ನಾಗಪುರದಲ್ಲಿ ಗಡ್ಕರಿ ನಾಗಾಲೋಟಕ್ಕೆ ಬ್ರೇಕ್‌ ಹಾಕುವರೇ ಪಟೋಲೆ?

ಕಾಂಗ್ರೆಸ್‌ ಪ್ರಯೋಗಿಸುತ್ತಿದೆ ಡಿಎಂಕೆ (ದಲಿತ-ಮುಸ್ಲಿಂ-ಕುನಿº) ತಂತ್ರ

Team Udayavani, Apr 1, 2019, 6:00 AM IST

Nitin-Gadkari,-Nana-Patole

ಈ ಬಾರಿ ಮಹಾರಾಷ್ಟ್ರದ ನಾಗಪುರ ಕ್ಷೇತ್ರದಲ್ಲಿ ನಿತಿನ್‌ ಗಡ್ಕರಿ ಮತ್ತು ಕಾಂಗ್ರೆಸ್‌ನ ನಾನಾಭಾವು ಪಟೋಲೆ ನಡುವೆ ನೇರ ಸ್ಪರ್ಧೆ ಇದೆ. ನಾನಾ ಪಟೋಲೆ 2007ರಲ್ಲಿ ಬಿಜೆಪಿಯನ್ನು ತೊರೆದು ಕಾಂಗ್ರೆಸ್‌ಗೆ ಹಿಂದಿರುಗಿದ್ದರು. ಆದಾಗ್ಯೂ ನಾಗಪುರ ಆರ್‌ಎಸ್‌ಎಸ್‌ನ ಹುಟ್ಟೂರಾಗಿದ್ದರೂ ಅನೇಕ ವರ್ಷಗಳ ಕಾಲ ಕಾಂಗ್ರೆಸ್‌ನ ಬಿಗಿಹಿಡಿತದಲ್ಲೇ ಇದ್ದದ್ದು ವಿಶೇಷ. ಕಾಂಗ್ರೆಸ್‌ ನಾಯಕ ವಿಲಾಸ್‌ ಮುಟ್ಟೆಂಮಾÌರ್‌ 1998ರಿಂದ ನಿರಂತರವಾಗಿ ನಾಲ್ಕು ಬಾರಿ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಾ ಬಂದಿದ್ದರು. ಆದರೆ 2014ರಲ್ಲಿ ಗಡ್ಕರಿ 2.84 ಲಕ್ಷ ಮತಗಳ ಅಂತರದಿಂದ ವಿಲಾಸ್‌ರನ್ನು ಸೋಲಿಸಿಬಿಟ್ಟರು. ಈ ಬಾರಿ ಕಾಂಗ್ರೆಸ್‌ ನಾಗಪುರದಲ್ಲಿ ವಿಲಾಸ್‌ ಮುಟ್ವೆಂಮಾÌರ್‌ ಅವರನ್ನು ಕಣಕ್ಕಿಳಿಸುವ ಬಗ್ಗೆ ಯೋಚಿಸಲೂ ಇಲ್ಲ ಎನ್ನುವುದು ವಿಶೇಷ.

