ದೇಶಾದ್ಯಂತ ಹಣ, ಹೆಂಡದ ಹೊಳೆ
ಭಾರಿ ಪ್ರಮಾಣದ ಮಾದಕ ದ್ರವ್ಯಗಳು ವಶಕ್ಕೆ, ಚಿನ್ನ ಹಂಚುವಲ್ಲಿ ತಮಿಳುನಾಡು ನಂಬರ್ 1
Team Udayavani, Apr 19, 2019, 7:24 AM IST
ಕಳೆದ ಲೋಕಸಭೆ ಚುನಾವಣೆಗೆ ಹೋಲಿಕೆ ಮಾಡಿದರೆ, ಈ ಬಾರಿ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಪೈಪೋಟಿ ಹೆಚ್ಚಿದೆ. ಮತದಾರರನ್ನು ಸೆಳೆಯಲು ತರಹೇವಾರಿ ಪ್ರಯತ್ನ ನಡೆಸಿವೆ. ಅದರಲ್ಲೂ ಮುಖ್ಯವಾಗಿ ಹಣ, ಹೆಂಡದ ಜೊತೆಗೆ ಈ ಬಾರಿ ಮಾದಕ ದ್ರವ್ಯಗಳ ಹೊಳೆಯನ್ನೂ ಹರಿಸುತ್ತಿವೆ. ಈ ಬಾರಿ ಯಾವ ಪ್ರಮಾಣದಲ್ಲಿ ಹಣ, ಹೆಂಡ ಹರಿದಾಡುತ್ತಿದೆ ಎನ್ನುವ ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳಬೇಕಾದರೆ, 2014ರ ಲೋಕಸಭಾ ಚುನಾವಣೆಯೊಂದಿಗೆ
ಹೋಲಿಕೆ ಮಾಡಿ ನೋಡಬೇಕು…
2014ರಲ್ಲಿ
2014ರ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗ ಒಟ್ಟು 300 ಕೋಟಿ ರೂ.ವಶಪಡಿಸಿಕೊಂಡಿತ್ತು. ಇದರ ಜೊತೆಗೆ 1,61,84,508 ಲೀಟರ್‌ನಷ್ಟು ಮದ್ಯ, ಮತ್ತು ದೇಶದ ವಿವಿಧ ಭಾಗಗಳಿಂದ 17 ಸಾವಿರ ಕೆ.ಜಿ.ಯಷ್ಟು ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿತ್ತು.
ವಶಪಡಿಸಿಕೊಳ್ಳಲಾಗಿದ್ದ ಮಾದಕ ದ್ರವ್ಯಗಳ-ವಸ್ತುಗಳ ಪ್ರಮಾಣವೇ 3 ಏಷ್ಯಾಟಿಕ್ ಪ್ರೌಢ ಆನೆಗಳು ಮತ್ತು ಒಂದು ಮರಿ ಆನೆಯ ತೂಕಕ್ಕೆ ಸಮವಾಗಿತ್ತು.(ಒಂದು ಏಷ್ಯಾಟಿಕ್ ಆನೆಯ ಭಾರ ಸರಿಸುಮಾರು 5,000 ಕೆ.ಜಿಯಷ್ಟು ಇರುತ್ತದೆ. ) ಇನ್ನು 2014ರಲ್ಲಿ ವಶಪಡಿಸಿಕೊಳ್ಳಲಾದ ಮದ್ಯದಿಂದ ಒಲಿಂಪಿಕ್ ಕ್ರೀಡಾಕೂಟಕ್ಕೆ ಬಳಸುವ ಆರು ಈಜುಕೊಳಗಳನ್ನು ತುಂಬಿಸಲು ಸಾಧ್ಯವಿತ್ತು ! (ಒಲಿಂಪಿಕ್ ಈಜುಕೊಳ 164 ಅಡಿ ಉದ್ದ, 82 ಅಡಿ ಅಗಲ ಮತ್ತು 6 ಅಡಿ ಆಳವಿರುತ್ತದೆ. ಅದರಲ್ಲಿ ಆರು ಲಕ್ಷ ಗ್ಯಾಲನ್‌ಗಳಷ್ಟು ನೀರು ಹಿಡಿಯುತ್ತದೆ!)
