ಸರಳ ಬಹುಮತದೊಂದಿಗೆ ಎನ್‌ಡಿಎ ಅಧಿಕಾರಕ್ಕೆ?


Team Udayavani, Apr 10, 2019, 6:00 AM IST

c-13

ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 274 ಸ್ಥಾನಗಳನ್ನು ಗೆದ್ದು ಸರಳ ಬಹುಮತದೊಂದಿಗೆ ಪುನಃ ಅಧಿಕಾರಕ್ಕೇರಲಿದೆ. ಬಿಜೆಪಿಗೆ ಕಳೆದ ಬಾರಿ ಯಂತೆ ನಿಚ್ಚಳ ಬಹುಮತ ಸಿಗದಿದ್ದರೂ, 228 ಕ್ಷೇತ್ರಗಳಲ್ಲಿ ಜಯ ಗಳಿಸಲಿದೆ. ಇದು ವಿವಿಧ ಖಾಸಗಿ ಸುದ್ದಿವಾಹಿನಿಗಳು ನಡೆಸಿ ರುವ ಚುನಾವಣಪೂರ್ವ ಸಮೀಕ್ಷೆಗಳನ್ನಿಟ್ಟುಕೊಂಡು ಸಿದ್ಧಪಡಿಸಿದ “ಸಮೀಕ್ಷೆಗಳ ಸಮೀಕ್ಷೆ’ಯ ವರದಿ.

ರಾಹುಲ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌, 2014ರಲ್ಲಿ ಗಳಿಸಿದ್ದ ಶೋಚನೀಯ 44 ಸ್ಥಾನ ಗಳಿಗಿಂತ ದುಪ್ಪಟ್ಟು, ಅಂದರೆ 88 ಸ್ಥಾನ  ಗಳನ್ನು ಗಳಿಸಲು ಶಕ್ತವಾಗುತ್ತದೆ. ಕಾಂಗ್ರೆಸ್‌ ಹಾಗೂ ಅದರ ಮೈತ್ರಿಕೂಟದ ಎಲ್ಲಾ ಪಕ್ಷಗಳೂ ಸೇರಿ (ಯುಪಿಎ) ಒಟ್ಟಾರೆ 140 ಸ್ಥಾನಗಳನ್ನು ಮಾತ್ರ ಗೆಲ್ಲ ಲಿದ್ದು, ಈ ಬಾರಿ ಶತಾಯ ಗತಾಯ ಬಿಜೆಪಿ ಯನ್ನು ಅಧಿಕಾರದಿಂದ ದೂರವಿಡ ಬೇಕೆಂಬ ಕನಸು ಭಗ್ನಗೊಳ್ಳಲಿದೆ. ಇನ್ನು, 129 ಸ್ಥಾನಗಳು ಇತರೆ ಪ್ರಾದೇಶಿಕ ಪಕ್ಷ ಗಳು, ಸ್ವತಂತ್ರ ಅಭ್ಯರ್ಥಿಗಳ ಪಾಲಾಗುತ್ತವೆ ಎಂದು ಸಮೀಕ್ಷೆ ಹೇಳಿದೆ.

ಒಟ್ಟು 543 ಸದಸ್ಯ ಬಲದ ಸಂಸತ್ತಿನಲ್ಲಿ ಸರಕಾರ ರಚನೆಗೆ ಬೇಕಾದ ಅಗತ್ಯ ಸಂಖ್ಯೆ 272 ಇದ್ದು, ಎನ್‌ಡಿಎ ಅಧಿಕಾರದ ಗದ್ದು ಗೆಗೆ ಏರುವುದು ನಿಶ್ಚಿತ ಎಂದು ಹೇಳಲಾಗಿದೆ.

