ಫಿರ್ ಏಕ್ ಬಾರ್ ಚೌಕಿದಾರ್
Team Udayavani, May 20, 2019, 7:19 AM IST
ಕೊನೆಯ ಹಂತದ ಮತದಾನ ಮುಕ್ತಾಯವಾಗುತ್ತಿದ್ದಂತೆಯೇ ವಿವಿಧ ಸುದ್ದಿವಾಹಿನಿಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿವೆ. 13 ಸಮೀಕ್ಷೆಗಳ ಪೈಕಿ ಆರರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ 300ಕ್ಕೂ ಹೆಚ್ಚು ಸ್ಥಾನಗಳು ಲಭಿಸಲಿವೆ ಎಂದು ಹೇಳಿವೆ. 2014ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 340 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಯಲ್ಲಿ ಹೇಳಿದ್ದವು. ಫಲಿತಾಂಶ ಪ್ರಕಟವಾದಾಗ ಹಾಲಿ ಆಡಳಿತಾರೂಢ ಮೈತ್ರಿ ಕೂಟ 336 ಕ್ಷೇತ್ರಗಳಲ್ಲಿ ಗೆದ್ದು ಜಯ ಸಾಧಿಸಿತ್ತು. ಯಾವ ಸಂಸ್ಥೆ ನೀಡಿದ ಸಮೀಕ್ಷೆ ಬಹುತೇಕ ಸರಿಯಾಗಿದೆ ಎನ್ನುವುದನ್ನು ಖಚಿತಪಡಿಸಲು ಮೇ 23ರ ವರೆಗೆ ಕಾಯಬೇಕು.
ಭವಿಷ್ಯವಾಣಿಗೆ ಪೆಟ್ಟು ಕೊಟ್ಟಿತೇ ಸಮೀಕ್ಷೆ?
ಕಳೆದ ವರ್ಷದ ಆರಂಭದಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಉತ್ತರಾಖಂಡ ಸೇರಿದಂತೆ ಹಿಂದಿ ಭಾಷಿಕ ಪ್ರದೇಶಗಳಿಗೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿತ್ತು. ಆಗಲೇ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಲಿದೆ ಎಂದು ಹಲವು ಲೆಕ್ಕಾಚಾರಗಳು ನಡೆದಿದ್ದವು. ಜತೆಗೆ ಹಲವು ಮಾಧ್ಯಮ ಸಂಸ್ಥೆಗಳು ಸಮೀಕ್ಷೆಗಳನ್ನೂ ಪ್ರಕಟಿಸಿದ್ದವು. ಅದರಲ್ಲಿ ಬಹುಮತದ ಅಂಚಿನಲ್ಲಿ ಎನ್‌ಡಿಎ ಇರಲಿದೆ ಎಂದು ತಮ್ಮದೇ ಆದ ಭವಿಷ್ಯವಾಣಿ ನುಡಿದಿದ್ದವು.
ಹಾಲಿ ಸಾಲಿನ ಲೋಕಸಭೆ ಚುನಾವಣೆ ಪ್ರಕ್ರಿಯೆ ಭಾನುವಾರ ಮುಕ್ತಾಯವಾಗುತ್ತಲೇ 13 ಮಾಧ್ಯಮಗಳು ಮತ್ತು ಸಮೀಕ್ಷೆಗಳು ಪ್ರಕಟವಾಗಿವೆ. ಅವುಗಳ ಪ್ರಕಾರ 80 ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಎಸ್‌ಪಿ-ಬಿಎಸ್ಪಿ-ಆರ್‌ಎಲ್‌ಡಿ ಮೈತ್ರಿಕೂಟ ಎನ್‌ಡಿಎಗೆ ಭಾರಿ ಹಿನ್ನಡೆ ಉಂಟಾಗಿದೆ. ಸಿ ವೋಟರ್ ಸಮೀಕ್ಷೆ ಪ್ರಕಾರ ಮೈತ್ರಿಕೂಟಕ್ಕೆ 40 ಸ್ಥಾನಗಳು ಸಿಗಲಿವೆ. ಎನ್‌ಡಿಎಗೆ 38 ಸ್ಥಾನಗಳು ಸಿಕ್ಕಿದರೆ, ಟೈಮ್ಸ್ ನೌ ಪ್ರಕಾರ 56 ಕ್ಷೇತ್ರಗಳಲ್ಲಿ ಜಯ ಸಿಗಲಿದೆ. 2014ರ ಸಾಧನೆಯಲ್ಲಿ 80 ಕ್ಷೇತ್ರಗಳಲ್ಲಿ 71 ಕ್ಷೇತ್ರಗಳಲ್ಲಿ ಗೆದ್ದುದಕ್ಕೆ ಹೋಲಿಕೆ ಮಾಡಿದರೆ, ಇದು ಉತ್ತಮ ಸಾಧನೆ ಖಂಡಿತವಾಗಿಯೂ ಅಲ್ಲ.