ಕಾಂಗ್ರೆಸ್‌ನ ಡಿಎಂಕೆ(ದಲಿತ್‌-ಮುಸ್ಲಿಂ-ಕುನಿº) ತಂತ್ರ
ಆದಾಗ್ಯೂ ವಿದರ್ಭಾ ಪ್ರಾಂತ್ಯ ತನ್ನ ಜಾತಿ ರಾಜಕೀಯಕ್ಕೆ ಹೆಸರಾಗಿದ್ದರೂ, ಇಷ್ಟು ವರ್ಷ ನಾಗಪುರದಲ್ಲಿ ಮಾತ್ರ ಜಾತಿ ರಾಜಕಾರಣ ಅಷ್ಟೊಂದು ಪ್ರಮುಖ ಪಾತ್ರ ವಹಿಸಿರಲಿಲ್ಲ. ಆದರೆ ಈ ಬಾರಿ ಕಾಂಗ್ರೆಸ್‌ ಜಾತಿ ತಂತ್ರದ ಮೂಲಕ ಗಡ್ಕರಿಯವರನ್ನು ಕಟ್ಟಿಹಾಕುವ ಪ್ರಯತ್ನ ನಡೆಸಿದೆ. ನಾನಾ ಪಟೋಲೆ ಕುನಿº ಸಮುದಾಯಕ್ಕೆ ಸೇರಿದ್ದು, 28 ವರ್ಷಗಳ ನಂತರ ಕುನಿº ಸಮುದಾಯದ ವ್ಯಕ್ತಿಯೊಬ್ಬರನ್ನು ಕಾಂಗ್ರೆಸ್‌ ಚುನಾವಣೆಗೆ ನಿಲ್ಲಿಸುತ್ತಿದೆ. ಇದಷ್ಟೇ ಅಲ್ಲದೆ ಈ ಬಾರಿ ದಲಿತರು-ಮುಸ್ಲಿಮರು ಮತ್ತು ಕುನಿº(ಡಿಎಂಕೆ) ತನ್ನೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ. ನಾಗಪುರದಲ್ಲಿ 21 ಲಕ್ಷ ಮತದಾರರಿದ್ದು, ಈ ಮೂರೂ ಜಾತಿಗಳ ಜನಸಂಖ್ಯೆ 12 ಲಕ್ಷದಷ್ಟಿದೆ ಎನ್ನುತ್ತದೆ ಕಾಂಗ್ರೆಸ್‌. ಹೀಗಾಗಿ ಗಡ್ಕರಿ ಈ ಬಾರಿ ಪ್ರಬಲ ಸ್ಪರ್ಧೆ ಎದುರಿಸಲಿದ್ದಾರೆ ಎನ್ನುವುದು ಕಾಂಗ್ರೆಸ್‌ ನಂಬಿಕೆ. 2014ರ ಲೋಕಸಭಾ ಚುನಾವಣೆಯಲ್ಲಿ ವಿದರ್ಭಾದ ಭಂಡಾರಗೊಂಡಿಯಾ ಲೋಕಸಭಾ ಕ್ಷೇತ್ರದಲ್ಲಿ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷದ ಹುರಿಯಾಳು ಪ್ರಫ‌ುಲ್‌ ಪಟೇಲ್‌ರನ್ನು ಭಾರೀ ಅಂತರದಿಂದ ಸೋಲಿಸಿದ್ದರು ಪಟೋಲೆ!(ಆದರೆ, ಆಗ ಪಟೋಲೆ ಬಿಜೆಪಿಯಲ್ಲಿ ಇದ್ದರು. ಮೋದಿ ಅಲೆ ಅವರಿಗೆ ಅನುಕೂಲ ಮಾಡಿಕೊಟ್ಟಿತು ಎನ್ನುತ್ತದೆ ಬಿಜೆಪಿ. ಪಟೋಲೆ ಪಕ್ಷಾಂತರಕ್ಕೆ ಹೆಸರಾಗಿದ್ದು, 2014ರಲ್ಲಿ ಬಿಜೆಪಿ ಸೇರಿದ್ದರು, 2017ರಲ್ಲಿ ಮತ್ತೆ ಕಾಂಗ್ರೆಸ್‌ನ ಒಳಹೊಕ್ಕರು.)

