ನಳಿನ್ ಕುಮಾರ್‌ಗೆ ಟಕ್ಕರ್ ಕೊಡಲಿದ್ದಾರೆಯೇ ಮಿಥುನ್ ರೈ
Team Udayavani, Mar 25, 2019, 6:01 AM IST
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ
ಆಯ್ಕೆ ಅಂತಿಮವಾಗಿದ್ದು, ಬಿಜೆಪಿಯ ನಳಿನ್ ಕುಮಾರ್ ಕಟೀಲು ಹಾಗೂ ಕಾಂಗ್ರೆಸ್‌ನ ಮಿಥುನ್ ರೈ ಸೋಮವಾರ ನಾಮ ಪತ್ರ ಸಲ್ಲಿಸಲಿದ್ದಾರೆ. ಕ್ಷೇತ್ರದ ಚುನಾ ವಣಾ ಇತಿಹಾಸವನ್ನು ಗಮನಿಸಿದರೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೇ ಇಲ್ಲಿ ಪ್ರಮುಖ ಪ್ರತಿಸ್ಪರ್ಧಿಗಳು. ಈ ಬಾರಿಯ ಸ್ಪರ್ಧಾಕಣದ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗಳು ತಮ್ಮ ಸ್ಪರ್ಧೆ ಮತ್ತು ಅವಕಾಶಗಳ ಬಗ್ಗೆ ಉದಯವಾಣಿಯೊಂದಿಗೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
3ನೇ ಬಾರಿಯೂ ಜನರು ಬೆಂಬಲಿಸುತ್ತಾರೆ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದೀರಿ;
ಪರಿಸ್ಥಿತಿ ಭಿನ್ನವಾಗಿದೆಯೇ ?
ದ.ಕ. ಲೋಕಸಭಾ ಕ್ಷೇತ್ರದಿಂದ ಮತದಾರರು ಎರಡು ಬಾರಿ ನನಗೆ ಅಶೀರ್ವಾದ ಮಾಡಿ ಲೋಕಸಭೆಗೆ ಕಳುಹಿಸಿಕೊಟ್ಟಿದ್ದಾರೆ.ಮೊದಲ ಬಾರಿ ಆಯ್ಕೆಯಾದಾಗ ನಾನು ವಿಪಕ್ಷದ ಸಂಸದನಾಗಿದ್ದೆ. ಎರಡನೇ ಬಾರಿ ಆಯ್ಕೆಯಾಗಿ ಆಡಳಿತ ಪಕ್ಷದ
ಸಂಸದನಾಗಿದ್ದೇನೆ. ಮೊದಲ ಅವಧಿಯಲ್ಲಿ ಕ್ಷೇತ್ರದಲ್ಲಿ ವಿವಿಧ ಅಭಿವೃದಿಟಛಿ ಕಾರ್ಯಗಳಿಗೆ 4,000 ಕೋ.ರೂ. ಅನುದಾನ ತಂದಿದ್ದೆ. ಎರಡನೇ ಬಾರಿ ಸಂಸದನಾಗಿ 16,520 ಕೋ. ರೂ. ತಂದಿದ್ದೇನೆ. 10 ವರ್ಷಗಳಲ್ಲಿ ಮಾಡಿರುವ ಸಾಧನೆ ಜನರ ಮುಂದಿದೆ. ಹಲವಾರು ಯೋಜನೆಗಳು ಪೂರ್ಣಗೊಂಡಿವೆ. ಹತ್ತಾರು ಯೋಜನೆಗಳಿಗೆ ಶಿಲಾನ್ಯಾಸಗಳಾಗಿವೆ. ಸಾಧನೆ ಗುರುತಿಸಿ ಪಕ್ಷ ಮೂರನೇ ಬಾರಿಗೆ ಅವಕಾಶ ಮಾಡಿಕೊಟ್ಟಿದೆ. ಅಶೀರ್ವಾದ ಪಡೆ ಯಲು ಜನರ ಬಳಿ ತೆರಳುತ್ತಿದ್ದೇನೆ. ದೇಶದಲ್ಲಿ
ನರೇಂದ್ರ ಮೋದಿ ಅವರ ಸಾಧನೆ ಹಾಗೂ ಕ್ಷೇತ್ರದಲ್ಲಿ ನನ್ನ ಕೆಲಸದಿಂದ ಪರಿಸ್ಥಿತಿ ಹಿಂದಿಗಿಂತಲೂ ಈ ಬಾರಿ ಹೆಚ್ಚು ಪೂರಕವಾಗಿದೆ.