ಮ.ಪ್ರ., ರಾಜಸ್ಥಾನ: ಇನ್ನೆರಡು ಪ್ರಮುಖ ಹಿಂದಿ ಭಾಷಿಕ ರಾಜ್ಯಗಳಾಗಿರುವ ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಬಿಜೆಪಿ ಉತ್ತಮ ಸಾಧನೆಯನ್ನು ಮಾಡಲಿದೆ. ಐದು ತಿಂಗಳ ಹಿಂದಷ್ಟೇ ಅಲ್ಲಿ ವಿಧಾನಸಭೆ ಚುನಾವಣೆ ನಡೆದು, ಅಧಿಕಾರದಲ್ಲಿದ್ದ ಬಿಜೆಪಿ ಸೋಲು ಅನುಭವಿಸಿದ್ದರೂ, ಸಂಸತ್ ಚುನಾವಣೆಯಲ್ಲಿ ಕೇಂದ್ರದ ಆಡಳಿತಾರೂಢ ಪಕ್ಷ ಉತ್ತಮ ಸಾಧನೆ ಮಾಡಿದೆ. ಕೆಲವೊಂದು ಸಮೀಕ್ಷೆಗಳ ಬಿಜೆಪಿ ಹಾಲಿ ಸ್ಥಾನಗಳನ್ನು ಗೆಲ್ಲಲು ಹರಸಾಹಸ ಮಾಡಬೇಕಾಗುತ್ತದೆ ಎಂದು ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಸಿ ವೋಟರ್ ಪ್ರಕಾರ ರಾಜಸ್ಥಾನದ 25ರಲ್ಲಿ ಬಿಜೆಪಿಗೆ 21 ಸ್ಥಾನಗಳಲ್ಲಿ ಜಯ ಸಿಗಲಿದೆ.
ಬಿಹಾರದಲ್ಲೂ: ಚುನಾವಣೆಯಲ್ಲಿ ಮೋದಿ-ನಿತೀಶ್ ಜೋಡಿ ಭರ್ಜರಿ ಸಾಧನೆ ಮಾಡುವ ಬಗ್ಗೆ ಸಮೀಕ್ಷೆಗಳಲ್ಲಿದೆ ಅಭಿಪ್ರಾಯ. ಒಟ್ಟು 40 ಕ್ಷೇತ್ರಗಳಲ್ಲಿ 39ರಲ್ಲಿ ಜಯ ಸಾಧಿಸುವ ಸೂಚನೆಗಳಿವೆ. ಮೈತ್ರಿ ಸಾಧಿಸುವ ನಿಟ್ಟಿನಲ್ಲಿ ಕಾಂಗ್ರೆಸ್, ಆರ್‌ಜೆಡಿ, ಆರ್‌ಎಲ್‌ಎಸ್‌ಪಿ ಮತ್ತು ಇತರ ಪಕ್ಷಗಳು ತಮ್ಮ ಹಿತಾಸಕ್ತಿಯನ್ನೇ ಮುಂದಿಟ್ಟಿದ್ದರಿಂದ ಈ ಹಿನ್ನಡೆಯಾಗಿರುವ ಸಾಧ್ಯತೆ ಇದೆ.