ಬುಕ್ಕಿಗಳ ಹಣ ಗಡ್ಕರಿ ಪರ!
ನಾಗಪುರದಲ್ಲಿ ಬುಕ್ಕಿಗಳು ಗಡ್ಕರಿ ಪರ ಬೆಟ್ಟಿಂಗ್‌ ಕಟ್ಟುತ್ತಿದ್ದಾರೆ ಎನ್ನುತ್ತದೆ ಟೈಮ್ಸ್‌ ಆಫ್ ಇಂಡಿಯಾದ ವರದಿ. ಗಡ್ಕರಿ ಕೂಡ ಸಂದರ್ಶನವೊಂದರಲ್ಲಿ, “”ಈ ಬಾರಿ ನಾಗಪುರದಲ್ಲಿ ನನ್ನ ಗೆಲುವು ಖಚಿತ ಎಂದು ಖುದ್ದು ಕಾಂಗ್ರೆಸ್‌ ಕಾರ್ಯಕರ್ತರೇ ಬಂದು ನನಗೆ ಹೇಳುತ್ತಿದ್ದಾರೆ” ಎಂದಿದ್ದರು.

ಅಭಿವೃದ್ಧಿ ಕಾರ್ಯಗಳಿಂದಲೇ ಮನೆಮಾತಾಗಿರುವ ಗಡ್ಕರಿ, “ಕಳೆದ ಐದು ವರ್ಷಗಳಲ್ಲಿ ನಾಗಪುರದಲ್ಲಿ 56,000 ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ’ ಎನ್ನುತ್ತಾರೆ. 2014-2019ರ ನಡುವೆ ಗಡ್ಕರಿಯವರ ಒತ್ತಾಸೆಯಿಂದಾಗಿ ಏಮ್ಸ್‌, ಐಐಎಂ, ಐಐಐಟಿ, ಎನ್‌ಐಪಿಇಆರ್‌ನಂಥ ಮಹತ್ವದ ಸಂಸ್ಥೆಗಳನ್ನೂ ನಾಗಪುರದಲ್ಲಿ ಸ್ಥಾಪಿಸಲಾಗಿದೆ. ನಾಗಪುರ ಮೆಟ್ರೋದ ರೂವಾರಿ ಎಂದೂ ಗಡ್ಕರಿಯವರನ್ನು ಕರೆಯಲಾಗುತ್ತದೆ. ಈ ಎಲ್ಲಾ ಅಂಶಗಳೇ ತಮ್ಮ ಪರ ಚುನಾವಣೆಯಲ್ಲಿ ಕೆಲಸ ಮಾಡಲಿವೆ ಎನ್ನುವ ಭರವಸೆಯಲ್ಲಿದ್ದಾರೆ ನಿತಿನ್‌ ಗಡ್ಕರಿ.

ಹೀಗಿದೆ ಕ್ಷೇತ್ರ
ಮಹಾರಾಷ್ಟ್ರದ ವಿದರ್ಭಾ ಪ್ರಾಂತ್ಯದ ಪ್ರಮುಖ ನಗರಿಯಾಗಿರುವ ಈ ಊರಿನ ಹೆಸರು ಕೇಳುತ್ತಿದ್ದಂತೆಯೇ ಬಹುತೇಕರಿಗೆ ವಿಸಿಎ ಕ್ರಿಕೆಟ್‌ ಸ್ಟೇಡಿಯಂ ನೆನಪಾಗುತ್ತದೆ. ಮಹಾರಾಷ್ಟ್ರದ ಮೂರನೇ ಅತಿದೊಡ್ಡ ನಗರಿಯೂ ಆಗಿರುವ ನಾಗಪುರ, ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು. ಇದಷ್ಟೇ ಅಲ್ಲ, “2019-2035ರ ನಡುವೆ ಪ್ರಪಂಚದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ನಗರಗಳಲ್ಲಿ 5ನೇ ಸ್ಥಾನದಲ್ಲಿ ಇರ ಲಿದೆ’ ಎನ್ನುತ್ತದೆ ಆಕ್ಸ್‌ಫ‌ರ್ಡ್‌ ಎಕನಾಮಿಕ್ಸ್‌ ವರದಿ. ಮಹಾ ರಾಷ್ಟ್ರದ ಪ್ರಸ್ತಾವಿತ ಸ್ಮಾರ್ಟ್‌ಸಿಟಿಗಳಲ್ಲಿ ಇದೂ ಒಂದು.

