ನಗರದೆಲ್ಲೆಡೆ ಮೋದಿ ಮೋದಿ.. ಮತ್ತೂಮ್ಮೆ ಮೋದಿ ಉದ್ಗಾರ


Team Udayavani, Apr 14, 2019, 6:00 AM IST

1304mlr27

ವೇದಿಕೆಯಿಂದ ಜನರತ್ತ ಕೈ ಬೀಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು.

ಮಹಾನಗರ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನಗರಕ್ಕೆ ಆಗಮಿಸಿದ್ದ ಹಿನ್ನೆಲೆಯಲ್ಲಿ ನಗರದಾದ್ಯಂತ ಸಂಚಾರ ವ್ಯವಸ್ಥೆಯಲ್ಲಿ ಸಂಪೂರ್ಣ ಮಾರ್ಪಾಡು ಮಾಡಲಾಗಿತ್ತು.

ಎಲ್ಲಿಯೂ ಎಂದಿನಂತೆ ವಾಹನಗಳ ಓಡಾಟ ಅಥವಾ ಟ್ರಾಫಿಕ್‌ ಕಾಣಿ ಸುತ್ತಿರಲಿಲ್ಲ. ನಗರದಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳ ಲಾ ಗಿತ್ತು. ಮೋದಿ ಅವರ ವಾಹನ ಹಾದು ಹೋಗಿದ್ದ ರಸ್ತೆಯುದ್ದಕ್ಕೂ ಕಟ್ಟೆಚ್ಚರ ವಹಿಸಲಾಗಿತ್ತು.

ಇನ್ನು ನಗರದ ನೆಹರೂ ಮೈದಾನದಲ್ಲಿ ಬಿಜೆಪಿ ಪ್ರಚಾರ ಸಭೆಗೆ ಆಗಮಿಸುತ್ತಿದ್ದ ಕಾರ್ಯಕರ್ತರು, ಸಾರ್ವಜನಿಕರಲ್ಲಿ ಮೋದಿ ಹವಾ, ಅಭಿಮಾನ ಜೋರಾಗಿತ್ತು. ಮುಖ್ಯ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ ತೆರಳುವಾಗ ಕಾರ್ಯಕರ್ತರು “ಮೋದಿ.. ಮೋದಿ.. ಮತ್ತೂಮ್ಮೆ ಮೋದಿ..’ ಎಂಬ ಉದ್ಗಾರದೊಂದಿಗೇ ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪ್ರಧಾನಿ ಮೋದಿ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೆಹರೂ ಮೈದಾನಕ್ಕೆ ಆಗಮಿಸುವ ರಸ್ತೆಯುದ್ದಕ್ಕೂ ಸಾವಿರಾರು ಮಂದಿ ರಸ್ತೆಯ ಎರಡೂ ಬದಿಯಲ್ಲಿ ನಿಂತು ಅವರು ತೆರಳುವ ವಾಹನದತ್ತ ಕೈಬೀಸಿ ಅಭಿನಂದಿಸುತ್ತಿದ್ದರು. ವಾಪಾಸ್‌ ವಿಮಾನ ನಿಲ್ದಾಣಕ್ಕೆ ತೆರಳುವ ಸಂದರ್ಭದಲ್ಲಿಯೂ ಅಭಿಮಾನಿಗಳು, ಕಾರ್ಯಕರ್ತರಿಂದ ಮೋದಿಗೆ ರಸ್ತೆಯುದ್ದಕ್ಕೂ ಅದೇರೀತಿಯ ಅಭೂತಪೂರ್ವ ಗೌರವ ದೊರೆಯಿತು.