ಕ್ಲೀನ್ ಸ್ವೀಪ್?: ಪ್ರಧಾನಿ ಮೋದಿ ಅವರ ತವರು ರಾಜ್ಯ ಬಿಜೆಪಿ 26ರ ಪೈಕಿ ಎಲ್ಲಾ ಕ್ಷೇತ್ರಗಳಲ್ಲಿಯೂ ಗೆಲ್ಲಲಿದೆ ಎಂದು ಇಂಡಿಯಾ ಟುಡೇ- ಮೈ ಆ್ಯಕ್ಸಿಸ್ ಸಂಸ್ಥೆ ಹೇಳಿದೆ. ಟುಡೇಸ್ ಚಾಣಕ್ಯ ಮತ್ತು ನ್ಯೂಸ್ 24 ಸಮೀಕ್ಷೆಯೂ ಅದನ್ನೇ ಉಲ್ಲೇಖೀಸಿದೆ.
ಪಶ್ಚಿಮದಲ್ಲಿ: ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಜತೆಯಾಗಿ ಸ್ಪರ್ಧೆ ಮಾಡಲಿವೆ; ಇಲ್ಲ ಎಂಬ ಸಂಶಯಗಳು ನಿವಾರಣೆ ಯಾಗಿ ಎನ್‌ಡಿಎ ಅಡಿಯಲ್ಲಿ ಚುನಾವಣೆ ಎದುರಿಸಿದ್ದ ಮೈತ್ರಿಕೂಟಕ್ಕೆ ಉತ್ತಮ ಫಲಿತಾಂಶವೇ ವ್ಯಕ್ತವಾಗಿದೆ.
ದೀದಿಗೆ ಆಘಾತ?: ಯಾವುದೇ ಕಾರಣಕ್ಕೂ ಕೇಂದ್ರ ದಲ್ಲಿ ಮತ್ತೆ ನರೇಂದ್ರ ಮೋದಿ ಸರ್ಕಾರ ಮುಂದುವರಿ ಯಲೇಬಾರದು ಎಂದು ಹಟತೊಟ್ಟಿರುವ ತೃಣ ಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿಗೆ ಫಲಿತಾಂಶದಲ್ಲಿ ಆಘಾತದ ಸೂಚನೆಗಳನ್ನು ವಿವಿಧ ಸಮೀಕ್ಷೆಗಳು ನೀಡಿವೆ. 42 ಕ್ಷೇತ್ರಗಳ ಪೈಕಿ ಬಿಜೆಪಿಗೆ 19-23(ಇಂಡಿಯಾ ಟುಡೇ), ಪೋಲ್‌ಸ್ಟಾರ್ಟ್ 14, ರಿಪಬ್ಲಿಕ್-ಜನತಾ ಕಿ ಬಾತ್ 18-26 ಸ್ಥಾನಗಳನ್ನು ನೀಡಿವೆ. ಶನಿವಾರದ ವರೆಗೆ ಟಿಡಿಪಿ, ಟಿಎಂಸಿ ಮತ್ತು ಇತರ ಪ್ರತಿಪಕ್ಷಗಳು ಒಕ್ಕೂಟ ರಚಿಸುವ ಬಗ್ಗೆ ವಿವಿಧ ರೀತಿಯ ಸಭೆ ನಡೆಸಿದ್ದವು. ಆಂಧ್ರಪ್ರದೇಶದಲ್ಲಿ ಕೆಲ ಸಮೀಕ್ಷೆಗಳ ಪ್ರಕಾರ ಟಿಡಿಪಿಗೆ ಭಾರಿ ಹಿನ್ನಡೆಯಾ ಗಲಿದ್ದು, 4-6 ಕ್ಷೇತ್ರಗಳು ಸಿಗುವ ಸಾಧ್ಯತೆಗಳಿವೆ.ವೈಎಸ್‌ಆರ್ ಕಾಂಗ್ರೆಸ್‌ಗೆ 18-20 ಸಿಗಲಿವೆ.
ಈಶಾನ್ಯದಲ್ಲೂ ಬಿಜೆಪಿ ಆಧಿಪತ್ಯ
ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ತ್ರಿಪುರಾ, ಮಣಿಪುರ, ಸಿಕ್ಕಿಂ, ನಾಗಾಲ್ಯಾಂಡ್, ಮಿಜೋರಂಗಳು ಒಟ್ಟಾರೆ 25 ಲೋಕಸಭಾ ಸ್ಥಾನಗಳನ್ನು ಹೊಂದಿವೆ. ಇವುಗಳಲ್ಲಿ, ಅಸ್ಸಾಂ (14), ಅರುಣಾಚಲ ಪ್ರದೇಶ (2), ಮೇಘಾಲಯ (2), ತ್ರಿಪುರಾ (2), ಮಣಿಪುರ (2), ಸಿಕ್ಕಿಂ (1), ನಾಗಾಲ್ಯಾಂಡ್ (1), ಮಿಜೋರಂ (1) ಪ್ರಾತಿನಿಧ್ಯವನ್ನು ಪಡೆದಿವೆ.
