ಸುಳ್ಯದ ವಿವಿಧೆಡೆ ಸಂಸದ ನಳಿನ್ ಕುಮಾರ್ ಪ್ರಚಾರ
Team Udayavani, Apr 2, 2019, 2:01 PM IST
ಸುಳ್ಯ : ಚುನಾವಣ ಫಲಿತಾಂಶದ ಬಳಿಕ ರಿಕ್ಷಾ ಚಾಲಕರ ಬೇಡಿಕೆಗಳಿಗೆ ಸ್ಪಂದಿಸಬೇಕು. ಬಿಎಂಎಸ್ ಸಂಘಕ್ಕೆ ಸೇರಿದ 99ರಷ್ಟು ರಿಕ್ಷಾ ಚಾಲಕರು ಬಿಜೆಪಿಗೆ ಮತ ಚಲಾಯಿಸುತ್ತಾರೆ ಎಂದು ಬಿಎಂಎಸ್ ಮುಖಂಡ ಗೋಪಾಲಕೃಷ್ಣ ಭಟ್ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಸೋಮವಾರ ಲೋಕಸಭಾ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಬಿಎಂಎಸ್ ರಿಕ್ಷಾ ಚಾಲಕರೊಂದಿಗೆ ಸಂವಾದ ನಡೆಸಿದರು. ನಳಿನ್ ಕುಮಾರ್ ಕಟೀಲು ಅವರು ಮೋದಿ ಸರಕಾರದ ಸಾಧನೆಗಳ ಕುರಿತು ಮತ್ತು ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಮಾಹಿತಿ ನೀಡಿದರು. ಬಳಿಕ ರಿಕ್ಷಾ ಚಾಲಕರು ಅಭಿಪ್ರಾಯ ವ್ಯಕ್ತಪಡಿಸಿದರು. ಬಿಎಂಎಸ್‌ಗೆ ಒಂದು ಕಟ್ಟಡ ಆಗಬೇಕು. ಅದಕ್ಕಾಗಿ ನಕ್ಷೆ ತಯಾರಿಸಲಾಗಿದೆ. ನಮ್ಮಲ್ಲಿ ಹಲವರಿಗೆ ಬ್ಯಾಡ್ಜ್ ಸಮಸ್ಯೆ ಇದ್ದು ಇದನ್ನು ನಿವಾರಿಸಬೇಕು. ಪೆಟ್ರೋಲ್ ಸಬ್ಸಿಡಿಯಲ್ಲಿ ಸಿಗಬೇಕು ಎಂದು ಗೋಪಾಲಕೃಷ್ಣ ಹೇಳಿದರು.
ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ಮಾತನಾಡಿ, ಗಾಂಧಿನಗರ ಸೇರಿ ಕೆಲವೆಡೆ ರಿಕ್ಷಾ ಪಾರ್ಕಿಂಗ್ ಸಮಸ್ಯೆ ಇದೆ. ಈ ಬಗ್ಗೆ ನ.ಪಂ.ಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಇದನ್ನು ಸರಿಪಡಿಸಲು ಸಹಕಾರ ನೀಡಬೇಕು ಮತ್ತು ರಿಕ್ಷಾ ಚಾಲಕರಿಗೆ ಇಎಸ್‌ಐ ಮಾಡುವಲ್ಲಿ ಸಹಕರಿಸಬೇಕು ಎಂದರು. 50 ರಿಕ್ಷಾ ಚಾಲಕರು ಭಾಗವಹಿಸಿದ್ದರು. ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್, ಶಾಸಕ ಎಸ್. ಅಂಗಾರ, ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಮಂಡಲ ಸಮಿತಿ ಅಧ್ಯಕ್ಷ ವೆಂಕಟ ವಳಲಂಬೆ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಸುರೇಶ್ ಕಣೆಮರಡ್ಕ, ಸುಬೋಧ್ ಶೆಟ್ಟಿ ಮೇನಾಲ, ಮಹೇಶ್ ರೈ ಮೇನಾಲ, ಶೀನಪ್ಪ ಬಯಂಬು, ಶೈಲೇಶ್ ಅಂಬೆಕಲ್ಲು ಉಪಸ್ಥಿತರಿದ್ದರು.
ಕ್ಯಾಂಪಸ್ ಭೇಟಿ, ಸಭೆಯಲ್ಲಿ ಭಾಗಿ
ನಳಿನ್ ಕುಮಾರ್ ಕಟೀಲು ಸುಳ್ಯದ ಕೆವಿಜಿ ವಿದ್ಯಾಸಂಸ್ಥೆಗೆ ಭೇಟಿ ನೀಡಿ ಮತಯಾಚಿಸಿದರು. ಆಲೆಟ್ಟಿ ಬಾರ್ಪಣೆ ಯುವಕ ಮಂಡಲದ ವಠಾರ ದಲ್ಲಿ ಕಾರ್ಯಕರ್ತರ ಸಭೆ ನಡೆಸಿದರು. ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ ನೀಡಿದರು. ಅರಂತೋಡು-ತೊಡಿಕಾನದಲ್ಲಿ ಕಾರ್ಯಕರ್ತರ ಸಭೆ, ಮರ್ಕಂಜ, ನೆಲ್ಲೂರು ಕೆಮ್ರಾಜೆ, ಐವರ್ನಾಡು, ಅಜ್ಜಾವರ ಮಂಡೆಕೋಲು, ಜಾಲ್ಸೂರು- ಕನಕಮಜಲಿನ ಸಭೆಯಲ್ಲಿ ಪಾಲ್ಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.