ಬಿಗಿ ಭದ್ರತೆ
ಬೆಳಗ್ಗಿನಿಂದಲೇ ನಗರದ ಪ್ರಮುಖ ಸ್ಥಳಗಳಲ್ಲಿ ಖಾಕಿ ಪಡೆಯನ್ನು ನಿಯೋಜಿ ಸಲಾಗಿತ್ತು. ನಗರದಲ್ಲಿ ಓಡಾಡುತ್ತಿದ್ದ ವಾಹನಗಳು, ಜನ ಸಂಚಾರದ ಮೇಲೆ ತೀವ್ರ ನಿಗಾ ವಹಿಸಿದ್ದರು. ಏರ್‌ಪೋರ್ಟ್‌ ರಸ್ತೆಯುದ್ದಕ್ಕೂ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಈ ರಸ್ತೆಯ ಇಕ್ಕೆಲಗಳಲ್ಲೂ ಪ್ಲಾಸ್ಟಿಕ್‌ ಟೇಪು ಹಾಕಿ ಬೆಳಗ್ಗೆ 8 ಗಂಟೆಯಿಂದ ಅವರು ನಿರ್ಗಮಿ ಸುವವರೆಗೆ ವಾಹನ ಪಾರ್ಕಿಂಗ್‌ ನಿರ್ಬಂಧಿ ಸಲಾಗಿತ್ತು. ಸಮಾವೇಶ ನಡೆಯುವ ನೈಹರೂ ಮೈದಾನದ ಸುತ್ತ-ಮುತ್ತಲಿನ ರಸ್ತೆಗಳಲ್ಲಿಯೂ ವಾಹನ ಸಂಚಾರವನ್ನು ಮಧ್ಯಾಹ್ನದಿಂದ ಮೋದಿ ಅವರು ಕಾರ್ಯಕ್ರಮಕ್ಕೆ ಬಂದು ಹೋಗುವ ತನಕ ನಿಷೇಧಿಸಲಾಗಿತ್ತು. ಶನಿವಾರ ವೀಕೆಂಡ್‌ ಆಗಿದ್ದರೂ ನಗರದ ಮಾಲ್‌ಗ‌ಳು, ಸಿನೆಮಾ ಮಂದಿರ, ಶಾಪಿಂಗ್‌ ಅಂಗಡಿಗಳಲ್ಲಿ ಎಂದಿನಂತೆ ಜನದಟ್ಟನೆ ಕಂಡುಬರಲಿಲ್ಲ. ಇನ್ನೊಂದೆಡೆ, ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಾಗಿದ್ದು, ಶಾಪಿಂಗ್‌ ಹೋಗುವವರ ಸಂಖ್ಯೆ ಕೂಡ ಕಡಿಮೆಯಿತ್ತು.

ಭದ್ರತಾ ದೃಷ್ಟಿಯಿಂದ ಮತ್ತು ಸಂಚಾರ ದಟ್ಟನೆೆಯನ್ನು ಗಮನಿಸಿಕೊಂಡು ನಗರ ದೊಳಗೆ ಪ್ರವೇಶವಾಗುವ ವಾಹನ ಗಳ ಸಂಚಾರವನ್ನು ತಾತ್ಕಾಲಿಕವಾಗಿ ಮಾರ್ಪಾಡು ಮಾಡಲಾಗಿತ್ತು. ಸಿಟಿ ಬಸ್‌ಗಳು, ಸರ್ವಿಸ್‌ ಬಸ್‌ಗಳು, ಅಂತರ್‌ ಜಿಲ್ಲಾ ಬಸ್‌ಗಳು ಮಧ್ಯಾಹ್ನ ಒಂದು ಗಂಟೆಯಿಂದ ಸಂಜೆ 7ರ ವರೆಗೆ ಡ್ರಾಪಿಂಗ್‌ ಪಾಯಿಂಟ್‌ಗಳಾದ ಜ್ಯೋತಿ, ಮಂಗಳಾದೇವಿ, ನವಭಾರತ ಸರ್ಕಲ್‌ನಲ್ಲಿ ಪ್ರಯಾಣಿಕರನ್ನು ಇಳಿಸಿ ವಾಪಾಸ್‌ ಹೋಗುವ ವ್ಯವಸ್ಥೆ ಕಲ್ಪಿಸಲಾ ಗಿತ್ತು. ಕೆಎಸ್ಸಾರ್ಟಿಸಿ ಬಸ್‌ಗಳು ಪಂಪ್‌ವೆಲ್‌- ನಂತೂರು- ಕೆಪಿಟಿ- ಕುಂಟಿಕಾನ ಮೂಲಕ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣಕ್ಕೆ ಹಾಗೂ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಿಂದ ಹೊರಡುವ ಬಸ್‌ಗಳು ಅದೇ ಮಾರ್ಗದಲ್ಲಿ ವಾಪಾಸ್‌ ಹೋಗಿತ್ತು.