ಚುನಾವಣೆಗೆ ಆನೆ ಭಯ
ಪಶ್ಚಿಮ ಬಂಗಾಳದ ಬಂಕುರಾ, ಜಾರ್‌ಗ್ರಾಂ, ಬಿಷ್ಣುಪುರ್‌ ಮತ್ತು ಬಂಕಾಪುರ ಲೋಕಸಭಾ ಕ್ಷೇತ್ರಗಳು ಅಜಮಾಸು 30 ಪ್ರತಿಶತ ಅರಣ್ಯ ಭಾಗವಿದ್ದು, ಆನೆಗಳ ಓಡಾಟ ಹೆಚ್ಚು. ಅನೇಕ ಬಾರಿ ಗ್ರಾಮಸ್ಥರು ಆನೆಗಳ ದಾಳಿಗೆ ಮೃತಪಟ್ಟಿದ್ದಾರೆ. ಚುನಾವಣೆಯ ವೇಳೆ ಆನೆಗಳು ಮತಗಟ್ಟೆಗಳತ್ತ ಬಂದರೆ ಏನು ಮಾಡೋದು ಎನ್ನುವ ಚಿಂತೆ ಅಧಿಕಾರಿಗಳದ್ದು. ಹೀಗಾಗಿ, ಅರಣ್ಯ ಇಲಾಖೆಯ ಸಹಾಯದ ಜೊತೆಗೆ, ಆ್ಯಂಬುಲೆನ್ಸ್‌ ಮತ್ತು ವಿಶೇಷ ಕಿಟ್‌ಗಳನ್ನೂ ಸಿದ್ಧಪಡಿಸಿಟ್ಟುಕೊಳ್ಳುತ್ತಿದ್ದಾರೆ.

ನಾನು “ಚೌಕೀದಾರ್‌’ ಅಲ್ಲ
ಭಾರತದ ಮೊದಲ ಮತದಾರ, ಹಿಮಾಚಲ ಪ್ರದೇಶದ 101 ವರ್ಷದ ಶ್ಯಾಮ ಶರಣ್‌ ನೇಗಿ ಬಿಜೆಪಿಯ ವಿರುದ್ಧ ಧ್ವನಿ ಎತ್ತಿದ್ದಾರೆ. ಬಿಜೆಪಿಯ ನಾಯಕರೊಬ್ಬರು ತಮ್ಮ ಅನುಮತಿಯಿಲ್ಲದೇ ತಮ್ಮ ಹೆಸರನ್ನು ಪ್ರಚಾರಕ್ಕೆ ಬಳಸಿಕೊಂಡದ್ದು ನೇಗಿಯವರ ಮುನಿಸಿಗೆ ಕಾರಣ. ತಮ್ಮ ಚಿತ್ರವನ್ನು ಬಳಸಿಕೊಂಡದ್ದಷ್ಟೇ ಅಲ್ಲದೆ, “ಚೌಕೀದಾರ್‌ ನೇಗಿ’ ಎಂದು ಬರೆದು ನಾನು ಮೋದಿಗೆ ಮತ ಕೇಳುತ್ತಿರುವಂತೆ ಬಿಂಬಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ ಈ ಅಜ್ಜ.