ಕಾಂಗ್ರೆಸ್‌ನ ಯುವ ಅಭ್ಯರ್ಥಿಯಿಂದಾಗಿ ಸ್ಪರ್ಧಾಕಣದ ಮೇಲೆ ಪರಿಣಾಮ ಬೀರಲಿದೆಯೇ?
ಇದೊಂದು ವೈಚಾರಿಕ ಹೋರಾಟ. ನಮ್ಮ ವಿಚಾರಧಾರೆ, ಅಭಿವೃದ್ಧಿ , ಸಾಧನೆಗಳನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗುತ್ತಿದ್ದೇವೆ. ನಮ್ಮ ಪ್ರತಿಸ್ಪರ್ಧಿ ಯಾರು, ಅವರ ಪ್ರಾಯ ಎಷ್ಟು ಎಂಬುದು ಮುಖ್ಯವಲ್ಲ.
ಪ್ರಚಾರ ಹೇಗಿದೆ?
ಪ್ರಚಾರ ಬಿರುಸಿನಿಂದ ಸಾಗಿದೆ. ಕಾರ್ಯಕರ್ತರು ಈಗಾಗಲೇ 1ನೇ ಸುತ್ತಿನ ಮನೆಮನೆ ಭೇಟಿ ಮುಗಿಸಿದ್ದಾರೆ. ನಾನು ಕ್ಷೇತ್ರದಲ್ಲಿ 2 ಸುತ್ತಿನ ಪ್ರವಾಸ ಮಾಡಿದ್ದೇನೆ. ಇದಲ್ಲದೆ ನರೇಂದ್ರ ಮೋದಿಯವರ ಸಾಧನೆ, ಆಡಳಿತವನ್ನು ನೋಡಿ ಅನೇಕ ಸೇವಾಸಂಸ್ಥೆಗಳೂ ಪ್ರಚಾರ ಕಾರ್ಯದಲ್ಲಿ ಸ್ವಯಂ ತೊಡಗಿಸಿಕೊಂಡಿವೆ.
ನಿಮ್ಮ ಸ್ಪರ್ಧೆಗೆ ಅತೃಪ್ತಿ ಇತ್ತೆ?
ಅಲ್ಪಸ್ವಲ್ಪ ಅಸಮಾಧಾನಗಳು ಎಲ್ಲ ಪಕ್ಷಗಳಲ್ಲೂ ಸಹಜ. ಎರಡು ಬಾರಿ ಸಂಸದನಾಗಿದ್ದೇನೆ. ಮೂರನೇ ಬಾರಿಗೆ ಕಣದಲ್ಲಿದ್ದೇನೆ. ಆಕಾಂಕ್ಷಿಗಳು, ಅಪೇಕ್ಷಿತರು
ಸಹಜ. ಆದರೆ ಅವೆಲ್ಲ ಈ ಬಗೆಹರಿದಿವೆ; ಎಲ್ಲರೂ ಒಗ್ಗಟ್ಟಿನಿಂದ ಚುನಾವಣಾ
ಪ್ರಚಾರದಲ್ಲಿ ನಿರತರಾಗಿದ್ದೇವೆ.
