ಪ್ರಮೋದ್ ಮಧ್ವರಾಜ್‌ಗೆ ಜೆಡಿಎಸ್ ಆಹ್ವಾನ ?
Team Udayavani, Mar 19, 2019, 1:00 AM IST
ಉಡುಪಿ: ಉಡುಪಿ- ಚಿಕ್ಕಮಗಳೂರು ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ನಿಲ್ಲಿಸಬೇಕೋ ಬೇಡವೋ ಎಂಬ ಹೊಯ್ದಾಟದಲ್ಲಿದ್ದ ಜೆಡಿಎಸ್ ಸದ್ಯಕ್ಕೆ ಕೊಂಚ ನಿಟ್ಟುಸಿರು ಬಿಟ್ಟಂತಿದೆ. ಮಾಜಿ ಸಚಿವ ಕಾಂಗ್ರೆಸ್‌ನ ಪ್ರಮೋದ್
ಮಧ್ವರಾಜ್ ಮತ್ತು ಜೆಡಿಎಸ್‌ನ ರಾಷ್ಟ್ರಿàಯ ಅಧ್ಯಕ್ಷ ಎಚ್.ಡಿ. ದೇವೇಗೌಡರ ಭೇಟಿ ಈ ಗೊಂದಲಕ್ಕೆ ಅಂತ್ಯ ಹಾಡುವ ಲಕ್ಷಣಗಳಿವೆ. ಈ ಹಿನ್ನೆಲೆಯಲ್ಲಿಸ ಪ್ರಮೋದ್ ಜೆಡಿಎಸ್ ಸೇರುವುದು ಖಚಿತ ಎಂಬ ಮಾತೂ ಕೇಳಿಬರುತ್ತಿದೆ.
ಮೈತ್ರಿ ಸ್ಥಾನದ ಹಂಚಿಕೆಯಲ್ಲಿ ಎಂಟು ಸ್ಥಾನಗಳನ್ನು ಪಡೆದು, 20 ಸ್ಥಾನಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದ ಜೆಡಿಎಸ್ ಒಮ್ಮೆ ತುಮಕೂರು, ಉಡುಪಿ ಚಿಕ್ಕಮಗಳೂರು, ಉತ್ತರ ಕನ್ನಡ ಕ್ಷೇತ್ರವನ್ನು ಮರಳಿ ಕಾಂಗ್ರೆಸ್‌ಗೆ ಬಿಟ್ಟುಕೊಡಲಿದೆ ಎಂಬ ಸುದ್ದಿ ಹಬ್ಬಿತ್ತು. ಆದರೀಗ ಬದಲಾದಂತಿದೆ.
ಜೆಡಿಎಸ್ ನಾಯಕ ದೇವೇಗೌಡ ಎಂಟೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿ ಹೇಳಿದ್ದರೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಉಪಮುಖ್ಯಮಂತ್ರಿ ಡಾ| ಪರಮೇಶ್ವರ್ ತುಮಕೂರು ಕ್ಷೇತ್ರವನ್ನು ಮರಳಿ ಪಡೆಯಲು ರಾಹುಲ್‌ರಿಂದ ಫರ್ಮಾನು ಹೊರಡಿಸುವ ಲೆಕ್ಕಾಚಾರ ದಲ್ಲಿದ್ದಾರೆ.
ಗೌಡರ ಸಂಪರ್ಕಿಸಿದ ಪ್ರಮೋದ್
ಶನಿವಾರವಷ್ಟೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರೊಂದಿಗೆ ಮಾತುಕತೆ ಆಡಿರುವುದಾಗಿ ತಿಳಿಸಿದ್ದ
ಪ್ರಮೋದ್ ಮಧ್ವರಾಜ್ ಸೋಮವಾರ ಎಚ್.ಡಿ. ದೇವೇಗೌಡರನ್ನು ಸಂಪರ್ಕಿಸಿ ದರು. ಇದರಿಂದ ಪ್ರಮೋದ್ ಸ್ಪರ್ಧಿಸುವ ಸಾಧ್ಯತೆ ನಿಚ್ಚಳವಾಗಿದೆ. ಆದರೆ ಜೆಡಿಎಸ್ ನಿಂದಲೋ ಅಥವಾ ಮೈತ್ರಿ ಅಭ್ಯರ್ಥಿಯಾಗಿಯೋ ಎಂಬುದು ಖಚಿತವಾಗಲಿದೆ. ಈ ಮೊದಲು ಬಿಜೆಪಿಗೆ ಹೆಚ್ಚು ಸ್ಥಾನ ಸಿಗದಂತೆ ಮಾಡಲು ಅಗತ್ಯವೆನಿಸಿದಲ್ಲಿ ಜೆಡಿಎಸ್ ತನ್ನ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಅವಕಾಶ ಕೊಡುವ ಯೋಚನೆಯಲ್ಲಿತ್ತು.
ದೇವೇಗೌಡರ ರಾಜಕೀಯ ಪಟ್ಟನ್ನು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ. ಹಾಗೆಯೇ ತನ್ನ ಲೆಕ್ಕದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ನಿಲ್ಲಿಸುವ ಲೆಕ್ಕಾಚಾರಕ್ಕೆ ದೇವೇಗೌಡರು ಇಳಿಯುವುದು ಕಡಿಮೆ. ಬೇರೇನೋ ಲೆಕ್ಕಾಚಾರವಿರಬೇಕು ಎನ್ನುತ್ತವೆ ಮೂಲಗಳು.