ಸಮೀಕ್ಷಾ ವರದಿಯೇನು?: 14 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಅಸ್ಸಾಂನಲ್ಲಿ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷವಾದ ಅಸೋಂ ಗಣ ಪರಿಷತ್ ಮೈತ್ರಿಯು 9 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿವೆ ಎಂದು ಹಲವಾರು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ. ವಿವಾದಾತ್ಮಕ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿ ಹೊರತಾಗಿಯೂ ಬಿಜೆಪಿಗೆ ಆ ರಾಜ್ಯದಲ್ಲಿ ಉತ್ತಮ ಸ್ಥಾನಗಳು ಸಿಗುತ್ತವೆ ಎಂದು ಸಮೀಕ್ಷೆಗಳು ಹೇಳಿವೆ. ಇನ್ನು, ಕಾಂಗ್ರೆಸ್‌ಗೆ 3 ಹಾಗೂ ಇತರರಿಗೆ 2 ಸ್ಥಾನ ಸಿಗುವ ಸಾಧ್ಯತೆಗಳಿವೆ ಎನ್ನಲಾಗಿದೆ. 2014ರಲ್ಲಿ ಬಿಜೆಪಿ 7, ಕಾಂಗ್ರೆಸ್ 3 ಮತ್ತು ಇತರೆ 3 ಸ್ಥಾನ ಪಡೆದಿದ್ದವು. ಈಶಾನ್ಯ ರಾಜ್ಯಗಳ ಒಟ್ಟು 25 ಸ್ಥಾನಗಳಲ್ಲಿ ಬಿಜೆಪಿ 8ರಲ್ಲಿ ಗೆಲುವು ಸಾಧಿಸಿತ್ತು. ಏಕೈಕ ಲೋಕಸಭಾ ಕ್ಷೇತ್ರ ಹೊಂದಿರುವ ಮಿಜೋ ರಾಂನಲ್ಲಿ 2009ರಿಂದ ಎರಡು ಬಾರಿ ಕಾಂಗ್ರೆಸ್ ಗೆದ್ದಿದೆ. 2014ರಲ್ಲಿ ಕಾಂಗ್ರೆಸ್‌ನವರೇ ಆದ ಸಿ.ಎಲ್. ರೌಲಾ ಅವರು ಗೆಲುವು ಸಾಧಿಸಿದ್ದಾರೆ. ಈ ಬಾರಿಯೂ ಕಾಂಗ್ರೆಸ್ ಪಕ್ಷವೇ ಈ ಕ್ಷೇತ್ರ ಗೆಲ್ಲುವ ನಿರೀಕ್ಷೆಯಿದೆ ಎಂದು ಸಮೀಕ್ಷೆಗಳು ಹೇಳಿವೆ. ಒಟ್ಟಾರೆ ಈಶಾನ್ಯ ರಾಜ್ಯಗಳಲ್ಲಿ ಎನ್‌ಡಿಎ 17ರಿಂದ 19ರಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ 4-6 ಮತ್ತು ಎಐಯುಡಿಎಫ್ ಎರಡು ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಲಿದೆ ಎಂದು ಹೇಳಲಾಗಿದೆ.
