“ಅಭಿವೃದ್ಧಿಗೆ ಮೋದಿ ಸರಕಾರ ಅವಶ್ಯ’
Team Udayavani, Apr 17, 2019, 6:00 AM IST
ಚುನಾವಣೆ ರ್ಯಾಲಿ ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಗಣ್ಯರು ಮಾತನಾಡುದರು.
ಸುರತ್ಕಲ್: ಐದು ವರ್ಷಗಳಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಸರಕಾರ ದ ಸಾಧನೆ ಗಮನಾರ್ಹವಾಗಿದೆ. ಮುಂದಿನ ಐದು ವರ್ಷ ಮತ್ತೂಮ್ಮೆ ಅಧಿಕಾರ ಸಿಕ್ಕಿದರೆ ದೇಶ ಮತ್ತಷ್ಟು ಅಭಿವೃದ್ಧಿಯಾಗುವುದು ಎಂದು ಕೇಂದ್ರ ಕೈಗಾರಿಕ ಮತ್ತು ವಿಮಾನಯಾನ ಸಚಿವ ಸುರೇಶ್ ಪ್ರಭು ಹೇಳಿದರು.
ಸುರತ್ಕಲ್‌ನಲ್ಲಿ ದ.ಕ. ಲೋಕಸಭಾ ಅಭ್ಯರ್ಥಿ ನಳಿನ್ ಕುಮಾರ್ ಪರ ಚುನಾವಣೆ ರ್ಯಾಲಿ ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಆರೋಗ್ಯಕ್ಕಾಗಿ ಆಯುಷ್ಮಾನ್ ಕೋಟಿ ಜನರಿಗೆ ವರದಾನವಾಗಿದೆ. ಆಸ್ಪತ್ರೆ ಬಿಲ್‌ಗಳು ಜನತೆಯ ಮುಕ್ಕಾಲು ಪಾಲು ಆದಾಯವನ್ನು ನುಂಗುವುದರಿಂದ ಈ ಯೋಜನೆ ತರಲಾಯಿತು. ಸ್ವ ಉದ್ಯೋ ಗಕ್ಕೆ ಮುದ್ರಾ ಯೋಜನೆ, ದೇಶ ವಿದೇಶ ಗಳಲ್ಲಿ ಇಂದು ಭಾರತಕ್ಕೆ ಗೌರವ ಆತಿಥ್ಯ ಸಿಗುತ್ತಿದ್ದರೆ ಇದಕ್ಕೆ ಮೋದಿ ಅವರ ದೂರ ದರ್ಶಿತ್ವದ ಆಡಳಿತ ಕಾರಣವಾಗಿದೆ ಎಂದರು.
ನಳಿನ್ ಕುಮಾರ್ ಕಟೀಲು ಮಾತನಾಡಿ, ದ.ಕ. ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ 10 ವರ್ಷಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದೇನೆ. ಮುಂದೆಯೂ ನಿಮ್ಮ ಸೇವಕನಾಗಿ ನಗರ, ಗ್ರಾಮಾಂತರ ಪ್ರದೇಶದಲ್ಲಿ ಅಭಿವೃದ್ಧಿ ಮಾಡಲು ಬದ್ಧನಾಗಿದ್ದೇನೆ ಎಂದರು.
ಶಾಸಕ ಡಾ| ಭರತ್ ಶೆಟ್ಟಿ ವೈ. ಮಾತ ನಾಡಿ, ಈ ಬಾರಿಯೂ ನಳಿನ್ ಕುಮಾರ್ ಕಟೀಲು ಜಯ ಗಳಿಸುವುದು ನಿಶ್ಚಿತ. ನಾವು ವಿಜಯೋತ್ಸವಕ್ಕೆ ಈಗಲೇ ಸಜ್ಜಾಗಿದ್ದೇವೆ ಎಂದರು. ವಿಕಾಸ್ ಪುತ್ತೂರು, ನಿತಿನ್ ಕುಮಾರ್, ರವಿ ಶಂಕರ್ ಮಿಜಾರ್, ರಣದೀಪ್ ಕಾಂಚನ್, ಪೂಜಾ ಪೈ, ಅಶೋಕ್ ಕೃಷ್ಣಾಪುರ, ಗಣೇಶ್ ಹೊಸಬೆಟ್ಟು, ರಜನಿ ದುಗ್ಗಣ್ಣ , ತಿಲಕ್ ರಾಜ್ ಕೃಷ್ಣಾಪುರ, ಲೋಕೇಶ್ ಬೊಳ್ಳಾಜೆ, ವಿಟ್ಟಲ ಸಾಲ್ಯಾನ್ ಉಪಸ್ಥಿತರಿದ್ದರು. ಮಹೇಶ್ ಮೂರ್ತಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.