ಮುನ್ನೆಚ್ಚರಿಕೆ ಕ್ರಮವಾಗಿ ಮೈದಾನ
ದೊಳಗೆ ಆ್ಯಂಬುಲೆನ್ಸ್‌ ವ್ಯವಸ್ಥೆಗೊಳಿ ಸಲಾಗಿತ್ತು. ನಗರದಲ್ಲಿ ಸಾರ್ವಜನಿಕರಿಗೆ ಸಂಚಾರಿ ವ್ಯವಸ್ಥೆಯಿಂದ ತೊಂದರೆ ಆಗ ಬಾರದು ಎಂಬ ಉದ್ದೇಶದಿಂದ ಪ್ರಮುಖ ಜಂಕ್ಷನ್‌ಗಳಲ್ಲಿ ಬಿಜೆಪಿ ಕಾರ್ಯ ಕರ್ತರೇ ನಿಂತು ಸುಗಮ ಸಂಚಾರಕ್ಕೆ ನೆರವಾಗುತ್ತಿದ್ದ ದೃಶ್ಯ ಕಂಡುಬಂತು.

ಸಿಟಿ ಬಸ್‌ ಸಂಚಾರ ವ್ಯತ್ಯಯ
ನೆಹರೂ ಮೈದಾನದಲ್ಲಿ ಪ್ರಚಾರ ಸಭೆಗೆ ಕಾರ್ಯಕರ್ತರನ್ನು ಕರೆ ತರಲು ಹತ್ತಾರು ಸಿಟಿ ಬಸ್‌ಗಳು ತೆರಳಿದ್ದರಿಂದ ನಗರದ ಅನೇಕ ಕಡೆಗಳಿಗೆ ತೆರಳುವ ಸಿಟಿ ಬಸ್‌ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದಾಗಿ ಪ್ರಯಾ ಣಿಕರು ಪರದಾಡು ವಂತಾ ಗಿತ್ತು. ನಗರದ ಸಂಚಾರ ವ್ಯವಸ್ಥೆ ಯಲ್ಲಿ ಮಾರ್ಪಾಡು ಮಾಡಿದ ವಿಚಾರ ತಿಳಿಯದ ಕೆಲವು ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಲು ಕಷ್ಟಪಟ್ಟರು. ಇನ್ನು, ಜ್ಯೋತಿ, ಹಂಪನಕಟ್ಟೆ, ಪಿವಿಎಸ್‌ ವೃತ್ತ, ಲಾಲ್‌ಬಾಗ್‌, ಸಿಟಿಸೆಂಟರ್‌ ಬಸ್‌ ನಿಲ್ದಾಣ ಸಹಿತ ಬಹುತೇಕ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರು ಕಾಯು ತ್ತಿದ್ದ ದೃಶ್ಯ ಕಂಡುಬಂತು.