ಬಹುಮತ ಪಡೆದರೆ ದಾಖಲೆ ಮುರಿಯಲಿರುವ ಬಿಜೆಪಿ
ಈ ಬಾರಿ ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೇರಿದರೆ ದೇಶದಲ್ಲಿ 48 ವರ್ಷಗಳ ನಂತರ ಪಕ್ಷವೊಂದು ಸತತ ಎರಡನೇ ಬಾರಿಗೆ ಬಹುಮತ ಪಡೆದು ಅಧಿಕಾರಕ್ಕೇರಿದ ದಾಖಲೆಯಾಗಲಿದೆ. ಈ ಹಿಂದೆ 1967 ಹಾಗೂ 1971 ರಲ್ಲಿ ಇಂದಿರಾ ಗಾಂಧಿ ಸತತ ಎರಡು ಬಾರಿಗೆ ಬಹುಮತ ಪಡೆದು ಅಧಿಕಾರಕ್ಕೇರಿದ್ದರು. ನಂತರ 1980ರಲ್ಲೂ ಕಾಂಗ್ರೆಸ್ ಬಹುಮತದಿಂದ ಅಧಿಕಾರಕ್ಕೆ ಬಂದಿತ್ತು. ಆದರೆ 1984ರಲ್ಲಿ ಇಂದಿರಾ ನಿಧನದ ನಂತರ ರಾಜೀವ್ ಗಾಂಧಿ ಪ್ರಧಾನಿಯಾದರು. 1989ರಲ್ಲಿ ರಾಜೀವ್ ಅಧಿಕಾರ ಕಳೆದುಕೊಂಡಿದ್ದರು. 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಮತ್ತು 2009 ರಲ್ಲಿ ಮನಮೋಹನ ಸಿಂಗ್ ಮರಳಿ ಅಧಿಕಾರಕ್ಕೇರಿದ್ದರೂ, ಬಹುಮತಕ್ಕೆ ಮಿತ್ರಪಕ್ಷಗಳ ನೆರವು ಪಡೆದಿದ್ದರು.
ಮತದಾರರ ನಾಡಿಮಿಡಿತ ಬಿಂಬಿಸುವಲ್ಲಿ ಸಮೀಕ್ಷೆಗಳು ಯಶಸ್ವಿಯಾಗಿವೆಯೇ?
ಸಾಮಾನ್ಯವಾಗಿ, ಆಯ್ದ ಪ್ರದೇಶಗಳಲ್ಲಿ ಮತದಾರರನ್ನು ಸಂದರ್ಶನ ಮಾಡುವ ಮೂಲಕ ಕಲೆಹಾಕಲಾದ ದತ್ತಾಂಶಗಳನ್ನು ಆಧರಿಸಿ ಚುನಾವಣೋತ್ತರ ಸಮೀಕ್ಷೆಗಳನ್ನು ಸಿದ್ಧಪಡಿಸಲಾಗುತ್ತದೆ. ಇದರಲ್ಲಿ ನಿಖರ ಫಲಿತಾಂಶ ಲಭ್ಯವಾಗುವುದಿಲ್ಲವಾದರೂ, ಅಧಿಕೃತ ಫಲಿತಾಂಶಕ್ಕೆ ಸರಿಸಮಾನವಾದ ಲೆಕ್ಕ ಸಿಗುತ್ತದೆ ಎಂಬುದು ಎಲ್ಲರ ನಿರೀಕ್ಷೆ. ಭಾರತದ ಮಹಾ ಚುನಾವಣೆ ಮಟ್ಟಿಗೆ ಕಳೆದ ಐದು ಚುನಾವಣೆಗಳ ನಂತರ ಬಂದಿದ್ದ ಸಮೀಕ್ಷೆಗಳಲ್ಲಿ ಮೂರು ಸಮೀಕ್ಷೆಗಳು ಹೆಚ್ಚಾಕಡಿಮೆ ಕರಾರುವಾಕ್ ಫಲಿತಾಂಶ ಕೊಟ್ಟಿವೆ. ಆದರೆ, ಎರಡು ಬಾರಿ ಸಮೀಕ್ಷೆಗಳು ಸುಳ್ಳಾಗಿವೆ.
1998ರ ಮಹಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬರುತ್ತದೆ ಎಂದು ಹಲವಾರು ಸಮೀಕ್ಷೆಗಳು ಅಂದಾಜಿಸಿದ್ದವು. ಆ ಸಂದರ್ಭದಲ್ಲಿ ನಾಲ್ಕು ಪ್ರಮುಖ ಸಮೀಕ್ಷೆಗಳು ಎನ್‌ಡಿಎಗೆ ಸರಾಸರಿ 234, ಯುಪಿಎಗೆ 156 ಹಾಗೂ ಇತರರಿಗೆ ಸರಾಸರಿ 160 ಸ್ಥಾನ ಸಿಗುತ್ತವೆ ಎಂದಿದ್ದವು. ಅಧಿಕೃತ ಫಲಿತಾಂಶ ಹೊರಬಿದ್ದಾಗ ಬಿಜೆಪಿ 252, ಯುಪಿಎ 166 ಗಳಿಸಿದರೆ, ಇತರ ಪಕ್ಷಗಳು ಸಮೀಕ್ಷೆಗಳು ಹೇಳಿದ್ದಕ್ಕಿಂತ 41 ಕಡಿಮೆ ಸ್ಥಾನ ಪಡೆದವು. ಆದರೂ, ಅತಂತ್ರ ಲೋಕಸಭೆ ಆಗುತ್ತದೆ ಎಂಬ ಸಮೀಕ್ಷೆಗಳ ಮಾತು ನಿಜವಾಯಿತು.