2019ರಲ್ಲಿ ಹೆಚ್ಚಾಯ್ತು
ಚುನಾವಣಾ ಆಯೋಗದ ಮತ್ತು ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಿರುವ ಹಣ, ಮದ್ಯ ಮತ್ತು ಮಾದಕ ದ್ರವ್ಯಗಳ ಮೊತ್ತವೇ 2,500 ಕೋಟಿ ರೂಪಾಯಿಯನ್ನು ಮೀರಿದೆ( ಪ್ರತಿ ದಿನ ಸರಾಸರಿ 121 ಕೋಟಿ ರೂಪಾಯಿ ಮೌಲ್ಯದ ಹಣ, ಮದ್ಯ, ಮಾದಕ ದ್ರವ್ಯ). ಸಿಕ್ಕಿಬಿದ್ದ ಪ್ರಮಾಣ ಇಷ್ಟಾದರೆ ಇನ್ನು ಕೈಗೆ ಸಿಗದ ಪ್ರಮಾಣ ಎಷ್ಟಿರಬಹುದೆಂದು ಊಹಿಸಲು ಮುಂದಾದರೆ ತಲೆ ಗಿರ್ರೆನ್ನುವುದು ಖಚಿತ. ಚುನಾವಣಾ ಆಯೋಗದ ಪ್ರಕಾರ ಏಪ್ರಿಲ್ 15ರ ವೇಳೆಗೆ ದೇಶಾದ್ಯಂತ ವಶಪಡಿಸಿಕೊಳ್ಳಲಾದ ಹಣ ಮತ್ತು ವಸ್ತುಗಳು(ಮಾದಕ ದ್ರವ್ಯ, ಮದ್ಯ, ಬಂಗಾರ, ಬೆಳ್ಳಿ, ಇತರೆ) ಮೌಲ್ಯ 25,50,75,00,000 ರೂಪಾಯಿಗಳು(2,550.75ಕೋಟಿ ರೂಪಾಯಿ). ಮಾದಕ ವಸ್ತುಗಳು(1,110.08 ಕೋಟಿ ರೂಪಾಯಿ), ಹಣ(675.804 ಕೋಟಿ ರೂಪಾಯಿ), ಚಿನ್ನ, ಬೆಳ್ಳಿ(503.497 ಕೋಟಿ ರೂಪಾಯಿ), ಮದ್ಯ (211.754 ಕೋಟಿ ರೂಪಾಯಿ) ಮತ್ತು ಇತರೆ ಉಡುಗೊರೆಗಳು(49.623 ಕೋಟಿ ರೂಪಾಯಿ)
ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಚುನಾವಣೆ ಪ್ರಕ್ರಿಯೆ ಶುರುವಾದ ಬಳಿಕ ವಶಪಡಿಸಿಕೊಳ್ಳಲಾದ ಮಾದಕ ವಸ್ತು/ದ್ರವ್ಯದ ಪ್ರಮಾಣ 2014ರ ಲೋಕಸಭೆ ಚುನಾವಣೆ ವೇಳೆ ವಶಪಡಿಸಿಕೊಂಡದ್ದಕ್ಕಿಂತಲೂ 2766. 12 ಪ್ರತಿಶತ ಅಧಿಕ!
ಮತ ಚಲಾಯಿಸಿ ಮಗುವಿಗೆ ಜನ್ಮ ನೀಡಿದಳು
ಪುತ್ತೂರಿನ ಉರ್ಲಾಂಡಿ ನಿವಾಸಿ ಯೋಗಾನಂದ ಅವರ ಪತ್ನಿ ಮೀನಾಕ್ಷಿ ಅವರು ಗುರುವಾರ ಹೆರಿಗೆ ನೋವಿನ ನಡುವೆಯೂ ತಾ.ಪಂ.ನ ಮತ ಗಟ್ಟೆಗೆ ಬಂದು ಮತ ಚಲಾ ಯಿಸಿದರು. ಮತ ಚಲಾಯಿಸಿದ ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಅವರು ಹೆಣ್ಣು ಮಗುವಿಗೆ ಸುಖಪ್ರಸವ ನೀಡಿದರು. ಮತದಾನ ಮತ್ತು ಅವರು ಮಗುವಿಗೆ ಜನ್ಮ ನೀಡಿದ್ದಕ್ಕೂ ನಡು ವಣ ಅವಧಿ ಕೇವಲ 1ಗಂಟೆ!
ಕಾಲಿನಿಂದಲೇ ಮತ ಚಲಾಯಿಸಿದ ಸಬಿತಾ
ಬೆಳ್ತಂಗಡಿಯವರಾದ ಸಬಿತಾ ಮೋನಿಶ್ ಎಂಬುವರು ಎರಡೂ ಕೈಗಳೇ ಇಲ್ಲದಿದ್ದರೂ ಮತಗಟ್ಟೆಗೆ ಧಾವಿಸಿ ಕಾಲಿನಿಂದಲೇ ಮತ ಹಾಕಿ ಇತರರಿಗೆ ಮಾದರಿಯಾಗಿದ್ದಾರೆ. ಗರ್ಡಾಡಿಯ ಬೂತ್‌ನಲ್ಲಿ ಕಾಲಿನಿಂದಲೇ ಮತ ಚಲಾಯಿಸಿದ್ದಾರೆ. ಕಾಲಿನಿಂದಲೇ ಪರೀಕ್ಷೆ ಬರೆದು ಎರಡು ಉನ್ನತ ಪದವಿ ಪಡೆದ ಕೀರ್ತಿಯೂ ಇವರಿಗಿದೆ.
