10% ಅಲ್ಲ, 20% ಕಮಿಷನ್‌ ಸರ್ಕಾರ

ಕಾಂಗ್ರೆಸ್‌ ಶಾಸಕರ ನಿಲುವಿನ ಮೇಲೆ ನಿಲ್ಲಲಿದೆ ಮೈತ್ರಿ ಸರ್ಕಾರದ ಭವಿಷ್ಯ: ಬಿ.ಎಸ್‌.ಯಡಿಯೂರಪ್ಪ

Team Udayavani, Apr 6, 2019, 6:00 AM IST

BSY-D

ಬೆಂಗಳೂರು: “ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 22 ಸ್ಥಾನ ಗೆಲ್ಲಲಿದ್ದು, ಬಳಿಕ, ಕಾಂಗ್ರೆಸ್‌ ಶಾಸಕರ ನಿಲುವಿನ ಮೇಲೆ ಮೈತ್ರಿ ಸರ್ಕಾರದ ಭವಿಷ್ಯ
ಅವಲಂಬಿತವಾಗಿರಲಿದೆ’ ಎಂದು ಹೇಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ರಾಜ್ಯದ ಮೈತ್ರಿ ಸರ್ಕಾರ 10% ಅಲ್ಲ , 20 % ಕಮಿಷನ್‌ ಸರ್ಕಾರ ಎಂದು
ಹರಿಹಾಯ್ದರು.

ಬೆಂಗಳೂರು ಪ್ರಸ್‌ಕ್ಲಬ್‌ ಶುಕ್ರವಾರ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.ನಾವು 22 ಸ್ಥಾನ ಗೆಲ್ಲುತ್ತೇವೆ. ಫ‌ಲಿತಾಂಶದ ನಂತರ ಕಚ್ಚಾಟ, ಬಡಿದಾಟ ಹೆಚ್ಚಾಗಿ ಅತೃಪ್ತ ಕಾಂಗ್ರೆಸ್‌ ಶಾಸಕರು ಯಾವ ನಿಲುವು ಕೈಗೊಳ್ಳುತ್ತಾರೆ ಎಂಬುದರ ಮೇಲೆ ಮುಂದಿನ ಬದಲಾವಣೆಯನ್ನು ಕಾದು ನೋಡಬೇಕಿದೆ.”ಆಪರೇಷನ್‌ ಕಮಲ’ದ ಪ್ರಶ್ನೆ ಇಲ್ಲ ಎಂದರು.

ಮೂಲೆಗುಂಪು ಮಾಡಲ್ಲ: ಮೋದಿಯವರಿಗೆ ಪ್ರತಿರೋಧ ತೋರಿದರೆ ದೇಶ ವಿರೋಧಿ ಎಂಬ ಸ್ಥಿತಿ ತಲುಪಿದೆ ಎಂಬ ಎಲ್‌.ಕೆ.ಅಡ್ವಾಣಿಯವರ ಅಭಿಪ್ರಾಯ ಕುರಿತು ಪ್ರತಿಕ್ರಿಯಿಸಿದ ಯಡಿಯೂರಪ್ಪ, ಅಡ್ವಾಣಿಯವರ ಅಭಿಪ್ರಾಯಕ್ಕೆ ಮೋದಿಯವರು ಸಹಮತ ವ್ಯಕ್ತಪಡಿಸಿದ್ದಾರೆ. ಅಡ್ವಾಣಿ ಅವರ ಸಲಹೆಯಂತೆಯೇ ಹೆಜ್ಜೆ ಇಡುತ್ತೇವೆ ಎಂಬುದಾಗಿ ಮೋದಿಯವರೇ ಹೇಳಿದ್ದಾರೆ. ಅವರನ್ನು ಮೂಲೆಗುಂಪು ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ಸಂಘಟನೆಗೆ ಶ್ರಮಿಸುತ್ತೇನೆ
ನಾನು ಪಕ್ಷದ ಜವಾಬ್ದಾರಿಯುತ ಕಾರ್ಯಕರ್ತ. ಪ್ರಧಾನಿ ಮೋದಿ, ಅಮಿತ್‌ ಶಾ ಅವರ ತೀರ್ಮಾನಕ್ಕೆ ಬದಟಛಿ. ಸಾಮಾನ್ಯ ಕಾರ್ಯಕರ್ತನಾಗಿ 40 ವರ್ಷಗಳಿಂದ ರಾಜ್ಯ ಪ್ರವಾಸ ನಡೆಸಿ ಪಕ್ಷ ಸಂಘಟಿಸಿದ್ದೇನೆ. ಆಗ ಯಾವುದೇ ಸ್ಥಾನಮಾನ ಇರಲಿಲ್ಲ. ಇಂದು ಐದು ವರ್ಷ ಆಡಳಿತ ನಡೆಸಿದ್ದೇವೆ. ಮುಂದೆ ಯಾವುದೇ ಸ್ಥಾನಮಾನ ಇರಲಿ,
ಇಲ್ಲದಿರಲಿ ಸಂಘಟನೆಗಾಗಿ ಶ್ರಮಿಸುತ್ತೇನೆ. ಜವಾಬ್ದಾರಿ ಇಲ್ಲ ಎಂಬ ಕಾರಣಕ್ಕೆ ಹಿಂದೆ ಸರಿಯಲ್ಲ ಎಂದರು.