ಎರಡು ಬಾರಿ ಗುನ್ನಾ!:
ಆದರೆ, 2004 ಮತ್ತು 2009ರಲ್ಲಿ ಈ ಸಮೀಕ್ಷಾ ವರದಿಗಳಿಗೆ ತದ್ವಿರುದ್ಧವಾದ ಫಲಿತಾಂಶ ಹೊರಬಿದ್ದಿದ್ದು ಮಾತ್ರ ಎಚ್ಚರಿಗೂ ಮೀರಿದ ಅಚ್ಚರಿಯ ವಿಚಾರ. ಅದು ಅಚಾನಕ್ಕಾಗಿ ಕಾಂಗ್ರೆಸ್‌ಗೆ ಒಲಿದ ಅದೃಷ್ಟ ಎಂದರೆ ತಪ್ಪಾಗಲಿಕ್ಕಿಲ್ಲ. 1999ರಲ್ಲಿ ಅಧಿಕಾರಕ್ಕೆ ಬಂದಿದ್ದ ವಾಜಪೇಯಿ ನೇತೃತ್ವದ ಸರ್ಕಾರ ಉತ್ತಮ ಕೆಲಸಗಳನ್ನು ಮಾಡಿದ್ದರೂ, ಸಮೀಕ್ಷೆಗಳು ಮತ್ತೆ ವಾಜಪೇಯಿಯವರ ಸರ್ಕಾರವೇ ಅಸ್ತಿತ್ವಕ್ಕೆ ಬರುತ್ತದೆ ಎಂದು ಹೇಳಿದ್ದರೂ ಅಚ್ಚರಿಯ ಫಲಿತಾಂಶದಲ್ಲಿ ಯುಪಿಎ ಬಹುಮತ ಗಳಿಸಿದ್ದಲ್ಲದೆ, ಮಹತ್ವದ ಬೆಳವಣಿಗೆಯೊಂದರಲ್ಲಿ ಡಾ. ಮನಮೋಹನ್ ಸಿಂಗ್ ಪ್ರಧಾನಿಯಾದರು.
2004ರಲ್ಲಿ ಡಾ. ಸಿಂಗ್ ಸರ್ಕಾರ 5 ವರ್ಷಗಳ ಆಡಳಿತ ಪೂರ್ಣಗೊಳಿಸಿದ ನಂತರ, ಆಗಲಾದರೂ, ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಹಲವಾರು ಸಮೀಕ್ಷೆಗಳು ಹೇಳಿದ್ದರೂ, ಅದನ್ನು ಮೀರಿ, ಮತ್ತೆ “ಸಿಂಗ್ ಈಸ್ ಕಿಂಗ್’ ಎನ್ನುವಂತಾಯಿತು.
ಆದರೆ, 2014ರಲ್ಲಿ ಎದ್ದಿದ್ದ ಮೋದಿ ಹವಾ ಹಾಗೂ ಆಡಳಿತ ವಿರೋಧಿ ಅಲೆಗಳ ನಡುವೆ ನಡೆಸಲಾದ ಸಮೀಕ್ಷೆಗಳು ಎನ್‌ಡಿಎಗೆ ಸರಾಸರಿ 284, ಯುಪಿಎಗೆ 104 ಹಾಗೂ ಇತರರಿಗೆ 154 ಸ್ಥಾನಗಳು ಸಿಗುತ್ತವೆ ಎಂದಿದ್ದವು. ಇದರಲ್ಲಿ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದ ಎನ್‌ಡಿಎ 336 ಸ್ಥಾನ ಗಳಿಸಿ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಸಫಲವಾಯಿತು.
ವಿವಿಧ ಮಾಧ್ಯಮ ಮತ್ತು ಸಮೀಕ್ಷಾ ಸಂಸ್ಥೆಗಳು ನಡೆಸಿದ ಸಂಪೂರ್ಣ ವಿವರ ಇಲ್ಲಿದೆ.
543 ಒಟ್ಟು ಸ್ಥಾನಗಳು
542 ಚುನಾವಣೆ ನಡೆದದ್ದು
272 ಸರಳ ಬಹುಮತಕ್ಕೆ
ಟುಡೇಸ್ ಚಾಣಕ್ಯ- ನ್ಯೂಸ್24
ಎನ್‌ಡಿಎ 350
ಯುಪಿಎ 95
ಇತರರು 97
ನ್ಯೂಸ್18-ಐಪಿಎಸ್ ಒಎಸ್
ಎನ್‌ಡಿಎ 336
ಯುಪಿಎ 82
ಇತರರು 124
ಇಂಡಿಯಾ ಟುಡೇ- ಆ್ಯಕ್ಸಿಸ್ ಮೈ ಇಂಡಿಯಾ
ಎನ್‌ಡಿಎ 339–365
ಯುಪಿಎ 77- 108
ಇತರರು 69- 95
ರಿಪಬ್ಲಿಕ್- ಜನತಾ ಕಿ ಬಾತ್
ಎನ್‌ಡಿಎ 305
ಯುಪಿಎ 124
ಇತರರು 113
ಟೈಮ್ಸ್ ನೌ-ವಿಎಂಆರ್
ಎನ್‌ಡಿಎ 306
ಯುಪಿಎ 132
ಇತರರು 104
ಸುದರ್ಶನ್ ನ್ಯೂಸ್
ಎನ್‌ಡಿಎ 313
ಯುಪಿಎ 121
ಇತರರು 108
ರಿಪಬ್ಲಿಕ್ ಟಿವಿ- ಸಿ ವೋಟರ್
ಎನ್‌ಡಿಎ 287
ಯುಪಿಎ 128
ಇತರರು 127
ಇಂಡಿಯಾ ಟಿವಿ-ಸಿಎನ್‌ಎಕ್ಸ್
ಎನ್‌ಡಿಎ 290- 310
ಯುಪಿಎ 115 – 125
ಇತರರು 116 – 128
ಎಬಿಪಿ ನ್ಯೂಸ್ – ಎಸಿ ನಿಲ್ಸನ್
ಎನ್‌ಡಿಎ 267
ಯುಪಿಎ 127
ಇತರರು 148
ನ್ಯೂಸ್ ನೇಶನ್
ಎನ್‌ಡಿಎ 282- 290
ಯುಪಿಎ 118- 126
ಇತರರು 130- 138
ನ್ಯೂಸ್ ಎಕ್ಸ್-ನೇತಾ
ಎನ್‌ಡಿಎ 242
ಯುಪಿಎ 165
ಇತರರು 135
ಪೋಲ್‌ಸ್ಟಾರ್ಟ್- ಇಂಡಿಯಾ ನ್ಯೂಸ್
ಎನ್‌ಡಿಎ 298
ಯುಪಿಎ 118
ಇತರರು 126
ಐಎಎನ್‌ಎಸ್
ಎನ್‌ಡಿಎ 282- 290
ಯುಪಿಎ 118- 126
ಇತರರು 130- 138
ಉತ್ತರಪ್ರದೇಶ ಒಟ್ಟು ಸ್ಥಾನ: 80
ಬಿಜೆಪಿ 38 56
ಎಸ್‌ಪಿ-ಬಿಎಸ್ಪಿ-ಆರ್‌ಎಲ್‌ಡಿ 20 40
ಕಾಂಗ್ರೆಸ್ 2
ರಾಜಸ್ಥಾನ ಒಟ್ಟು ಸ್ಥಾನ: 25
ಬಿಜೆಪಿ 21 23
ಕಾಂಗ್ರೆಸ್ 2 4
ಆಂಧ್ರಪ್ರದೇಶ ಒಟ್ಟು ಸ್ಥಾನ: 25
ವೈಎಸ್ಸಾರ್ ಕಾಂಗ್ರೆಸ್ 13 20
ಟಿಡಿಪಿ 4 12