ಪ್ರಮುಖ ರಾಜ್ಯಗಳ ವಿವರ: ಉತ್ತರ ಪ್ರದೇಶ ದಲ್ಲಿ, ಪರಸ್ಪರ ಕೈ ಜೋಡಿಸಿರುವ ಎಸ್‌ಪಿ-ಬಿಎಸ್‌ಪಿ, ಬಿಜೆಪಿ ದೊಡ್ಡ ಪೈಪೋಟಿ ನೀಡಲಿವೆ ಎಂದು ಹೇಳ ಲಾಗಿದ್ದು, ಒಟ್ಟು 80 ಕ್ಷೇತ್ರಗಳಿರುವ ಆ ರಾಜ್ಯದಲ್ಲಿ ಬಿಜೆಪಿ 40 ಸ್ಥಾನ, ಕಾಂಗ್ರೆಸ್‌ 4, ಎಸ್‌ಪಿ- ಬಿಎಸ್‌ಪಿ 36 ಸ್ಥಾನ ಗೆಲ್ಲಲಿವೆ ಎನ್ನಲಾಗಿದೆ. 2014ರ ಮಹಾ ಚುನಾವಣೆ ಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ 71 ಸ್ಥಾನ ಗಳಿಸಿತ್ತು.

ಬಿಹಾರದಲ್ಲಿ, ಬಿಜೆಪಿ 31, ಕಾಂಗ್ರೆಸ್‌ 9 ಸ್ಥಾನ ಪಡೆದರೆ, ಆಂಧ್ರಪ್ರದೇಶದಲ್ಲಿ ಬಿಜೆಪಿ, ಕಾಂಗ್ರೆಸ್‌ ಶೂನ್ಯ ಸಾಧನೆ ಮಾಡಿ ದರೆ, ವೈಎಸ್‌ಆರ್‌ಸಿ 21, ಟಿಡಿಪಿ 4 ಕ್ಷೇತ್ರ ಗಳಲ್ಲಿ ಜಯ ಪಡೆಯಲಿವೆ. ತೆಲಂಗಾಣ ದಲ್ಲೂ ಬಿಜೆಪಿ ಶೂನ್ಯ ಗಳಿಸಲಿದ್ದು, ಅಲ್ಲಿ ಕಾಂಗ್ರೆಸ್‌ 2, ಟಿಆರ್‌ಎಸ್‌ 14, ಇತರೆ 1 ಸ್ಥಾನ ಪಡೆಯ ಲಿವೆ ಎಂದು ಹೇಳಲಾಗಿದೆ.

ಪಣಜಿ ವಿಧಾನಸಭಾ ಕ್ಷೇತ್ರ: ಮೇ 19ಕ್ಕೆ ಉಪ ಚುನಾವಣೆ
ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್‌ ಪಾರೀಕರ್‌ ನಿಧನ ದಿಂದ ತೆರವಾಗಿರುವ ಪಣಜಿ ವಿಧಾನ ಸಭಾ ಕ್ಷೇತ್ರ ಮತ್ತು ತಮಿಳು ನಾಡಿನ ಸುಲೂರು, ಅರೆವಕುರಿಚಿ, ತಿರುಪರಂ ಕುಂ ದರಂ, ಒಟ್ಟಾಪಿಡರಂ ಕ್ಷೇತ್ರಗಳಿಗೆ ಮೇ 19ರಂದು ಉಪ ಚುನಾವಣೆ ನಡೆ ಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಸದ್ಯದಲ್ಲೇ ಆರಂಭವಾಗುವ ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನವೂ ಮೇ  19ರಂದೇ ನಡೆಯಲಿದೆ ಎಂದು ಆಯೋಗ ತಿಳಿಸಿದೆ.

ಎ. 22ರಂದು ಈ ಬಗ್ಗೆ ಅಧಿಸೂಚನೆ ಹೊರ ಬೀಳಲಿದ್ದು, ಅಂದಿನಿಂದಲೇ ನಾಮ ಪತ್ರ ಸಲ್ಲಿಕೆ ಆರಂಭವಾಗು ತ್ತದೆ. ನಾಮಪತ್ರ ಸಲ್ಲಿ ಸಲು ಎ. 29 ಕೊನೆಯ ದಿನವಾಗಿದ್ದು, ನಾಮಪತ್ರ ಹಿಂಪಡೆಯುವ ಗಡುವು ಮೇ 2ರಂದು ಕೊನೆಗೊಳ್ಳಲಿದೆ. ಲೋಕಸಭಾ ಚುನಾವಣೆಯ ಫ‌ಲಿತಾಂಶ ಮೇ 23ರಂದು ಘೋಷಣೆಯಾಗಲಿದ್ದು, ಅದೇ ದಿನ ಈ ಉಪ ಚುನಾವಣೆಗಳ ಫ‌ಲಿತಾಂಶವೂ ಹೊರ ಬೀಳಲಿದೆ.