ವಾಹನ ಸವಾರರಿಗೆ ಟೋಯಿಂಗ್‌ ಶಾಕ್‌
ಪ್ರಧಾನಿ ಕಾರ್ಯಕ್ರಮ ವೀಕ್ಷಿಸಲು ಆಗಮಿಸಿದ ಕೆಲವರು ಕಾರು, ದ್ವಿಚಕ್ರ ವಾಹನಗಳನ್ನು ನಿಯಮ ಉಲ್ಲಂಘಿಸಿ ಪಾರ್ಕ್‌ ಮಾಡಿದ ಹಿನ್ನೆಲೆಯಲ್ಲಿ ಅವು ಗಳನ್ನು ಟೋಯಿಂಗ್‌ ವಾಹನದ ಮೂಲಕ ತೆಗೆದುಕೊಂಡ ಹೋದ ದೃಶ್ಯ ಕಂಡು ಬಂತು. ಕಾರ್ಯಕ್ರಮ ಬಳಿಕ ಸವಾರರು ವಾಹನಕ್ಕಾಗಿ ಹುಡುಕುತ್ತಿದ್ದರು.

ಪುರಭವನಕ್ಕೆ ನೋ ಎಂಟ್ರಿ
ಬಿಜೆಪಿ ಚುನಾವಣ ಪ್ರಚಾರ ಸಭೆ ನಡೆಯುವ ಮೈದಾನವು ಪುರಭವನದ ಹಿಂಬದಿಯಲ್ಲಿಯೇ ಇರುವುದರಿಂದ ಪುರಭವನದ ಸುತ್ತಮುತ್ತವೂ ವ್ಯಾಪಕ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಪುರಭವನ ದೊಳಗೆ ಅಧಿಕಾರಿಗಳು, ಪ್ರಮು ಖರ ವಾಹನಗಳಿಗೆ ಪ್ರವೇಶ ನೀಡ ಲಾಗಿತ್ತು.

ಕ್ಯಾಂಡಿ, ಎಳನೀರಿಗೆ ಬೇಡಿಕೆ
ನಗರದಲ್ಲಿ ಬಿಸಿಲಿನ ಝಳ ಹೆಚ್ಚಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಂದಿಗೆ ಮೈದಾನದೊಳಗೆ ಮಜ್ಜಿಗೆ ವ್ಯವಸ್ಥೆ ಮಾಡಿದ್ದರೂ ಹೊರ ಭಾಗದಲ್ಲಿ ಐಸ್‌ಕ್ಯಾಂಡಿ, ಎಳನೀರಿಗೆ ಬೇಡಿಕೆ ಇತ್ತು. ಅಲ್ಲದೆ, ಕಲ್ಲಂಗಡಿ, ಲಿಂಬೆ ಹಣ್ಣಿನ ಜ್ಯೂಸ್‌ ಮಾರಾಟ ಜೋರಾಗಿತ್ತು.

ಸ್ವಚ್ಛ ತೆ ಜೋರಾಗಿತ್ತು
ಕಾರ್ಯಕ್ರಮ ಮುಗಿಯುತ್ತಿದ್ದಂತೆ, ಬಿಜೆಪಿ ಕಾರ್ಯಕರ್ತರು, ಟೀಂ ಮೋದಿ ತಂಡದ ಸ್ವಯಂ ಸೇವಕರು ನೆಹರೂ ಮೈದಾನವನ್ನು ಸ್ವತ್ಛಗೊಳಿಸಿದರು. ಅಲ್ಲಲ್ಲಿ ಬಿದ್ದಿದ್ದ ಮಜ್ಜಿಗೆ, ನೀರಿನ ಪ್ಯಾಕೆಟ್‌ಗಳನ್ನು ಪ್ಲಾಸ್ಟಿಕ್‌ ತೆಗೆದು ಸ್ವತ್ಛ ಮಾಡಿದರು.

