ಉತ್ತರ ವಶಕ್ಕೆ ಪುರ ಗೆಲ್ಲಬೇಕು
Team Udayavani, Mar 17, 2019, 6:38 AM IST
ಕ್ಷೇತ್ರದ ವಸ್ತುಸ್ಥಿತಿ: ಕೆ.ಆರ್.ಪುರ ವಿಧಾನಸಭೆ ಕ್ಷೇತ್ರದ ಚುನಾವಣೆಯಲ್ಲಿ ಸತತ 2 ಬಾರಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ಮತದಾರು ಕಾಂಗ್ರೆಸ್ ಕೈ ಹಿಡಿದಿದ್ದಾರೆ.ವಿಧಾನಸಭೆ ಚುನಾವಣೆಯಲ್ಲಿ ಕೈ ಬೆಂಬಲಿಸಿದರೆ ಲೋಕಸಭೆ ಚುನಾವಣೆಯಲ್ಲಿ ಮತದಾರರು ಬಿಜೆಪಿಯತ್ತ ಒಲವು ತೋರಿರುವುದನ್ನು ಅಂಕಿ-ಅಂಶಗಳು ಹೇಳುತ್ತಿವೆ.
2014ರ ಲೋಕಸಭೆ ಚುನಾವಣೆಯಲ್ಲಿ ಕೆ.ಆರ್.ಪುರ ವಿಧಾನಸಭೆ ಕ್ಷೇತ್ರದ ಶೇ.61 ಮತಗಳು ಬಿಜೆಪಿ ಪಾಲಾಗಿವೆ. 2014ರಲ್ಲಿ ಕೆ.ಆರ್.ಪುರದ 2,01,910 ಮತಗಳಲ್ಲಿ ಬಿಜೆಪಿ 1,12,144 ಮತ ಪಡೆದರೆ, ಕೇಂದ್ರ ಸಚಿವ ಸದಾನಂದಗೌಡರ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್‌ನ ಸಿ.ನಾರಾಯಣಸ್ವಾಮಿ 78,109 ಮತ ಗಳಿಸಿದ್ದರು. ಎಎಪಿ ಅಭ್ಯರ್ಥಿ ಬಾಬು ಮ್ಯಾಥ್ಯೂವ್ 6,517 ಮತ್ತು ಜೆಡಿಎಸ್‌ನ ಅಬ್ದುಲ್ ಅಜೀಂ 2,993 ಮತ ಪಡೆದಿದ್ದರು.
ಈ ಬಾರಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಭಾರೀ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಸದ್ಯಕ್ಕೆ ಕೆ.ಆರ್.ಪುರ ವಿಧಾನಸಭೆ ಕ್ಷೇತ್ರದ ಮೇಲೆ ಕಾಂಗ್ರೆಸ್ ಬಿಗಿಹಿಡಿತ ಸಾಧಿಸಿದ್ದು, 9 ವಾರ್ಡ್‌ಗಳ ಪೈಕಿ 7ರಲ್ಲಿ ಕಾಂಗ್ರೆಸ್ ಮತ್ತು 2ರಲ್ಲಿ ಬಿಜೆಪಿ ಪಾಲಿಕೆ ಸದಸ್ಯರಿದ್ದಾರೆ. ಉತ್ತರ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಬೇಕಾದರೆ ಇಲ್ಲಿನ ಕಾಂಗ್ರೆಸ್ ಶಾಸಕರ ಬೆಂಬಲ ಅನಿವಾರ್ಯ.
ಸಂಸದರ ಪ್ರಮುಖ ಕೊಡುಗೆ
-ಕೆ.ಆರ್.ಪುರ ರೈಲು ನಿಲ್ದಾಣದ ಪಿಆರ್‌ಎಸ್ ಕೌಂಟರ್‌ನಲ್ಲಿ ತಡೆರಹಿತ ವಿದ್ಯುತ್ ಪೂರೈಕೆಗಾಗಿ ಸುಧಾರಿತ ಸ್ಟಾಂಡ್- ಬೈ ವಿದ್ಯುತ್ ವ್ಯವಸ್ಥೆ
-ಪ್ಲಾಟ್ ಫಾರಂ 2 ವಿಸ್ತರಣೆ
-ಬೈಯಪ್ಪನಹಳ್ಳಿ ನಿಲ್ದಾಣಲ್ಲಿ ರೈಲ್ವೆ ಮಟ್ಟದ ಪ್ಲಾಟ್ ಫಾರಂ ವಿಸ್ತರಣೆ
-ಕೆ.ಆರ್.ಪುರದಲ್ಲಿ ಕಲರ್ ಕೋಚ್ ಬೋರ್ಡ್ ನಿರ್ಮಾಣ
-ಎಲೆಕ್ಟ್ರಿಕ್ ರೈಲುಗಳನ್ನು ಡೀಸೆಲ್ ಶೆಡ್‌ನಲ್ಲಿ ನಿಲ್ಲಿಸಲು ಅನುವು
ನಿರೀಕ್ಷೆಗಳು
-ಕಿಮ್ಸ್ ಮಾದರಿ ಆಸ್ಪತ್ರೆ ನಿರ್ಮಾಣ
-ಬೈಯಪ್ಪನಹಳ್ಳಿಯಿಂದ ಕೆ.ಆರ್.ಪುರವರೆಗೆ ಮೆಟ್ರೊ ವಿಸ್ತರಣೆ
-ವಾರ್ಡ್‌ಗಳು- 9
-ಬಿಜೆಪಿ -2
-ಕಾಂಗ್ರೆಸ್ – 7
-ಜೆಡಿಎಸ್ -0
-ಜನಸಂಖ್ಯೆ -6,39,723
-ಮತದಾರರ ಸಂಖ್ಯೆ -4,63,419
-ಪುರುಷರು -3,32,662
-ಮಹಿಳೆಯರು-3,07,061
2014ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಚಲಾವಣೆಯಾದ ಮತಗಳು-2,01,910 (61%)
-ಬಿಜೆಪಿ ಪಡೆದ ಮತಗಳು -1,12,144 ಮತಗಳು (55.5%)
-ಕಾಂಗ್ರೆಸ್ ಪಡೆದ ಮತಗಳು – 78,109 ಮತಗಳು (38.7%)
-ಜೆಡಿಎಸ್ ಪಡೆದ ಮತಗಳು – 2,993 ಮತಗಳು (1.5%)
2014ರ ಚುನಾವಣೆಯಲ್ಲಿ
-ಬೈರತಿ ಬಸವರಾಜ ಕಾಂಗ್ರೆಸ್ ಶಾಸಕ
-ಪಾಲಿಕೆಯಲ್ಲಿ ಬಿಜೆಪಿ ಸದಸ್ಯರು-8
-ಕಾಂಗ್ರೆಸ್ ಸದಸ್ಯರು-1
-ಜೆಡಿಎಸ್-0
ಮಾಹಿತಿ: ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.