ಚುನಾವಣೆಗೆ ಮೈಲ್ಯಾಕ್‌ನ ಶಾಯಿ
Team Udayavani, Mar 13, 2019, 1:59 AM IST
ಮೈಸೂರು: ಮತದಾನದ ವೇಳೆ ಮತದಾರರ ಕೈ ಬೆರಳಿಗೆ ಹಚ್ಚುವ ಅಳಿಸಲಾಗದ ಶಾಯಿ ಪೂರೈಸಲು
ಮೈಸೂರಿನಲ್ಲಿರುವ ಕರ್ನಾಟಕ ಸರ್ಕಾರದಅಧೀನ ಉದ್ಯಮ ಮೈ ಸೂರು ಅರಗು ಮತ್ತು ಬಣ್ಣದ ಕಾರ್ಖಾನೆ (ಮೈಲ್ಯಾಕ್) ಟೊಂಕ ಕಟ್ಟಿ ನಿಂತಿದೆ.
ಭಾರತ ಚುನಾವಣಾ ಆಯೋಗ, ಕಳೆದ ನವೆಂಬರ್- ಡಿಸೆಂಬರ್‌ನಲ್ಲೇ ಮೈಲ್ಯಾಕ್‌ಗೆ 26,01,173 ಬಾಟಲ್ ಅಳಿಸಲಾಗದ ಶಾಯಿ ಪೂರೈಸುವಂತೆ ಬೇಡಿಕೆ ಸಲ್ಲಿಸಿದೆ. ಸಂಸ್ಥೆ ಮಾರ್ಚ್ ಅಂತ್ಯದೊಳಗೆ 10 ಮಿ.ಲೀ. ಸಾಮರ್ಥ್ಯದ 26,01.173 ಬಾಟಲ್ ಶಾಯಿ ಪೂರೈಸಲು 2019ರ ಜನವರಿ 7 ರಿಂದಲೇ ಉತ್ಪಾದನೆ ಆರಂಭಿಸಿದ್ದು, ಸಂಸ್ಥೆಯ 25 ಮಂದಿ ಕಾಯಂ ಕಾರ್ಮಿಕರ ಜೊತೆಗೆ ಅಂದಾಜು 100 ಮಂದಿ ಗುತ್ತಿಗೆ ಕಾರ್ಮಿಕರನ್ನು ಅಳಿಸಲಾಗದ ಶಾಯಿ
ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತಿದೆ.
10 ಮಿ.ಲೀ. ಬಾಟಲ್‌ನ ಶಾಯಿಯನ್ನು 750ಕ್ಕೂ ಹೆಚ್ಚು ಜನರ ಕೈ ಬೆರಳಿಗೆ ಹಚ್ಚಬಹು ದಾಗಿದ್ದು, ಆಯೋಗಕ್ಕೆ ಅಳಿಸಲಾಗದ ಶಾಯಿ ಪೂರೈಕೆಯಿಂದ ಮೈಲ್ಯಾಕ್ 33 ಕೋಟಿ ರೂ. ವಹಿವಾಟು ನಡೆಸಲಿದೆ.
1937ರಲ್ಲಿ ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸ್ಥಾಪಿತವಾದ ಮೈಲ್ಯಾಕ್ ಸಂಸ್ಥೆ, ಅಲಂಕಾರಿಕ ಬಣ್ಣಗಳಾದ ಮೈಲ್ಯಾಕ್ ಸಿಂಥೆಟಿಕ್ ಎನಾಮಲ್, ಬೃಂದಾವನ್ ಸಿಂಥೆಟಿಕ್ ಎನಾಮಲ್, ಮೈಸೊಲಿನ್ ಅಕ್ರೈಲಿಕ್ ವಾಷಬಲ್ ಡಿಸ್ಟಂಪರ್ ತಯಾರಿಸುತ್ತದೆ.
ಮತದಾನದಲ್ಲಿ ಬಳಸಲಾಗುವ ಅಳಿಸಲಾಗದ ಶಾಯಿ ಉತ್ಪಾದನೆಯಿಂದ ಜಗತ್ತಿನ ಗಮನ ಸೆಳೆದಿದ್ದು, ಭಾರತ
ಮಾತ್ರವಲ್ಲದೆ, ಜಗತ್ತಿನ ಬೇರೆ ಬೇರೆ ರಾಷ್ಟ್ರಗಳ ಚುನಾವಣೆಗಳಿಗೂ ಶಾಯಿ ಪೂರೈಸಿದ ಹಿರಿಮೆ ಸಂಸ್ಥೆಗಿದೆ.2018ರಲ್ಲಿ
ಮಲೇಷ್ಯಾ ಸಂಸತ್ ಚುನಾವಣೆಗೆ 60 ಮಿ.ಲೀ ಸಾಮರ್ಥ್ಯದ 2.32 ಲಕ್ಷ ಬಾಟಲ್ ಅಳಿಸಲಾಗದ ಶಾಯಿ ಪೂರೈಸುವಂತೆ ಅಲ್ಲಿನ ಚುನಾವಣಾ ಆಯೋಗದಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಮೈಲ್ಯಾಕ್ ಸಕಾಲದಲ್ಲಿ ಅವರ ಬೇಡಿಕೆ ಪೂರೈಸಿ ಭಾರತೀಯ ರೂ. ಅಂದಾಜು 8 ಕೋಟಿ ವಿದೇಶಿ ವಹಿವಾಟು ನಡೆಸಿತ್ತು.
ಚುನಾವಣಾ ಆಯೋಗದ ಬೇಡಿಕೆಯಂತೆ 10 ಎಂ.ಎಲ್. ಸಾಮರ್ಥ್ಯದ 26,01,173 ಬಾಟಲ್ ಅಳಿಸಲಾಗದ ಶಾಯಿ ಪೂರೈಸಲು ಉತ್ಪಾದನೆ ಮಾಡಲಾಗುತ್ತಿದೆ. ಮಾರ್ಕಿಂಗ್ ಪೆನ್‌ಗೆ ಬೇಡಿಕೆ ಬಂದಿಲ್ಲ. 4 ರಾಜ್ಯಗಳ ವಿಧಾನಸಭಾ ಚುನಾವಣೆಗೆ ಪ್ರತ್ಯೇಕವಾಗಿ ಶಾಯಿಗೆ ಬೇಡಿಕೆ ಬಂದಿಲ್ಲ, ಆಯಾಯ ರಾಜ್ಯಗಳ ಲೋಕಸಭಾ ಚುನಾವಣೆಗಳ ಜೊತೆಗೆ ಮತದಾನ ನಡೆಸಲಾಗುವುದರಿಂದ ಅದೇ ಪ್ರಮಾಣದ ಶಾಯಿ ಸಾಕಾಗುತ್ತದೆ.
● ಚಂದ್ರಶೇಖರ್ ದೊಡ್ಡಮನಿ, ವ್ಯವಸ್ಥಾಪಕ ನಿರ್ದೇಶಕರು, ಮೈಲ್ಯಾಕ್
ಗಿರೀಶ್ ಹುಣಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.