ಇನ್ನೂ ಸ್ಪಷ್ಟಗೊಂಡಿಲ್ಲ
ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್‌ರನ್ನು ಉಡುಪಿಯಿಂದ ಕಣಕ್ಕಿಳಿಸಿದರೆ ಆಗಬಹುದೇ ಎಂದು ಜಿಲ್ಲೆಯ ಪ್ರಮುಖರೊಬ್ಬರಿಗೆ ದಿನೇಶ್ ಗುಂಡೂ ರಾವ್ ಅಭಿಪ್ರಾಯ ಕೇಳಿರುವುದು, ಅನಿವಾಸಿ ಭಾರತೀಯ ಕನ್ನಡಿಗರ ವೇದಿಕೆ ಮಾಜಿ ಉಪಾಧ್ಯಕ್ಷೆ ಡಾ| ಆರತಿ ಕೃಷ್ಣರಿಗೂ ದಿನೇಶ್ ಗುಂಡೂರಾವ್ ದೂರವಾಣಿಯಲ್ಲಿ ಮಾತನಾಡಿ, “ದೇವೇಗೌಡರಿಂದ ಬರುವ ಪ್ರಸ್ತಾವವನ್ನು ಸಂಪೂರ್ಣ ನಿರಾಕರಿಸಬೇಡಿ’ ಎಂದಿದ್ದಾರೆನ್ನುವುದೂ ವಿಭಿನ್ನ ವಿಶ್ಲೇಷಣೆಗೆ ಕಾರಣವಾಗುತ್ತಿದೆ. ಆದರೆ ಇವೆಲ್ಲದಕ್ಕೂ ಪ್ರಮೋದ್ ಮತ್ತು ದೇವೇಗೌಡರ ಭೇಟಿ ಉತ್ತರವಾಗುವ ಸಾಧ್ಯತೆ ಇದೆ.
ಹರಿಪ್ರಸಾದ್ ಬಿಲ್ಲವ ಸಮುದಾಯದವರಾಗಿದ್ದು, ಸ್ಪರ್ಧೆಗೆ ಮಹತ್ವ ಬರಬಹುದು. ಇದೇ ರೀತಿ ಅದೇ ಸಮುದಾಯದ ವಿನಯಕುಮಾರ ಸೊರಕೆಯವರು ಸ್ಪರ್ಧಿಸಿದರೂ ಸ್ಪರ್ಧಾಕಣಕ್ಕೆ ರಂಗು ಬರಲಿದೆ. ಪ್ರಮೋದ್ ಮಧ್ವರಾಜರು ಯಾವ ಪಕ್ಷದಿಂದ ನಿಂತರೂ ಜಾತಿ ಲೆಕ್ಕಾಚಾರ ಪ್ರಬಲ ಪೈಪೋಟಿಗೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ.
ಆಹ್ವಾನಿಸಿದ್ದು ನಿಜ
ಮಾಜಿ ಸಚಿವ, ಕಾಂಗ್ರೆಸ್‌ನ ಪ್ರಮೋದ್ ಮಧ್ವರಾಜ್ ಅವರನ್ನು ಜೆಡಿಎಸ್‌ನಿಂದ ಸ್ಪರ್ಧಿಸಲು ದೇವೇಗೌಡ ಆಹ್ವಾನಿಸಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಜೆಡಿಎಸ್ ಬಿಜೆಪಿಗೆ ಪ್ರಬಲ ಸ್ಪರ್ಧೆ ನೀಡುವಷ್ಟು ಶಕ್ತಿ ಹೊಂದಿಲ್ಲ ಎನ್ನುವ ಕಾರಣಕ್ಕೆ ಉಡುಪಿಯ ಮಾಜಿ ಶಾಸಕ ಹಾಗೂ ಕಾಂಗ್ರೆಸ್‌ನ ಟಿಕೆಟ್‌ಆಕಾಂಕ್ಷಿ ಪ್ರಮೋದ್ ಮಧ್ವರಾಜ್ ಅವರನ್ನು ಜೆಡಿಎಸ್‌ನಿಂದ ನಿಲ್ಲಿಸುವುದು ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಲೆಕ್ಕಾಚಾರ.
ಇದನ್ನು ಖಚಿತಪಡಿಸಿರುವ ಪ್ರಮೋದ್, ಸಮ್ಮಿಶ್ರ ಸರಕಾರ ಇರುವುದರಿಂದ ಈ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಯಾದರೂ, ಗೆಲುವು ಸಾಧಿಸುವುದೇ ನಮ್ಮ ಗುರಿ. ದೇವೇಗೌಡ ಮತ್ತು ಸಿಎಂ ಕುಮಾರ ಸ್ವಾಮಿ ಅವರು ಅವರ ಪಕ್ಷದಿಂದ ಸ್ಪರ್ಧಿಸುವಂತೆ ಕೇಳಿಕೊಂಡಿದ್ದಾರೆ. ಈಗ ಮೈತ್ರಿ ಇರುವುದರಿಂದ ಯಾವ ತೀರ್ಮಾನ ತೆಗೆದುಕೊಳ್ಳಬೇಕೆಂದು ಪಕ್ಷದ ನಾಯಕರ ಜತೆ ಚರ್ಚಿಸಿ ನಿರ್ಧರಿಸುವೆ ಎಂದು ಉದಯವಾಣಿಗೆ ತಿಳಿಸಿದ್ದಾರೆ.
ಆದರೆ ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಕ್ಷೇತ್ರದಲ್ಲಿ ಅದೇ ಪಕ್ಷದ ಚಿನ್ಹೆಯಿಂದ ಸ್ಪರ್ಧಿಸುವಂತೆ ಜೆಡಿಎಸ್ ಕೋರಿರುವ ಕಾರಣ ಪಕ್ಷಾಂತರ ಸಂದರ್ಭವೂ ತಲೆದೋರಬಹುದು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.