ನರೇಂದ್ರ ಮೋದಿ ಅಲೆಯಲ್ಲ; ಸುನಾಮಿ
ಈ ಬಾರಿ ನಮ್ಮ ಕ್ಷೇತ್ರ ಸೇರಿ ರಾಷ್ಟ್ರದೆಲ್ಲೆಡೆ ಇರುವುದು ಮೋದಿ ಅಲೆ ಅಲ್ಲ;
ಸುನಾಮಿ. ಬಿಜೆಪಿಗೆ ಆಶೀರ್ವಾದ ಮಾಡಬೇಕೆಂದು ಜನ ಕಾದಿದ್ದಾರೆ. ದ.ಕ. ಕ್ಷೇತ್ರದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲಿದೆ.
ಮತದಾರರು ಈ ಬಾರಿ ಬದಲಾವಣೆ ತರುತ್ತಾರೆ
ನೇರವಾಗಿ ಲೋಕಸಭೆಗೆ ಸ್ಪರ್ಧಿಸುತ್ತಿದ್ದೀರಿ; ಹೇಗೆನಿಸುತ್ತಿದೆ?
ಕಾರ್ಯಕರ್ತರ ಸಹಕಾರ, ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ, ರಮಾನಾಥ ರೈ,
ವಿನಯ ಕುಮಾರ್ ಸೊರಕೆ, ಬಿ.ಕೆ. ಹರಿಪ್ರಸಾದ್ ಸೇರಿ ರಾಷ್ಟ್ರ, ರಾಜ್ಯ ಹಾಗೂ
ಜಿಲ್ಲೆಯ ನಾಯಕರೆಲ್ಲರೂ ಆಶೀರ್ವಾದ ಮಾಡಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಕಾಂಗ್ರೆಸ್ ಯುವಕರಿಗೆ ಅವಕಾಶ ನೀಡುತ್ತಾ ಬಂದಿದೆ. ಈ ಬಾರಿಯೂ ಅವಕಾಶ ಮಾಡಿಕೊಟ್ಟಿದೆ.
ಸಾಮಾಜಿಕ ಚಟುವಟಿಕೆಗಳ ಕುರಿತು…
ದ.ಕ. ಜಿಲ್ಲೆ ಸರ್ವಧರ್ಮ ಸಮನ್ವಯಕ್ಕೆ ಹೆಸರಾದ ನಾಡು. ಶ್ರೀಮಂತ ಸಾಂಸ್ಕೃತಿಕ
ಪರಂಪರೆ ಹೊಂದಿದೆ. ನಾಡಿನ ಸಾಂಸ್ಕೃತಿಕ ಪರಂಪರೆ, ಸೌಹಾರ್ದ ವಾತಾವರಣಕ್ಕೆ
ಪೂರಕ ವಾಗಿ ನಾನು ಕಾರ್ಯನಿರ್ವಹಿಸುತ್ತಿದ್ದೇನೆ. ತಿರುವೈಲು ಕಂಬಳ ಸಮಿತಿಯ
ಗೌರವಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಪಿಲಿನಲಿಕೆ ಟ್ರಸ್ಟ್ ಸ್ಥಾಪಿಸಿ ಪಿಲಿನಲಿಕೆ
ಕಲೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸುವ ಕಾರ್ಯ
ಮಾಡಿದ್ದೇನೆ. ದೀಪಾವಳಿ ಆಚರಣೆ, ಗೋ ದಾನ, ಇಫ್ತಾರ್ ಸೌಹಾರ್ದ ಕೂಟ, ಕ್ರಿಸ್ಮಸ್
ಆಚರಣೆಯನ್ನು ವರ್ಷಂಪ್ರತಿ ಆಯೋಜಿಸುತ್ತಿದ್ದೇನೆ. ನನಗೆ ಯುವಜನರ ಆಶೋತ್ತರಗಳ
ಬಗ್ಗೆ ಚೆನ್ನಾಗಿ ಅರಿವಿದೆ. ಆದುದರಿಂದ ಕ್ಷೇತ್ರದ ಜನತೆ ಈ ಬಾರಿ ಬದಲಾವಣೆ ತರುತ್ತಾರೆ. ಕಾಂಗ್ರೆಸ್‌ಗೆ ಅವಕಾಶ ಮಾಡಿಕೊಡುತ್ತಾರೆ ಎಂಬುದು ನನ್ನ ವಿಶ್ವಾಸ.