ರಾಜಕೀಯ ಸ್ವೀಟ್‌
ಪ. ಬಂಗಾಳದ ಹೌರಾದ ಸ್ವೀಟ್‌ ಅಂಗಡಿ ಯೊಂದು ಈಗ ಬಿಜೆಪಿ, ತೃಣಮೂಲ ಕಾಂಗ್ರೆಸ್‌, ಸಿಪಿಎಂನ ಚಿಹ್ನೆಗಳಿರುವ ಖಾದ್ಯಗಳನ್ನು ಮಾರಲಾರಂಭಿಸಿದೆ. ಮತದಾನದ ಬಗ್ಗೆ ಜಾಗೃತಿ ಮೂಡಿಸಲು ತಾವು ಹೀಗೆ ಮಾಡಿದ್ದಾಗಿ ಮಾಲೀಕರು ಹೇಳುತ್ತಾರೆ. ಆದರೆ, ಆಯಾ ಪಕ್ಷದ ಬೆಂಬಲಿಗರು ಬಂದು ಭರ್ಜರಿ ಖರೀದಿ ಮಾಡುತ್ತಿರುವುದನ್ನು ನೋಡಿದಾಗ, ಇದು ಜಾಗೃತಿಯೋ ಅಥವಾ ಅದ್ಭುತ ಮಾರ್ಕೆಟಿಂಗ್‌ ತಂತ್ರವೋ ಎಂಬ ಪ್ರಶ್ನೆ ಮೂಡುತ್ತಿದೆ.

ಮನೀಶ್‌ ಖಂಡೂರಿ
ಉತ್ತರಾಖಂಡದ ಮಾಜಿ ಸಿಎಂ, ಬಿಜೆಪಿ ನಾಯಕ ಬಿಸಿ ಖಂಡೂರಿ ಅವರಿಗೆ ಈ ಬಾರಿ ಲೋಕಸಭಾ ಟಿಕೆಟ್‌ ದೊರೆತಿಲ್ಲ. ಇದಕ್ಕೆ ಪ್ರತೀಕಾರವೇನೋ ಎಂಬಂತೆ, ಈಗ ಅವರ ಮಗ ಮನೀಶ್‌ ಖಂಡೂರಿ ಕಾಂಗ್ರೆಸ್‌ ಟಿಕೆಟ್‌ನ ಮೇಲೆ ಬಿಜೆಪಿಯ ವಿರುದ್ಧ ಸೆಣೆಸಲಿದ್ದಾರೆ. ಬಿಜೆಪಿ ತಮ್ಮ ತಂದೆಯನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸುವ ಮನೀಶ್‌, ಈಗ ತಮ್ಮ ತಂದೆಯ ರಾಜಕೀಯ ಶಿಷ್ಯರಾದ ಬಿಜೆಪಿಯ ತೀರಥ್‌ ಸಿಂಗ್‌ ರಾವತ್‌ ವಿರುದ್ಧವೇ ಪೌರಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಮನೀಶ್‌ ಅವರು ಇತ್ತೀಚೆಗಷ್ಟೇ ಬಿಜೆಪಿಯಿಂದ ಹೊರ ಬಂದು, ಡೆಹ್ರಾಡೂನ್‌ನಲ್ಲಿ ರಾಹುಲ್‌ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಿದ್ದರು.

ನರೇಂದ್ರ ಮೋದಿ ಸರ್ಕಾರ ದಕ್ಷಿಣ ಭಾರತವನ್ನು ಕಡೆಗಣಿಸುತ್ತಲೇ ಬಂದಿದೆ. ವಯನಾಡ್‌ನ‌ಲ್ಲಿ ಸ್ಪರ್ಧಿಸುವ ರಾಹುಲ್‌ ಗಾಂಧಿ ನಿರ್ಧಾರದಿಂದಾಗಿ ಇಡೀ ವ್ಯಾಖ್ಯಾನವೀಗ ಬದಲಾಗಲಿದೆ.
– ಯುವ ಕಾಂಗ್ರೆಸ್‌

ಕಾಂಗ್ರೆಸ್‌ಗೆ ಶಿಕ್ಷಿಸಲೇಬೇಕಿದೆ. ಅಮೇಠಿಯ ಜನರು ತಮ್ಮನ್ನು ವಂಚಿಸಿದ ಈ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ. ಈ ಭಯದಿಂದಾಗಿಯೇ ರಾಹುಲ್‌ ವಲಸೆ ಹೋಗಿರಬಹುದು.
– ಯೋಗಿ ಆದಿತ್ಯನಾಥ್‌

ಟಾಪ್ ನ್ಯೂಸ್

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

Koppala–women

Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.