ತ.ನಾಡಲ್ಲಿ 360.80 ಕೋಟಿ ರೂ. ವಶ
ಲೋಕಸಭೆ ಚುನಾವಣ ಅಕ್ರಮ ಪತ್ತೆ ಹಚ್ಚುತ್ತಿರುವ ಚುನಾವಣ ಆಯೋ ಗವು ತಮಿಳುನಾಡಿನಲ್ಲಿ ಒಟ್ಟು 360.80 ಕೋಟಿ ರೂ. ಮೌಲ್ಯದ ನಗದು, ಚಿನ್ನಾಭರಣ ಹಾಗೂ ಇತರೆ ಅಮೂಲ್ಯ ವಸ್ತುಗಳನ್ನು ವಶಪಡಿಸಿಕೊಂಡಿದೆ. ಈವರೆಗೆ 122.30 ಕೋಟಿ ರೂ. ನಗದು ಹಾಗೂ 238.54 ಕೋಟಿ ರೂ. ಮೊತ್ತದ ಚಿನ್ನ, ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದಿದ್ದು, ಅಕ್ರಮ ತಡೆ ಗಟ್ಟುವ ನಿಟ್ಟಿನಲ್ಲಿ ಶತ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾರತಮ್ಯವಿಲ್ಲ ಎಂದ ವಿತ್ತ ಇಲಾಖೆ
ಮಧ್ಯಪ್ರದೇಶದಲ್ಲಿ ನಡೆದ ಐಟಿ ದಾಳಿಗೆ ಸಂಬಂಧಿಸಿ ಚರ್ಚಿಸಲು ಕಂದಾಯ ಕಾರ್ಯದರ್ಶಿ ಹಾಗೂ ಸಿಬಿಡಿಟಿ ಮುಖ್ಯಸ್ಥರಿಗೆ ಮಂಗಳವಾರ ಚುನಾವಣ ಆಯೋಗ ಬುಲಾವ್‌ ನೀಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ವಿತ್ತ ಸಚಿ ವಾಲಯ, ಕಂದಾಯ ಇಲಾಖೆಯು ಯಾವುದೇ ತಾರತಮ್ಯ, ಪಕ್ಷಪಾತ ವಿಲ್ಲದೇ ದಾಳಿ ನಡೆಸಿದೆ. ಅದು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟಿ¨

ಕಾಂಗ್ರೆಸ್‌ ಅಭ್ಯರ್ಥಿಗೆ “ಭೀಮ್‌’ ಬಲ
ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಆಜಾದ್‌ ಬಿಜೆಪಿಯ ಏಜೆಂಟ್‌ ಎಂಬ ಬಿಎಸ್ಪಿ ನಾಯಕಿ ಮಾಯಾವತಿ ಹೇಳಿಕೆಗೆ ಆಜಾದ್‌ ಕೆಂಡವಾಗಿದ್ದಾರೆ. ಮಾಯಾ ಹೇಳಿಕೆಯಿಂದ ಆಕ್ರೋಶಗೊಂಡಿರುವ ಅವರು, ಉತ್ತರಪ್ರದೇಶದ ಸಹರಾನ್ಪುರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲಿಸುವಂತೆ ತಮ್ಮ ಸಮು ದಾಯದ ಸದಸ್ಯರಿಗೆ ಮಂಗಳವಾರ ಕರೆ ನೀಡಿದ್ದಾರೆ. ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಇಮ್ರಾನ್‌ ಮಸೂದ್‌ ಕಣಕ್ಕಿಳಿದಿದ್ದಾರೆ.