ಕಿರಿಯ ವಯಸ್ಸಿನಲ್ಲಿ ದೊಡ್ಡ ಅವಕಾಶ ಹೇಗೆ ಸಾಧ್ಯವಾಯ್ತು?
ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಈ ಅವಕಾಶ ಮಾಡಿಕೊಟ್ಟಿದ್ದಾರೆ. ನಾನು
ವೈದ್ಯಕೀಯ ಕುಟುಂಬದಿಂದ ಬಂದವನು. ನನ್ನ ಒಲವು ಸಮಾಜಸೇವೆ, ರಾಜಕೀಯದ
ಕಡೆಗೆ ಇತ್ತು. ವಿದ್ಯಾರ್ಥಿ ಸಂಘಟನೆಯಲ್ಲಿ ತೊಡಗಿಸಿ ಕೊಂಡು ಬಳಿಕ ಕಾಂಗ್ರೆಸ್‌ನ ತತ್ವ
ಸಿದಾಟಛಿಂತಗಳ ಕಡೆಗೆ ಆಕರ್ಷಿತ ನಾಗಿ ಯುವಕಾಂಗ್ರೆಸ್ ಸೇರಿದೆ. ಕಳೆದ ಮೂರು
ಅವಧಿಗಳಲ್ಲಿ ಜಿಲ್ಲಾ ಯುವ ಕಾಂಗ್ರೆಸ್‌ನ ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸು ತ್ತಿದ್ದೇನೆ.
ಪಕ್ಷ ವರಿಷ್ಠರು ನನ್ನ ಕೆಲಸವನ್ನು ಗುರುತಿಸಿ ಅವಕಾಶ ಮಾಡಿಕೊಟ್ಟಿದ್ದಾರೆ.
ನಿಮ್ಮ ರಣತಂತ್ರಗಳೇನು?
ಪ್ರತಿಸ್ಪರ್ಧಿ ಯಾರು ಎಂಬುದು ನಮಗೆ ಮುಖ್ಯವಲ್ಲ. ನಮ್ಮ ಗುರಿ ಚುನಾವಣೆಯಲ್ಲಿ
ಗೆಲ್ಲುವುದು. ಅದಕ್ಕೆ ಅವಶ್ಯವಿರುವ ಕಾರ್ಯತಂತ್ರಗಳನ್ನು ರೂಪಿಸುತ್ತೇವೆ.
ಪ್ರಚಾರ ಹೇಗಿದೆ?
ಈಗಾಗಲೇ ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಚಾರ ಆರಂಭಿಸಿದೆ. ಬೂತ್ ಮಟ್ಟದಲ್ಲಿ
ಪಕ್ಷದ ಕಾರ್ಯಕರ್ತರಿಂದ ಮತದಾರರ ಸಂಪರ್ಕ ಕಾರ್ಯ ನಡೆಯುತ್ತಿದೆ.
ನಾಮಪತ್ರ ಸಲ್ಲಿಕೆಯ ಬಳಿಕ ಇದು ಇನ್ನಷ್ಟು ಬಿರುಸುಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಅಪ್ಪನನ್ನೇ ಬದಲಿಸಿದ ಅತಿಶಿ: ಪ್ರಿಯಾಂಕಾ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ಬಿಧುರಿ
India Cricket: ಸೀಮಿತ ಓವರ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಸ್ಟಾರ್ ಆಲ್ ರೌಂಡರ್
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
Prashant Kishor: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್ ಕಿಶೋರ್ ಬಂಧನ
Udupi: ಇನ್‌ಸ್ಟಾಗ್ರಾಂ ಲಿಂಕ್ ಬಳಸಿ 12.46 ಲಕ್ಷ ರೂ. ಕಳೆದುಕೊಂಡ ಯುವತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.