ಬಿಜೆಪಿ 0 1
ಕಾಂಗ್ರೆಸ್ 0
ದಿಲ್ಲಿ ಒಟ್ಟು ಸ್ಥಾನ: 7
ಬಿಜೆಪಿ 7
ಆಪ್ 0
ಕಾಂಗ್ರೆಸ್ 0
ಪ.ಬಂಗಾಲ ಒಟ್ಟು ಸ್ಥಾನ: 42
ಟಿಎಂಸಿ 25 28
ಬಿಜೆಪಿ 14 26
ಕಾಂಗ್ರೆಸ್ 2
ಇತರರು 5 7
ಮಹಾರಾಷ್ಟ್ರ ಒಟ್ಟು ಸ್ಥಾನ: 48
ಬಿಜೆಪಿ 38 42
ಕಾಂಗ್ರೆಸ್ 6 10
ಇತರರು 0
ಗುಜರಾತ್ ಒಟ್ಟು ಸ್ಥಾನ 26
ಬಿಜೆಪಿ 25 26
ಕಾಂಗ್ರೆಸ್ 0 1
ಇತರರು 0
ಮಧ್ಯಪ್ರದೇಶ ಒಟ್ಟು ಸ್ಥಾನ 29
ಬಿಜೆಪಿ 24 28
ಕಾಂಗ್ರೆಸ್ 3 5
ಇತರರು 0
ಕೇರಳ ಒಟ್ಟು ಸ್ಥಾನ: 20
ಬಿಜೆಪಿ 0 1
ಕಾಂಗ್ರೆಸ್ 15
ಎಲ್‌ಡಿಎಫ್ 5
ಬಿಹಾರ ಒಟ್ಟು ಸ್ಥಾನ: 40
ಬಿಜೆಪಿ 30 34
ಕಾಂಗ್ರೆಸ್ 6 10
ಇತರರು 0
ತಮಿಳುನಾಡು ಒಟ್ಟು ಸ್ಥಾನ: 38
ಡಿಎಂಕೆ-ಕಾಂಗ್ರೆಸ್ 22 29
ಎಐಎಡಿಎಂಕೆ+ 9 16
ಒಡಿಶಾ ಒಟ್ಟು ಸ್ಥಾನ: 21
ಬಿಜೆಡಿ 12 14
ಬಿಜೆಪಿ 6 8
ಯುಪಿಎ 1 2
ತೆಲಂಗಾಣ ಒಟ್ಟು ಸ್ಥಾನ: 17
ಟಿಆರ್‌ಎಸ್ 12 14
ಕಾಂಗ್ರೆಸ್ 1 2
ಬಿಜೆಪಿ 1 2
ಎಐಎಂಐಎಂ 1
ಜಾರ್ಖಂಡ್ ಒಟ್ಟು ಸ್ಥಾನ: 14
ಎನ್‌ಡಿಎ 10
ಯುಪಿಎ 4
ಇತರರು 0
ಪಂಜಾಬ್ ಒಟ್ಟು ಸ್ಥಾನ: 13
ಕಾಂಗ್ರೆಸ್ 10
ಎನ್‌ಡಿಎ 2
ಆಪ್ 1
ಹರ್ಯಾಣ ಒಟ್ಟು ಸ್ಥಾನ: 10
ಬಿಜೆಪಿ 6 8
ಕಾಂಗ್ರೆಸ್ 2 4
ಇತರರು 0
ಉತ್ತರಾಖಂಡ ಒಟ್ಟು ಸ್ಥಾನ 5
ಬಿಜೆಪಿ 4 5
ಕಾಂಗ್ರೆಸ್ 0 1
ಇತರರು 0
ಹಿಮಾಚಲಪ್ರದೇಶ ಒಟ್ಟು ಸ್ಥಾನ 4
ಬಿಜೆಪಿ 4
ಕಾಂಗ್ರೆಸ್ 0
ಛತ್ತೀಸ್‌ಗಢ ಒಟ್ಟು ಸ್ಥಾನ: 11
ಬಿಜೆಪಿ 6 9
ಕಾಂಗ್ರೆಸ್ 2 5
ಈಶಾನ್ಯ ರಾಜ್ಯಗಳು ಒಟ್ಟು ಸ್ಥಾನ: 25
ಎನ್‌ಡಿಎ 17 19
ಕಾಂಗ್ರೆಸ್ 4 6
ಎಐಯುಡಿಎಫ್ 2
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.