ಕಟ್ಟಡ ಗಳ ಮೇಲೆ ನಿಂತು ವೀಕ್ಷಣೆ
ನರೇಂದ್ರ ಮೋದಿ ಆಗಮನಕ್ಕೆ ಒಂದು ಗಂಟೆ ಇರುವಾಗಲೇ ಹಂಪನಕಟ್ಟೆ, ಪುರಭವನ ಮುಂಭಾಗ, ಕೇಂದ್ರ ಮೈದಾನದ ಮುಂಭಾಗದಲ್ಲಿರುವ ಕಟ್ಟಡಗಳಲ್ಲಿ ಕುಳಿತು ಜನ ಮೋದಿಗಾಗಿ ಕಾಯುತ್ತಿದ್ದರು. ಮೋದಿಯವರು ಆಗಮಿಸುತ್ತಿದ್ದಂತೆ ಅಲ್ಲಿಂದಲೇ ಕೈ ಬೀಸುತ್ತಾ “ಮೋದಿ ಮೋದಿ’ ಎಂದು ಘೋಷಣೆ ಕೂಗುತ್ತಿದ್ದರು. ಫಿರ್‌ ಏಕ್‌ ಬಾರ್‌ ಮೋದಿ ಸರ್ಕಾರ್‌, ಮತ್ತೂಮ್ಮೆ ಮೋದಿ ಎಂಬ ಘೋಷಣೆ ಸಾಮಾನ್ಯವಾಗಿತ್ತು. ಭಾಷಣ ಮುಗಿಯುವವರೆಗೂ ಕಟ್ಟಡಗಳಲ್ಲಿ ನಿಂತೇ ಆಲಿಸಿದರು.

ಮೋದಿಮಯ ವಾಟ್ಸಪ್‌ ಸ್ಟೇಟಸ್‌
ಮೋದಿಯವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿ ದ್ದಂತೆಯೇ ಅವರ ಅಭಿಮಾನಿಗಳ ವಾಟ್ಸಪ್‌, ಫೇಸ್‌ಬುಕ್‌ ಸ್ಟೇಟಸ್‌ಗಳು ಮೋದಿಮಯವಾಗಿತ್ತು. ಮಂಗಳೂರಿಗೆ ಸ್ವಾಗತ ಎಂಬ ಒಕ್ಕಣೆ ಬರೆದು ಸ್ಟೇಟಸ್‌ನಲ್ಲಿ ಹಾಕಿ ಜನ ಖುಷಿ ಪಟ್ಟರು.

ಮರ ಏರಿದ ಅಭಿಮಾನಿಗಳು
ಮೈದಾನದೊಳಗೆ, ಹೊರಭಾಗ ಮಾತ್ರವಲ್ಲದೆ, ಹೊರಗಿನ ಫುಟ್‌ಪಾತ್‌ ಬದಿಯಲ್ಲಿರುವ ಮರಗಳ ಮೇಲೆ ಹತ್ತಿ ಮೋದಿ ಅಭಿಮಾನಿಗಳು ಭಾಷಣ ವೀಕ್ಷಿಸಿದರು. ಮರದ ಮೇಲ್ಬದಿಯವರೆಗೆ ಯುವಕರು ಹತ್ತಿ ಕುಳಿತಿರುವುದನ್ನು ಗಮನಿಸಿ ಸ್ವತಃ ಮೋದಿಯವರೇ ತಮ್ಮ ಭಾಷಣ ಆರಂಭಕ್ಕೂ ಮುನ್ನ ಅವರನ್ನು ಕೆಳಗಿಳಿಯುವಂತೆ ಭಿನ್ನವಿಸಿದರು. ಈ ವೇಳೆ ಕೆಲವರು ಕೆಳಗಿಳಿದು ಭಾಷಣ ವೀಕ್ಷಿಸಿದರು.

ಮುಖದಲ್ಲಿ ಮೋದಿ ಹೆಸರು
ಮೈದಾನದ ಒಳಭಾಗದಲ್ಲಿ ಕಲಾವಿದರು ಮೋದಿ ಅಭಿಮಾನಿಗಳ ಮುಖದಲ್ಲಿ ಮೋದಿ ಹೆಸರು ಮತ್ತು ಭಾರತದ ರಾಷ್ಟ್ರಧ್ವಜವನ್ನು ಬರೆಯುತ್ತಿರುವುದು ಕಂಡು ಬಂತು. ಮಕ್ಕಳು, ಮಹಿಳೆಯರು ಸಹಿತ ಎಲ್ಲರು ಮೋದಿ ಹೆಸರನ್ನು ಮುಖದಲ್ಲಿ ಬರೆಸಿಕೊಂಡು ಖುಷಿ ಪಟ್ಟರು.