ನೋವಿನ ಕಾಲು ಮತದಾನಕ್ಕೆ ಅಡ್ಡಿಯಾಗಿಲ್ಲ
ಕುಂದಾಪುರದ ಉಳೂ¤ರಿನ ಜಯಶೀಲ ಪೂಜಾರಿ ಅಪಘಾತದಲ್ಲಿ ಕಾಲಿಗೆ ಗಂಭೀರ ಗಾಯಗೊಂಡು ಹಾಸಿಗೆ ವಿಶ್ರಾಂತಿಯಲ್ಲಿದ್ದಾರೆ. ಆದರೆ ಮತ ಚಲಾಯಿಸುವ ಮಹದಾಸೆಯಿಂದ ಅವಿನಾಶ್, ಜೀವನ್ ಮಿತ್ರ ಆ್ಯಂಬುಲೆನ್ಸ್‌ನ ನಾಗರಾಜ ಪುತ್ರನ್ ಸಹಾಯದೊಂ ದಿಗೆ ಆ್ಯಂಬುಲೆನ್ಸ್‌ನಲ್ಲಿ ಉಳೂ¤ರು ಶ್ರೀ ಮಹಾಲಿಂಗೇಶ್ವರ ಅ. ಹಿ. ಪ್ರಾ. ಶಾಲೆಯ ಮತಕೇಂದ್ರಕ್ಕೆ ಬಂದು ಮತದಾನ ಮಾಡಿದರು.
ವಶಪಡಿಸಿಕೊಳ್ಳಲಾದ ಮಾದಕ ವಸ್ತುಗಳ ಮೌಲ್ಯ (ಕೋಟಿ ರೂಪಾಯಿಗಳಲ್ಲಿ)ಗುಜರಾತ್ 500.11
ದೆಹಲಿ 348.48
ಪಂಜಾಬ್ 159.95
ಮಣಿಪುರ 31.24
ಉತ್ತರ ಪ್ರದೇಶ 19.53
ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡ ಪಟ್ಟಿಯಲ್ಲಿ ಗುಜರಾತ್(126.86 ಕೆ.ಜಿ) ಮೊದಲ ಸ್ಥಾನದಲ್ಲಿದೆ.ಹೆಚ್ಚಿನ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡಿರುವುದು ಉತ್ತರಪ್ರದೇಶದಲ್ಲಿ(18,886 ಕೆ.ಜಿ.)ಮಹಾರಾಷ್ಟ್ರ (14,691 ಕೆ.ಜಿ.) ಎನ್ನುವುದನ್ನು ಗಮನಿಸಬೇಕು. ಇದರರ್ಥವಿಷ್ಟೆ- ಗುಜರಾತ್, ದೆಹಲಿ ಮತ್ತು ಪಂಜಾಬ್‌ನಲ್ಲಿ ವಶಪಡಿಸಿಕೊಳ್ಳಲಾದ ಮಾದಕ ದ್ರವ್ಯಗಳ ಮೌಲ್ಯ ಅನ್ಯ ಭಾಗಗಳಲ್ಲಿಗಿಂತ ಅತಿ ಹೆಚ್ಚು.
ತಮಿಳುನಾಡಲ್ಲಿ ಚಿನ್ನದ ಮಳೆ
ಗುಜರಾತ್, ಪಂಜಾಬ್‌ನಲ್ಲಿ ಡ್ರಗ್ಸ್ ಹೊಳೆ ಹರಿದರೆ, ದಕ್ಷಿಣ ರಾಜ್ಯ ತಮಿಳುನಾಡಿನಲ್ಲಿ ಚಿನ್ನ-ಬೆಳ್ಳಿಯ ಮಳೆ ಸುರಿಯುತ್ತಿದೆ. ಈ ವರೆಗೂ ದೇಶದಲ್ಲಿ ವಶಪಡಿಸಿಕೊಳ್ಳಲಾದ ಚಿನ್ನಾಭರಣದಲ್ಲಿ 57 ಪ್ರತಿಶತ ಪಾಲು ತಮಿಳುನಾಡಿನದ್ದು!
ತಮಿಳುನಾಡು 285. 89
ಉತ್ತರಪ್ರದೇಶ 68.69
ಮಹಾರಾಷ್ಟ್ರ 44.76
ಆಂಧ್ರಪ್ರದೇಶ 33.41
ಪ. ಬಂಗಾಳ 17.18
(ಕೋಟಿ ರೂ.ಗಳಲ್ಲಿ)
(ಮಾಹಿತಿ ಕೃಪೆ: ಇಂಡಿಯಾ ಟುಡೇ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.