ನಿಖೀಲ್‌ಗೆ ಎದುರಾಯ್ತು ಮತ್ತೂಂದು ಸಂಕಷ್ಟ!
ನಾಮಪತ್ರದ ಪ್ರಮಾಣ ಪತ್ರದಲ್ಲಿರುವ ಹೆಸರಿಗೂ, ಮತದಾರರ ಪಟ್ಟಿಯಲ್ಲಿರುವ ಹೆಸರಿಗೂ ಆಗದ ಹೊಂದಾಣಿಕೆ
Team Udayavani, Apr 2, 2019, 6:05 AM IST
ಮಂಡ್ಯ: ನಾಮಪತ್ರ ವಿವಾದದಲ್ಲಿ ಸಿಲುಕಿರುವ ಮಂಡ್ಯ ಲೋಕಸಭೆಯ ಮೈತ್ರಿಕೂಟದ ಅಭ್ಯರ್ಥಿ ಕೆ.ನಿಖೀಲ್‌ಗೆ ಇದೀಗ ಮತ್ತೂಂದು ಸಂಕಷ್ಟ ಎದುರಾಗಿದೆ. ನಿಖೀಲ್ ನಾಮಪತ್ರದ ಪ್ರಮಾಣ ಪತ್ರದಲ್ಲಿರುವ ಹೆಸರಿಗೂ, ಮತದಾರರ ಪಟ್ಟಿಯಲ್ಲಿರುವ ಹೆಸರಿಗೂ ಹೊಂದಾಣಿಕೆಯಾಗುತ್ತಿಲ್ಲದ ಕಾರಣ ಅವರ ನಾಮಪತ್ರವನ್ನು ತಿರಸ್ಕರಿಸುವಂತೆ ಸಾಮಾಜಿಕ ಹೋರಾಟಗಾರ ಬಿ.ಎಸ್.ಗೌಡ ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.
ರಾಮನಗರ ಜಿಲ್ಲೆ ಮಾಗಡಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನಿಖೀಲ್ ಕುಮಾರಸ್ವಾಮಿ ಎಂದಿದೆ. ಆದರೆ, ಚುನಾವಣಾ ಪ್ರಮಾಣಪತ್ರದಲ್ಲಿ ಅವರ ಹೆಸರು ಕೆ.ನಿಖೀಲ್ ಎಂದು ನಮೂದಿಸಲಾಗಿದೆ. ಆದರೆ, ಇವರ ಹೆಸರು ನಿಖೀಲ್ ಕುಮಾರಸ್ವಾಮಿ ಎಂದು ಸುಳ್ಳು ಹೇಳಿದ್ದಾರೆ. ಮತದಾರರ ಪಟ್ಟಿಯಲ್ಲಿರುವ ಹೆಸರನ್ನು ಪ್ರಮಾಣಪತ್ರದಲ್ಲಿ ಮರೆಮಾಚಿದ್ದು, ಇಲ್ಲದ ಹೆಸರನ್ನು ಇದೆ ಎಂದು ಹೇಳಿದ್ದಾರೆ. ಆದ ಕಾರಣ ಕೆ.ನಿಖೀಲ್ ಅವರನ್ನು ಚುನಾವಣಾ ಉಮೇದುವಾರಿಕೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಪ್ರಮಾಣಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ್ದಾರಾ?
ಮಂಡ್ಯ: ನಿಖೀಲ್ ನಾಮಪತ್ರ ಸಲ್ಲಿಕೆ ವಿವಾದ ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುವುದರ ಜತೆಗೆ ಹೊಸ ಹೊಸ ಸಂಗತಿಗಳೂ ಬೆಳಕಿಗೆ ಬರಲಾರಂಭಿಸಿವೆ. ಪ್ರಮಾಣಪತ್ರದಲ್ಲಿ ಸುಳ್ಳು ಮಾಹಿತಿ ನೀಡಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ ಆರೋಪಿಸಿರುವುದಲ್ಲದೆ, ಚುನಾವಣಾ ಆಯೋಗಕ್ಕೆ ದೂರು ನೀಡಲು ನಿರ್ಧರಿಸಿದ್ದಾರೆ.