ಮಂಡ್ಯದಲ್ಲಿ ಪ್ರಚಾರ ಸಾಧ್ಯತೆ ಕಡಿಮೆ
ಸುಮಲತಾ ಅವರನ್ನು ನಾನು ಚುನಾವಣೆಗೆ ನಿಲ್ಲಿಸಿಲ್ಲ. ಅವರ ಕೋರಿಕೆಯಂತೆ ವರಿಷ್ಠರು ಪಕ್ಷದ ಅಭ್ಯರ್ಥಿಯನ್ನು ಹಾಕದೆ ಬೇಷರತ್‌ ಬೆಂಬಲ ನೀಡಿದ್ದಾರೆ. ಸುಮಲತಾರನ್ನು ಬಿಜೆಪಿಗೆ ಸೇರಿ ಎಂದು ಒತ್ತಾಯ ಮಾಡುತ್ತಿಲ್ಲ. ಕುಮಾರಸ್ವಾಮಿಯವರು ಮಂಡ್ಯಕ್ಕೆ ಅಂಬರೀಶ್‌ ಕೊಡುಗೆ ಏನು ಎಂದು ಕೇಳಿದ್ದು, ನಿತ್ಯ ಸುಮಲತಾ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದರಿಂದ ಜನ ಆಕ್ರೋಶಗೊಂಡಿದ್ದಾರೆ. ಅಂಬರೀಶ್‌ಗೆ ಅವಮಾನ ಮಾಡಿರುವುದು ತಿರುಗುಬಾಣವಾಗಿ ಗೆಲುವಿಗೆ ನಾಂದಿಯಾಗಲಿದೆ. ಈ ಬಾರಿ ಸುಮಲತಾ ಗೆಲ್ಲುತ್ತಾರೆ. ನಾನು ರಾಜ್ಯಾದ್ಯಂತ ಪ್ರವಾಸ ನಡೆಸಬೇಕಿರುವುದರಿಂದ ಮಂಡ್ಯದಲ್ಲಿ ಪ್ರಚಾರಕ್ಕೆ ಹೋಗುವ ಸಾಧ್ಯತೆ ಕಡಿಮೆ.

