ ಬಾರಿ
ಶಾ ಫೈಸಲ್
2010ರಲ್ಲಿ ಯುಪಿಎಸ್‌ಸಿಯ ಟಾಪರ್ ಆಗಿ ಜಮ್ಮು-ಕಾಶ್ಮೀರದಾದ್ಯಂತ ಮನೆಮಾತಾಗಿದ್ದ ಶಾ ಫೈಸಲ್ ಈ ವರ್ಷ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದರು. ಫೈಸಲ್ ಈಗ “ಜಮ್ಮು-ಕಾಶ್ಮೀರ ಪೀಪಲ್ಸ್ ಮೂವೆ¾ಂಟ್(ಜೆಕೆಪಿಎಮ್)’ ಎಂಬ ಪಕ್ಷವನ್ನು ಸ್ಥಾಪಿಸಿದ್ದಾರೆ. ತಮ್ಮ ಪಕ್ಷದಲ್ಲಿ ಬೌದ್ಧರು, ಸಿಕ್ಖರು ಮತ್ತು ಕಾಶ್ಮೀರಿ ಪಂಡಿತರೂ ಇರಲಿದ್ದಾರೆ ಎನ್ನುತ್ತಿದ್ದಾರೆ.
ಇಂದಿನ ಕೋಟ್
ನನ್ನ ಕುಟುಂಬದ ಅನೇಕ ಸದಸ್ಯರು ಕ್ಯಾನ್ಸರ್‌ೆ ಫೈನಲ್ ಸ್ಟೇಜ್‌ನಲ್ಲಿರುವ ವ್ಯಕ್ತಿಯೊಬ್ಬರು ಕೊನೆಯ ದಿನದವರೆಗೂ ಮನಃಪೂರ್ವಕವಾಗಿ ಹೀಗೆ ಕೆಲಸ ಮಾಡಿದ್ದನ್ನು ನಾನು ಎಂದೂ ನೋಡಿರಲಿಲ್ಲ.
ಸೌಮ್ಯದೀಪ್
ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಬೇಕಿದ್ದರೆ ಎಲ್ಲಾ 80 ಸ್ಥಾನಗಳಲ್ಲೂ ಸ್ಪರ್ಧಿಸಲಿ, ಬಿಜೆಪಿಯನ್ನು ಸೋಲಿಸಲು ಎಸ್‌ಪಿ-ಬಿಎಸ್‌ಪಿ ಮೈತ್ರಿಯೇ ಸಾಕು. ನಾವು ಸಶಕ್ತವಾಗಿದ್ದೇವೆ.
ಮಾಯಾವತಿ
ಈ ಲೋಕಸಭಾ ಕ್ಷೇತ್ರ ಇಸ್ರೇಲ್‌ನಷ್ಟು ದೊಡ್ಡದು!
ಜಮ್ಮು ಕಾಶ್ಮೀರದ ಉದ್ಧಂಪುರ ಕ್ಷೇತ್ರದ ವ್ಯಾಪ್ತಿ 20,770 ಚದರ ಕಿಲೋಮೀಟರ್‌ಗಳಷ್ಟಿದೆ. ಅಂದರೆ, ಇಸ್ರೇಲ್ ದೇಶದಷ್ಟು ದೊಡ್ಡದಾದ ಭೂಪ್ರದೇಶವಿದು! ಈ ಸಂಸದೀಯ ಕ್ಷೇತ್ರದಲ್ಲಿ ಆರು ಜಿಲ್ಲೆಗಳು(ಕಠುವಾ, ಕಿಶ¤ವಾಡ, ರಾಮಬನ, ಡೋಡಾ, ರಿಯಾಸಿ ಮತ್ತು ಉಧಂಪುರ), 17 ವಿಧಾನಸಭಾ ಸ್ಥಾನಗಳೂ(ಕಿಶ¤ವಾಡ, ಇಂದ್ರವಾಲ್, ಡೋಡಾ, ಭದ್ರವಾಬ್, ರಾಮಬನ, ಬನಿಹಾಲ್, ಗುಲಾಬ್‌ಗಢ, ರಿಯಾಸಿ, ಗುಲ್, ಅರನಾಸ್, ಚಿನೈನಿ, ರಾಮನಗರ, ಬನಿ, ಬಸೋಹಲಿ, ಕಠುವಾ, ಬಿಲಾವರ ಮತ್ತು ಹೀರಾನಗರ) ಬರುತ್ತವೆ.