ಸಂಭ್ರಮಿಸಿದ ಜನರು
ಮೋದಿಯವರು ಮೈದಾನಕ್ಕೆ ಆಗಮಿಸುವಾಗ ಮತ್ತು ನಿರ್ಗಮದ ವೇಳೆ ಕೇಂದ್ರ ಮೈದಾನದಿಂದ ಹಂಪನಕಟ್ಟೆಯವರೆಗೂ ಜನ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೋದಿಯವರತ್ತ ಕೈ ಬೀಸಿದರು. ಸಣ್ಣ ಮಕ್ಕಳೂ ಮೋದಿ…ಮೋದಿ… ಜೈಕಾರ ಕೂಗಿದರು. ಪುಟಾಣಿ ಮಕ್ಕಳು ಮೋದಿ ಮುಖವಾಡ ಧರಿಸಿ ಸಂಭ್ರಮಿಸಿದರು. ಈ ವೇಳೆ ಮೋದಿಯವರೂ ಸೇರಿದ ಜನಸ್ತೋಮದತ್ತ ಕೈ ಬೀಸಿದರು.

ಎಲ್‌ಇಡಿ ಪರದೆ
ಮೋದಿ ಕಾರ್ಯಕ್ರಮದ ನೇರಪ್ರಸಾರವು ಮೈದಾನದ ಒಳಗಿನಿಂದ ರಸ್ತೆಗೆ ಕಾಣುವಂತೆ ಎಲ್‌ಇಡಿ ಪರದೆಯನ್ನು ಅಳವಡಿಸಲಾಗಿತ್ತು. ಮೈದಾನಕ್ಕೆ ಪ್ರವೇಶಿಸದ ಅನೇಕ ಮಂದಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಎಲ್‌ಸಿಡಿ ಪರದೆ ಮುಖೇನ ಕಾರ್ಯಕ್ರಮವನ್ನು ವೀಕ್ಷಿಸಿದರು.

ವೀಡಿಯೋ ಚಿತ್ರೀಕರಣದ ತವಕ
ಮಂಗಳೂರು ವಿವಿ ಕಾಲೇಜಿನಿಂದ ತೊಡಗಿ ಕ್ಲಾಕ್‌ ಟವರ್‌, ಪುರಭವನದ ಮುಂಭಾಗದ ರಸ್ತೆಯ ಬದಿಯಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಮೋದಿಯ ಆಗಮನಕ್ಕಾಗಿ ಕಾದು ನಿಂತಿದ್ದರು. ಮೋದಿ ವಾಹನದಲ್ಲಿ ಬರುವುದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುವ ತವಕದಲ್ಲಿ ಕಾರ್ಯಕರ್ತರಿದ್ದರು. ಸಂಜೆ ಸುಮಾರು 4.40ಕ್ಕೆ ಮೋದಿ ಮೈದಾನಕ್ಕೆ ಆಗಮಿಸಿದ್ದರು. ಮೋದಿಯವರು ಮೈದಾನದ ಒಳ ಹೋಗುತ್ತಿದ್ದಂತೇ ರಸ್ತೆ ಬದಿಯಲ್ಲಿ ಪ್ರಧಾನಿ ಆಗಮನಕ್ಕೆ ಕಾಯುತ್ತಿದ್ದವರೂ, “ಮೋದಿ..ಮೋದಿ..ಮೋದಿ’ ಎಂಬ ಘೋಷಣೆಯೊಂದಿಗೆ ಮೈದಾನಕ್ಕೆ ತೆರಳಿದರು. ಅಷ್ಟರಲ್ಲಾಗಲೇ ಮೈದಾನವು ಕಾರ್ಯಕರ್ತರು-ಸಾರ್ವಜನಿಕರಿಂದ ತುಂಬಿ ತುಳುಕುತ್ತಿತ್ತು. ಮೋದಿ ಆಗಮನ, ನಿರ್ಗಮನದ ವೀಡಿಯೋಗಳನ್ನು ಸಾಮಾಜಿಕ ತಾಣಗಳಲ್ಲಿ ಪ್ರಕಟಿಸಿ ಅಭಿಮಾನಿಗಳು ಸಂಭ್ರಮಿಸಿದರು.