ನನ್ನ ಮೇಲೆ ಬ್ಲಾಕ್‌ಮೇಲ್ ಯತ್ನ: ನನ್ನ ಮೇಲೆ ಬ್ಲಾಕ್‌ಮೇಲ್ ಪ್ರಯತ್ನ ನಡೆಯುತ್ತಿದೆ. ಮುಖ್ಯಮಂತ್ರಿ, ಸರ್ಕಾರವೇ ಮುಂದೆ ನಿಂತು ಬ್ಲಾಕ್‌ಮೇಲ್ , ಷಡ್ಯಂತ್ರ ನಡೆಸುತ್ತಿರುವುದಕ್ಕೆ ಸಾಕಷ್ಟು ಪುರಾವೆ, ಸಾಕ್ಷ್ಯಗಳಿವೆ. ಆಡಿಯೋ ಪ್ರಕರಣ ಕುಮಾರಸ್ವಾಮಿಯವರು ನಡೆಸಿದ ಷಡ್ಯಂತ್ರ ಎಂಬುದು ಜನತೆಗೆ ಗೊತ್ತಾಗಿದೆ. ಸರ್ಕಾರ ತನಿಖೆ ನಡೆಸಲಿ ಸತ್ಯಾಂಶ ಹೊರಬರಲಿದೆ.

ಸಂವಾದದಲ್ಲಿ ಬಿಎಸ್‌ವೈ ಹೇಳಿದ್ದು..
ಹಾಸನಕ್ಕೆ ಸಂಬಂಧಪಟ್ಟಂತೆ 1,365 ಕೋಟಿ ರೂ.ಮೊತ್ತದ ಕಾಮಗಾರಿ ಮುಗಿಯುವ ಮೊದಲೇ ಮುಂಗಡವಾಗಿ ಹಣ ನೀಡಲಾಗಿದೆ ಎಂಬುದಾಗಿ ಐಟಿ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.ಅದರಂತೆ ಇದು 10 ಪರ್ಸೆಂಟ್‌ ಅಲ್ಲ, 20 ಪರ್ಸೆಂಟ್‌ ಕಮಿಷನ್‌ ಸರ್ಕಾರ ಎಂಬುದು ದೃಢಪಟ್ಟಿದೆ.
– ಚುನಾವಣೆ ಬಳಿಕ ನನ್ನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೈಬಿಟ್ಟರೆ ವಿಧಾನಸಭೆಯ ಪ್ರತಿಪಕ್ಷ ನಾಯಕನಾಗಿ ಮುಂದುವರಿಯುತ್ತೇನೆ. ಯಾವ ಸ್ಥಾನಮಾನ ಇಲ್ಲದಿದ್ದರೂ ರಾಜ್ಯ ಸುತ್ತಾಡಿ ಪಕ್ಷ ಬೆಳೆಸುತ್ತೇನೆ.
– ಶಿವಮೊಗ್ಗದಲ್ಲಿ ಈ ಹಿಂದೆ ಬಂಗಾರಪ್ಪ ಸೋತಿದ್ದರು. ಮಧು ಬಂಗಾರಪ್ಪ ಕೂಡ ಸೋತಿದ್ದಾರೆ. ಈ ಬಾರಿ ಬಿ.ವೈ.ರಾಘವೇಂದ್ರ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ.
– ಮಂಡ್ಯದಲ್ಲಿ ನಡೆದಿರುವುದು ಒಕ್ಕಲಿಗರ ಸಂಘದ ಚುನಾವಣೆಯಲ್ಲ ಎಂದು ಎಸ್‌.ಎಂ.ಕೃಷ್ಣ ಅವರು ಹೇಳಿರುವುದು ಸರಿಯಾಗಿದೆ. ಅಲ್ಲಲ್ಲಿ ಜಾತಿ ರಾಜಕಾರಣ
ನಡೆಯುವುದು ಸ್ವಾಭಾವಿಕ. ಅದನ್ನೂ ಮೀರಿ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ನಿಟ್ಟಿನಲ್ಲಿ ಬಿಜೆಪಿ ಪ್ರಯತ್ನ ನಡೆಸುತ್ತದೆ.
– ರಾಜ್ಯದ 28 ಕ್ಷೇತ್ರಗಳ ಪೈಕಿ ನಾವು ಶಿಫಾರಸು ಮಾಡಿದ ಅಭ್ಯರ್ಥಿಗಳನ್ನೇ ಪಕ್ಷ ಆಯ್ಕೆ ಮಾಡಿದೆ. ಬೆಂಗಳೂರು ದಕ್ಷಿಣ, ಚಿಕ್ಕೋಡಿ ಕ್ಷೇತ್ರದಲ್ಲಿ ಮಾತ್ರ ಕೇಂದ್ರ ಚುನಾವಣಾ ಸಮಿತಿ ಬೇರೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ.
– ನನ್ನ ಮೇಲೂ ಐಟಿ ದಾಳಿ ನಡೆದಿತ್ತು.ಸಂಸದ ಜಿ.ಎಂ.ಸಿದ್ದೇಶ್ವರ್‌, ಶಾಸಕ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಹಾಗೂ ಇತರರ ಮೇಲೂ ನಡೆದಿತ್ತು. ಗುಮಾನಿ
ಬಂದ ಕಡೆ ಐಟಿ ದಾಳಿ ನಡೆಸುತ್ತದೆ.
– ಮಲ್ಲಿಕಾರ್ಜುನ ಖರ್ಗೆಯವರು ಸೋಲಲಿದ್ದಾರೆ. ತುಮಕೂರಿನಲ್ಲಿ ದೇವೇಗೌಡರಿಗೂ ಇದೇ ಪರಿಸ್ಥಿತಿ ಬರಲಿದೆ. ಕೋಲಾರದಲ್ಲೂ ಇದೇ ಸ್ಥಿತಿ ಇದೆ. ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ ಗೆದ್ದಾಗಿದೆ.
– ಬೆಂಗಳೂರು ದಕ್ಷಿಣಕ್ಕೆ ತೇಜಸ್ವಿನಿ ಅನಂತ ಕುಮಾರ್‌ ಅವರ ಹೆಸರನ್ನೇ ಕಳುಹಿಸಲಾಗಿತ್ತು. ವರಿಷ್ಠರು ತೇಜಸ್ವಿ ಸೂರ್ಯ ಅವರಿಗೆ ಅವಕಾಶ ನೀಡಿದ್ದಾರೆ.ತೇಜಸ್ವಿ ಸೂರ್ಯ 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ.