1967ರಿಂದ 2014ರ ತನಕ ಈ ಸಂಸದೀಯ ಕ್ಷೇತ್ರದಲ್ಲಿ 12 ಚುನಾವಣೆಗಳು ನಡೆದಿವೆ. ಇದರಲ್ಲಿ 6 ಬಾರಿ ಕಾಂಗ್ರೆಸ್ ಗೆದ್ದರೆ, ಬಿಜೆಪಿ 4 ಬಾರಿ ಗೆಲುವು ಸಾಧಿಸಿದೆ. ಈ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಬಲಿಷ್ಠವಾಗಿದೆ. ಈ ಕ್ಷೇತ್ರದ ಜನರು ಜನಪ್ರತಿನಿಧಿಗಳನ್ನು ಬೇಗನೇ ತಿರಸ್ಕರಿಸುವುದಿಲ್ಲ ಎನ್ನುವುದು 1967ರಿಂದ 2014ರ ಫಲಿತಾಂಶಗಳನ್ನು ನೋಡಿದರೆ ಅರಿವಾಗುತ್ತದೆ. 1967ರಲ್ಲಿ ಮೊದಲ ಬಾರಿ ಜಮ್ಮು-ಕಾಶ್ಮೀರದ ಪೂರ್ವ ಮಹಾರಾಜ ಹರಿ ಸಿಂಗ್ ಅವರ ಮಗ ಕರ್ಣ ಸಿಂಗ್ ಕಾಂಗ್ರೆಸ್ ಟಿಕೆಟ್ ಮೇಲೆ ಇಲ್ಲಿ ಗೆದ್ದಿದ್ದರು. ಅವರು 1971 ಮತ್ತು 77ರಲ್ಲೂ ಗೆಲುವು ಸಾಧಿಸಿದ್ದರು. ಬಿಜೆಪಿಯ ಚಮನ್ ಲಾಲ್ ಗುಪ್ತಾ ಅವರೂ ಈ ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆದ್ದಿದ್ದರು. 2014ರಲ್ಲಿ ಇಲ್ಲಿ ಬಿಜೆಪಿಯ ಡಾ. ಜಿತೇಂದ್ರ ಸಿಂಗ್ ವಿಜಯಿಯಾಗಿದ್ದರು. ಈಗಲೂ ಆ ಕ್ಷೇತ್ರದಲ್ಲಿ ಅವರ ಪರವೇ ಒಲವಿದೆ.
ಆದರೂ ಈ ಕ್ಷೇತ್ರದಲ್ಲಿನ ಗೆಲುವಿನ ಮಹತ್ವದ ಬಗ್ಗೆ ತಿಳಿದಿರುವ ಕಾಂಗ್ರೆಸ್ ಏನಕೇನ ಉದ್ಧಂಪುರದಲ್ಲಿ ಗೆಲ್ಲಲೇಬೇಕು ಎಂದು ನಿರ್ಧರಿಸಿದೆ. ಲದಾಖ್ ಮತ್ತು ಜಮ್ಮುವಿಗಿಂತ ಈ ಬಾರಿ ಈ ಬೃಹತ್ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜೋರು ಸ್ಪರ್ಧೆಯಿರಲಿದೆ ಎನ್ನುತ್ತಾರೆ ಚುನಾವಣಾ ಪರಿಣತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್ ತಂದೆ
Delhi: ನಕಲಿ ಕೇಸ್ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.