ಟ್ವಿಟರ್‌ನಲ್ಲಿ ವೀಡಿಯೋ ಹಾಕಿದ ಮೋದಿ
ಮೋದಿಯವರು ಮಂಗಳೂರಿನಿಂದ ನಿರ್ಗಮಿಸುತ್ತಿದ್ದಂತೆಯೇ ಮಂಗಳೂರಿನಲ್ಲಿ ಪ್ರಚಾರ ಸಭೆಗೆ ಸೇರಿದ ಜನಸ್ತೋಮ ಮತ್ತು ತಮ್ಮ ಭಾಷಣದ ವೀಡಿಯೋವನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದರು. ಕಳೆದ ಬಾರಿ ಮಂಗಳೂರಿಗೆ ಬಂದಾಗ ಟ್ವೀಟರ್‌ನಲ್ಲಿ ಮಂಗಳೂರು ಬಗ್ಗೆ ಬರೆದುಕೊಂಡಿದ್ದರು. ಆದರೆ ಈ ಬಾರಿ ವೀಡಿಯೋವನ್ನೇ ಅಪ್‌ಲೋಡ್‌ ಮಾಡಿದ್ದಾರೆ.

ಎಂದಿನಂತೆ ವ್ಯಾಪಾರ
ಪ್ರಧಾನಿ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಕೇಂದ್ರ ಮಾರುಕಟ್ಟೆ , ಸುತ್ತಮುತ್ತ ಮಧ್ಯಾಹ್ನದವರೆಗೆ ಎಂದಿ ನಂತೆ ವ್ಯವಹಾರ, ಜನರ ಓಡಾಟ ಇತ್ತು. ಆದರೆ ಮಧ್ಯಾಹ್ನದ ಬಳಿಕ ವ್ಯಾಪಾರ-ವಹಿವಾಟು ಕಡಿಮೆ ಯಾಯಿತು. ಮಾರುಕಟ್ಟೆಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ದಿವಾಕರ್‌ ಅವರು “ಸುದಿನ’ ಜತೆಗೆ ಮಾತನಾಡಿ, ಹಣ್ಣಿನ ವ್ಯಾಪಾರಕ್ಕೆ ಯಾವುದೇ ತೊಡಕು ಉಂಟಾಗಲಿಲ್ಲ. ಮಧ್ಯಾಹ್ನವರೆಗೆ ವ್ಯಾಪಾರ ಇತ್ತು. ಬಳಿಕ ವ್ಯಾಪಾರ ತುಸು ಕಡಿಮೆಯಾಯಿತು ಎಂದರು.

ಕಸ ಆಯ್ದ ವೃದ್ಧೆ
ಸೇರಿದ ಅಷ್ಟೂ ಜನಸ್ತೋಮ ಮೋದಿ ಭಾಷಣ ವೀಕ್ಷಿಸುತ್ತಿ ರಬೇಕಾದರೆ, ಕೇಂದ್ರ ಮೈದಾನದ ಹೊರಭಾಗದಲ್ಲಿ ವೃದ್ಧೆ ಯೋರ್ವರು ಮುಖ್ಯರಸ್ತೆಯಲ್ಲಿ ಬಿದ್ದ ಕಸವನ್ನು ಹೆಕ್ಕುವುದರಲ್ಲಿ ತಲ್ಲೀನರಾಗಿದ್ದರು.

ಟಾಪ್ ನ್ಯೂಸ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqweeqw

Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.