ಪ್ರಚಾರಕ್ಕೆ ಹೆಲಿಕಾಪ್ಟರ್‌ ಸಿಗದಿರುವುದಕ್ಕೂ, ಕೇಂದ್ರ ಸರ್ಕಾರಕ್ಕೂ ಏನು ಸಂಬಂಧ? ನನಗೂ ಒಂದು ವಾರದಿಂದ ಹೆಲಿಕಾಪ್ಟರ್‌ ಸಿಕ್ಕಿರಲಿಲ್ಲ. ಸಿಂಗಲ್‌ ಎಂಜಿನ್‌ ಹೆಲಿಕಾಪ್ಟರ್‌ನ್ನೇ ಹೇಗೋ ಪರದಾಡಿಕೊಂಡು ಉಪಯೋಗಿಸಿದ್ದೇನೆ. ಎಲ್ಲ ಪಕ್ಷಗಳಿಂದಲೂ ಬೇಡಿಕೆಯಿರುವುದರಿಂದ ಹೆಲಿಕಾಪ್ಟರ್‌ಗಳು ಸಿಗುತ್ತಿಲ್ಲ. ಇದಕ್ಕೂ ಪ್ರಧಾನಿ ಮೋದಿ, ಯಡಿಯೂರಪ್ಪ ಜವಾಬ್ದಾರಿಯೇ?
– ಬಿ.ಎಸ್‌.ಯಡಿಯೂರಪ್ಪ,
ಬಿಜೆಪಿ ರಾಜ್ಯಾಧ್ಯಕ್ಷ.

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.