ಮೈ ರೀಡ್ ಮಾರ್ಕೆಟಿಂಗ್‌ನಿಂದ 50 ಲಕ್ಷ ರೂ. ಸಾಲ ಪಡೆದಿರುವ ಬಗ್ಗೆ ಕೆ.ನಿಖೀಲ್ ಪ್ರಮಾಣಪತ್ರದಲ್ಲಿ ಉಲ್ಲೇಖೀಸಿದ್ದು, ಆ ಹೆಸರಿನ ಕಂಪನಿಯೇ ಇಲ್ಲ ಎಂದು ಅಬ್ರಾಹಂ ಆರೋಪಿಸಿದ್ದಾರೆ. ಇನ್ನು ಫಿಜ್ಜಾ ಡೆವಲಪರ್ಸ್‌ನಿಂಧ 11 ಕೋಟಿ ರೂ. ಅಡ್ವಾನ್ಸ್ ಪಡೆದಿರುವುದಾಗಿ ಹೇಳಿದ್ದಾರೆ. ಯಾವ ಭೂಮಿಯನ್ನು ಪರಭಾರೆ ಮಾಡಲು ಮುಂಗಡ ಹಣ ಪಡೆದಿದ್ದಾರೆ. ಆ ಕಂಪನಿಯ ಅಧಿಕೃತ ಬಂಡವಾಳವೇ ಕೇವಲ 10 ಕೋಟಿ ರೂ. ಅಲ್ಲದೆ, ಕಂಪನಿಯ ನಗದು ವಹಿವಾಟು ಕೇವಲ 8.50 ಕೋಟಿ ರೂ. ಎಂದು ತಿಳಿಸಿದ್ದಾರೆ. ಕೆ.ನಿಖೀಲ್ ನಾಮಪತ್ರದಲ್ಲಿ 2017ರ ಆದಾಯ ತೆರಿಗೆ ವಿವರ ಸಲ್ಲಿಸಿದ್ದಾರೆಯೇ ವಿನಃ ಅಲ್ಲಿಂದ ಇಲ್ಲಿಯವರೆಗೂ ಆದಾಯ ತೆರಿಗೆ ಪಾವತಿಸಿರುವ ವಿವರ ಸಲ್ಲಿಸಿಲ್ಲ ಎಂದು ಆರೋಪಿಸಿದ್ದಾರೆ.
ಈ ಎಲ್ಲ ಮಾಹಿತಿಗಳ ಕುರಿತಂತೆ ಸಮಗ್ರ ತನಿಖೆಯಾಗಬೇಕು. ಇದರ ಹೊರತಾಗಿ ಅವರ ಚುನಾವಣಾ ನಾಮಪತ್ರ ಸ್ವೀಕಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ.
ಇಬ್ಬರು ವಿಡಿಯೋಗ್ರಾಫರ್ ವಿರುದ್ಧ ಎಫ್ಐಆರ್
ಮಂಡ್ಯ: ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಪ್ರದರ್ಶಿಸಿದ ಆರೋಪದ ಮೇಲೆ ಇಬ್ಬರು ವಿಡಿಯೋಗ್ರಾಫರ್‌ಗಳ ವಿರುದ್ಧ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಧುಚಂದ್ರ ಹಾಗೂ ರಾಮಕೃಷ್ಣ ಅವರ ವಿರುದ್ಧ ಚುನಾವಣಾಧಿಕಾರಿ ನೀಡಿದ ದೂರು ಆಧರಿಸಿ ಪೊಲೀಸರು ಐಪಿಸಿ ಸೆಕ್ಷನ್ 406, 420ರ ಅಡಿ ಪ್ರಕರಣ ದಾಖಲಿಸಲಾಗಿದೆ. ನಾಮಪತ್ರ ಪರಿಶೀಲನೆ ವೇಳೆ ವಿಡಿಯೋ ಚಿತ್ರೀಕರಣ ಮಾಡುವಲ್ಲಿ ಕರ್ತವ್ಯಲೋಪ ತೋರಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ.
ಪವರ್ ಕಟ್- ತೀವ್ರಗೊಂಡ ಚುನಾವಣಾಧಿಕಾರಿ ತನಿಖೆ: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ನಾಮಪತ್ರ ಸಲ್ಲಿಸುವ ದಿನ ವಿದ್ಯುತ್ ಕಡಿತಗೊಳಿಸಿರುವ ಬಗ್ಗೆ ಚುನಾವಣಾಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಸೆಸ್ಕ್ ಅಧೀಕ್ಷಕ ಎಂಜಿನಿಯರ್ ಎನ್.ಶ್ರೀನಿವಾಸ ಮೂರ್ತಿ ನೇತೃತ್ವದಲ್ಲಿ ಚುನಾವಣಾಧಿಕಾರಿಗಳು ಎಂಆರ್‌ಐ (ಮೀಟರ್ ರೀಡಿಂಗ್) ಮೆಷಿನ್ ಮೂಲಕ ನಗರದಲ್ಲಿರುವ ಮೂರು ಸಬ್‌ಸ್ಟೇಷನ್‌ಗಳಲ್ಲೂ ವಿದ್ಯುತ್ ವಿತರಣೆ ಹಾಗೂ ಕಡಿತ ಸಂಬಂಧ ಡೇಟಾ ಸಂಗ್ರಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.