ರಾಹುಲ್‌ಗಾಂಧಿ ವಿರುದ್ಧವೇ ಭ್ರಷ್ಟಾಚಾರ ಪ್ರಕರಣವಿದ್ದು, ಅವರೇ ಜಾಮೀನು ಪಡೆದು ಓಡಾಡುತ್ತಿದ್ದಾರೆ. ಹೀಗಿರುವಾಗ ಭ್ರಷ್ಟಾಚಾರ ಕುರಿತು ಚರ್ಚೆಗೆ ಬರುವಂತೆ ಮೋದಿಯವರಿಗೆ ಆಹ್ವಾನ ನೀಡುವ ನೈತಿಕತೆಯೇ ರಾಹುಲ್‌ಗಿಲ್ಲ.
ರವಿಶಂಕರ್‌ ಪ್ರಸಾದ್‌, ಕೇಂದ್ರ ಸಚಿವ

ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದಂತೆ 2 ವಿದೇಶಿ ರಕ್ಷಣಾ ಕಂಪನಿಗಳಿಗೆ ಮೋದಿ ಸರಕಾರ ಅನುಕೂಲ ಮಾಡಿಕೊಟ್ಟಿದೆ. ಪ್ರಧಾನಿ ಮೋದಿ ಅವರು ದೇಶದ ರಾಷ್ಟ್ರೀಯ ಭದ್ರತೆ ಜೊತೆಗೆ ಆಟವಾಡುತ್ತಿದ್ದಾರೆ.
ಸೀತಾರಾಂ ಯೆಚೂರಿ, ಸಿ, ಸಿಪಿಎಂ ನಾಯಕ

ಮೋದಿ ಸರಕಾರ ಮಾಡಿದ ಬಹುದೊಡ್ಡ ಕಾರ್ಯವೆಂದರೆ ದೇಶವನ್ನು ಭದ್ರಪಡಿಸಿದ್ದು. ರಾಹುಲ್‌ ಬಾಬಾ ಮತ್ತು ಸ್ನೇಹಿತರು, ತುಕಡೇ ತುಕಡೇ ಗ್ಯಾಂಗ್‌ನಿಂದ ದೇಶಕ್ಕೆ ಸುಭದ್ರ ಸರಕಾರ ನೀಡಲು ಸಾಧ್ಯವೇ?
ಅಮಿತ್‌ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ

ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಎಲ್ಲಿತ್ತೋ, ಅದೇ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕೆನ್ನುವುದು ನನ್ನ ಇಚ್ಛೆ. ಇಸ್ಲಾಂ ಧರ್ಮ ಭಾರತಕ್ಕೆ ಬಂದಿದ್ದೇ ತಡವಾಗಿ. ದೇಗುಲವನ್ನು ಕೆಡವಿಯೇ ಮಸೀದಿ ನಿರ್ಮಿಸಲಾಗಿತ್ತು.
ವೀರಭದ್ರ ಸಿಂಗ್‌, ಕಾಂಗ್ರೆಸ್‌ ನಾಯಕ

ಹುತಾತ್ಮ ಯೋಧರ ಹೆಸರಲ್ಲಿ, ಧರ್ಮದ ಹೆಸರಲ್ಲಿ ಮತ ಕೇಳುತ್ತಿರುವ ಮೋದಿಯವರಿಗೆ ನಾಚಿಕೆಯಾಗಬೇಕು. ಮೋದಿಯ ಚಟುವಟಿಕೆಗಳನ್ನು ಏನಾದರೂ ಹಿಟ್ಲರ್‌ ನೋಡಿದ್ದರೆ, ಆತ್ಮಹತ್ಯೆಗೆ ಶರಣಾಗುತ್ತಿದ್ದ.
ಮಮತಾ ಬ್ಯಾನರ್ಜಿ, ಟಿಎಂಸಿ ನಾಯಕಿ

ಟಾಪ್ ನ್ಯೂಸ್

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Prajwal Revanna

Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

1-wqweeqw

Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.